Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಬೆನ್ನಿಗೆ ಚೂರಿ ಹಾಕುವ ಸ್ನೇಹಿತರು ಇವರು! ಇಂಥವರಿಂದ ದೂರ ಇರಿ!
ಸ್ನೇಹ ಎಂಬುದು ಒಂದು ಪವಿತ್ರವಾದ ಸಂಬಂಧ. ಕಷ್ಟ ಕಾಲದಲ್ಲಿ ನಮಗೆ ನಮ್ಮವರೇ ಆಗದಿದ್ದಾಗ ನಮ್ಮ ಬೆನ್ನಿಗೆ ನಿಲ್ಲೋರು ನಮ್ಮ ಸ್ನೇಹಿತರು. ಜಾತಿ, ಮತ, ಧರ್ಮ, ಅಂತಸ್ತು ನೋಡಿ ಯಾವತ್ತೂ ಸ್ನೇಹ ಹುಟ್ಟೋದಿಲ್ಲ. ನಿಶ್ಕಲ್ಮಷ ಮನಸ್ಸಿನಿಂದ ಹುಟ್ಟುವುದೇ ಸ್ನೇಹ. ಸ್ನೇಹಿತನಿಗಾಗಿ ಪ್ರಾಣ ಕೊಡುವವರನ್ನು ಕೂಡ ನಾವು ನೋಡಿರ್ತೀವಿ. ಅದೇ ರೀತಿ ಸ್ನೇಹದ ಹೆಸರಿನಲ್ಲಿ ಬೆನ್ನಿಗೆ ಚೂರಿ ಹಾಕುವವರು ಇದ್ದಾರೆ.
ಕೆಲವೊಂದು ಸಲ ಏನಾಗುತ್ತೆ ಅಂದರೆ ನಾವು ಒಬ್ಬರನ್ನು ತುಂಬಾನೇ ನಂಬಿರುತ್ತೇವೆ. ಆದರೆ ಸ್ನೇಹದ ಹೆಸರಿನಲ್ಲಿ ಅವರು ನಮಗೆ ಮೋಸ ಮಾಡುತ್ತಾರೆ. ನಾವು ಮಾತ್ರ ಆತನನ್ನು ನಮ್ಮ ಸ್ನೇಹಿತ ಅಂತ ತಲೆ ಮೇಲೆ ಹೊತ್ತು ಮೆರೆಸುತ್ತಿರುತ್ತೇವೆ. ಅಷ್ಟಕ್ಕು ನಿಮ್ಮ ಸ್ನೇಹಿತ ನಿಮ್ಮನ್ನು ಸ್ನೇಹಿತ ಅಂತ ಸ್ವೀಕರಿಸಿಲ್ಲವೆಂದು ಗೊತ್ತಾಗೋದು ಹೇಗೆ? ಅಂತಹ ಸ್ನೇಹವನ್ನು ಕೊನೆಗೊಳಿಸೋದು ಹೇಗೆ ಅನ್ನೋದನ್ನು ತಿಳಿಯೋಣ.

1. ನಿಮ್ಮ ನಿರ್ಧಾರಗಳಿಗೆ ಬೆಲೆ ಇರೋದಿಲ್ಲ
ಸ್ನೇಹಿತರ ಮಧ್ಯೆ ನಂಬಿಕೆ, ವಿಶ್ವಾಸ ತುಂಬಾನೇ ಮುಖ್ಯವಾಗುತ್ತದೆ. ಹಾಗೂ ಒಬ್ಬರ ಮಾತು ಹಾಗೂ ನಿರ್ಧಾರಗಳಿಗೆ ಮತ್ತೊಬ್ಬರು ಬೆಲೆ ಕೊಡಬೇಕು. ಆದರೆ ನೀವು ಯಾರನ್ನು ಸ್ನೇಹಿತ ಅಂದುಕೊಂಡಿದ್ದೀರೋ ಆತ ನಿಮಗೆ ಎಳ್ಳಿನಷ್ಟು ಬೆಲೆ ಕೊಡೋದಿಲ್ಲ. ಅದು ಗೊತ್ತಾಗೋದು ಹೇಗೆಂದರೆ ಉದಾಹರಣೆಗೆ ನೀವು ಒಂದು ಹೋಟೆಲ್ ಗೆ ಹೋಗಿದ್ದೀರಿ ಅಂದುಕೊಳ್ಳಿ. ಪ್ರತಿ ಸಾರಿ ನಿಮ್ಮ ಸ್ನೇಹಿತ ಆತನಿಗೆ ಏನು ಇಷ್ಟ ಇದ್ಯೋ ಅದನ್ನೇ ಆರ್ಡರ್ ಮಾಡಿ ನಿಮಗೂ ತಿನ್ನಿಸುತ್ತಾನೆ.
