Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Friendship Day 2023: ನಿಮ್ಮ ರಾಶಿ ಪ್ರಕಾರ ಯಾವ ರಾಶಿಯವರು ತುಂಬಾ ಆಪ್ತ ಸ್ನೇಹಿತರಾಗುತ್ತಾರೆ?
ಇಂದು ಸ್ನೇಹಿತರ ದಿನ, ಪ್ರತೀವರ್ಷ ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ಸ್ನೇಹಿತರ ದಿನವನ್ನಾಗಿ ಆಚರಿಸಲಾಗುವುದು. ನನಗೆ ಬಂಧು ಬಾಂಧವರು ಎಂಬವರು ಯಾರೂ ಇಲ್ಲ ಎಂದು ಹೇಳುವವರು ಇರಬಹುದು, ಆದರೆ ಸ್ನೇಹಿತರೇ ಇಲ್ಲ ಎನ್ನುವವರು ಯಾರೂ ಇರಲ್ಲ, ಎಲ್ಲರ ಬದುಕಿನಲ್ಲಿರುವ ಅತ್ಯಂತ ಸುಂದರವಾದ ಬಾಂಧವ್ಯ ಎಂದರೆ ಅದು ಸ್ನೇಹ ಸಂಬಂಧ ಮಾತ್ರ.
ಎಲ್ಲರೂ ಎಲ್ಲರಿಗೆ ಸ್ನೇಹಿತರಾಗಲ್ಲ, ಕೆಲವರು ನಮಗೆ ತುಂಬಾನೇ ಆಪ್ತರಾಗುತ್ತಾರೆ. ಜ್ಯೋತಿಷ್ಯದ ಪ್ರಕಾರ ಕೆಲವೊಂದು ರಾಶಿಯವರು ಕೆಲವೊಂದು ರಾಶಿಗೆ ತುಂಬಾನೇ ಒಳ್ಳೆಯ ಫ್ರೆಂಡ್ ಆಗುತ್ತಾರೆ, ಯಾವ ರಾಶಿಯವರು ಯಾವ ರಾಶಿಯವರಿಗೆ ಅತ್ಯುತ್ತಮ ಫ್ರೆಂಡ್ ಆಗುತ್ತಾರೆ ಎಂದು ನೋಡೋಣ ಬನ್ನಿ:

ಮೇಷ ರಾಶಿ
ಮೇಷ ರಾಶಿಯವರು ಶಾಂತ ಸ್ವಭಾವದವರು ಈ ಕಾರಣಕ್ಕೆ ಎಲ್ಲರ ಜೊತೆಯೂ ಉತ್ತಮ ಸ್ನೇಹ ಹೊಂದಿರುತ್ತಾರೆ. ಇವರು ಒಂದು ರೀತಿ ಅಜಾತಶತ್ರುವಿನಂತೆ. ಎಲ್ಲರೂ ಇವರನ್ನು ಇಷ್ಟಪಡುತ್ತಾರೆ, ಇವರು ಧನು ಹಾಗೂ ತುಲಾ ರಾಶಿಯವರ ಜೊತೆಗೆ ಚೆನ್ನಾಗಿ ಹೊಂದಿಕೊಂಡು ಹೋಗುತ್ತಾರೆ.
ವೃಷಭ ರಾಶಿ
ವೃಷಭ ರಾಶಿಯವರು ಯಾರನ್ನೂ ಸುಲಭವಾಗಿ ನಂಬುವುದಿಲ್ಲ, ಯಾರ ಜೊತೆ ಸ್ನೇಹ ಬಯಸುವುದಾದರೂ ಯೋಚಿಸಿ, ಇವರು ನಮಗೆ ಸೂಕ್ತರೇ ಎಂದು ನೋಡಿ ನಂತರ ಸ್ನೇಹ ಮಾಡುತ್ತಾರೆ. ಇವರು ಕರ್ಕ ರಾಶಿ ಹಾಗೂ ಮೇಷ ರಾಶಿಯವರ ಜೊತೆ ತುಂಬಾನೇ ಚೆನ್ನಾಗಿರುತ್ತಾರೆ.
