For Quick Alerts
ALLOW NOTIFICATIONS  
For Daily Alerts

ಜೀವನಪರ್ಯಂತ ಸ್ನೇಹವನ್ನು ಗಟ್ಟಿಯಾಗಿ ಉಳಿಸಿಕೊಳ್ಳುವುದು ಹೇಗೆ..?

|

ಉತ್ತಮ ಸ್ನೇಹಿತರನ್ನು ಹೊಂದುವುದು ಎಂದರೆ ಅಮೂಲ್ಯವಾದ ರತ್ನವನ್ನು ಹೊಂದುವುದು ಎನ್ನುವುದು ಇದರ ಅರ್ಥ. ಉತ್ತಮ ಸ್ನೇಹಿತರು ನಿಮ್ಮ ಉತ್ಸಾಹವನ್ನು ಹೆಚ್ಚಿಸಬಹುದು, ನಿಮ್ಮನ್ನು ನಗಿಸಬಹುದು, ನಿಮ್ಮ ಕಷ್ಟದಲ್ಲಿ ನಿಮ್ಮ ಜೊತೆ ಭಾಗುಯಾಗಬಹುದು. ನಿಮ್ಮ ಖುಷಿಯಲ್ಲಿ ನಿಮ್ಮ ಜೊತೆ ನಿಲ್ಲಬಹುದು. ನಿಮ್ಮ ಕಷ್ಟ, ಸುಖಗಳಲ್ಲಿ ಒಂದೇ ರೀತಿಯಲ್ಲಿ ನಿಮ್ಮ ಜೊತೆ ಬೆರೆಯಬಹುದು. ಸ್ನೇಹ ಅಂದರೆ ಹಾಗೇ ಅದೊಂದು ವಿಚಿತ್ರ ಬಂಧನ. ಎಲ್ಲರಿಗೂ ಉತ್ತಮ ಸ್ನೇಹಿತ ಅಥವಾ ಸ್ನೇಹಿತೆ ಸಿಗದೆ ಇರಬಹುದು.

ಯಾಕೆಂದರೆ ಉತ್ತಮ ಗೆಳೆತನ ಪಡೆಯುವುದಕ್ಕೂ ಒಂದು ಪುಣ್ಯ ಬೇಕಾಗಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಗೆಳೆತನ ಬೇಗನೆ ಹಾಳಗುವುದುಂಟು. ಗೆಳೆತನ ಉಳಿಸಿಕೊಳ್ಳಲು ಆಗದ ಪರಿಸ್ಥಿತಿಯು ಉಂಟು. ಹಾಗಾದರೆ ಇವತ್ತು ನಾವು ಗೆಳೆತನವನ್ನು ಉಳಿಸಲು ನಾವು ಮಾಡಬೇಕಾದ ಕೆಲಸ ಏನು..? ಇದಕ್ಕೆ ಇರುವ ತಂತ್ರಗಳು ಏನು..? ಅನ್ನುವುದನ್ನು ಇಂದು ತಿಳಿಸುತ್ತೇವೆ.

ಗೆಳೆತನದ ನಿಯಮವನ್ನು ನೆನಪಿನಲ್ಲಿ ಇಟ್ಟುಕೊಳ್ಳಿ!

ಗೆಳೆತನದ ನಿಯಮವನ್ನು ನೆನಪಿನಲ್ಲಿ ಇಟ್ಟುಕೊಳ್ಳಿ!

ಗೆಳೆತನ ಎಂದಾಗ ನೀವು ಮುಖ್ಯವಾದ ನಿಯಮವನ್ನು ನೆನಪಿಟ್ಟುಕೊಳ್ಳಿ. ಹೌದು, ನೀವು ಬೇರೆಯವರಿಂದ ಗೌರವವನ್ನು ಸರಿಯಾದ ರೀತಿಯಲ್ಲಿ ಪಡೆಯಲು ಇಚ್ಚಿಸುತ್ತೀರಿ ಅಲ್ವಾ..? ಅದೇ ರೀತಿ ನೀವು ಕೂಡ ನಿಮ್ಮ ಗೆಳೆಯರಿಗೆ ಗೌರವವನ್ನು ನೀಡಬೇಕು. ಅವರನ್ನು ಕೀಳಾಗಿ ಕಾಣುವುದು ಅಥವಾ ನಿಮಗಿಂತ ಸಣ್ಣದಾಗಿ ನೋಡುವುದು ಮಾಡಬೇಡಿ. ಈ ರೀತಿಯ ನಿಮಯ ಪಾಲಿಸಿದರೆ ನಿಮ್ಮ ಗೆಳೆತನ ಅತ್ಯುತ್ತಮವಾಗಿ ಇರುತ್ತದೆ.