ನಿಮ್ಮ ನಿರ್ಧಾರದ ಬಗ್ಗೆ ಕೇಳೋದೇ ಇಲ್ಲ. ಮತ್ತು ಪ್ರತಿ ಬಾರಿ ನಿಮ್ಮ ಕೈಯಿಂದ ಬಿಲ್ ಕಟ್ಟಿಸುತ್ತಾನೆ. ಇಂತಹ ಸ್ನೇಹಿತ ಖಂಡಿತ ನಿಮ್ಮನ್ನು ಬಳಕೆ ಮಾಡುತ್ತಿದ್ದಾನೆ ಎಂದರ್ಥ. ಈ ಸ್ನೇಹಕ್ಕೆ ನೀವು ಪೂರ್ಣ ವಿರಾಮ ಇಟ್ಟರೆ ಉತ್ತಮ. ಇಲ್ಲದಿದ್ದರೆ ಇದು ನಿಮ್ಮ ಸ್ನೇಹಕ್ಕೆ ಕೊಳ್ಳಿ ಇಡಬಹುದು.
2. ಪ್ರತಿ ಸಾರಿ ನೀವೇ ಅವರನ್ನು ಮೊದಲು ಸಂಪರ್ಕಿಸುತ್ತೀರಿ
ನಿಮ್ಮ ಸ್ನೇಹಿತನಿಗೆ ಪ್ರತಿ ಸಾರಿ ನೀವೆ ಸಂಪರ್ಕಿಸಿ ಆತನಲ್ಲಿ ಮಾತನಾಡಿಸುವ ಪ್ರಯತ್ನ ಮಾಡುತ್ತೀರಿ. ಮೇಸೆಜ್ ಮೂಲಕವೋ ಅಥವಾ ಕಾಲ್ ಮೂಲಕವೋ. ಕೆಲವೊಂದು ಸಲ ಅವರು ನಿಮಗೆ ಸರಿಯಾದ ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ. ಅವರ ಅಗತ್ಯಕ್ಕೆ ಬೇಕಾದಾಗ ಮಾತ್ರ ನಿಮ್ಮಲ್ಲಿ ಚೆನ್ನಾಗಿ ಮಾತನಾಡಿಸುತ್ತಾರೆ.
ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಸಹಾಯವನ್ನು ಅವರು ಪಡೆದುಕೊಳ್ಳುತ್ತಾರೆ. ಆದರೆ ನೀವು ಸಹಾಯ ಕೇಳಿದಾಗ ಅವರು ಸಹಾಯ ಮಾಡೋದಕ್ಕೆ ಸಿದ್ಧರಿರೋದಿಲ್ಲ. ಏನಾದರೂ ಕಾರಣ ಕೊಟ್ಟು ಅದರಿಂದ ತಪ್ಪಿಸಿಕೊಳ್ಳುತ್ತಾರೆ. ಇದು ನಿಜವಾದ ಸ್ನೇಹವಲ್ಲ. ಇಂತಹ ಸ್ನೇಹಿತನಿಂದ ದೂರ ಇದ್ದರೆ ಉತ್ತಮ.
3. ಬೇರೆಯವರ ಮುಂದೆ ನಿಮ್ಮನ್ನು ಕೀಳಾಗಿ ಕಾಣುತ್ತಾರೆ
ಸ್ನೇಹಿತರು ತುಂಬಾನೇ ಆತ್ಮೀಯರಾಗಿರುತ್ತಾರೆ. ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ತಮಾಷೆ ಮಾಡುತ್ತಾರೆ. ಕಾಲು ಎಳೆತ್ತಾರೆ. ಫ್ರೆಂಡ್ ಶಿಪ್ ಎಂದರೆ ಇದೆಲ್ಲಾ ಕಾಮನ್ ಅಲ್ವಾ? ಆದರೆ ನಿಮ್ಮ ಸ್ನೇಹಿತನು ಇತರರ ಮುಂದೆ ನಿಮ್ಮನ್ನು ತುಂಬಾನೇ ಕೀಳಾಗಿ ಕಾಣುತ್ತಾನೆ. ನಿಮ್ಮನ್ನು ಅವಮಾನಿಸಿ ಮಾತನಾಡುತ್ತಾನೆ. ಇಂತಹ ಸ್ನೇಹಿತನ ಸಹವಾಸ ಮಾಡೋದು ಖಂಡಿತ ಒಳ್ಳೆಯದಲ್ಲ. ದುಷ್ಟರನ್ನು ದೂರ ಇಟ್ಟರೆ ನಿಮಗೆ ಉತ್ತಮ.
