For Quick Alerts
ALLOW NOTIFICATIONS  
For Daily Alerts

ರೂಮ್‌ಮೇಟ್ಸ್ ಜೊತೆ ಹೊಂದಾಣಿಕೆ ಕಷ್ಟವಾಗುತ್ತಿದೆಯೇ? ಈ ಟಿಪ್ಸ್ ಪಾಲಿಸಿ

|

ಈಗಿನ ಜಮಾನದಲ್ಲಿ ಹೆಚ್ಚಿನವರು ರೂಮ್ ಮೇಟ್ಸ್ ಅಥವಾ ಫ್ಲ್ಯಾಟ್ ಮೇಟ್ಸ್ ಜೊತೆಗೆ ಬದುಕಬೇಕಾಗುತ್ತದೆ. ಕೆಲಸಕ್ಕೆ ಸೇರಿಕೊಳ್ಳುವುದಕ್ಕಾಗಿಯೋ ಅಥವಾ ಉನ್ನತ ಶಿಕ್ಷಣಕ್ಕಾಗಿ ಕುಟುಂಬ ಸದಸ್ಯರನ್ನು ತೊರೆದಾಗ ನಮ್ಮ ಜೀವನಕ್ಕೆ ರೂಮ್ ಮೇಟ್ಸ್ ಇಲ್ಲವೇ ಫ್ಲ್ಯಾಟ್ ಮೇಟ್ಸ್ ಎಂಟ್ರಿ ಕೊಡುತ್ತಾರೆ.

ನಮ್ಮ ಪ್ರದೇಶವನ್ನು ಸಂಪೂರ್ಣ ಅಪರಿಚಿತವಾಗಿರುವ ವ್ಯಕ್ತಿಯೊಂದಿಗೆ ಹಂಚಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಆದರೆ ಖರ್ಚು ಕಡಿಮೆ ಕೊಳಿಸುವುದಕ್ಕಾಗಿ ರೂಮ್ ಮೇಟ್ಸ್ ಅಥವಾ ಫ್ಲ್ಯಾಟ್ ಮೇಟ್ ಜೊತೆಗೆ ಹೊಂದಿಕೊಳ್ಳಬೇಕಾಗುತ್ತದೆ ಮತ್ತು ಅದಕ್ಕೆ ಪ್ರತಿಯೊಬ್ಬರೂ ಕೂಡ ಪ್ರಯತ್ನಿಸುತ್ತಾರೆ.

Roommates,

ಆದರೆ ಒಂದು ವೇಳೆ ನಿಮ್ಮ ರೂಮ್ ಮೇಟ್ಸ್ ಸೋಮಾರಿಯಾಗಿದ್ದರೆ, ಕಿರಿಕಿರಿ ಉಂಟು ಮಾಡುವ ಸ್ವಭಾವ ಹೊಂದಿದ್ದರೆ ಅಥವಾ ನಿಮ್ಮ ಸ್ವಭಾವಕ್ಕೆ ಅವರು ತದ್ವಿರುದ್ಧ ಅನ್ನಿಸುತ್ತಿದ್ದರೆ ಖಂಡಿತ ನಿಮಗೆ ಅವರೊಂದಿಗೆ ಬದುಕುವುದು ಕಷ್ಟವೆನಿಸುತ್ತದೆ. ನಿಮ್ಮ ವಯಕ್ತಿಕ ವಿಚಾರಗಳಲ್ಲಿ ಅವರು ಮೂಗು ತೂರಿಸಿಕೊಂಡು ಬರುವುದು ಅಥವಾ ನಿಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತೆ ವರ್ತಿಸುವುದನ್ನು ಅವರು ಮಾಡಿದರೆ ಖಂಡಿತ ನಿಮಗೆ ಅದು ಕಿರಿಕಿರಿ ಅನ್ನಿಸುತ್ತದೆ.ಇಂತಹ ಸನ್ನಿವೇಶಗಳಲ್ಲಿ ನಿಮ್ಮ ತಾಳ್ಮೆ ಖಂಡಿತ ಇರುವುದಿಲ್ಲ.

