For Quick Alerts
ALLOW NOTIFICATIONS  
For Daily Alerts

ವಿಳಂಬವಾಗುತ್ತಿರುವ ಮುಟ್ಟಿನ ಸಮಸ್ಯೆಗೆ ಆಯುರ್ವೇದದ ಪರಿಹಾರ

By Jaya subramanya
|

ಋತುಚಕ್ರವು ಸ್ತ್ರೀಯ ಜೀವನದಲ್ಲಿ ಮಹತ್ತರ ಪಾತ್ರವನ್ನು ವಹಿಸುವುದರಿಂದ ತಕ್ಕ ಸಮಯಕ್ಕೆ ತಿಂಗಳ ಮುಟ್ಟನ್ನು ಹೊಂದುವುದು ಕಡ್ಡಾಯವಾಗಿದೆ. ಆದರೆ ಬದಲಾಗುತ್ತಿರುವ ಜೀವನ ಶೈಲಿ, ಒತ್ತಡ ತಿಂಗಳ ಮುಟ್ಟನ್ನು ತಿಂಗಳಿಗೆ ಸರಿಯಾಗಿ ಹೊಂದುವಲ್ಲಿ ಸಂಕಷ್ಟವನ್ನು ತಂದೊಡ್ಡುತ್ತಿದೆ. ಕೆಲವರಿಗೆ ಮುಟ್ಟಿನ ದಿನ ವಿಳಂಬವಾಗುವುದು, ಹದಿನೈದು ದಿನಗಳ ಮೊದಲೇ ಉಂಟಾಗುವುದು, ರಕ್ತಸ್ರಾವ ಇಲ್ಲದಿರುವುದು, ಅತಿಯಾದ ರಕ್ತಸ್ರಾವ ಹೀಗೆ ಮುಟ್ಟಿನ ಸಮಸ್ಯೆಗಳು ಪ್ರತಿಯೊಬ್ಬ ಮಹಿಳೆಯರನ್ನು ಒಂದಿಲ್ಲೊಂದು ವಿಧದಿಂದ ಕಾಡುತ್ತಲೇ ಇರುತ್ತದೆ.

ಮುಟ್ಟಿನಲ್ಲಿ ವಿಳಂಬವು ಹೆಚ್ಚಿನ ಸ್ತ್ರೀಯರಿಗೆ ಸಾಮಾನ್ಯವಾದುದು. ಒಂದು ಸಮೀಕ್ಷೆಯ ಪ್ರಕಾರ, 30 ಶೇಕಡದಷ್ಟು ಮಹಿಳೆಯರು ಅನಿಯಮಿತ ಮುಟ್ಟಿನ ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ. ಸಾಮಾನ್ಯ ಮುಟ್ಟಿನ ಚಕ್ರವು 28 ದಿನಗಳಾಗಿದ್ದು ಇದರಲ್ಲಿ ಕೊಂಚ ವೈಪರೀತ್ಯಗಳು ಉಂಟಾಗುತ್ತಿರುತ್ತದೆ. ಮುಟ್ಟಿನ ದಿನಗಳು ವಿಳಂಬವಾಗುವುದಕ್ಕೆ ಹಲವಾರು ಕಾರಣಗಳಿರಬಹುದು. ಮುಟ್ಟಿನ ನೋವನ್ನು ಕ್ಷಣ ಮಾತ್ರದಲ್ಲಿ ನಿಯಂತ್ರಿಸುವ ಸೂಪರ್ ಫುಡ್

