Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ಸ್ನೇಹ ಸಂಬಂಧದಲ್ಲಿಯೂ ಬೌಂಡರಿ ಎಂಬುವುದು ಇರಲೇಬೇಕು, ಏಕೆ ಗೊತ್ತಾ?
ಸ್ನೇಹ ಎಲ್ಲಾ ಬಂಧಗಳನ್ನು ಮೀರಿದ ಗಟ್ಟಿಬಂಧ, ಯಾವುದೇ ನಿರೀಕ್ಷೆಯಿಲ್ಲದಿರುವ ಬಂಧವೆಂದರೆ ಅದು ಸ್ನೇಹ. ಶುದ್ಧವಾದ ಸ್ನೇಹದಲ್ಲಿ ತುಂಬಾ ನಿರೀಕ್ಷೆಗಳು ಇರುವುದಿಲ್ಲ, ಅವರು ಹೇಗೆ ಇರುತ್ತಾರೋ ಹಾಗೆಯೇ ಸ್ವೀಕರಿಸುತ್ತೇವೆ. ಇಂಥ ಸ್ನೇಹ ಸಂಬಂಧದಲ್ಲಿಯೂ ಬೌಂಡರಿ ಬೇಕೆ? ಎಂದು ಕೇಳುವುದಾದರೆ ಹೌದು ಎನ್ನುತ್ತೇವೆ.
ಹೌದು ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಯಾವುದೇ ಸ್ನೇಹವಾಗಿರಲಿ ನಮ್ಮ ಲಿಮಿಟೇಷನ್ ಏನು ಎಂಬುವುದನ್ನು ಅರಿತರೆ ಎಲ್ಲವೂ ಸರಿಯಾಗಿರುತ್ತದೆ. ಕೆಲವರನ್ನು ನೀವು ಗಮನಿಸರಬಹುದು ತುಂಬಾನೇ ಸ್ನೇಹ, ಅವರನ್ನು ಬಿಟ್ಟರೆ ಇವರ ಜೀವನದಲ್ಲಿ ಯಾವ ಕಾರ್ಯವೂ ನಡೆಯುವುದೇ ಇಲ್ಲ ಆ ರೀತಿ ವರ್ತಿಸುತ್ತಾರೆ, ಆದರೆ ಕೆಲವು ಸಮಯದ ನಂತರ ಇಬ್ಬರ ನಡುವೆ ಯಾವುದೋ ವಿಷಯಕ್ಕೆ ಮನಸ್ತಾಪ ಬಂದು ಒಬ್ಬರನ್ನೊಬ್ಬರು ಕಂಡರೆ ಮಾತನಾಡಿಸದೆ ಇರುವಷ್ಟೂ ಸಂಬಂಧ ಹಾಳಾಗಿರುತ್ತದೆ, ಆದ್ದರಿಂದ ಸ್ನೇಹ ಸಂಬಂಧದಲ್ಲಿ ಬೌಂಡರಿ ಇದ್ದರಷ್ಟೇ ಆ ಸಂಬಂಧ ಗಟ್ಟಿಯಾಗಿರುತ್ತದೆ.

ಕಷ್ಟ-ಸುಖಕ್ಕೆ ನಿಲ್ಲುವ ಸ್ನೇಹ
ನಮ್ಮ ಸುಖದಲ್ಲಿ ಮಾತ್ರವಲ್ಲ ಕಷ್ಟದಲ್ಲಿಯೂ ನಿಲ್ಲುವವರೇ ನಿಜವಾದ ಸ್ನೇಹಿತರು. ಆದರೆ ಅವರ ಜೀವನದಲ್ಲಿ ನಮ್ಮ ಪಾತ್ರವೇನು ಎಂಬುವುದನ್ನೂ ಅರಿತಿರಬೇಕು, ಎಲ್ಲದಕ್ಕೂ ಒಂದು ಬೌಂಡರಿ ಇರಬೇಕು, ಅವರು ನಮಗೆ ನೀಡುವ ಅತಿಯಾದ ಪ್ರಾಮುಖ್ಯತೆಯಿಂದ ಅವರ ಸಂಬಂಧದಲ್ಲಿ ಸಮಸ್ಯೆ ಮೂಡುವಂತೆ ಇರಬಾರದು.