ನಿಮ್ಮ ರೂಮ್ ಮೇಟ್ಸ್ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಸಹಾಯ ಮಾಡುವಂತಹ ಕೆಲವು ಸಲಹೆಗಳನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ ಮತ್ತು ಇವುಗಳು ಕಿರಿಕಿರಿಗೊಳಿಸುವ ನಿಮ್ಮ ರೂಮ್ ಮೇಟ್ಸ್ ಗಳನ್ನು ಹೇಗೆ ಎದುರಿಸಲು ಸಹಾಯ ಮಾಡುತ್ತದೆ.

1. ಕೆಲವು ಗಡಿಗಳನ್ನು ಹಾಕಿಕೊಳ್ಳಿ

1. ಕೆಲವು ಗಡಿಗಳನ್ನು ಹಾಕಿಕೊಳ್ಳಿ

ಯಾವಾಗ ನೀವು ನಿಮ್ಮ ರೂಮ್ ಮೇಟ್ಸ್ ಅಥವಾ ಫ್ಲ್ಯಾಟ್ ಮೇಟ್ ಜೊತೆಗೆ ಬದುಕಲು ತೆರಳುತ್ತೀರೋ ಆಗ ಕೆಲವು ಗಡಿಗಳನ್ನು ಹಾಕಿಕೊಳ್ಳಿ. ನಿಮ್ಮದೇ ಆದ ವಯಕ್ತಿಕ ಜಾಗವಿದೆ ಮತ್ತು ಆ ಜಾಗಕ್ಕೆ ಯಾರಿಂದಲೂ ಕಿರಿಕಿರಿಯಾಗುವುದು ನಿಮಗೆ ಇಷ್ಟವಿಲ್ಲ ಎಂಬುದನ್ನು ಅವರಿಗೆ ತಿಳಿಸಿ. ನೀವು ಯಾವ ರೀತಿಯ ವ್ಯಕ್ತಿ ಮತ್ತು ಯಾವ ರೀತಿಯ ವರ್ತನೆಯನ್ನು ಬಯಸುತ್ತೀರಿ ಎಂಬ ಬಗ್ಗೆ ನಿಮ್ಮ ರೂಮ್ ಮೇಟ್ಸ್ ಗೆ ಮನದಟ್ಟು ಮಾಡಿಸಿ.ನಿಮ್ಮ ಮನಸ್ಸಿನಲ್ಲಿರುವ ಆಲೋಚನೆಯನ್ನು ಆತನ/ಆಕೆಯ ಮುಂದೆ ಇಡಬಹುದು ಮತ್ತು ಆ ಮೂಲಕ ಹೇಗೆ ಇಬ್ಬರೂ ಹೊಂದಾಣಿಕೆ ಮಾಡಿಕೊಳ್ಳಬಹುದು ಎಂಬ ಬಗ್ಗೆ ಇಬ್ಬರೂ ಕೂಡ ಆಲೋಚಿಸಬಹುದು.

