For Quick Alerts
ALLOW NOTIFICATIONS  
For Daily Alerts

ಮುಟ್ಟಿನ ಅವಧಿಯಲ್ಲಿ ಅಧಿಕ ರಕ್ತಸ್ರಾವಕ್ಕೆ ಆಯುರ್ವೇದ ಚಿಕಿತ್ಸೆ

By Jaya
|

ತಿಂಗಳಿನ ಮುಟ್ಟಿನ ಸಮಯದಲ್ಲಿ ಉಂಟಾಗುವ ಅಧಿಕ ರಕ್ತಸ್ರಾವಕ್ಕೆ ಮೆನೊರಾಗಿಯಾ ಎಂಬುದಾಗಿ ಕರೆಯುತ್ತಾರೆ. ಈ ರಕ್ತಸ್ರಾವವು ಏಳು ದಿನಗಳಿಗಿಂತ ಹೆಚ್ಚು ಉಂಟಾದಲ್ಲಿ, ಸುಸ್ತು, ಆಯಾಸ, ತಲೆನೋವು ನಿಶ್ಯಕ್ತಿ ಮತ್ತು ಅಧಿಕ ಪ್ರಮಾಣದ ನೋವು ಕಾಣಿಸಿಕೊಳ್ಳುತ್ತದೆ. ಆಯುರ್ವೇದದಲ್ಲಿ ಅಧಿಕ ರಕ್ತಸ್ರಾವ ಉಂಟಾಗುವುದಕ್ಕೆ ರಕ್ತ ಪ್ರದ್ರ ಎಂಬ ಹೆಸರಿದೆ.

Ayurvedic Remedies For Heavy Bleeding During Periods

ದೇಹದಲ್ಲಿರುವ ಹಾರ್ಮೋನುಗಳು ನಿಯಂತ್ರಣವನ್ನು ಹೊಂದಿಲ್ಲದೇ ಇದ್ದಾಗ, ಅಥವಾ ಪಿತ್ತ ದೋಷ ನಿಯಂತ್ರಣ ತಪ್ಪಿದಾಗ ಈ ರೀತಿ ಸಂಭವಿಸುತ್ತದೆ. ಸಾಮಾನ್ಯವಾಗಿ ಪಿತ್ತದಲ್ಲಿ ವೈಪರೀತ್ಯ ಉಂಟಾಗುವುದಕ್ಕೆ ಹಲವಾರು ಕಾರಣಗಳಿವೆ. ಅತಿಯಾದ ಉಪವಾಸ, ಹೆಚ್ಚಿನ ಒತ್ತಡ, ಖಾರದ ಮಸಾಲೆ ಪದಾರ್ಥಗಳನ್ನು ಹೆಚ್ಚು ಸೇವಿಸುವುದು ಮತ್ತು ಅಧಿಕವಾಗಿ ದೇಹವನ್ನು ದಂಡಿಸುವುದು, ಹೀಗೆ ಇವೆಲ್ಲಾವು ಪರೋಕ್ಷವಾಗಿ ಕಾರಣವಾಗಿ ಬಿಡುತ್ತದೆ. ಮುಟ್ಟಿನಲ್ಲಿ ಅತಿಯಾಗಿ ರಕ್ತಸ್ರಾವವಾಗುತ್ತಿದೆಯೇ?

ಋತುಚಕ್ರದಲ್ಲಿ ಉಂಟಾಗುವ ಅಧಿಕ ರಕ್ತಸ್ರಾವವನ್ನು ನಿರ್ಬಂಧಿಸಲು ಆಯುರ್ವೇದವು ಹಲವಾರು ಮನೆಮದ್ದುಗಳನ್ನು ತಿಳಿಸಿದೆ. ಅಧಿಕ ರಕ್ತಸ್ರಾವವನ್ನು ಪರಿಹರಿಸಲು ನೆರವಾಗಿರುವ ಕೆಲವೊಂದು ಔಷಧಗಳನ್ನು ಇಲ್ಲಿ ನೀಡಿದ್ದು ಗಮನ ಹರಿಸಿ