ಸಾಮಾನ್ಯವಾಗಿ ಹೆಚ್ಚಿನ ಒತ್ತಡ ಸಾಮಾನ್ಯ ಸಮಸ್ಯೆಯಾಗಿದ್ದು, ಹಾರ್ಮೋನುಗಳ ಅನಿಯಂತ್ರಣ, ಹೆಚ್ಚು ತೂಕ ಇಳಿಕೆ, ಬೊಜ್ಜು, ಥೈರಾಯ್ಡ್ ಮತ್ತು ಮುಂತಾದುವು ಮುಖ್ಯ ಕಾರಣಗಳಾಗಿವೆ. ಮುಟ್ಟಿನ ದಿನಗಳು ವಿಳಂಬವಾಗುವುದರಿಂದ ಹೃದಯ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ತಲೆನೋವು, ಮುರಿತ, ತಲೆತಿರುಗುವಿಕೆ, ಕಿಬ್ಬೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಗಳನ್ನು ನಿವಾರಿಸಲು ಹೆಚ್ಚಿನ ಔಷಧಿಗಳಿದ್ದರೂ ಆಯುರ್ವೇದ ಪರಿಹಾರ ಅತ್ಯದ್ಭುತ ಪರಿಣಾಮವನ್ನು ಉಂಟುಮಾಡಲಿದೆ. ಮುಟ್ಟು ಹಿಂದೂಡಿಕೊಳ್ಳಬೇಕಾ..? ಹಾಗಾದ್ರೆ ಹೀಗೆ ಮಾಡಿ

ಆಯುರ್ವೇದದಲ್ಲಿ ದೇಹದ ವಿಷಕಾರಿ ಅಂಶಗಳನ್ನು ಹೊರಹಾಕಲು ಹಲವಾರು ಗಿಡಮೂಲಿಕೆಗಳಿದ್ದು ಮುಟ್ಟಿನ್ನು ವಿಳಂಬ ಮಾಡುವ ಅಂಶಗಳನ್ನು ನಿವಾರಿಸುವಲ್ಲಿ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇಂದಿನ ಲೇಖನದಲ್ಲಿ ಮುಟ್ಟಿನ ದಿನಗಳ ತೊಂದರೆಗಳನ್ನು ನಿವಾರಿಸುವ ಔಷಧ ಪದಾರ್ಥಗಳನ್ನು ನೀಡುತ್ತಿದ್ದು ಇವುಗಳ ಬಳಕೆಯನ್ನು ಮಾಡಬಹುದಾಗಿದೆ.

ಪರಿಹಾರ #1:ಪಾರ್ಸ್ಲಿ

ಪರಿಹಾರ #1:ಪಾರ್ಸ್ಲಿ

ಹಿಂದಿಯಲ್ಲಿ ಇದನ್ನು ಅಜ್ಮೋಡಾ ಎಂದು ಕರೆಯಲಾಗುತ್ತಿದ್ದು, ಮುಟ್ಟಿನ ದಿನಗಳ ವಿಳಂವನ್ನು ಸರಿಪಡಿಸುವಲ್ಲಿ ಇದು ಸಹಕಾರಿಯಾಗಿದೆ. ಪ್ರತೀದಿನ ಇದರ ರಸವನ್ನು ಸೇವಿಸುವುದರಿಂದ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಪಾರ್ಸ್ಲಿ ಮತ್ತು ಎಳ್ಳೆಣ್ಣೆಯನ್ನು ಬಳಸಿ ಕೆಳಹೊಟ್ಟೆಯನ್ನು ಮಸಾಜ್ ಮಾಡುವುದರಿಂದ ಕೂಡ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದು.

ಪಾರ್ಸ್ಲಿ ಬೀಜವನ್ನು ಅರೆದು ಅದಕ್ಕೆ ಸ್ವಲ್ಪ ನೀರನ್ನು ಹಾಕಿ. ಇದಕ್ಕೆ ಹಾಲನ್ನು ಸೇರಿಸಿ. ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ನಿತ್ಯವೂ ಇದನ್ನು ಸೇವಿಸಿ. ಮುಟ್ಟಿನ ದಿನಗಳ ವಿಳಂಬ ಸಮಸ್ಯೆಯನ್ನು ದೂರಮಾಡಲು ಆಯುರ್ವೇದದಲ್ಲಿ ಇದಕ್ಕೆ ಉತ್ತಮ ಸ್ಥಾನವಿದೆ.

