Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಈ ಕಾರಣಕ್ಕೆ ಹೇಳುವುದು ಪ್ರೀತಿಗಿಂತ ಫ್ರೆಂಡ್‌ಶಿಪ್ ಬೆಸ್ಟ್ ಗ್ರೇಟ್
ನಮ್ಮ ಜೀವನದಲ್ಲಿ ನಮಗೆ ಗೊತ್ತಿಲ್ಲದೆ ಇರುವ ರೀತಿಯಲ್ಲಿ ಸಾಕಷ್ಟು ಸಂಬಂಧಗಳಲ್ಲಿ ಸಿಲುಕಿ ಕೊಳ್ಳುತ್ತೇವೆ. ಅದು ಸ್ನೇಹ ಆಗಿರಬಹುದು ಅಥವಾ ಪ್ರೀತಿ ಆಗಿರಬಹುದು. ಆದರೆ ಸ್ನೇಹ ಹೆಚ್ಚು ಮಹತ್ವ ಪಡೆದುಕೊಂಡಿದೆಯೋ ಅಥವಾ ಪ್ರೀತಿನೋ ಎನ್ನುವ ಪ್ರಶ್ನೆ ಬಂದಾಗ ಮಾತ್ರ ಆಯ್ಕೆ ಮಾಡಿಕೊಳ್ಳುವುದು ತುಸು ಕಷ್ಟ ಎನಿಸಿದರು ಶೇಕಡ 100 ರಲ್ಲಿ 60% ನಷ್ಟು ಜನ ಸ್ನೇಹವನ್ನೇ ಆಯ್ದುಕೊಳ್ಳುತ್ತಾರೆ. ಹಾಗಾದ್ರೆ ಸ್ನೇಹಕ್ಕೆ ಅಷ್ಟೊಂದು ಮಹತ್ವ ಯಾಕಿದೆ? ಪ್ರೀತಿಗಿಂತಲೂ ಸ್ನೇಹ ಒಂದು ಕೈ ಮೇಲೆ ಎನಿಸುವುದು ಯಾಕೆ?

ಹೌದು, ಸಾಕಷ್ಟು ಸಂದರ್ಭದಲ್ಲಿ ಪ್ರೀತಿಗಿಂತ ಸ್ನೇಹವೇ ಮಿಗಿಲು ಎಂದು ಅನಿಸುತ್ತದೆ. ಪ್ರೀತಿಯಲ್ಲಿ ಇರುವಂತಹ ಯಾವುದೇ ಕಟ್ಟುಪಾಡುಗಳು ಅಥವಾ ಪ್ರೀತಿಯಲ್ಲಿ ಇರುವಂತಹ ಜಂಜಾಟಗಳು ಸ್ನೇಹದಲ್ಲಿ ಇರೋದಿಲ್ಲ. ಒಂದು ಸ್ವಚ್ಛಂದವಾದ ಹಕ್ಕಿ ಆಕಾಶದಲ್ಲಿ ಹೇಗೆ ಹಾರಾಡುವುದೋ ನಿಜವಾದ ಸ್ನೇಹದಲ್ಲಿಯೂ ಕೂಡ ಇದೇ ಅನುಭವ ಸಿಗುತ್ತದೆ. ನಿಜವಾದ ಸ್ನೇಹವನ್ನು ಹೊಂದಿರುವವರು ನಿಜಕ್ಕೂ ಅದೃಷ್ಟವಂತರೇ ಸರಿ. ಹಾಗಾದ್ರೆ ಪ್ರೀತಿಗಿಂತ ಸ್ನೇಹ ಮಿಗಿಲು ಅಂತ ಸಾಬೀತುಪಡಿಸುವುದು ಹೇಗೆ? ಇದಕ್ಕೊಂದೆ ಕೆಲವು ಪ್ರಮುಖ ಕಾರಣಗಳು..