24 ವರ್ಷದ ಬಿಹಾರ ಮೂಲಕ ರೋಹನ್ ಅನ್ನುವ ವ್ಯಕ್ತಿಯೊಬ್ಬರು ಬೋಲ್ಡ್ ಸ್ಕೈ ಜೊತೆಗೆ ಮಾತನಾಡಿ ಹೀಗೆ ಹೇಳಿದರು "ನಾನು ಅಪಾರ್ಟ್ ಮೆಂಟ್ ಗೆ ಶಿಫ್ಟ್ ಆಗಿ ಫ್ಲ್ಯಾಟ್ ಜೊತೆಗೆ ಬದುಕಲು ಪ್ರಾರಂಭಿಸಿದ ಕೂಡಲೇ ಆತನ ಜೊತೆಗೆ ಮಾತನಾಡಿದೆ. ಯಾವ ರೀತಿಯ ವಾತಾವರಣವನ್ನು ನಾನು ಇಷ್ಟ ಪಡುತ್ತೇನೆ ಮತ್ತು ನನ್ನದೇ ವಯಕ್ತಿಕ ಸಮಯಕ್ಕೆ ಎಷ್ಟು ಬೆಲೆ ನೀಡುತ್ತೇನೆ ಜೊತೆಗೆ ಆ ಸಮಯವನ್ನು ಇತರರು ಹಾಳು ಮಾಡುವುದು ನನಗೆ ಇಷ್ಟವಿಲ್ಲ ಎಂಬ ಬಗ್ಗೆಯೂ ಆತನಿಗೆ ತಿಳಿಸಿದೆ" ಎಂದು ಹೇಳಿದ್ದಾರೆ.

2. ಕೆಲವು ಕಠಿಣ ನಿಯಮಗಳನ್ನು ಹಾಕಿಕೊಳ್ಳಿ

2. ಕೆಲವು ಕಠಿಣ ನಿಯಮಗಳನ್ನು ಹಾಕಿಕೊಳ್ಳಿ

ಕೆಲವು ಗಡಿಗಳ ಬಗ್ಗೆ ನೀವು ಮಾತನಾಡಿಕೊಂಡಿದ್ದೀರಿ ಇದೀಗ ನೀವು ಮತ್ತು ನಿಮ್ಮ ರೂಮ್ ಮೇಟ್ಸ್ ಗಾಗಿ ಕೆಲವು ನಿಯಮಗಳನ್ನು ಮಾಡಿಕೊಳ್ಳುವುದು ಕೂಡ ಬಹಳ ಮುಖ್ಯ. ಉದಾಹರಣೆಗೆ ಎಷ್ಟು ಸಮಯದವರೆಗೆ ಲೈಟ್ಸ್ ಆನ್ ಇರಬಹುದು, ಯಾರು ಕಸವನ್ನು ದಿನಾಗಲೂ ಹೊರಗಡೆ ಎಸೆಯಬೇಕು, ಸ್ನೇಹಿತರನ್ನು ರೂಮಿಗೆ ಕರೆತರುವುದಕ್ಕೆ ಎಷ್ಟು ಅವಕಾಶವಿದೆ?, ಯಾವಾಗ ರೂಮ್ ಕ್ಲೀನ್ ಮಾಡಬೇಕು? ಅಡುಗೆ ಮಾಡುವುದಕ್ಕೆ ಒಂದಷ್ಟು ನಿಯಮಗಳು ಹೀಗೆ... ನಿಮ್ಮ ನಡುವಿನ ಹೊಂದಾಣಿಕೆಗಾಗಿ ಕೆಲವು ನಿಯಮಗಳೂ ಕೂಡ ಮುಖ್ಯವಾಗುತ್ತದೆ.

25 ವರ್ಷದ ಆದೀಶ್ ರೈ ಎಂಬ ದೆಹಲಿ ಮೂಲದ ವ್ಯಕ್ತಿಯೊಬ್ಬರು ಈ ನಿಟ್ಟಿನಲ್ಲಿ ತಮ್ಮ ಅಭಿಪ್ರಾಯವನ್ನು ಬೋಲ್ಡ್ ಸ್ಕೈ ಜೊತೆಗೆ ಹಂಚಿಕೊಂಡಿದ್ದಾರೆ. ಅವರು ಅವರ ಫ್ಲ್ಯಾಟ್ ಮೇಟ್ ಜೊತೆಗೆ ಇದೇ ರೀತಿಯ ನಿಯಮಗಳನ್ನು ಹಾಕಿಕೊಂಡಿದ್ದಾರಂತೆ. ಕ್ಲೀನಿಂಗ್ ಯಾರು ಯಾವ ದಿನ ಮಾಡಬೇಕು ಎಂಬ ಬಗ್ಗೆ ನಿಗದಿಗೊಳಿಸಿಕೊಂಡಿದ್ದಾರಂತೆ.