ಪರಿಹಾರ #2:ಮೂಲಂಗಿ ಬೀಜ

ಪರಿಹಾರ #2:ಮೂಲಂಗಿ ಬೀಜ

ಅಸ್ತಮಾ, ಶೀತ, ಕೆಮ್ಮು ಮತ್ತು ಗಂಟಿನ ಸಮಸ್ಯೆಗಳನ್ನು ದೂರಮಾಡುವಲ್ಲಿ ಮೂಲಂಗಿಯನ್ನು ಬಳಸಲಾಗುತ್ತದೆ. ಹಲವಾರು ವಿಧದ ಕಾಯಿಲೆಗಳನ್ನು ಗುಣಪಡಿಸುವಲ್ಲಿ ಆಯುರ್ವೇದವು ಮೂಲಂಗಿಯನ್ನು ಸೂಚಿಸುತ್ತದೆ. ವಿಳಂಬ ಮುಟ್ಟಿನ ಸಮಸ್ಯೆಯನ್ನು ನಿವಾರಿಸುವಲ್ಲಿ ಮೂಲಂಗಿಯ ಬಳಕೆಯನ್ನು ಮಾಡಬಹುದಾಗಿದೆ.

ಪರಿಹಾರ #3:ಪಪ್ಪಾಯ

ಪರಿಹಾರ #3:ಪಪ್ಪಾಯ

ಭಾರತೀಯ ಮನೆಗಳಲ್ಲಿ ಸಾಮಾನ್ಯವಾಗಿ ದೊರೆಯುವ ಪಪ್ಪಾಯ, ವಿಳಂವಾಗುವ ಮುಟ್ಟಿನ ಸಮಸ್ಯೆಯನ್ನು ಪರಿಹರಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದರಲ್ಲಿ ಕ್ಯಾರೊಟಿನ್ ಅಂಶವಿದ್ದು, ಋತುಚಕ್ರವನ್ನು ಸರಿಪಡಿಸುವ ಈಸ್ಟ್ರೋಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

ಪರಿಹಾರ #4: ಅನಾನಸ್

ಪರಿಹಾರ #4: ಅನಾನಸ್

ನಿತ್ಯವೂ ಅನಾನಸ್ ಸೇವನೆ ಮಾಡುವುದು ದೇಹದ ಉಷ್ಣತೆಯನ್ನು ಏರಿಸುತ್ತದೆ ಇದರಿಂದ ಮುಟ್ಟು ತುರ್ತಾಗಿ ಉಂಟಾಗುತ್ತದೆ. ಬ್ರೊಮಿಲಿನ್ ಎಂಬ ಅಂಶವನ್ನು ಅನಾನಸ್ ಒಳಗೊಂಡಿದ್ದು ಗರ್ಭಕೋಶದ ಒಳಪದರವನ್ನು ಮೃದುವಾಗಿಸುತ್ತದೆ.

ಪರಿಹಾರ #5: ಶುಂಠಿ ಚಹಾ

ಪರಿಹಾರ #5: ಶುಂಠಿ ಚಹಾ

ವಿಳಂಬಿತ ಮುಟ್ಟಿನ ಸಮಸ್ಯೆಯನ್ನು ನಿವಾರಿಸುವಲ್ಲಿ ಶುಂಠಿ ಚಹಾ ಸಹಕಾರಿಯಾದುದು. ಶುಂಠಿ ಚಹಾವನ್ನು ನಿಯಮಿತವಾಗಿ ಸೇವಿಸುವುದು ಮುಟ್ಟು ವಿಳಂಬವಾಗಿ ಸಂಭವಿಸುವುದನ್ನು ತಡೆಯುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಶುಂಠಿ ಚಹಾ ತಯಾರಿಸುವ ವಿಧಾನ