ಸ್ನೇಹಿತರ ಜೊತೆಗೆ ತುಂಬಾ ಸಮಯ ಕಳೆಯುತ್ತಿದ್ದರೆ ದಾಂಪತ್ಯದಲ್ಲಿ ಹೆಚ್ಚುವುದು ಅಸಮಧಾನ
ಹೆಚ್ಚಿನ ಕುಟುಂಬಗಳಲ್ಲಿ ಈ ಅಸಮಧಾನವಿದೆ. ಒಂದು ದಿನ ರಜೆ ಸಿಕ್ಕಾಗ ಸ್ನೇಹಿತರು ಅಂತ ಸುತ್ತಾಡಲು ಹೋದರೆ ಆ ಬಗೆಯ ವರ್ತನೆ ಖಂಡಿತ ಸಂಗಾತಿಯ ಮನಸ್ಸಿಗೆ ನೋವುಂಟು ಮಾಡುತ್ತದೆ. ಇಲ್ಲಿ ಸಂಗಾತಿಯ ಭಾವನೆಗಳನ್ನು ಗೌರವಿಸಬೇಕು, ಆದ್ದರಿಂದ ಸ್ನೇಹ ಸಂಬಂಧಕ್ಕೆ ಬೌಂಡರಿ ಇದ್ದರೆ ಚೆನ್ನಾಗಿರುತ್ತದೆ.
ಸ್ನೇಹದ ಹೆಸರಿನಲ್ಲಿ ನಿಮ್ಮೆಲ್ಲಾ ನಿರ್ಧಾರಗಳನ್ನು ಅವರು ತೆಗೆದುಕೊಳ್ಳುವಂತೆ ಇರಬಾರದು
ಸ್ನೇಹವಿರಬೇಕು, ಆದರೆ ಕೆಲ ಸ್ನೇಹ ಸಂಬಂಧದಲ್ಲಿ ನಾನು ಹೇಳಿದಂತೆ ನಡೆಯಬೇಕು ಎಂಬ ಅಹಂ ಇರುತ್ತದೆ, ಅಂಥ ಸ್ನೇಹಿತರಿಂದ ದೂರವಿರುವುದು ಒಳ್ಳೆಯದು. ನಿಮ್ಮ ಬದುಕಿನ ಕೆಲವೊಂದು ವಿಷಯಕ್ಕೆ ಅವರ ಸಲಹೆ ಕೇಳಬಹುದು, ಆದರೆ ನಿರ್ಧಾರ ನೀವು ತೆಗೆದುಕೊಳ್ಳುವಂತಿರಬೇಕು. ನಿಮ್ಮ ಸೋಲಿಗೆ ನಗುವವರು ನಿಮ್ಮೊಂದಿಗೆ ಇದ್ದರೆ ಅವರಿಂದ ದೂರವಿರಿ.
ಸ್ನೇಹ ಮತ್ತು ಸಂಬಂಧ ಎರಡನ್ನೂ ಬ್ಯಾಲೆನ್ಸ್ ಮಾಡಬೇಕು
ಕುಟುಂಬಕ್ಕೆ ನೀಡುವ ಸಮಯವನ್ನು ಕುಟುಂಬಕ್ಕೆ ನೀಡಲೇಬೇಕು, ಸ್ನೇಹಿತರ ಜೊತೆಯೂ ಬೆರೆಯಬೇಕು, ಎರಡನ್ನೂ ಬ್ಯಾಲೆನ್ಸ್ ಮಾಡುವುದು ಗೊತ್ತಿರಬೇಕು, ಆವಾಗ ಕುಟುಂಬದಲ್ಲಿಯೂ ಖುಷಿ ಇರುತ್ತದೆ, ಸ್ನೇಹ ಸಂಬಂಧವೂ ಗಟ್ಟಿಯಾಗಿರುತ್ತದೆ.