ಈ ರೀತಿ ನಿಯಮಗಳನ್ನು ಹಾಕಿಕೊಳ್ಳುವುದರಿಂದಾಗಿ ಇಬ್ಬರ ನಡುವೆ ಕೆಲಸಕ್ಕಾಗಿ ಅಥವಾ ಇತರೆ ಯಾವುದೇ ಕಾರಣಕ್ಕಾಗಿ ಜಗಳವಾಗುವುದು ತಪ್ಪುತ್ತದೆ. ಒಂದು ವೇಳೆ ಜಗಳ ಬಂದರೂ ಈ ರೀತಿ ನಿಯಮಗಳನ್ನು ಹಾಕಿಕೊಂಡಿದ್ದರೆ ರೂಲ್ ಬುಕ್ ತೆಗೆದು ಪರಿಹಾರ ಕಂಡುಕೊಳ್ಳಬಹುದು.

3. ಅವರು ನಿಮ್ಮ ಬೆಸ್ಟ್ ಫ್ರೆಂಡ್ ಆಗಿರಬೇಕು ಎಂದು ನಿರೀಕ್ಷಿಸಬೇಡಿ

3. ಅವರು ನಿಮ್ಮ ಬೆಸ್ಟ್ ಫ್ರೆಂಡ್ ಆಗಿರಬೇಕು ಎಂದು ನಿರೀಕ್ಷಿಸಬೇಡಿ

ಪರಿ (ಹೆಸರು ಬದಲಿಸಲಾಗಿದೆ),24 ವರ್ಷದ ಬೆಂಗಳೂರು ಮೂಲಕ ವ್ಯಕ್ತಿಯೊಬ್ಬರು ಬೋಲ್ಡ್ ಸ್ಕೈ ಜೊತೆಗೆ ಮಾತನಾಡುತ್ತಾ" ಒಂದು ವೇಳೆ ಯಾವುದೋ ಫಿಲ್ಮ್ ನೋಡಿ ಅಥವಾ ಟಿವಿ ಸೀರಿಯಲ್ ನೋಡಿ ನಿಮ್ಮ ರೂಮ್ ಮೇಟ್ ನಿಮ್ಮ ಬೆಸ್ಟ್ ಫ್ರೆಂಡ್ ಆಗಿರಬೇಕು ಎಂದು ನೀವು ಬಯಸಿದರೆ ರಿಯಾಲಿಟಿ ಹತ್ತಿರಬರುವವರೆಗೆ ಸ್ವಲ್ಪ ತಾಳ್ಮೆಯಿಂದ ಕಾಯುತ್ತಿರಿ" ಎಂದು ಸಲಹೆ ನೀಡಿದ್ದಾರೆ.

"ನಾನು ನನ್ನ ಕಾಲೇಜು ದಿನಗಳಿಂದ ರೂಮ್ ಮೇಟ್ಸ್ ಜೊತೆಗೆ ಬದುಕುತ್ತಿದ್ದೇನೆ ಮತ್ತು ಆದರೆ ಯಾವುದೇ ನನ್ನ ಸೀಕ್ರೆಟ್ ನ್ನು ಅವರ ಜೊತೆಗೆ ಹಂಚಿಕೊಳ್ಳಬಹುದು ಎಂದು ನಾನು ಭಾವಿಸಿಲ್ಲ. ನಾನು ನನ್ನ ಆಲೋಚನೆಯನ್ನು ಮತ್ತು ಐಡಿಯಾಗಳನ್ನು ಅವರೊಂದಿಗೆ ಹಂಚಿಕೊಳ್ಳುತ್ತೇನೆ ಆದರೂ ಕೂಡ ಕೆಲವು ವಿಚಾರಗಳನ್ನು ನನ್ನ ಮನಸ್ಸಿನಲ್ಲಿಯೇ ಇಟ್ಟುಕೊಳ್ಳುತ್ತೇನೆ" ಎನ್ನುತ್ತಾರೆ ಪರಿ.