ನೆಲ್ಲಿಕಾಯಿ
ಹೆಚ್ಚು ಶಕ್ತಿದಾಯಕವಾಗಿರುವ ಈ ಗಿಡಮೂಲಿಕೆಯು ಹಲವಾರು ರೋಗಗಳನ್ನು ಉಪಚರಿವುದರಲ್ಲಿ ಎತ್ತಿದ ಕೈ. ಅನಾದಿ ಕಾಲದಿಂದಲೂ ಇದು ಚಿಕಿತ್ಸಕವಾಗಿ ನೆರವನ್ನು ಉಂಟುಮಾಡುತ್ತಿದೆ. ಅದರಲ್ಲೂ ಮೆನೊರಾಗಿಯಾವನ್ನು ಆರೈಕೆ ಮಾಡಲು ಇದು ಹೆಚ್ಚು ಪ್ರಭಾವಕಾರಿಯಾದುದು.

ನೆಲ್ಲಿಕಾಯಿ ಜ್ಯೂಸ್ ಮಾಡುವ ವಿಧಾನ
*ಎರಡು ದೊಡ್ಡ ಗಾತ್ರದ ಅಥವಾ ನಾಲ್ಕು ಚಿಕ್ಕಗಾತ್ರದ ನೆಲ್ಲಿಕಾಯಿಗಳನ್ನು ಚಿಕ್ಕದಾಗಿ ಕತ್ತರಿಸಿ ಬೀಜವನ್ನು ನಿವಾರಿಸಿ. *ಬ್ಲೆಂಡರ್‌ನಲ್ಲಿ ಕೊಂಚ ನೀರಿನೊಂದಿಗೆ ತಿರುಳನ್ನು ಸೇರಿಸಿ ಅರೆಯಿರಿ.
*ಈ ನೀರನ್ನು ತೆಳ್ಳನೆಯ ಮಸ್ಲಿನ್ ಬಟ್ಟೆ ಅಥವಾ ಸೋಸುಕ ಬಳಸಿ ನೀರು ಸಂಗ್ರಹಿಸಿ.
*ಈ ನೀರಿಗೆ ಕೊಂಚ ಕಪ್ಪು ಉಪ್ಪು ಅಥವಾ ಕಲ್ಲುಪ್ಪು ಸೇರಿಸಿ ಕುಡಿಯಬಹುದು. ರುಚಿ ಇಷ್ಟವಾಗದಿದ್ದರೆ ಕೊಂಚ ಜೇನನ್ನು ಸೇರಿಸಿ ಕುಡಿಯಬಹುದು. ಮಧುಮೇಹಿಗಳಿಗೆ ಜೇನು ಸಲ್ಲದು. ಆದ್ದರಿಂದ ಮಧುಮೇಹಿಗಳು
*ಉಪ್ಪು, ಜೇನು ಸೇರಿಸದ ರಸ ಕುಡಿಯುವುದು ಉತ್ತಮ. ನೆಲ್ಲಿಕಾಯಿ ಜ್ಯೂಸ್ ಕುಡಿದರೆ ಆರೋಗ್ಯಕ್ಕೆ 14 ಲಾಭ

ಶುಂಠಿ ತುಂಡನ್ನು ಜಜ್ಜಿ ಮಾಡಿದ ಕಷಾಯ
ಒಂದೆರಡು ಶುಂಠಿಯ ತುಂಡನ್ನು ಜಜ್ಜಿ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಕೆಲವು ನಿಮಿಷಗಳವರೆಗೆ ಹಾಗೆಯೇ ಕಾಯಿಸಿದ ನಂತರ ಅದರ ಡಿಕಾಕ್ಷನ್ ತೆಗೆದುಕೊಳ್ಳಿ ಆರಿಸಿ ಕುಡಿಯಿರಿ. ಹಾಗೆಯೇ ಕುಡಿಯಲು ಸಾಧ್ಯವಾಗಿಲ್ಲ ಅಂದ್ರೆ ಜೇನುತುಪ್ಪ ಇಲ್ಲ ಸಕ್ಕರೆ ಅಥವಾ ಬೆಲ್ಲ ಸೇರಿಸಿಯೂ ಸೇವಿಸ್ಬಹುದು. ಮುಟ್ಟಿನ ದಿನಗಳಲ್ಲಿ ನಿಮ್ಮನ್ನ ಅತಿಯಾಗಿ ಕಾಡುವ ರಕ್ತಸ್ರಾವ ಸಮಸ್ಯೆಗೆ ಇದು ಕೂಡ ಉತ್ತಮ ರೀತಿಯಲ್ಲಿ ಪರಿಹಾರ ನೀಡಬಲ್ಲದು.