ಒಳ್ಳೆಯ ಸ್ನೇಹ ಎಂಬುವುದು ಹೇಗಿರುತ್ತದೆ?
ಅವರೊಂದಿಗೆ ಯಾವುದೇ ವಿಷಯ ಹಂಚಿಕೊಳ್ಳಲು ಹಿಂದೇಟು ಹಾಕುವುದಿಲ್ಲ: ಯಾವುದೇ ವಿಷಯ ಅವರ ಬಳಿ ಹೇಳಬಹುದು ಎಂದು ನಂಬುತ್ತೇವೆ. ಅವರು ಕೂಡ ನಮ್ಮ ಯಾವುದೇ ರಹಸ್ಯ ಬೇರೆಯವರ ಜೊತೆ ಹಂಚಿಕೊಳ್ಳುವುದಿಲ್ಲ.
ಬೌಂಡರಿಯನ್ನು ಗೌರವಿಸುತ್ತಾರೆ: ಅವರಿಗೆ ತಾವು ಯಾವ ವಿಷಯದಲ್ಲಿ ತಲೆ ಹಾಕಬೇಕು, ಹಾಕಬಾರದು ಎಂಬುವುದು ಗೊತ್ತಿರುತ್ತದೆ.
ನಿಮ್ಮ ಸ್ನೇಹಿತರು ನಿಮ್ಮೊಂದಿಗೆ ಸ್ಪರ್ಧಿಸುವುದಿಲ್ಲ: ನಿಮ್ಮ ಪ್ರಗತಿಯನ್ನು ನೋಡಿ ಗೌರವಿಸುತ್ತಾರೆ, ನಿಮ್ಮೊಂದಿಗೆ ಸ್ಪರ್ಧೆಗೆ ಇಳಿಯುವವುದಿಲ್ಲ.
ಒಬ್ಬರಿಗೊಬ್ಬರು ಬೆಂಬಲ ಸೂಚಿಸುತ್ತೀರಿ: ಅವರ ಕಷ್ಟದಲ್ಲಿ ನೀವು ಸ್ಪಂದಿಸುತ್ತೀರಿ, ನಿಮ್ಮ ಕಷ್ಟದಲ್ಲಿ ಅವರು ಸ್ಪಂದಿಸುತ್ತಾರೆ.
ಇಷ್ಟವಾಗದ ವಿಷಯ ಹೇಳಬಹುದು: ಅವರಿಗೆ ಖುಷಿಯಾಗುವಂಥ ವಿಷಯವನ್ನೇ ಹೇಳಬೇಕೆಂದು ಏನಿಲ್ಲ, ನಿಜವಾದ ಸ್ನೇಹಿತರು ತಪ್ಪನ್ನು ತಪ್ಪು ಎಂದು ಹೇಳಲು ಹಿಂಜರಿಯುವುದಿಲ್ಲ. ನೀವು ತಪ್ಪು ದಾರಿಯಲ್ಲಿ ಹೋಗುತ್ತಿದ್ದರೆ ಅದನ್ನು ವಿರೋಧಿಸುತ್ತಾರೆ, ಎಲ್ಲಾ ವಿಷಯಕ್ಕೆ ಬೆನ್ನು ತಟ್ಟುವವರು ನಿಜವಾದ ಸ್ನೇಹಿತರಾಗುವುದಿಲ್ಲ.
ನಿಮಗೆ ಅವಮಾನ ಮಾಡುವುದಿಲ್ಲ: ನಿಮ್ಮನ್ನು ಹೀಯಾಳಿಸುವುದು, ಬೇರೆಯವರ ಮುಂದೆ ಕಡೆಗಣಿಸುವುದು ಈ ರೀತಿ ಏನೂ ಮಾಡುವುದಿಲ್ಲ. ಅಲ್ಲದೆ ಬೇರೆಯವರು ನಮಗೆ ಅವಮಾನ ಮಾಡಿದರೆ ಸಹಿಸುವುದಿಲ್ಲ.



Click it and Unblock the Notifications











