Latest Updates
-
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ -
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ
ಭಾರತ-ಪಾಕಿಸ್ತಾನ ಪ್ರತ್ಯೇಕವಾದಾಗ ಬೇರೆಯಾದ ಬಾಲ್ಯ ಸ್ನೇಹಿತರು: ಇಳಿ ವಯಸ್ಸಿನಲ್ಲಿ ಭೇಟಿಯಾದ ವೀಡಿಯೋ ವೈರಲ್
ಇದೊಂದು ಸುಂದರ ಗೆಳೆತನದ ಸ್ಟೋರಿ. ದೇಶ ವಿಭಜನೆಯಾಗಿ ಎರಡು ಕುಚಿಕು ಗೆಳೆಯರು ಬೇರೆ-ಬೇರೆಯಾದ ಮೇಲೂ ಅಳಿಯದ ಸ್ನೇಹ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಭಾರತ-ಪಾಕಿಸ್ತಾನ ಎಂದು ವಿಭಜನೆಯಾದಾಗ ಈ ಸ್ನೇಹಿತರು ದೂರಾಗಿದ್ದರು. ಆದರೆ ಈ ಸ್ನೇಹಿತರು ಇಷ್ಟು ವರ್ಷಗಳ ಈಗ ಭೇಟಿಯಾಗಿದ್ದಾರೆ, ಆ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ.

ಮೇಘನಾ ಕೊಠಾರಿ ಎಂಬುವರು ಈ ಸುಂದರ ಭೇಟಿಯನ್ನು ವೀಡಿಯೋ ಮಾಡಿದ್ದು ಆ ವೀಡಿಯೀ ಇದೀಗ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ.ಈ ಭೇಟಿ ಅಮೆರಿಕದಲ್ಲಾಯ್ತು. ಇವರಿಬ್ಬರು 1947ರಲ್ಲಿ ಪ್ರತ್ಯೇಕವಾಗಿದ್ದಾಗ ಅವರಿಗೆ ವಯಸ್ಸು 12. ಈ ಸಮಯದಲ್ಲಿ ಕೊಠಾರಿಯ ಅಜ್ಜ ಮುಂಬಯಿಯಲ್ಲಿ ಓದುತ್ತಿದ್ದರು, ಬಂದು ನೋಡಿದಾಗ ಸ್ನೇಹಿತನ ಮನೆಯವರು ಪಾಕಿಸ್ತಾನಕ್ಕೆ ಹೋಗಿದ್ದರು, ಆವಾಗ ಅವರಿಗೆ ತುಂಬಾನೇ ಬೇಸರವಾಗಿತ್ತು.
ನಂತರ ಅವರ ಸ್ನೇಹಿತನಿಂದ ಲೆಟರ್ ಬಂತು, ಅದರಲ್ಲಿ ರಾವಲ್‌ಪಿಂಡಿ ಎಂದು ಹೇಳಿದ್ದು ನೆನಪಿತ್ತು. ಅವರು ಹೇಗಿದ್ದಾರೆ ಎಂಬುವುದಕ್ಕೆ ಯಾವುದೇ ಕ್ಲೂ ಇರಲಿಲ್ಲ, ಅದಾದ ಬಳಿಕ ನ್ಯೂಯಾರ್ಕ್‌ನಲ್ಲಿ 35 ವರ್ಷಗಳ ನಂತರ ಭೇಟಿಯಾಗುತ್ತಾರೆ. ಅದಾದ 9 ವರ್ಷದ ಬಳಿಕ ಮತ್ತೆ ಭೇಟಿಯಾಗುತ್ತಾರೆ, ಈ ವರ್ಷ ಏಪ್ರಿಲ್ ಭೇಟಿಯಾಗುವ ಉತ್ಸಾಹದಲ್ಲಿದ್ದಾರೆ.
ಇವರು ಗುಜರಾತ್‌ನಲ್ಲಿ ಬೆಳೆದಿದ್ದರು, ಅವರಲ್ಲಿ 1947ರಲ್ಲಿ ಒಬ್ಬರು ಭಾರತದಲ್ಲಿ ಉಳಿದರು ಮತ್ತೊಬ್ಬರು ಪಾಕಿಸ್ತಾನಕ್ಕೆ ಹೋಗಿದ್ದರು. ಹೋದ ಪ್ರಾರಂಭದಲ್ಲಿ ಇಬ್ಬರು ಪತ್ರ ಬರೆಯುತ್ತಿದ್ದರು. ಆದರೆ ಎರಡು ದೇಶಗಳ ನಡುವೆ ಪರಿಸ್ಥಿತಿ ಹಾಳಾದಾಗ ಅದು ಕೂಡ ಕಷ್ಟವಾಯ್ತು. 1947ರಿಂದ 1981ರ ಅವಧಿಯಲ್ಲಿ ಇವರ ನಡುವೆ ಯಾವುದೇ ಸಂಪರ್ಕವಿರಲಿಲ್ಲ. 1982ರಲ್ಲಿ ಇಬ್ಬರಿಗೂ ಸ್ನೇಹಿತನಾಗಿದ್ದ ವ್ಯಕ್ತಿ ಮೂಲಕ ವಿಷಯ ತಿಳಿದು ಭೇಟಿಯಾಗುತ್ತಾರೆ. ಆಗ ಅವರಿಗಾದ ಖುಷಿ ಅಷ್ಟಿಷ್ಟಲ್ಲ.