ಯಾರೂ ಪರಿಪೂರ್ಣರಲ್ಲ ಎಂಬುದನ್ನು ಅರಿತುಕೊಳ್ಳಿ

ಯಾರೂ ಪರಿಪೂರ್ಣರಲ್ಲ ಎಂಬುದನ್ನು ಅರಿತುಕೊಳ್ಳಿ

ಈ ಸಮಾಜದಲ್ಲಿ ಯಾರು ಪರಿಪೂರ್ಣರಲ್ಲ ಅನ್ನುವುದನ್ನು ನೀವು ಮೊದಲು ಅರಿತುಕೊಳ್ಳಬೇಕು.ಯಾಕೆಂದರೆ ಪ್ರತಿಯೊಬ್ಬರೂ ಚಮತ್ಕಾರಗಳು ಮತ್ತು ನ್ಯೂನತೆಗಳನ್ನು ಹೊಂದಿದ್ದಾರೆ ಮತ್ತು ಪರಸ್ಪರರ ನ್ಯೂನತೆಗಳನ್ನು ಒಪ್ಪಿಕೊಳ್ಳುವುದು ಉತ್ತಮ ಸ್ನೇಹಕ್ಕೆ ಪ್ರಮುಖ ಅಂಶವಾಗಿದೆ. ನಿಮ್ಮ ಸ್ನೇಹಿತನನ್ನು ನೀವು ಯಾವಾಗಲು ನಿರ್ಣಯಿಸಲು ಹೋಗಬೇಡಿ. ಅಥವಾ ತಪ್ಪು ಮಾಆಅಡಿದ ಎಂದು ತೆಗೆಳಲು ಹೋಗಬೇಡಿ.

ಪರಸ್ಪರರ ಅಭಿಪ್ರಾಯಗಳನ್ನು ಗೌರವಿಸಿ!

ಪರಸ್ಪರರ ಅಭಿಪ್ರಾಯಗಳನ್ನು ಗೌರವಿಸಿ!

ಮನುಷ್ಯರು ಎಂದ ಮೇಲೆ ವಿಭಿನ್ನ ಅಭಿಪ್ರಾಯಗಳು ಇರುತ್ತದೆ. ಹೀಗಾಗಿ ನಿಮ್ಮ ಸ್ನೇಹಿತರು ನಿಮ್ಮ ಬಗ್ಗೆ ವಿಭಿನ್ನ ಅಭಿಪ್ರಾಯವನ್ನು ಹೊಂದಲು ಅವಕಾಶ ಕೊಡಿ, ನಿಮ್ಮ ಅಭಿಪ್ರಾಯವನ್ನು ನೀವು ವ್ಯಕ್ತಪಡಿಸಿ. ಅದು ನಮ್ಮೆಲ್ಲರನ್ನು ವ್ಯಕ್ತಿಗಳನ್ನಾಗಿ ಬದಲಾಯಿಸುತ್ತದೆ. ನೀವು ಅಭಿಪ್ರಾಯ ಹೇಳಲು ಅವಕಾಶಕೊಟ್ಟಿಲ್ಲ ಎಂದರೆ ಅದು ಸಾರ್ವಭೌಮತೆ ಆಗುತ್ತದೆ. ಇದು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಉತ್ತಮ ಸ್ನೇಹಿತರು 24/7 ಒಟ್ಟಿಗೆ ಇರಲು ಸಾಧ್ಯವಿಲ್ಲ