ನಿರೀಕ್ಷೆ:
ಸ್ನೇಹ ಎನ್ನುವುದು ಸ್ವಚ್ಛಂದವಾಗಿರುವಂಥದ್ದು. ಇಲ್ಲಿ ಯಾರ ಬಗ್ಗೆ ಯಾರಿಗೂ ನಿರೀಕ್ಷೆ ಎನ್ನುವುದು ಇರುವುದಿಲ್ಲ ನೀನು ಹಾಗೆ ಮಾಡಬೇಕು, ಹೀಗೆ ಮಾಡಬೇಕು, ನಾನು ಇವತ್ತು ಇದನ್ನು ಕೊಟ್ಟಿದ್ದೇನೆ ನಾಳೆ ನನಗೆ ಅದನ್ನು ರಿಟರ್ನ್ ಕೊಡಬೇಕು ಎನ್ನುವಂತಹ ಕೊಡು ತೆಗೆದುಕೊಳ್ಳುವ ವ್ಯವಹಾರ ಇರುವುದಿಲ್ಲ. ಆದರೆ ಪ್ರೀತಿಯಲ್ಲಿ ಹಾಗಲ್ಲ ನಾನು ಏನು ಮಾಡುತ್ತೇನೋ ನನ್ನ ಸಂಗಾತಿಯಿಂದಲೂ ಅದನ್ನೇ ನಿರೀಕ್ಷೆ ಮಾಡುತ್ತೇನೆ. ಈ ಕಾರಣಕ್ಕಾಗಿ ಯಾವುದೇ ಶರತ್ತುಗಳು ಇಲ್ಲದ ಸ್ನೇಹ ನಿಜಕ್ಕೂ ದೊಡ್ಡದು ಎನಿಸುತ್ತದೆ..
ಕಾಂಪ್ರಮೈಸ್
ಕಾಂಪ್ರಮೈಸ್ ಅಥವಾ ಹೊಂದಾಣಿಕೆ ಎನ್ನುವುದು ಪ್ರೀತಿ ಹಾಗೂ ಸ್ನೇಹದ ವಿಚಾರದಲ್ಲಿ ಬೇರೆ ಬೇರೆಯಾಗಿವೆ ಇರುತ್ತದೆ. ಸ್ನೇಹದಲ್ಲಿ ವಿಭಿನ್ನ ವ್ಯಕ್ತಿತ್ವದ ವ್ಯಕ್ತಿಗಳು ಅತ್ಯುತ್ತಮ ಸ್ನೇಹಿತರಾಗಿರಬಹುದು. ಇದಕ್ಕೆ ಮುಖ್ಯ ಕಾರಣ ಒಬ್ಬರು ಇನ್ನೊಬ್ಬರ ವಿಚಾರಧಾರೆಯನ್ನು ಗೌರವಿಸುವುದು. ಹೊಂದಾಣಿಕೆ ಮಾಡಿಕೊಳ್ಳುವುದು. ಆದರೆ ಪ್ರೀತಿಯಲ್ಲಿ ಹಾಗಲ್ಲ ನಾನೇ ಮುಖ್ಯ ಎನ್ನುವ ಮನೋಭಾವನೆ ಇರುವುದೇ ಹೆಚ್ಚು. ಹಾಗಾಗಿ ನಾನು ಹೇಳಿದ್ದನ್ನು ನೀನು ಕೇಳಬೇಕು ಎನ್ನುವಂತ ಭಾವನೆ ಹೆಚ್ಚಿರುತ್ತದೆ ಹೊರತು ಪರವಾಗಿಲ್ಲ ಬಿಡುವು ಎನ್ನುವಂತಹ ಹೊಂದಾಣಿಕೆಯ ಭಾವನೆ ಪ್ರೀತಿಯಲ್ಲಿ ಇರುವುದಿಲ್ಲ.
