For Quick Alerts
ALLOW NOTIFICATIONS  
For Daily Alerts

ನಿಮ್ಮ ಲೈಫ್‌ ಪಾರ್ಟನರ್ ಹತ್ರ ಈ ವಿಷಯಗಳನ್ನು ಹೇಳಲೇಬೇಡಿ

|

ಮದುವೆಯಾಗುವ ಏನೇ ಇದ್ದರೂ ನೇರವಾಗಿ ಹೇಳಿಬಿಡಬೇಕು, ಮುಚ್ಚುಮರೆ ಇರಬಾರದು, ಇಲ್ಲದಿದ್ದರೆ ಮುಂದಿನ ಜೀವನ ಕಷ್ಟವಾಗುವುದು. ಹಾಗೆಯೇ ಅವರ ಜೊತೆ ಮಾತನಾಡುವಾಗ ಕೆಲವೊಂದು ಎಚ್ಚರಿಕೆಯನ್ನು ವಹಿಸಬೇಕು, ಬಾಯಿಗೆ ಬಂದದ್ದನ್ನು ಹೇಳಿದರೆ ಅದರಿಂದಲೂ ಸಮಸ್ಯೆಗಳು ಬರಬಹುದು, ನೀವು ಮಾತನಾಡುವ ಶೈಲಿ ನೋಡಿಯೇ ಮದುವೆ ಕ್ಯಾನ್ಸಲ್‌ ಮಾಡಬಹುದು.

ಇನ್ನು ಮದುವೆ ಬಳಿಕ ಕೂಡ ಕೆಲವೊಂದು ಮಾತುಗಳನ್ನಾಡದಿದ್ದರೆ ಸಂಬಂಧ ಚೆನ್ನಾಗಿರುತ್ತದೆ. ಮದುವೆ ನಿಶ್ಚಯವಾದ ಮೇಲೆ ಹಾಗೂ ಮದುವೆಯಾದ ಮೇಲೆ ಈ ಮಾತುಗಳನ್ನಾಡಿದರೆ ನಿಮ್ಮ ಸಂಸಾರ ಜೋಕೆ:

1. ಎಲ್ಲಾ ನಿನ್ನಿಂದಲೇ ಆಗಿದ್ದು ಎಂದು ದೂರುವುದು

1. ಎಲ್ಲಾ ನಿನ್ನಿಂದಲೇ ಆಗಿದ್ದು ಎಂದು ದೂರುವುದು

ಎಲ್ಲಾ ನಿನ್ನಿಂದಲೇ ಆಗಿದ್ದು, ನಿನ್ನಿಂದ ಹೀಗಾಯ್ತು ಎಂದೆಲ್ಲಾ ಯಾರಾದರೂ ನೆಗೆಟಿವ್‌ ಟೋನ್‌ನಲ್ಲಿ ಹೇಳುತ್ತಿದ್ದರೆ ತುಂಬಾನೇ ಕೋಪ ಬರುವುದು, ಬೇಸರ ಉಂಟಾಗುವುದು.

ಸಣ್ಣ-ಪುಟ್ಟ ತಪ್ಪುಗಳಾದಾಗ ಅಥವಾ ಏನಾದರೂ ಸಮಸ್ಯೆ ಬಂದಾಗ ಈ ರೀತಿಯೆಲ್ಲಾ ಆದದ್ದು ನಿನ್ನಿಂದ ಅಂತ ಹೇಳಿದರೆ ಸಂಬಂಧ ಹಾಳಾಗುವುದು ಅಲ್ಲದೆ ಮತ್ತೇನು ಪ್ರಯೋಜನವಿಲ್ಲ, ಅದರ ಬದಲಿಗೆ ಪರಿಸ್ಥಿತಿಯನ್ನು ಸರಿಪಡಿಸಲು ಪ್ರಯತ್ನಿಸಿ.

2. ಅವಮಾನ ಮಾಡುವುದು

2. ಅವಮಾನ ಮಾಡುವುದು

ಸಂಗಾತಿ ಕೆಲಸ, ಕುಟುಂಬದವರನ್ನು ಎಂದಿಗೂ ಕಡೆಗಣಿಸಿ ಮಾತನಾಡಬೇಡಿ, ಅವರ ಫ್ಯಾಮಿಲಿಗಿಂತ ನಿಮ್ಮ ಫ್ಯಾಮಿಲಿ ಆರ್ಥಿಕವಾಗಿ ಚೆನ್ನಾಗಿರಬಹುದು, ಹಾಗಂತ ಅವರ ಕುಟುಂಬವನ್ನು ಕೀಳಾಗಿ ಕಾಣಲು ಹೋಗಬೇಡಿ. ನಿಮ್ಮ ಸಂಗಾತಿ ನಿಮ್ಮಷ್ಟು ಓದಿಲ್ಲದೆ ಇರಬಹುದು, ಹಾಗಂತ ಅದನ್ನೇ ಹೇಳಿ ಹೀಯಾಳಿಸುವುದೆಲ್ಲಾ ಮಾಡಲು ಹೋಗಬೇಡಿ. ನೀವು ಹೀಯಾಳಿಸಿದರೆ ನಿಮ್ಮಿಬ್ಬರ ಸಂಬಂಧ ಹಾಳಾಗುತ್ತೆ, ಇದರಿಂದ ನಿಮ್ಮ ನೆಮ್ಮದಿಯೂ ದೂರಾಗುವುದು.