ಉತ್ತಮ ಸ್ನೇಹಿತರು 24/7 ಒಟ್ಟಿಗೆ ಇರಲು ಸಾಧ್ಯವಿಲ್ಲ

ಕೆಲವು ಸ್ನೇಹ ಹಾಳಾಗಲು ಸಮಯ ಕೊಡುತ್ತಿಲ್ಲ ಎನ್ನುವುದು ಕಾರಣವಿರುತ್ತೆ. ಫೋನ್ ತೆಗೆಯಲಿಲ್ಲ ಎಂಬ ಕಾರಣದಿಂದ ಸ್ನೇಹ ಕಟ್ ಆಗುವುದುಂಟು. ಆದರೆ ನಿಮಗೊಂದು ನೆನಪಿರಲಿ ಉತ್ತಮ ಸ್ನೇಹಿತರು 24/7 ಒಟ್ಟಿಗೆ ಇರಲು ಸಾಧ್ಯವಿಲ್ಲ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ಅವರಿಗೆ ಬೇರೆ ಕೆಲಸಗಳು ಇರುತ್ತದೆ. ಅವರು ಏನಾದರೂ ಮಾಡಿಕೊಂಡಿರುತ್ತಾರೆ ಅನ್ನುವುದನ್ನು ನಾವು ತಿಳಿದುಕೊಳ್ಳಬೇಕು. ಅವರು ಯಾವಾಗಲೂ ನಮಗೆ ಸಮಯ ನೀಡಬೇಕು ಎಂದು ಯಾವಾಗಲೂ ಯೋಚಿಸಬೇಡಿ.

ಸಂವಹನ ಅತೀ ಮುಖ್ಯ!

ಸಂವಹನ ಅತೀ ಮುಖ್ಯ!

ಯಾವುದೇ ರೀತಿಯ ಸಂಬಂಧವಿರಲಿ ಅಲ್ಲಿ ಸಂಹವನ ಅತೀ ಮುಖ್ಯ. ಮಾತುಕತೆ ಮೂಲಕ ಎಷ್ಟೇ ದೊಡ್ಡ ಸಮಸ್ಯೆ ಇದ್ದರು ಅದನ್ನು ಪರಿಹರಿಸಿಕೊಳ್ಳಬಹುದು. ಉದಾಹರಣೆಗೆ ಒಂದು ಸಮಸ್ಯೆ ಆಗಿದ್ದರೆ ಅದನ್ನು ಮಾತಿನ ಮೂಲಕ ಪರಿಹರಿಸಬಹುದು. ಯಾಕೆಂದರೆ ನಿಮ್ಮ ಗೆಳೆತನಕ್ಕೆ ಏನಾದರೂ ಸಮಸ್ಯೆ ಆಗುವ ವಿಚಾರ ಇದೆ ಎಂದರೆ ಅದನ್ನು ನೀವು ಸಂಹವನದ ಮೂಲಕ ಪರಿಹರಿಸಿಕೊಳ್ಳಬೇಕು. ಯಾಕೆಂದರಎ ಯಾರಿಗೂ ನಿಮ್ಮ ತಲೆಯಲ್ಲಿ ಏನು ಓಡುತ್ತದೆ ಅನ್ನುವುದನ್ನು ಹೇಳಲು ಆಗುವುದಿಲ್ಲ.

ಅವರ ಮಾತನ್ನು ಕೇಳಿ!

ಅವರ ಮಾತನ್ನು ಕೇಳಿ!

ಗೆಳೆತನದಲ್ಲಿ ಮುಖ್ಯವಾದ ವಿಚಾರವನ್ನು ನೀವು ತಿಳಿದುಕೊಳ್ಳಬೇಕು ಅದು ಏನಂದರೆ ನಿಮ್ಮ ಗೆಳೆಯ ಅಥವಾ ಗೆಳತಿ ಮಾತನಾಡಲು ಬಯಸಿದರೆ ಅದನ್ನು ನೀವು ಕೇಳಬೇಕು. ಹೌದು, ಕೆಲವರಿಗೆ ಹೇಗೆ ಇರುತ್ತೆ ಅಂದರೆ ಯಾವಾಗಲೂ ನಮ್ಮ ಸಮಸ್ಯೆ, ನಮ್ಮ ಖುಷಿಯ ವಿಚಾರವನ್ನು ಮಾತ್ರ ಹೇಳಲು ಕಾತರತೆ ಮತ್ತು ಖುಷಿ ಇರುತ್ತದೆ, ಆದರೆ ಬೇರೆಯವರ ಸಮಸ್ಯೆ, ನೋವು ಕೇಳಲು ಮನಸ್ಸು ಇರುವುದಿಲ್ಲ. ಹೀಗಾಗಿ ನಿಮ್ಮ ಗೆಳೆಯರ ಮಾತನ್ನು ನೀವು ಕೇಳಬೇಕು.

ನಂಬಲರ್ಹ ಸ್ನೇಹಿತರಾಗಿ!

ನಂಬಲರ್ಹ ಸ್ನೇಹಿತರಾಗಿ!