ಶ್ರಮ ಪಡಬೇಕು
ಪ್ರೀತಿ ಎನ್ನುವ ಸಂಬಂಧ ನಮ್ಮೊಂದಿಗೆ ಗಟ್ಟಿಯಾಗಿ ಉಳಿಯಬೇಕು ಅಂದರೆ ಅದಕ್ಕೆ ಸಾಕಷ್ಟು ಶ್ರಮ ಪಡಬೇಕು ಎಲ್ಲಿಯೂ ಯಾವ ತಪ್ಪು ಆಗದೆ ಇರುವ ರೀತಿಯಲ್ಲಿ ವರ್ತಿಸಬೇಕು. ನಮ್ಮನ್ನು ನಾವು ನಿಯಂತ್ರಿಸಿಕೊಳ್ಳಬೇಕು. ಆದರೆ ಸ್ನೇಹ ಇದ್ಯಾವ ಚೌಕಟ್ಟನ್ನು ಹೊಂದಿಲ್ಲದೆ ಇರುವಂತದ್ದು. ಇಲ್ಲಿ ಬೇರೆಯವರಿಗೆ ಬೇಜಾರಾಗುತ್ತದೆ ಎನ್ನುವ ಕಾರಣಕ್ಕೆ ತಮ್ಮ ಮನಸ್ಸಿನ ಭಾವನೆಗಳನ್ನು ಹತ್ತಿಕ್ಕಿಕೊಂಡು ಇರಬೇಕಾದ ಅಗತ್ಯವಿಲ್ಲ ಯಾಕೆಂದರೆ ಸ್ನೇಹದಲ್ಲಿ ಅರ್ಥ ಮಾಡಿಕೊಳ್ಳುವವರು ಇರುತ್ತಾರೆ. ಒಬ್ಬರು ಹೇಳಿದ ಮಾತಿಗೆ ಬೇಸರ ವ್ಯಕ್ತಪಡಿಸುವುದಕ್ಕಿಂತ ಆತ ಯಾಕೆ ಹೇಳಿರಬಹುದು ಎಂದು ಅರ್ಥ ಮಾಡಿಕೊಳ್ಳುವಂತದ್ದು ನಿಜವಾದ ಸ್ನೇಹ. ಹಾಗಾಗಿ ಸ್ನೇಹವನ್ನು ಉಳಿಸಿಕೊಳ್ಳುವುದಕ್ಕೆ ಪರದಾಡಬೇಕಿಲ್ಲ ಉತ್ತಮವಾದ ಸ್ನೇಹಿತರು ಸದಾ ಜೊತೆಯಲ್ಲಿಯೇ ಇರುತ್ತಾರೆ.
ಕಷ್ಟಕ್ಕೂ ಸುಖಕ್ಕೂ ಸ್ನೇಹವೇ ಸೈ
ಪ್ರೀತಿ ಅನ್ನೋದು ನೀರಿನ ಮೇಲಿನ ಗುಳ್ಳೆ ಇದ್ದಹಾಗೆ. ಅದು ಯಾವಾಗ ಬೇಕಾದರೂ ಒಡೆದು ಹೋಗಬಹುದು ಹಾಗಾಗಿ ಅದನ್ನು ಜೋಪಾನ ಮಾಡುವುದು ಬಹಳ ದೊಡ್ಡ ಕೆಲಸ. ಪ್ರೀತಿಯಲ್ಲಿ ಖುಷಿ ಇದ್ದಾಗ ದುಃಖ ಇದ್ದಾಗ ಬೇರೆ ಬೇರೆ ಭಾವನೆಗಳೆ ಇರುತ್ತವೆ. ಆದರೆ ಸ್ನೇಹ ಹಾಗಲ್ಲ ದುಃಖವಿರಲಿ ಖುಷಿ ಇರಲಿ ಅಥವಾ ಇತರ ಯಾವುದೇ ಸಂದರ್ಭದಲ್ಲಿ ಆಗಿದ್ದರು ಸ್ನೇಹಿತರು ಸದಾ ಜೊತೆಯಲ್ಲಿ ಇರುತ್ತಾರೆ. ಈ ಸಂದರ್ಭದಲ್ಲಿ ಸ್ನೇಹಿತರು ಬದಲಾಗುವುದಿಲ್ಲ.