ಮಿಥುನ ರಾಶಿ
ಇವರಿಗೆ ಪ್ರಯಾಣ ಮಾಡುವುದು ಎಂದರೆ ತುಂಬಾನೇ ಇಷ್ಟ, ಅಲ್ಲದೆ ಸ್ವಲ್ಪ ಸಾಹಸಿ ಪ್ರವೃತ್ತಿಯವರು. ಸೂರ್ಯ ಅಧಿಪತಿಯಾಗಿರುವ ರಾಶಿಗಳ ಜೊತೆ ತುಂಬಾನೇ ಹೊಂದಿಕೊಂಡು ಹೋಗುತ್ತಾರೆ. ಇವರಿಗೆ ಸಿಂಹ ಹಾಗೂ ಮೀನ ರಾಶಿಯವರು ತುಂಬಾನೇ ಆಪ್ತರಾಗುತ್ತಾರೆ.
ಕರ್ಕ ರಾಶಿ
ಕರ್ಕ ರಾಶಿಯವರು ತುಂಬಾ ಧನಾತ್ಮಕವಾಗಿರುತ್ತಾರೆ, ಈ ಕಾರಣಕ್ಕೆ ಅವರು ತುಂಬಾನೇ ಇಷ್ಟವಾಗುತ್ತಾರೆ. ಇವರು ಯಾರಿಗೆ ಬೇಕಾದರೂ ಬೆಸ್ಟ್ ಫ್ರೆಂಡ್ ಆಗಬಹುದು ಆದರೆ ಮಿಥುನ ರಾಶಿ ಹಾಗೂ ವೃಶ್ಚಿಕ ರಾಶಿಯವರಿಗೆ ತುಂಬಾನೇ ಕ್ಲೋಸ್ ಆಗುತ್ತಾರೆ.
ಸಿಂಹ ರಾಶಿ
ಇವರು ತಾವು ಗುರುತಿಸಿಕೊಳ್ಳಬೇಕು ಎನ್ನುವ ಸ್ವಭಾವದವರು, ಬೇರೆಯವರು ನನ್ನನ್ನು ಹೊಗಳಬೇಕು ಎಂದು ಬಯಸುತ್ತಾರೆ. ಇವರು ನಿಜವಾದ ಸ್ನೇಹಿತರ ಜೊತೆ ಮಾತ್ರ ಇರಲು ಇಷ್ಟಪಡುತ್ತಾರೆ. ಇವರಿಗೆ ಕುಂಭ ರಾಶಿಯವರು, ಕರ್ಕ ರಾಶಿಯವರು ಒಳ್ಳೆಯ ಸ್ನೇಹಿತರಾಗುತ್ತಾರೆ.
ಕನ್ಯಾ ರಾಶಿ
ಇವರು ಇತರರಿಗೆ ತುಂಬಾ ಸಹಾಯ ಮಾಡುವ ಗುಣದವರು. ಇವರಿಗೆ ವೃಷಭ ಹಾಗೂ ವೃಶ್ಚಿಕ ರಾಶಿಯವರು ಒಳ್ಳೆಯ ಸ್ನೇಹಿತರಾಗುತ್ತಾರೆ. ಇವರ ಸ್ವಭಾವಕ್ಕೂ ಕನ್ಯಾ ರಾಶಿಯವರಿಗೂ ತುಂಬಾನೇ ಹೊಂದಾಣಿಕೆ ಇರುತ್ತದೆ.
ತುಲಾ ರಾಶಿ
ತುಲಾ ರಾಶಿಯವರು ಹೊಸ ಸ್ನೇಹಿತರು ಸಿಕ್ಕ ತಕ್ಷಣ ಹಳೆಯ ಸ್ನೇಹಿತರನ್ನು ಬಿಡುವುದಿಲ್ಲ, ಎಲ್ಲರ ಜೊತೆ ಒಳ್ಳೆಯ ಬಾಂಧವ್ಯ ಇಟ್ಟುಕೊಳ್ಳುತ್ತಾರೆ. ಇವರಿಗೆ ಸಿಂಹ ರಾಶಿಯವರು, ವೃಷಭ ರಾಶಿಯವರು ತುಂಬಾನೇ ಒಳ್ಳೆಯ ಸ್ನೇಹಿತರಾಗಬಹುದು.