ಸ್ನೇಹದಲ್ಲಿ ನಂಬಿಕೆ ಅತೀ ಮುಖ್ಯ. ನಿಮ್ಮಲ್ಲಿ ಏನಾದರು ನಿಮ್ಮ ಸ್ನೇಹಿತ ಅಥವಾ ಸ್ನೇಹಿತೆ ನಂಬಿಕೆಯಿಂದ ಏನಾದರು ರಹಸ್ಯವನ್ನು ಹೇಳಿದರೆ ಅದನ್ನು ನೀವು ಎಂದಿಗೂ ಲೀಕ್ ಮಾಡಬೇಡಿ ಅಥಾವ ಬೇರೆ ಯಾರಿಗೂ ಶೇರ್ ಮಾಡಲು ಹೋಗಬೇಡಿ. ಯಾಕೆಂದರೆ ಅವರಿಗೆ ಈ ವಿಚಾರ ತಿಳಿದರೆ ಅವರ ಮನಸ್ಸು ತುಂಬಾನೇ ನೋಯುತ್ತೆ. ಹೃದಯ ಚಡಪಡಿಸುತ್ತದೆ.

ನಿಮ್ಮ ಮಾತನ್ನು ಉಳಿಸಿಕೊಳ್ಳಿ!

ನಿಮ್ಮ ಮಾತನ್ನು ಉಳಿಸಿಕೊಳ್ಳಿ!

ಗೆಳೆತನದಲ್ಲಿ ಇದು ಕೂಡ ಅತೀ ಮುಖ್ಯ. ಗೆಳೆತನದಲ್ಲಿ ನೀವು ಏನಾದರೂ ಹೇಳುತ್ತೀರಿ ಎಂದಾದರೆ ಅದನ್ನು ಸರಿಯಾಗಿ ಪಾಲನೆ ಮಾಡಬೇಕು. ಉದಾಹರಣೆಗೆ ನಾನು ಈ ರೀತಿ ಮಾಡುತ್ತೇನೆ ಎಂದಾದರೆ ಅದನ್ನು ಮಾಡಿ. ಮಾತನ್ನು ಅನುಸರಿಸಿ. ನೀವು ಹೇಳಿ ಏನಾನ್ನು ಮಾಡಿಲ್ಲ ಎಂದಾದರೆ ನೀವು ಬೊಗಳೆ ಬಿಡುವ ವ್ಯಕ್ತಿ ಎಂದಾಗುತ್ತದೆ.

ನಿಮ್ಮ ಸ್ನೇಹಿತನ ಹಿಂದೆ ಮಾತನಾಡಬೇಡಿ!

ನಿಮ್ಮ ಸ್ನೇಹಿತನ ಹಿಂದೆ ಮಾತನಾಡಬೇಡಿ!

ಗಾಸಿಪ್ ಅನ್ನುವುದು ವಿಷಕಾರಿ ಅಂಶವಾಗಿದೆ. ಇದು ಉತ್ತಮ ಸ್ನೇಹವನ್ನು ಸಹ ಹಾಳುಮಾಡುತ್ತದೆ. ಹೀಗಾಗಿ ಗೆಳೆಯರ ಹಿಂದೆ ಯಾವತ್ತು ಮಾತನಾಡಬೇಡಿ. ಅವರ ಹಿಂದೆಯಿಂದ ಮಾತನಾಡಬೇಡಿ. ಇದು ಒಳ್ಳೆಯದಲ್ಲ ಉದಾಹರಣೆಗೆ ಅವನು ಹಾಗೇ, ಅವಳು ಹೀಗೆ ಎಂದು ಹೇಳಿ ಕೆಟ್ಟದಾಗಿ ಮಾತನಾಡಿದರೆ ನಿಮ್ಮ ಗೆಳೆತನವೇ ಹಾಳಾಗುತ್ತದೆ. ಮತ್ತೆ ಅದು ಸರಿಯಾಗುವುದಿಲ್ಲ.

ಪರಸ್ಪರ ವಾದ ಮಾಡಿ!

ಪರಸ್ಪರ ವಾದ ಮಾಡಿ!