4. ನಿಮ್ಮನ್ನು ಬಿಟ್ಟು ಇತರರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ
ಒರ್ವ ವ್ಯಕ್ತಿ ಅವನ ಆತ್ಮೀಯ ಸ್ನೇಹಿತನಿಗೆ ಮೊದಲ ಪ್ರಶಸ್ತ್ಯ ನೀಡುತ್ತಾನೆ. ನಿಮ್ಮ ಸ್ನೇಹಿತನಿಗೆ ನಿಜವಾಗಿಯೂ ಅಂತಹದ್ದೇ ಭಾವನೆ ಇದ್ದರೆ ನೀವೇ ಆತನ ಮೊದಲ ಪ್ರಾಮುಖ್ಯತೆ ಆಗಿರುತ್ತೀರಿ. ಆದರೆ ಯಾವಾಗ ನಿಮ್ಮ ಸ್ನೇಹಿತ ನಿಮ್ಮನ್ನು ಕಡೆಗಣಿಸಿ ಇತರರ ಜೊತೆಗೆ ಹೋಗುತ್ತಾನೋ ಆತ ಖಂಡಿತ ನಿಮ್ಮ ನಿಜವಾದ ಸ್ನೇಹಿತನಲ್ಲ ಎಂದರ್ಥ. ಪ್ರತಿ ಬಾರಿ ನಿಮ್ಮನ್ನು ನಿರ್ಲಕ್ಷಿಸಿ, ಬೇರೆಯವರ ಬಳಿಗೆ ಆತ ಹೋಗುತ್ತಿದ್ದರೆ. ಅಂತವನ ಜೊತೆಗೆ ಸ್ನೇಹ ಮುರಿಸುಕೊಳ್ಳೋದೇ ಉತ್ತಮ.
5. ನಿಮ್ಮ ಬಗ್ಗೆ ಬೇರೆಯವರ ಬಳಿ ಚಾಡಿ ಹೇಳುತ್ತಾನೆ
ಸ್ನೇಹಿತರು ನಮ್ಮ ಸಂತೋಷದಲ್ಲೂ ದುಃಖದಲ್ಲೂ ಜೊತೆಯಾಗಿ ಇರುತ್ತಾರೆ. ನಮ್ಮಿಂದ ತಪ್ಪಾದಾಗ ಅದನ್ನು ತಿದ್ದಿ ಬುದ್ಧಿ ಹೇಳುತ್ತಾರೆ. ನಮ್ಮಲ್ಲಿರುವ ಪ್ರತಿಯೊಂದು ನ್ಯೂನ್ಯತೆಗಳನ್ನು ಸರಿಪಡಿಸುವವರೇ ನಿಜವಾದ ಸ್ನೇಹಿತ. ಆತ ಯಾವತ್ತೂ ಬೇರೆಯವರ ಮುಂದೆ ನಿಮ್ಮನ್ನು ಬಿಟ್ಟು ಕೊಡುವವನಲ್ಲ. ಆದರೆ ಯಾರು ನಿಮ್ಮ ಬಗ್ಗೆ ಬೇರೆಯವರ ಬಳಿ ಚಾಡಿ ಹೇಳುತ್ತಾರೆಯೋ, ನಿಮ್ಮ ಬೆನ್ನ ಹಿಂದೆ ಮಾತನಾಡುತ್ತಾರೋ ಖಂಡಿತ ಅಂತವರನ್ನು ನಂಬೋದಕ್ಕೆ ಹೋಗಲೇಬೇಡಿ.
ಸ್ನೇಹಿತರ ನಡವಳಿಕೆಯನ್ನು ನೋಡಿಯೇ ಅವರು ಒಳ್ಳೆಯವರಾ? ಕೆಟ್ಟವರ ಎಂಬ ನಿರ್ಧಾರಕ್ಕೆ ಬರಬಹುದು. ನೀವು ಸ್ನೇಹಿತರಿಲ್ಲದೇ ಒಂಟಿಯಾಗಿದ್ದರೂ ಚಿಂತೆಯಿಲ್ಲ. ಆದರೆ ಇಂತಹ ಸ್ನೇಹಿತರ ಸಹವಾಸ ಮಾತ್ರ ಬೇಡವೇ ಬೇಡ.



Click it and Unblock the Notifications