ಲಿಂಬು-ಮೊಸಂಬಿ ಹಣ್ಣಿನ ಜ್ಯೂಸ್

ಫ್ರೆಶ್ ಜ್ಯೂಸ್ ಯಾವಾಗಲೂ ಕೂಡ ಆರೋಗ್ಯಕ್ಕೆ ಉತ್ತಮವೇ. ಮೂಸಂಬಿರಸಕ್ಕೆ ಎರಡು ಟೇಬಲ್ ಸ್ಪೂನ್ ಲಿಂಬೆಹಣ್ಣಿನ ರಸವನ್ನು ಮಿಕ್ಸ್ ಮಾಡಿ, ದಿನಕ್ಕೆ ನಾಲ್ಕರಿಂದ ಐದು ಬಾರಿ ಸೇವಿಸಿ. ಮೂಸಂಬಿ ರಸದಲ್ಲಿ ನಿಮಗೆ ವಿಟಮಿನ್ ಸಿ ಲಭ್ಯವಾಗುತ್ತೆ ಮತ್ತು ಅದಕ್ಕೆ ಸೇರಿಸಿದ ಲಿಂಬೆಯ ರಸ ಹೆಚ್ಚಿನ ರಕ್ತಸ್ರಾವವವನ್ನು ತಡೆಗಟ್ಟಿ ಆರಾಮದಾಯಕವಾಗಿರುವಂತೆ ಮಾಡುತ್ತೆ.

ಎರಡು ಟೇಬಲ್ ಸ್ಪೂನ್ ಜೀರಿಗೆ

ಹೌದು, ಎರಡು ಟೇಬಲ್ ಸ್ಪೂನ್ ಜೀರಿಗೆಯನ್ನು ನೀರಿಗೆ ಸೇರಿಸಿ ಮತ್ತು ಚೆನ್ನಾಗಿ ಕುದಿಸಿ. ಹಳದಿ ಬಣ್ಣಕ್ಕೆ ತಿರುಗಿದ ನಂತ್ರ ಬೇಕು ಅನ್ನಿಸಿದರೆ ಸಕ್ಕರೆ ಮತ್ತು ಸ್ವಲ್ಪ ಹಾಲು ಸೇರಿಸಿ ದಿನಕ್ಕೆ ಎರಡರಿಂದ ಮೂರು ಬಾರಿ ಕುಡಿಯಿರಿ,. ನಿಮ್ಮ ಸಮಸ್ಯೆ ಖಂಡಿತ ನಿವಾರಣೆಯಾಗುತ್ತೆ. ಈ ಪುಟ್ಟ ಜೀರಿಗೆಯಲ್ಲಿದೆ, ಬೆಟ್ಟದಷ್ಟು ಗುಣಗಳು...
English summary

Ayurvedic Remedies For Heavy Bleeding During Periods

Heavy or excessive bleeding during periods is medically known as Menorrhagia. This excessive bleeding and periods may last for more than 7 days and is often accompanied by fatigue, cramps, headache, weakness and an extreme amount of pain. In Ayurveda, the condition of excessive bleeding during periods is known as Rakta Pradra. This condition arises when the doshas in the body are imbalanced, especially the pitta dosha.
X
Desktop Bottom Promotion