ಉತ್ತಮ ಸ್ನೇಹಿತರು ಭಿನ್ನಾಭಿಪ್ರಾಯಗಳನ್ನು ಹೊಂದಿರುತ್ತಾರೆ ಮತ್ತು ಕಾಲಕಾಲಕ್ಕೆ ವಾದಿಸುತ್ತಾರೆ. ಇದು ಪ್ರಪಂಚದ ಅಂತ್ಯ ಎಂದು ಆಗುವುದಿಲ್ಲ.ಆರೋಗ್ಯಕರ ರೀತಿಯಲ್ಲಿ ವಾದಿಸುವುದರಿಂದ ನೀವು ಇಬ್ಬರೂ ಹೇಳಬೇಕಾದುದನ್ನು ವ್ಯಕ್ತಪಡಿಸುವುದರಿಂದ ಸ್ನೇಹವನ್ನು ಬಲಪಡಿಸಬಹುದು ಮತ್ತು ಇತರ ವ್ಯಕ್ತಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಇದು ಒಂದು ಅವಕಾಶವಾಗಿದೆ.

ನಿಮ್ಮ ಸ್ನೇಹ ಪರಿಪೂರ್ಣವಾಗಬೇಕೆಂದು ನಿರೀಕ್ಷಿಸಬೇಡಿ!

ನಿಮ್ಮ ಸ್ನೇಹ ಪರಿಪೂರ್ಣವಾಗಬೇಕೆಂದು ನಿರೀಕ್ಷಿಸಬೇಡಿ!

ಈ ವಿಚಾರ ನಿಮ್ಮ ಗೆಳೆತನದಲ್ಲಿ ಮುಖ್ಯವಾಗಿರಲಿ. ಹೌದು, ನಿಮ್ಮ ಸ್ನೇಹ ಪರಿಪೂರ್ಣವಾಗಬೇಕೆಂದು ನಿರೀಕ್ಷಿಸಬೇಡಿ. ಯಾಕೆಂದರೆ ಯಾರು ಇಲ್ಲಿ ಪರಿಪೂರ್ಣರಿಲ್ಲ. ನೀವು ಸರಿಯಾದ ಸಮಯಕ್ಕೆ ಬರಬೇಕು, ಅವರು ಸರಿಯಾಗಿ ಇರಬೇಕು ಎಂದು ಯೋಚಿಸಬೇಡಿ. ಯಾಕೆಂದರೆ ಇಲ್ಲಿ ಎಲ್ಲರೂ ವಿಭಿನ್ನರಾಗಿರುತ್ತಾರೆ. ಎಲ್ಲವನ್ನು ಮಾತಿನ ಮೂಲಕ ಸರಿ ಮಾಡಿಕೊಂಡು ಗೆಳೆತನ ನಡೆಸಬೇಕು.

ಮೊದಲು ನೀವು ನಿಮ್ಮ ಬೆಸ್ಟ್ ಫ್ರೆಂಡ್ ಆಗಿರಿ!

ಮೊದಲು ನೀವು ನಿಮ್ಮ ಬೆಸ್ಟ್ ಫ್ರೆಂಡ್ ಆಗಿರಿ!

ನೀವು ಉತ್ತಮ ಗೆಳೆತನ ನಡೆಸಲು ಮೊದಲು ನೀವು ನಿಮ್ಮನ್ನು ನೀವು ಅರಿಯಬೇಕು. ನಿಮ್ಮನ್ನು ನೀವು ಹೇಗೆ ಗೌರವಿಸಬೇಕು ಎಂಬುದನ್ನು ಕಲಿಯಿರಿ. ನಿಮಗೆ ಯಾವ ಗಡಿಗಳು ಮುಖ್ಯವೆಂದು ನಿರ್ಧರಿಸಿ ಮತ್ತು ಅವುಗಳನ್ನು ಗೌರವಿಸಿ. ನಿಮಗೆ ಯಾವ ಮೌಲ್ಯಗಳು ಮುಖ್ಯವೆಂದು ಅರ್ಥಮಾಡಿಕೊಳ್ಳಿ ಮತ್ತು ಅವುಗಳನ್ನು ಅನುಸರಿಸಿ. ಆ ಮೌಲ್ಯಗಳನ್ನು ಗೌರವಿಸುವ ಇತರರನ್ನು ಹುಡುಕಿ. ಅಲ್ಲದೇ ಈ ಗೌರವವು ಬೇರೆಯವರಿಗು ನೀಡಲು ಸಾಧ್ಯವಾಗುತ್ತದೆ.

English summary

The secrets of lasting friendships in Kannada

Here we are discussing about The secrets of lasting friendships in Kannada. Read more.
Story first published: Wednesday, October 19, 2022, 13:00 [IST]
X
Desktop Bottom Promotion