ಒಂದು ವೇಳೆ ನಿಮ್ಮ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುವುದಕ್ಕೆ ರೂಮ್ ಮೇಟ್ ಯೋಗ್ಯವಲ್ಲದ ವ್ಯಕ್ತಿ ಅನ್ನಿಸುತ್ತಿದ್ದರೆ ಖಂಡಿತ ಹಂಚಿಕೊಳ್ಳಬೇಡಿ. ಅವರು ನಿಮ್ಮ ವಯಕ್ತಿಕ ವಿಚಾರಗಳಿಗೆ ಎಷ್ಟು ಬೆಲೆ ನೀಡುತ್ತಾರೆ ಎಂಬುದು ಬಹಳ ಮುಖ್ಯವಾಗುತ್ತದೆ. ನಿಮ್ಮ ಜೀವನದ ಪ್ರತಿ ವಿಚಾರವೂ ಅವರಿಗೆ ತಿಳಿದಿರಬೇಕು ಎಂದು ಭಾವಿಸಬೇಡಿ.

ನಿಮ್ಮ ರೂಮ್ ಮೇಟ್ಸ್ ಅಥವಾ ಫ್ಲ್ಯಾಟ್ ಮೇಟ್ ನಿಮ್ಮ ಎಲ್ಲಾ ಗುಟ್ಟುಗಳನ್ನು ಕಾಪಾಡುತ್ತಾರೆ ಎಂದು ನಂಬಬೇಡಿ.ಸಮಯವೇ ಎಲ್ಲದಕ್ಕೂ ಉತ್ತರ. ನಿಮ್ಮ ಸ್ನೇಹಕ್ಕೆ ನಿಮ್ಮ ರೂಮ್ ಮೇಟ್ ಯೋಗ್ಯರೇ ಎಂಬ ಬಗ್ಗೆ ಸಮಯವೇ ನಿಮಗೆ ತಿಳಿಸುತ್ತದೆ. ಅದಕ್ಕಾಗಿ ಕಾಯುತ್ತಿರಿ. ರೂಮ್ ಮೇಟ್ಸ್ ನಿಮ್ಮ ಬೆಸ್ಟ್ ಫ್ರೆಂಡ್ ಆಗಬೇಕು ಎಂದು ಬಯಸುವುದರಿಂದ ನಿಮಗೆ ಬೇಸರವಾಗಬಹದು. ಯಾಕೆಂದರೆ ಅವರು ನಿಮ್ಮ ಬೆಸ್ಟ್ ಫ್ರೆಂಡ್ ಆಗಲು ಯೋಗ್ಯರಲ್ಲದೇ ಇರಬಹುದು. ಹಾಗಾಗಿ ಇಂತಹ ನಿರೀಕ್ಷೆಯನ್ನು ಇಟ್ಟುಕೊಳ್ಳಬೇಡಿ.

