For Quick Alerts
ALLOW NOTIFICATIONS  
For Daily Alerts

ಮುಟ್ಟು ವಿಳಂಬವಾಯಿತೇ? ಕಾರಣ ತಿಳಿದುಕೊಳ್ಳಿ

By Super
|

ಮಾಲಿನಿಗೆ ಮುಟ್ಟು ವಿಳಂಬವಾಯಿತು. ಆನಂತರ ವೈದ್ಯರಲ್ಲಿ ತಪಾಸಣೆ ನಡೆಸಿದ ನಂತರ ತಿಳಿಯಿತು ಆಕೆ ಗರ್ಭಿಣಿಯೆಂದು! ಅದೇ ಸರಿತಳ ವಿಚಾರಕ್ಕೆ ಬಂದಾಗ ಮೂರು ತಿಂಗಳಿನಿಂದ ಮುಟ್ಟಾಗಿರಲಿಲ್ಲ, ಮಗುವಿನ ನಿರೀಕ್ಷೆಯಲ್ಲಿದ್ದ ಅವಳು, ಅವಳ ಗಂಡ ತುಂಬಾ ಸಂತೋಷಪಟ್ಟರು, ಆದರೆ ಪರೀಕ್ಷೆ ಮಾಡಿಸಿದಾಗ ನೆಗೆಟಿವ್ ಅಂತ ಬಂತು. ಆದ್ದರಿಂದ ಋತಿಚಕ್ರ ಕ್ರಿಯೆ ಸರಿಯಾಗಿ ನಡೆಯದಿದ್ದರೆ ಗರ್ಭಿಣಿ ಎಂದೇ ಅರ್ಥೈಸಿಕೊಳ್ಳಲಾಗುವುದಿಲ್ಲ.

ಗರ್ಭಿಣಿಯಲ್ಲದೇ ಸಾಮಾನ್ಯ ಮಹಿಳೆಯರಲ್ಲಿ ಕೂಡ ತಿಂಗಳಲ್ಲಿ ಸರಿಯಾದ ಸಮಯಕ್ಕೆ ಬರದೇ ಅನಿರ್ಧಿಷ್ಟಾವಧಿಯ ಋತುಚಕ್ರವಾಗುವ ಸಂಭವವಿದೆ. ಗರ್ಭಿಣಿಯನ್ನು ಹೊರತುಪಡಿಸಿ ಉಳಿದವರಿಗೆ ಹೀಗೆ ಮುಟ್ಟು ವಿಳಂಬವಾಗುವುದು ಖಂಡಿತ ಒಳ್ಳೆಯದಲ್ಲ. ಈ ಬಗ್ಗೆ ಎಚ್ಚರಿಕೆವಹಿಸುವುದು ಅತ್ಯಂತ ಅಗತ್ಯ. ಮುಟ್ಟಿನ ಅನಿರ್ಧಿಷ್ಟಾವಧಿಗೆ ಕಾರಣವಾದ ಕೆಲವು ಪ್ರಮುಖ ಕಾರಣಗಳನ್ನು ಇಲ್ಲಿ ನೀಡಲಾಗಿದೆ ನೋಡಿ.

ಒತ್ತಡ

ಒತ್ತಡ

ಈ ಒತ್ತಡ ಎನ್ನುವುದು ಪ್ರತಿಯೊಬ್ಬರಿಗೂ ಮುಟ್ಟಿನ ಸಮಸ್ಯೆಯನ್ನೂ ಸೇರಿದಂತೆ ಹಲವು ತೊಂದರೆಗಳಿಗೆ ಕಾರಣವಾಗುತ್ತದೆ. ಒತ್ತಡದಿಂದಾಗಿ ಹಾರ್ಮೋನ್ ಗಳ ಪ್ರಮಾಣ ಕಡಿಮೆಯಾಗಿ ಮುಟ್ಟಾಗುವ ಸಾಧ್ಯತೆಗಳು ಕಡಿಮೆಯಾಗುತ್ತವೆ. ನೀವು ವಿಶ್ರಾಂತಿಯನ್ನು ಪಡೆದು ಮೊದಲಿನಂತೆ ನಿಮಗೆ ಸರಿಯಾದ ಸಮಯದಲ್ಲಿ ಪೀರಿಯಡ್ಸ್ ಆಗಲು ಹೇಗೆ ಜಾಗೃತಿವಹಿಸಬೇಕೆಂದು ನಿಮ್ಮ ವೈದ್ಯರಿಂದ ತಿಳಿದುಕೊಳ್ಳಿ. ಈ ಸಮಸ್ಯೆ ಸರಿಯಾಗಲು ಕೆಲವು ಹೆಚ್ಚುವರಿ ಸಮಯ ತೆಗೆದುಕೊಳ್ಳಬಹುದು.