ಅಸೂಯೇಗೆ ಜಾಗವೇ ಇಲ್ಲ:
ಸಾಕಷ್ಟು ಉತ್ತಮ ಸ್ನೇಹಿತರನ್ನು ಗಮನಿಸಿ. ಇಲ್ಲಿ ಒಬ್ಬರಿಗಿಂತ ಒಬ್ಬರು ಉತ್ತಮ ಹುದ್ದೆಯಲ್ಲಿ ಹೆಚ್ಚಿನ ಸಂಬಳ ತೆಗೆದುಕೊಳ್ಳುವ ಕೆಲಸದಲ್ಲಿ ಇರಬಹುದು ಆದರೆ ಯಾವತ್ತೂ ಒಬ್ಬರ ಮೇಲೆ ಒಬ್ಬರು ಅಸೂಯೆ ಪಟ್ಟಿಕೊಳ್ಳುವುದೇ ಇಲ್ಲ. 'ಮಗ ಪಾರ್ಟಿ ಕೊಡ್ಸು' ಅಂತ ದೊಡ್ಡ ಹುದ್ದೆ ಸಿಕ್ಕ ಸ್ನೇಹಿತನ ಬೆನ್ನು ತಟ್ಟುತ್ತಾರೆಯೇ ಹೊರತು ಯಾರು ಬೇಸರ ವ್ಯಕ್ತಪಡಿಸುವುದಿಲ್ಲ. ಆದರೆ ಪ್ರೀತಿಯಲ್ಲಿ ಒಂದು ವೇಳೆ ಹುಡುಗನಿಗಿಂತ ಹುಡುಗಿಗೆ ಹೆಚ್ಚಿನ ಸ್ಯಾಲರಿ ಬರುತ್ತಿದ್ದರೆ ಹುಡುಗಿಯನ್ನು ಹೆಚ್ಚಾಗಿ ಜನ ಗೌರವಿಸುತ್ತಿದ್ದಾರೆ ಸಣ್ಣ ಅಸೂಯೆ ಎನ್ನುವುದು ಹುಡುಗನ ಮನಸ್ಸಿನಲ್ಲಿ ಹುಟ್ಟಿಕೊಳ್ಳುವ ಸಾಧ್ಯತೆ ಇದೆ.
ಸ್ನೇಹಕ್ಕೆ ಒಂದು ಅತ್ಯುತ್ತಮ ಉದಾಹರಣೆ ಕೃಷ್ಣ ಸುಧಾಮ. ಯಾವ ನಿರೀಕ್ಷೆಯೂ ಇಲ್ಲದ, ಮೇಲು ಕೀಳು ಎನ್ನುವ ಭಾವನೆಯೂ ಇಲ್ಲದ, ಅಂತಸ್ತಿನ ಅಡಚಣೆಯೂ ಇಲ್ಲದ ಪವಿತ್ರವಾದ ಸ್ನೇಹ ಅದಾಗಿತ್ತು. ಕೃಷ್ಣ ಸುಧಾಮ ಜನುಮ ಜನುಮದ ಸ್ನೇಹಕ್ಕೆ ಅತ್ಯುತ್ತಮವಾದ ಉದಾಹರಣೆಯಾಗಿ ನಿಲ್ಲುತ್ತಾರೆ. ಶುದ್ಧವಾದ, ಅದ್ಭುತ ಸ್ನೇಹವನ್ನು ಪಡೆದಿರುವವರು ನಿಜಕ್ಕೂ ಲಕ್ಕಿ ಎನ್ನಬಹುದು. ನೀವು ಕೂಡ ಇಂತಹ ಉತ್ತಮ ಸ್ನೇಹಿತರನ್ನು ಹೊಂದಿದ್ದರೆ ನೀವು ಅದೃಷ್ಟವಂತರೇ ಸರಿ. ಸ್ನೇಹಿತರ ದಿನದ ಶುಭಾಶಯಗಳು.



Click it and Unblock the Notifications