Latest Updates
-
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್!
ಅಪರೂಪದ ಸ್ನೇಹಕ್ಕೆ ಸಾಕ್ಷಿಯಾದ ಈ ಸ್ವಿಗ್ಗಿ-ಜೊಮೆಟೊ ಡೆಲಿವರಿ ಬಾಯ್ಸ್: ನೆಟ್ಟಿಗರ ಮನ ಗೆದ್ದು ವೈರಲ್ ಆಯ್ತು ವೀಡಿಯೋ
ಈ ಸ್ವಿಗ್ಗಿ-ಜೊಮೆಟೊ ಡೆಲಿವರಿ ಬಾಯ್ಸ್‌ಈ ವೀಡಿಯೋ ನೋಡಿದಾಗ ನಿಮ್ಮ ಮುಖದಲ್ಲಿ ಮಂದಹಾಸ ಮೂಡುತ್ತೆ, ನಮ್ಮ ಕೈಯಲ್ಲಾಗುವ ಪುಟ್ಟ ಸಹಾಯ ಬೇರೆಯವರಿಗೆ ದೊಡ್ಡ ಉಪಕಾರವೇ ಆಗುತ್ತೆ ಅಲ್ವಾ! ಈ ವೀಡಿಯೋದಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್ ಜೊಮೆಟೊ ಡೆಲಿವರಿ ಬಾಯ್‌ಗೆ ಮಾಡಿರುವ ಸಹಕಾರ ನೋಡಿ ನೆಟ್ಟಿಗರು ಇದುವೇ ನಿಜವಾದ ಸ್ನೇಹ ಎಂದು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.

ಈ ಸುಂದರವಾದ ದೃಶ್ಯ ಕಂಡು ಬಂದಿದ್ದು ದೆಹಲಿಯಲ್ಲಿ. sannaharora' ಎಂಬವರು ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ "True friendship seen on these hot Delhi days" ಎಂಬ ಕ್ಯಾಪ್ಷನ್ ನೀಡಿ ಈ ಸುಂದರ ವೀಡಿಯೋ ಶೇರ್ ಮಾಡಿದ್ದಾರೆ.
ಈ ವೀಡಿಯೋ ತುಂಬಾನೇ ವೈರಲ್ ಆಗಿದೆ. ಜೊಮೆಟೊ ಡೆಲಿವರಿ ಬಾಯ್ ಸೈಕಲ್‌ನಲ್ಲಿ ಪಾರ್ಸಲ್ ತೆಗೆದುಕೊಂಡು ಹೋಗುತ್ತಿರುತ್ತಾನೆ, ಅದನ್ನು ನೋಡಿದ ಬೈಕ್‌ನಲ್ಲಿ ಬರುವ ಸ್ವಿಗ್ಗಿ ಡೆಲಿವರಿ ಬಾಯ್ ಕೈ ಹಿಡಿದು ರೈಡ್ ಮಾಡುವ ವೀಡಿಯೋ ವೈರಲ್ ಆಗಿದೆ.
ನೆಟ್ಟಿಗರು ಸ್ನೇಹಿತರಿರಬಹುದು ಎಂದು ಹೇಳುತ್ತಿದ್ದಾರೆ, ಆದರೆ ಇವರು ಸ್ನೇಹಿತರೋ ಅಥವಾ ಆಗಷ್ಟೇ ಮೀಟ್ ಆದವರೋ ಗೊತ್ತಿಲ್ಲ, ಆದರೆ ಆ ಸ್ವಿಗ್ಗ ಡೆಲಿವರಿ ಬಾಯ್‌ನ ಒಳ್ಳೆಯ ಮನುಸ್ಸು ಸ್ಪಷ್ಟವಾಗಿ ಕಾಣುತ್ತೆ.
ಫುಡ್ ಡೆಲಿವರಿ ಬಾಯ್ಸ್‌ಗೆ ನಿಗದಿತ ಸಮಯಕ್ಕೆ ಗ್ರಾಹಕರಿಗೆ ಆಹಾರ ತಲುಪಿಸುವುದು ಎಂಥ ಸವಾಲಿನ ಕೆಲಸ ಎಂಬುವುದು ಅವರಿಗಷ್ಟೇ ಗೊತ್ತು. ಆಹಾರ ತಲುಪಲು ಒಂದು ನಿಮಿಷ ಲೇಟ್ ಆದರೆ ಹಿಂತಿರುಗಿಸುವ ವಿಚಿತ್ರ ಜನಗಳೂ ಇರುತ್ತಾರೆ. ಅವರಿಗೆ ಇವರ ಕಷ್ಟಪಾಡುಗಳ ಬಗ್ಗೆ ಕಿಂಚಿತ್ತೂ ಕಾಳಜಿ ಇರಲ್ಲ, ಸಮಯಕ್ಕೆ ಸರಿಯಾಗಿ ಆಹಾರ ಒದಗಿಸದಿದ್ದರೆ ಕಂಪನಿ ಕಡೆಯಿಂದಲೂ ಬ್ಯಾಡ್ ರಿಮಾರ್ಕ್. ಈ ಕಷ್ಟದ ಸ್ಪಷ್ಟ ಅರಿವು ಇರುವುದಕ್ಕೆ ಆ ಸ್ವಿಗ್ಗಿಬಾಯ್ ಸೈಕಲ್‌ನಲ್ಲಿ ಹೋಗುತ್ತಿರುವ ಜೊಮೆಟೊ ಬಾಯ್‌ಗೆ ನೆರವಾಗಿರಬಹುದು.
ಇಂಥ ಗುಣಗಳು ನಮ್ಮಲ್ಲಿ ಹೆಚ್ಚಿದರೆ ಮಾತ್ರ ನಾವು ಮನುಷ್ಯರಾಗಿರಲು ಸಾಧ್ಯ ಅಲ್ಲವೇ?



Click it and Unblock the Notifications