ಅನಾರೋಗ್ಯ

ಅನಾರೋಗ್ಯ

ನಿಮ್ಮ ಋತುಚಕ್ರದಲ್ಲಿ ವ್ಯತ್ಯಯವಾಗುವುದಕ್ಕೆ, ನಿಮ್ಮ ತತ್ ಕ್ಷಣದ ಅನಾರೋಗ್ಯ ಅಥವಾ ತುಸು ಅಧಿಕ ಅವಧಿಯ ಅನಾರೋಗ್ಯವೂ ಸಹ ಕಾರಣವಾಗಬಹುದು. ನಿಮ್ಮ ಈ ಸಮಸ್ಯೆಗೆ ನಿಮ್ಮ ಅನಾರೋಗ್ಯವೂ ಕಾರಣವಾಗಿರಬಹುದು ಎಂದಾದರೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಪರಿಹಾರ ತಿಳಿದುಕೊಳ್ಳಿ.

ಶೆಡ್ಯೂಲ್ಸ್ ಬದಲಾವಣೆ

ಶೆಡ್ಯೂಲ್ಸ್ ಬದಲಾವಣೆ

ಬದಲಾದ ಸಮಯ ಅಥವಾ ಶೆಡ್ಯೂಲ್ ನಿಮ್ಮ ಸಮಸ್ಯೆಗೆ ನೇರವಾದ ಕಾರಣ! ನೀವು ಹಗಲು ರಾತ್ರಿ ಕೆಲಸ ಮಾಡಿದರೆ ಅಥವಾ ನಿಮ್ಮ ಕೆಲಸದ ಶೆಡ್ಯೂಲ್ ನಲ್ಲಿ ಬದಲಾವಣೆಯಾದರೆ ತಡವಾದ ಮುಟ್ಟಿನ ಸಮಸ್ಯೆ ಉದ್ಭವವಾಗಬಹುದು. ಇಂತಹ ಸಮಸ್ಯೆ ನಿಮ್ಮಲ್ಲಿ ಕಾಣಿಸಿಕೊಂಡರೆ ಆದಷ್ಟು ನಿಮ್ಮ ಕೆಲಸದ ಅವಧಿಯನ್ನು ಒಂದೇ ಸಮಯಕ್ಕೆ ನಿಗದಿಪಡಿಸಿಕೊಳ್ಳಿ.

ಔಷಧಗಳ ಬದಲಾವಣೆ

ಔಷಧಗಳ ಬದಲಾವಣೆ

ನಿಯಮಿತವಾಗಿ ತೆಗೆದುಕೊಳ್ಳುತ್ತಿರುವ ಔಷಧಗಳಲ್ಲಿ ಯಾವುದೇ ಬದಲಾವಣೆಯಾದರೂ ಮುಟ್ಟಿನ ತೊಂದರೆ ಕಾಣಿಸಿಕೊಳ್ಳಬಹುದು. ಆದ್ದರಿಂದ ಈ ಅಡ್ಡ ಪರಿಣಾಮದ ಕುರಿತು ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಗರ್ಭಿಣಿಯಾಗುವುದನ್ನು ನಿಯಂತ್ರಿಸುವ ಮಾತ್ರೆಗಳನ್ನು ಸೇವಿಸಿದರೆ ಮುಟ್ಟಿನ ಸಮಸ್ಯೆ ಸಾಮಾನ್ಯ. ನೀವು ಯಾವುದೇ ಮಾತ್ರೆಯನ್ನು ಅಥವಾ ಔಷಧವನ್ನು ಸೇವಿಸುವಾಗ ಅದು ನಿಮ್ಮ ಮುಟ್ಟಿನ ಮೇಲೆ ಯಾವುದಾದರೂ ಪರಿಣಾಮ ಬೀರಬಹುದೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಅತಿಯಾದ ತೂಕ

ಅತಿಯಾದ ತೂಕ

ಅತಿಯಾದ ದೇಹ ತೂಕವನ್ನು ಹೊಂದಿರುವುದು ಅನಿರ್ಧಿಷ್ಟಾವಧಿಯ ಮುಟ್ಟಿನ ಸಮಸ್ಯೆಗೆ ಕಾರಣವಾಗಬಹುದು. ಅಥವಾ ಮುಟ್ಟು ನಿಂತೇ ಹೋಗಬಹುದು! ದೇಹ ತೂಕವನ್ನು ಕಡಿಮೆಮಾಡಿಕೊಂಡ ಮಹಿಳೆಯರಲ್ಲಿ ಅವರ ಮುಟ್ಟಿನ ಅವಧಿ ಪುನಃ ಸರಿಯಾಗಿರುವ ಉದಾಹರಣೆಗಳೂ ಸಾಕಷ್ಟಿವೆ.