4. ಅವರ ಕಿರಿಕಿರಿ ವರ್ತನೆಯನ್ನು ಒಪ್ಪಿಕೊಳ್ಳುವಿಕೆಯನ್ನು ತಪ್ಪಿಸಿ

4. ಅವರ ಕಿರಿಕಿರಿ ವರ್ತನೆಯನ್ನು ಒಪ್ಪಿಕೊಳ್ಳುವಿಕೆಯನ್ನು ತಪ್ಪಿಸಿ

ನೀವು ಎಲ್ಲದಕ್ಕೂ ಹೊಂದಾಣಿಕೆ ಮಾಡಿಕೊಳ್ಳುತ್ತೀರಿ ಎಂಬಂತೆ ವರ್ತಿಸುವ ಅಗತ್ಯವಿಲ್ಲ. ಎಲ್ಲಾ ವಿಚಾರಕ್ಕೂ ಅವರೊಂದಿಗೆ ರಾಜಿ ಮಾಡಿಕೊಳ್ಳಬೇಕಾಗಿಲ್ಲ.ಕೆಲವೇ ದಿನಗಳಲ್ಲಿ ನಿಮ್ಮ ರೂಮ್ ಮೇಟ್ ಒಳ್ಳೆಯವರೋ ಅಥವಾ ಕೆಟ್ಟವರೋ ಎಂಬುದು ನಿಮಗೆ ಅರ್ಥವಾಗುತ್ತದೆ.ಇಬ್ಬರೂ ಒಟ್ಟಿಗೆ ಅರ್ಥೈಸಿಕೊಂಡು ಬದುಕುವುದಕ್ಕೆ ಸಾಧ್ಯವಾಗುತ್ತದೆಯೋ ಅಥವಾ ಇಲ್ಲವೋ ಎಂಬುದು ಕೆಲವೇ ದಿನಗಳಲ್ಲಿ ಗೊತ್ತಾಗುತ್ತದೆ.

ಪರಿ ಹೇಳುವ ಪ್ರಕಾರ "ಒಂದು ವೇಳೆ ನೀವು ಅವರ ಜೊತೆಗೆ ಕಠಿಣ ಸಮಯ ಕಳೆಯುತ್ತಿದ್ದೀರಿ ಎಂದು ಭಾವಿಸುತ್ತಿದ್ದರೆ ಅದನ್ನು ಅವರ ಬಳಿ ಹೇಳಿಕೊಳ್ಳಿ. ಅವರ ನಡವಳಿಕೆಯಿಂದ ನಿಮಗೆ ಕಿರಿಕಿರಿಯಾದಾಗ ಅದನ್ನು ಅವರಿಗೆ ಸೂಕ್ಷ್ಮವಾಗಿ ತಿಳಿಸಿ.ಅವರ ಜೊತೆಗೆ ಜಗಳಕ್ಕೋ ಅಥವಾ ವಾದಕ್ಕೋ ಇಳಿಯಿರಿ ಎಂದು ಹೇಳುತ್ತಿಲ್ಲ ಬದಲಾಗಿ ತಾಳ್ಮೆಯಿಂದ ತಿಳಿಸಿ ಮತ್ತು ನಿಮ್ಮ ಸಮಸ್ಯೆಯನ್ನು ತಿಳಿಸಿ ಆ ಮೂಲಕ ಒಂದು ನಿರ್ಧಾರ ಕೈಗೊಳ್ಳುವುದಕ್ಕೆ ನೆರವಾಗಲಿ."

5. ಪ್ರತಿಯೊಂದಕ್ಕೂ ಅವರನ್ನೇ ಅವಲಂಬಿಸಬೇಡಿ

5. ಪ್ರತಿಯೊಂದಕ್ಕೂ ಅವರನ್ನೇ ಅವಲಂಬಿಸಬೇಡಿ

ಒಂದು ನಗರದಲ್ಲಿ ಏಕಾಂಗಿಯಾಗಿ ಬದುಕುವುದು ಇಷ್ಟವಿಲ್ಲ ಎಂಬ ಒಂದೇ ಒಂದು ಕಾರಣಕ್ಕಾಗಿ ಮತ್ತು ನೀವು ಮನೆಯಿಂದ,ಕುಟುಂಬ ಸದಸ್ಯರಿಂದ ದೂರವಿದ್ದೀರಿ ಎಂಬ ಕಾರಣಕ್ಕಾಗಿ ನಿಮ್ಮ ಫ್ಲ್ಯಾಟ್ ಮೇಟ್ ಅಥವಾ ರೂಮ್ ಮೇಟ್ ನ್ನೇ ಪ್ರತಿಯೊಂದಕ್ಕೂ ಅವಲಂಬಿಸುವ ಅಗತ್ಯವಿಲ್ಲ. ಕೆಲವು ನಿತ್ಯದ ಅಗತ್ಯತೆಗಾಗಿ ಅವಲಂಬನೆ ಇಬ್ಬರಿಗೂ ಕಿರಿಕಿರಿ ಅನ್ನಿಸಬಹುದು.