ಶುಂಠಿ ಚಹಾ ತಯಾರಿಸುವ ವಿಧಾನ

ಸುಮಾರು ಮಧ್ಯಮಗಾತ್ರದ ಶುಂಠಿಯನ್ನು ತೊಳೆದು ಸಿಪ್ಪೆ ಸುಲಿಯಿರಿ. ಇದನ್ನು ತೆಂಗಿನಕಾಯಿ ತುರಿದಂತೆ ಚಿಕ್ಕ ಚಿಕ್ಕ ಎಳೆಗಳಾಗಿ ತುರಿಯಿರಿ ಅಥವಾ ಸಾಧ್ಯವಾದಷ್ಟು ಚಿಕ್ಕ ಚಿಕ್ಕ ತುಂಡುಗಳನ್ನು ಮಾಡಿ. ಇದನ್ನು ಒಂದು ಲೋಟದಷ್ಟು ಕುದಿಸಿದ ನೀರಿಗೆ ಹಾಕಿ ಮುಚ್ಚಳ ಮುಚ್ಚಿ ಹತ್ತರಿಂದ ಹದಿನೈದು ನಿಮಿಷ ಹಾಗೇ ಬಿಡಿ (ಮತ್ತೆ ಕುದಿಸಬಾರದು) ಈ ನೀರು ನಿಧಾನವಾಗಿ ತಣ್ಣಗಾಗಲು ಬಿಡಿ. ಬಳಿಕ ಈ ನೀರನ್ನು ನೋಸಿ ಕುಡಿಯಿರಿ. ರುಚಿಗೆ ಸ್ವಲ್ಪ ಜೇನು, ತುಳಸಿ ಎಲೆಗಳು ಅಥವಾ ಲಿಂಬೆರಸವನ್ನೂ ಸೇರಿಸಿ ಸವಿಯಬಹುದು. ಸ್ವಲ್ಪ ಒಗರು ಅನಿಸಿದರೆ ಸ್ವಲ್ಪ ಬೆಲ್ಲವನ್ನೂ ಸೇರಿಸಬಹುದು.

ಪರಿಹಾರ #6:ಕೊತ್ತಂಬರಿ ಬೀಜ

ಪರಿಹಾರ #6:ಕೊತ್ತಂಬರಿ ಬೀಜ

ಸೂಕ್ತ ಸಮಯದಲ್ಲಿ ಮುಟ್ಟು ಉಂಟಾಗಲು ಕೊತ್ತಂಬರಿ ಬೀಜದ ಸೇವನೆಯನ್ನು ಮಾಡಬಹುದು. ವಿಳಂಬವಾಗಿ ಮುಟ್ಟು ಉಂಟಾಗುವುದನ್ನು ತಡೆಯಲು ನಿತ್ಯವೂ ಇದನ್ನು ಸೇವಿಸಿ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. 2 ಕಪ್‌ನಷ್ಟು ನೀರನ್ನು ತೆಗೆದುಕೊಂಡು ಅದರಲ್ಲಿ ಕೊತ್ತಂಬರಿ ಬೀಜವನ್ನು ನೆನೆಸಿ. ಒಂದು ಕಪ್‌ನಷ್ಟು ನೀರು ಆಗುವವರೆಗೆ ಇದನ್ನು ಕುದಿಸಿಕೊಳ್ಳಿ. ನಿಮ್ಮ ಮುಟ್ಟು ನಿಯಮಿತವಾಗಿ ಉಂಟಾಗಲು ದಿನಕ್ಕೆ ಮೂರು ಬಾರಿ ಇದನ್ನು ಸೇವಿಸಿ.

ಪರಿಹಾರ #7:ಕ್ಯಾರೆಟ್

ಪರಿಹಾರ #7:ಕ್ಯಾರೆಟ್

ದಿನಕ್ಕೆ ಮೂರು ಬಾರಿ ಹಸಿ ಕ್ಯಾರೆಟ್ ಅಥವಾ ಕ್ಯಾರೆಟ್ ಜ್ಯೂಸ್ ಅನ್ನು ಸೇವಿಸುವುದು ನಿಮ್ಮ ಮುಟ್ಟನ್ನು ನಿಯಮಿತ ಗೊಳಿಸುತ್ತದೆ. ನಿಮ್ಮ ಮುಟ್ಟನ್ನು ನಿಯಮಿತವಾಗಿ ಉಂಟುಮಾಡಲು ಕ್ಯಾರೆಟ್ ಅನ್ನು ನಿತ್ಯವೂ ಸೇವಿಸುವ ಅಭ್ಯಾಸವನ್ನು ಬೆಳೆಯಿಸಿಕೊಳ್ಳಿ.

English summary

Ayurvedic Remedies To Get Periods Immediately

Delayed periods are a cause of concern for many women. According to a survey, over 30 per cent of women have experienced irregular periods at some point in their lives. A normal period cycle is 28 days, plus or minus a week each side. Delay of a week or a few days is considered pretty normal; however, if there is a delay in periods of more than a week or month, then it is a sure cause of concern. Also Read: Best Ayurveda Remedies to Treat PCOS There can be many causes for the delay in periods.
X
Desktop Bottom Promotion