3. ಹಳೆ ಸಂಬಂಧದ ಬಗ್ಗೆ ಹೇಳುವುದು

3. ಹಳೆ ಸಂಬಂಧದ ಬಗ್ಗೆ ಹೇಳುವುದು

ನಿಮ್ಮ ಸಂಗಾತಿಯ ಪಾಸ್ಟ್‌ ಏನೇ ಆಗಿರಲಿ ಅದನ್ನು ಕೆದಕಲು ಹೋಗಬೇಡಿ, ಯಾವುದೋ ವಿಷಯಕ್ಕೆ ನಿಮ್ಮಿಬ್ಬರ ನಡುವೆ ಜಗಳ ಬಂದಾಗ ಹಳೆಯ ಸಂಬಂಧದ ಬಗ್ಗೆ ಹೇಳುವುದು ಅಥವಾ ಮುಗಿದು ಹೋದ ಸಂಬಂಧದ ಬಗ್ಗೆ ಹೇಳಿ ಜಗಳ ಮಾಡುವುದು ಇವೆಲ್ಲಾ ಮಾಡಲೇಬೇಡಿ.

ಅದು ಮುಗಿದು ಹೋದ ಸಂಬಂಧ, ಈಗ ಇರುವ ಸಂಬಂಧದ ಕಡೆ ಮಾತ್ರ ಗಮನ ನೀಡಿ.

4. ಬೇರೆಯರ ಜೊತೆ ಫ್ಲರ್ಟ್ ಮಾಡುವುದು

4. ಬೇರೆಯರ ಜೊತೆ ಫ್ಲರ್ಟ್ ಮಾಡುವುದು

ಒಬ್ಬರಿಗೆ ಕಮಿಟ್‌ ಆದ ಮೇಲೆ ಬೇರೆಯವರ ಜೊತೆ ಫ್ಲಟ್‌ ಮಾಡಬಾರದು. ನಾನೇನು ತಪ್ಪು ಮಾಡುತ್ತಿಲ್ಲ, ಬರೀ ಚಾಟ್‌ ಮಾಡುತ್ತೇನೆ ಎಂದರೂ ತಪ್ಪು-ತಪ್ಪೇ, ನಿಮ್ಮ ಸಂಗಾತಿಗೆ ನೀವು ಮೋಸ ಮಾಡುತ್ತಿದ್ದೀರಿ ಎಂದು ತಿಳಿದರೆ ಅವರು ದೂರಾಗಬಹುದು ಅಥವಾ ಸದಾ ನಿಮ್ಮನ್ನು ಸಂಶಯ ಕಣ್ಣಿನಿಂದಲೇ ನೋಡಬಹುದು.

5. ಸಂಗಾತಿ ಎದುರು ಬೇರೆಯವರ ಜೊತೆ ಚೆಲ್ಲು-ಚೆಲ್ಲಾಗಿ ಮಾತನಾಡುವುದು

5. ಸಂಗಾತಿ ಎದುರು ಬೇರೆಯವರ ಜೊತೆ ಚೆಲ್ಲು-ಚೆಲ್ಲಾಗಿ ಮಾತನಾಡುವುದು

ಜೀವನ ಸಂಗಾತಿ ಸಿಕ್ಕ ಮೇಲೆ ನಿಯತ್ತಿನಿಂದ ಇರಬೇಕು, ಸಂಗಾತಿ ಎದುರು ಮತ್ತೊಬ್ಬರ ಜೊತೆ ಚೆಲ್ಲು-ಚೆಲ್ಲಾಗಿ ಮಾತನಾಡುವುದು ಮಾಡಬಾರದು, ಹೀಗೆ ಮಾಡಿದರೆ ನಿಮ್ಮ ಸಂಗಾತಿಗೆ ನಿಮ್ಮ ಮೇಲೆ ನಂಬಿಕೆ ದೂರಾಗುವುದು.