ವೃಶ್ಚಿಕ ರಾಶಿ
ಇವರು ಸ್ವತಂತ್ರವಾಗಿರಲು ಇಷ್ಟಪಡುವವರು, ತಮ್ಮ ಸ್ನೇಹಿತರಿಗೆ ನಿಯತ್ತಿನಿಂದಿರುತ್ತಾರೆ. ತಮ್ಮ ಸ್ನೇಹಿತರ ಎಲ್ಲಾ ಕಷ್ಟ-ಸುಖಗಳಲ್ಲಿ ಇವರು ನಿಲ್ಲುತ್ತಾರೆ. ವೃಶ್ಚಿಕ ರಾಶಿಯವರಿಗೆ ಕರ್ಕ ರಾಶಿಯವರು, ಮಕರ ರಾಶಿಯವರು ಉತ್ತಮ ಸ್ನೇಹಿತರಾಗಿರುತ್ತಾರೆ.
ಧನು ರಾಶಿ
ಧನು ರಾಶಿಯವರು ಆಕರ್ಷಕ ವ್ಯಕ್ತಿತ್ವದವರು, ಇವತು ತಮ್ಮ ವ್ಯಕ್ತಿತ್ವದಿಂದ ಅನೇಕ ಸ್ನೇಹಿತರನ್ನು ಹೊಂದಿರುತ್ತಾರೆ. ಇವರಿಗೆ ಧನುರಾಶಿಯವರು ಹಾಗೂ ಮೇಷ ರಾಶಿಯವರು ಆತ್ಮೀಯ ಸ್ನೇಹಿತರಾಗುತ್ತಾರೆ.
ಮಕರ ರಾಶಿ
ಇವರು ಮನಸ್ಸನಲ್ಲಿ ಏನಾದರೂ ನಿರ್ಧರಿಸಿದರೆ ಗುರಿ ಮುಟ್ಟುವವರೆ ಸುಮ್ಮನೆ ಕೂರುವವರಲ್ಲ. ತಮ್ಮ ಗುಣದೊಂದಿಗೆ ಹೊಂದಿಕೊಳ್ಳುವವರ ಜೊತೆಗೆ ಮಾತ್ರ ಸ್ನೇಹದಿಂದ ಇರುತ್ತಾರೆ. ಮಕರ ರಾಶಿಯವರಿಗೆ ವೃಷಭ ರಾಶಿಯವರು ತುಂಬಾ ಆತ್ಮೀಯ ಸ್ನೇಹಿತರಾಗುತ್ತಾರೆ.
ಕುಂಭ ರಾಶಿ
ಇವರು ಸ್ವಲ್ಪ ವಿಭಿನ್ನ ವ್ಯಕ್ತಿತ್ವದವರಂತೆ ಕಾಣುತ್ತಾರೆ. ಅವರು ಎಲ್ಲವನ್ನು ಎಲ್ಲರ ಬಳಿ ಹೇಳಿಕೊಳ್ಳುವುದಿಲ್ಲ, ಆದರೆ ಸ್ನೇಹಿತರ ವಿಷಯಕ್ಕೆ ಬಂದಾಗ ಅವರ ಸ್ನೇಹಕ್ಕೆ ಯಾವತ್ತಿಗೂ ಮೋಸ ಮಾಡುವುದಿಲ್ಲ. ಇವರು ಮಿಥುನ ರಾಶಿ ಹಾಗೂ ಮೀನ ರಾಶಿಯವರ ಜೊತೆಗೆ ಹೆಚ್ಚು ಆತ್ಮೀಯರಾಗುತ್ತಾರೆ.
ಮೀನ ರಾಶಿ
ಇವರು ಸ್ವಲ್ಪ ಭಾವನಾತ್ಮಕ ಜೀವಿಗಳು. ಅವರು ಸ್ನೇಹಿತರಿಗಾಗಿ ಏನನ್ನೂ ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಇವರಿಗೆ ಸಿಂಹ ಹಾಗೂ ಕುಂಭ ರಾಶಿಯವರು ತುಂಬಾ ಆತ್ಮೀಯ ಸ್ನೇಹಿತರಾಗುತ್ತಾರೆ.



Click it and Unblock the Notifications