ಪ್ರತಿಯೊಂದಕ್ಕೂ ನೀವು ಅವರನ್ನೇ ಅವಲಂಬಿಸಿದಾಗ ಅವರು ನಿಮ್ಮನ್ನು ಬಾಲಿಶ ಎಂದು ಭಾವಿಸಬಹುದು ಅಥವಾ ಕಿರಿಕಿರಿಯುಂಟುಮಾಡುವ ವ್ಯಕ್ತಿ ಎಂದು ಅಂದುಕೊಳ್ಳಬಹುದು. ಅದೇ ರೀತಿ ಅವರು ನಿಮ್ಮನ್ನ ಅವಲಂಬಿಸುವುದನ್ನೂ ಕೂಡ ತಪ್ಪಿಸಿಕೊಳ್ಳಿ. ಅಂತಹ ವರ್ತನೆಯನ್ನು ನೀವು ಸಹಿಸುವುದಿಲ್ಲ ಎಂಬುದನ್ನು ಅವರಿಗೂ ಮನದಟ್ಟು ಮಾಡಿ.

6. ಅಗತ್ಯವಿದ್ದಾಗ ಮಾತನಾಡಿ

6. ಅಗತ್ಯವಿದ್ದಾಗ ಮಾತನಾಡಿ

ಸಮಸ್ಯೆಯನ್ನು ಪರಿಹರಿಸುವುದಕ್ಕೆ ಸರಿಯಾದ ಮಾತುಕತೆ ಬಹಳ ಮುಖ್ಯ. ಇಬ್ಬರ ನಡುವಿನ ಸಂವಹನ ಹೇಗಿರುತ್ತದೆ ಎಂಬುದು ನಿಮ್ಮ ರೂಮಿನ ವಾತಾವರಣವನ್ನು ನಿರ್ಧರಿಸುತ್ತದೆ. ಹೊಂದಾಣಿಕೆಯ ಸಮಸ್ಯೆ ಇದೆ ಎಂದು ನೀವು ಭಾವಿಸುತ್ತಿದ್ದರೆ ಇಬ್ಬರೂ ಚರ್ಚಿಸಿಕೊಳ್ಳಿ. ಮಾತು ಮನೆ ಕೆಡಿಸ್ತು,ತೂತು ಒಲೆ ಕೆಡಿಸ್ತು ಎಂಬ ಗಾದೆಯೇ ಇಲ್ಲವೇ? ಹಾಗೆ ಇಬ್ಬರ ನಡುವಿನ ಮಾತುಕತೆ ಯಾವಾಗಲೂ ಉತ್ತಮವಾಗಿರಲಿ.ಅನಗತ್ಯ ಮಾತನಾಡಿ ಜಗಳ ತೆಗೆದುಕೊಳ್ಳಬೇಡಿ. ಮನಸ್ಸಿಗೆ ನೋವುಂಟು ಮಾಡುವ ಮಾತುಗಳಿಗೆ ಆಸ್ಪದ ನೀಡಬೇಡಿ. ಹೀಗೆ ಮಾಡಿದರೆ ಇಬ್ಬರೂ ಜಗಳ ಮಾಡಿಕೊಳ್ಳುವುದು ತಪ್ಪುತ್ತದೆ.

English summary

Finding Difficult To deal With Roommates, Here Are Tips

If you feel difficult to adjust with roommates here are few tips to deal with them. These tips help you to have healthy friendship with roommates, take a look.
Story first published: Thursday, January 23, 2020, 15:15 [IST]
X
Desktop Bottom Promotion