6. ಮೆಚ್ಯೂರಿಟಿ ಇಲ್ಲದೆ ವರ್ತಿಸುವುದು

6. ಮೆಚ್ಯೂರಿಟಿ ಇಲ್ಲದೆ ವರ್ತಿಸುವುದು

ಮದುವೆಯಾದರೂ ಮಕ್ಕಳಾಟ ಹೋಗಿಲ್ಲ ಎಂಬ ಮಾತನ್ನು ಕೆಲವರನ್ನು ನೋಡಿ ಹೇಳುತ್ತಾರೆ. ಮದುವೆಯಾದ ಮೇಲೆ ಮೆಚ್ಯೂರಿಟಿ ಇಲ್ಲದೆ ವರ್ತಿಸಿದರೆ ಆ ಸಂಬಂಧ ಗೊಂದಲದ ಗೂಡಾಗುವುದು.

7. ವರ್ತನೆ ಮೂಲಕ ಕಂಟ್ರೋಲ್ ಮಾಡುವುದು

7. ವರ್ತನೆ ಮೂಲಕ ಕಂಟ್ರೋಲ್ ಮಾಡುವುದು

ಕೆಲವರು ಮಾತನಾಡಲ್ಲ ತಮ್ಮ ಹಾವಭಾವದಿಂದಲೇ ಕಂಟ್ರೋಲ್‌ ಮಾಡುತ್ತಾರೆ. ತುಂಬಾ ಕೋಪಗೊಳ್ಳುವುದು ಅಥವಾ ಹೊಡೆಯುವುದು, ಮನೆ ಬಿಟ್ಟು ಹೋಗುವುದು ಈ ರೀತಿಯೆಲ್ಲಾ ಮಾಡಿ ಸಂಗಾತಿ ಮನಸ್ಸಿನಲ್ಲಿ ಭಯ ಹುಟ್ಟಿಸಲು ಪ್ರಯತ್ನಿಸುತ್ತಾರೆ. ಆದರೆ ಹೀಗೆಲ್ಲಾ ಮಾಡಿದರೆ ಸಂಗಾತಿಯ ಪ್ರೀತಿ ದೊರೆಯಲು ಸಾಧ್ಯವಿಲ್ಲ ಎಂಬುವುದನ್ನು ಮರೆಯಬಾರದು.

8. ಹೋಲಿಕೆ ಮಾಡುವುದು

8. ಹೋಲಿಕೆ ಮಾಡುವುದು

ನಿಮ್ಮ ಸಂಗಾತಿಯನ್ನು ಯಾವುದೇ ಕಾರಣಕ್ಕೆ ಬೇರೆಯವರ ಜೊತೆ ಹೋಲಿಕೆ ಮಾಡಬೇಡಿ. ಒಬ್ಬರು ಮತ್ತೊಬ್ಬರಂತೆ ಇರಲು ಸಾಧ್ಯವಿಲ್ಲ. ಇನ್ನು ಸಂಸಾರದಲ್ಲಂತೂ ಈ ಹೋಲಿಕೆ ಮಾಡುವ ಬುದ್ಧಿಯೇ ಇರಬಾರದು. ಬೇರೆಯವರ ಜೊತೆ ತಮ್ಮ ಜೀವನ ಹೋಲಿಕೆ ಮಾಡುವವರು ಸದಾ ಕೊರಗುತ್ತಲೇ ಇರುತ್ತಾರೆ.

9. ಸಂಗಾತಿ ದೇಹದ ಬಗ್ಗೆ ಕೊಂಕು ಮಾತು

9. ಸಂಗಾತಿ ದೇಹದ ಬಗ್ಗೆ ಕೊಂಕು ಮಾತು

ದಪ್ಪಗಿದ್ದೀಯ ಸಣ್ಣ ಆಗು, ಕಪ್ಪಗಿದ್ದೀಯ ಇನ್ನು ಸ್ವಲ್ಪ ಚೆನ್ನಾಗಿ ಕಾಣು ಮೇಕಪ್ ಮಾಡು ಎಂಬೆಲ್ಲಾ ಅಡ್ವೈಸ್‌ ಕೊಡಲೇಬೇಡಿ. ನೀವು ಅವರನ್ನು ಸ್ವೀಕರಿಸಿ ಆದ ಮೇಲ ಅವರನ್ನು ಬದಲಾಯಿಸುವ ಪ್ರಯತ್ನ ಏಕೆ. ಅವರು ಹೇಗಿದ್ದಾರೋ ಹಾಗೆಯೇ ಸ್ವೀಕರಿಸಿ, ಇದರಿಂದ ಇಬ್ಬರಲ್ಲಿ ಪ್ರೀತಿ ಹೆಚ್ಚುವುದು.

English summary

Things You Should Not Tell Someone You Married To in kannada

These things you must not tell for your partner, read on...
Story first published: Thursday, August 18, 2022, 16:41 [IST]
X
Desktop Bottom Promotion