ಕಡಿಮೆ ತೂಕ

ಕಡಿಮೆ ತೂಕ

ಕಡಿಮೆ ದೇಹ ಹೊಂದಿರುವುದೂ ಕೂಡ ನಿಮ್ಮಲ್ಲಿನ ಮುಟ್ಟಿನ ಸಮಸ್ಯೆಗೆ ಪ್ರತ್ಯಕ್ಷ ಕಾರಣವಾಗಬಹುದು. ಹೆಚ್ಚಾಗಿ ಮುಟ್ಟು ಸಂಪೂರ್ಣವಾಗಿ ನಿಂತೇ ಹೋಗುವ ಸಾಧ್ಯತೆಗಳೂ ಇವೆ! ಇದನ್ನು ರಕ್ತಹೀನತೆ ಎಂದು ಕರೆಯಲಾಗುತ್ತದೆ. ತೂಕವನ್ನು ಹೆಚ್ಚಾಗಿಸಿಕೊಳ್ಳುವುದು ನಿಮ್ಮ ಈ ಸಮಸ್ಯೆಗೆ ನಿರಂತರ ಪರಿಹಾರ ಒದಗಿಸಬಹುದು. ಅತಿಯಾದ ಕೆಲಸ ಮಾಡುವ ಹಾಗೂ ವೃತ್ತಿಪರ ಕ್ರೀಡಾಪಟುಗಳಲ್ಲಿ ಅನಿರ್ಧಿಷ್ಟಾವಧಿಯ ಮುಟ್ಟು ಕಾಣಿಸಿಕೊಳ್ಳುತ್ತದೆ.

ತಪ್ಪಾದ ಲೆಕ್ಕ

ತಪ್ಪಾದ ಲೆಕ್ಕ

ಋತುಚಕ್ರದ ಅವಧಿ ಮಹಿಳೆಯರಿಂದ ಮಹಿಳೆಯರಿಗೆ ವ್ಯತ್ಯಾಸವಿರುತ್ತದೆ. ಸಾಮಾನ್ಯವಾಗಿ ಹೇಳುವುದಾದರೆ ಮುಟ್ಟಿನ ಅವಧಿ ಪ್ರತಿ 28 ದಿನಗಳ ನಂತರ ಬರುತ್ತದೆ. ಆದರೆ ಈ ಲೆಕ್ಕಾಚಾರ ಎಲರಿಗೂ ಅನ್ವಯವಾಗುವುದಿಲ್ಲ. ಕೆಲವು ಸಂದರ್ಭದಲ್ಲಿ ಋತುಚಕ್ರದ ಅವಧಿಯನ್ನು ತಪ್ಪಾಗಿ ಲೆಕ್ಕಾಚಾರ ಮಾಡಿ ತಡವಾಯಿತು ಎನ್ನುವವರಿದ್ದಾರೆ. ಒಮ್ಮೆ ಮುಟ್ಟಾದ ನಂತರ ಎರಡು ವಾರಗಳ ನಂತರ ದಿನಗಳ ಲೆಕ್ಕವನ್ನು ಮಾಡಿ. ಆಗ ನಿಮಗೆ ಮುಟ್ಟಿನ ಅವಧಿ (ovulate )ಆರಂಭವಾದದ್ದು ಅರಿವಾಗುತ್ತದೆ.

ಗರ್ಭಧಾರಣೆ

ಗರ್ಭಧಾರಣೆ

ಇದು ಸಂತೋನೋತ್ಪತ್ತಿಯನ್ನು ಮಾಡುವ ಕಾಲ! ಮಹಿಳೆಯರಲ್ಲಿ ಗರ್ಭಧಾರಣೆಯ ಸಮಯದಲ್ಲಿ ಮುಟ್ಟು ನಿಲ್ಲುವುದು ಸಮಯ ಕೆಲವೊಮ್ಮೆ ಮುಟ್ಟು ಎಂದಿನಂತೆ ಸಾಮಾನ್ಯವಾಗಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಆತಂಕಗೊಳ್ಳುವ ಅಗತ್ಯವಿಲ್ಲ. ನಿಮಗೆ ಗರ್ಭಿಣಿಯಾಗುವ ಅವಧಿಯನ್ನು ಮುಂದೂಡಬೇಕೆಂದಿದ್ದರೆ ಗರ್ಭನಿರೋಧಕ ವಸ್ತು/ಔಷಧಿಯನ್ನು ತೆಗೆದುಕೊಳ್ಳಿ.