ದೇಶಗಳು ಬೇರೆಯಾದರು ಅವರಿಬ್ಬರ ನಡುವೆ ಆ ಹಳೆಯ ಸ್ನೇಹ, ಗೌರವ ಇಂದಿಗೂ ಉಳಿದಿದೆ. ಇಬ್ಬರಿಗೂ 90 ವಯಸ್ಸು. ಇವರ ಗೆಳೆತನ ಬಗ್ಗೆ ಗೊತ್ತಿದ್ದ ಮೊಮ್ಮಗಳು ಕೊಠಾರಿ ಇವರಿಬ್ಬರ ಭೇಟಿಗೆ ಅವಕಾಶ ಕಲ್ಪಿಸುತ್ತಾಳೆ. ಅವರು ಅದನ್ನು ವೀಡಿಯೋ ಮಾಡಿದ್ದು, ತನ್ನ ಅಜ್ಜ ಸ್ನೇಹಿತನನ್ನು ಭೇಟಿಯಾಗಲು ಹೋಗುವಾಗ ಅವರು ಮಾಮೂಲಿ ನಡೆಯುವುದಕ್ಕಿಂತ ವೇಗವಾಗಿ ಹೆಜ್ಜೆ ಹಾಕುತ್ತಿದ್ದರು. ಅವರ ಉತ್ಸಾಹ ನೋಡಿ ನನಗೆ ಅಚ್ಚರಿಯಾಯ್ತು. 35 ವರ್ಷಗಳ ಬಳಿಕ ಅವರಿಬ್ಬರು ಅದೇ ಮೊದಲ ಬಾರಿ ಅವರ ಭೇಟಿಯಾಗಿದ್ದರು, ಅದಾಗಿ 9 ವರ್ಷದ ಬಳಿಕ ಮೊಮ್ಮಗಳು ಅಜ್ಜನನ್ನು ಕರೆ ತಂದಿದ್ದರು. ಆಗ ಅವರಿಬ್ಬರಿಗಾದ ಸಂತೋಷ ಅಷ್ಟಿಷ್ಟಲ್ಲ. ಈ ಭೇಟಿ 2023ರಲ್ಲಿ ನಡೆದಿದ್ದು ಹೇಳಲಾಗುತ್ತಿದೆ.
ಈ ಸ್ನೇಹಿತರು ಅಮೆರಿಕದ ಜ್ಯೂಜೆರ್ಸಿಯಲ್ಲಿ ಈ ಏಪ್ರಿಲ್‌ನಲ್ಲಿ ಮತ್ತೆ ಭೇಟಿಯಾಗಲು ತೀರ್ಮಾನಿಸಿದ್ದಾರೆ. ಇವರ ಸ್ನೇಹ ಸಾಮಾಜಿಕ ತಾಣದ ಗಮನ ಸೆಳೆದಿದ್ದು ಸ್ನೇಹವೆಂದರೆ ಅದಕ್ಕೆ ಯಾವುದೇ ಬೌಂಡರಿಯಿಲ್ಲ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಇವರ ಸ್ನೇಹ ನಿಜವಾಗಲು ಮೆಚ್ಚಬೇಕು, 12 ವರ್ಷದಲ್ಲಿ ಬೇರೆಯಾದವರು 90 ವರ್ಷದಲ್ಲಿಯೂ ಅದೇ ಗಟ್ಟಿಯಾದ ಸ್ನೇಹ ಬಂಧವನ್ನು ಹೊಂದಿದ್ದಾರೆ ಎಂದರೆ ಅವರ ಸ್ನೇಹಕ್ಕೂ ನಿಜಕ್ಕೂ ಮಾದರಿ. ಸ್ನೇಹದಲ್ಲಿ ಬಡವ-ಶ್ರೀಮಂತ, ಜಾತಿ, ಮತ ಅಷ್ಟೇ ಏಕೆ ದೇಶದ ಅಂತರ ಕೂಡ ಇರಲ್ಲ, ಅಲ್ಲಿ ಇರುವುದು ಪರಿಶುದ್ಧ ಸ್ನೇಹ ಮಾತ್ರ.
ಇವರ ಸ್ನೇಹ ಇದೀಗ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ, ವೀಡಿಯೋದಲ್ಲಿ ಅವರಿಬ್ಬರ ಸ್ನೇಹವನ್ನು ನೋಡುವುದಕ್ಕೆ ತುಂಬಾನೇ ಖುಷಿಯಾಗುವುದು. ಈ ಏಪ್ರಿಲ್‌ನಲ್ಲಿ ಇವರು ಮತ್ತೆ ಭೇಟಿಯಾಗಲಿದ್ದಾರೆ. ಇವರ ಸ್ನೇಹದ ಭೇಟಿಗಾಗಿ ಈಗ ಜನರು ಕಾಯುತ್ತಿದ್ದಾರೆ.



Click it and Unblock the Notifications