ರಜೋನಿವೃತ್ತಿ

ರಜೋನಿವೃತ್ತಿ

ನಿಮ್ಮ ಜೀವನದಲ್ಲಿ ರಜೋನಿವೃತ್ತಿ ಮುಟ್ಟಿನ ಕೊನೆಯ ಹಂತ! ರಜೋನಿವೃತ್ತಿ ನೈಸರ್ಗಿಕವಾಗಿ ಅಥವಾ ಕೆಲವು ಸರ್ಜರಿಯಿಂದಾಗಿ ಉಂಟಾಗಬಹುದು.

ಗರ್ಭಧಾರಣೆ

ಗರ್ಭಧಾರಣೆ

ನಿಮ್ಮ ಮುಟ್ಟಿನ ಅವಧಿ ತಡವಾಗಿದೆ ಎಂದಾದರೆ ಗರ್ಭಿಣಿಯಾಗುವ ಮನೋಭಿಲಾಷೆ ಹೊಂದಿದವರಾಗಿದ್ದರೆ ನೀವು ಗರ್ಭಿಣಿ ಎಂದು ತೀರ್ಮಾನಿಸಬಹುದು! ಒಂದು ಸರಳ ಗರ್ಭಧಾರಣೆ ಬಗ್ಗೆ ತಪಾಸಣೆ ನೀವು ಗರ್ಭ ಧರಿಸಿರುವುದರ ಬಗ್ಗೆ ಖಚಿತ ಮಾಹಿತಿ ನೀಡಬಲ್ಲದು. ಮೂತ್ರ ಗರ್ಭಾವಸ್ಥೆ ಪರೀಕ್ಷೆಗಳು ಮತ್ತು ರಕ್ತ ಗರ್ಭಾವಸ್ಥೆಯಲ್ಲಿ ಪರೀಕ್ಷೆಗಳು hCG ಹಾರ್ಮೋನ್ ಗಳನ್ನು ನೋಡಲು ಸಹಾಯಕವಾಗುತ್ತವೆ.

ಮುಂದೇನು?

ಮುಂದೇನು?

ನೀವು ಗರ್ಭಿಣಿಯೇ ಆಗಿದ್ದರೆ ಪ್ರಸವಪೂರ್ವ ತಪಾಸಣೆಗೆ ವೈದ್ಯರನ್ನು ಸಂಪರ್ಕಿಸಬೇಕು. ಒಂದುವೇಳೆ ನಿಮಗೆ ಮುಟ್ಟಿನ ಅವಧಿಯಲ್ಲಿ ಅಡೆತಡೆಯುಂಟಾಗಿ ಗರ್ಭಧಾರಣೆ ಖಚಿತಪಡಿಸುವ ತಪಾಸಣೆ ಮಾಡಿ ಅದು ನಕಾರಾತ್ಮಕವಾಗಿದ್ದರೆ ಇನ್ನೊಂದು ತಪಾಸಣೆಯನ್ನು ಮಾಡಲು ಕೆಲವು ದಿನಗಳ ನಂತರ ಮರು ತಪಾಸಣೆ ಮಾಡಲಾಗುತ್ತದೆ. ಆಗಲೂ ನಕಾರಾತ್ಮಕ ಉತ್ತರವೇ ಬಂದರೆ ಮುಟ್ಟಿನ ತೊಂದರೆಯ ಬಗ್ಗೆ ವೈದ್ಯರಲ್ಲಿ ದೈಹಿಕ ತಪಾಸಣೆಯನ್ನು ಮಾಡಿಸಿಕೊಳ್ಳಬೇಕಾಗಬಹುದು. ರಕ್ತ ತಪಾಸಣೆ ಹಾಗೂ ಇನ್ನಿತರ ತಪಾಸಣೆಯ ಮೂಲಕ ನಿಮ್ಮ ಸಮಸ್ಯೆಯ ನಿವಾರಣೆಗೆ ಪ್ರೊವೆರ ದಂತಹ ಔಷಧಗಳನ್ನು ನೀಡಬಹುದು. ಆದ್ದರಿಂದ ಮುಟ್ಟಿನ ವಿಷಯದಲ್ಲಿ ಯಾವುದೇ ಸಮಸ್ಯೆ ಕಂಡುಬಂದರೂ ಯಾವುದೇ ಮುಜುಗರವಿಲ್ಲದೇ ವೈದ್ಯರ ಬಳಿ ಮುಕ್ತವಾಗಿ ಚರ್ಚಿಸಿ.

English summary

10 Reasons Your Period is Late

Am I pregnant? Pregnancy is the first thing that we think of when our period is delayed. But is pregnancy the only reason for people to have a late period? Here are the 10 most common reasons that you missed your period.
X
Desktop Bottom Promotion