Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕರ್ನಾಟಕ ಚುನಾವಣೆ: ಭಿನ್ನ ಪಾರ್ಟಿಯ ಸ್ನೇಹಿತರ ಜೊತೆ ಚರ್ಚಿಸುವಾಗ ಈ ವಿಚಾರ ಗೊತ್ತಿರಲಿ
ಎಲ್ಲೆಲ್ಲೂ ಚುನಾವಣೆಯದ್ದೇ ಮಾತು... ಕರ್ನಾಟಕದಲ್ಲಿ ಯಾವ ಪಕ್ಷಕ್ಕೆ ಜಯ ಒಲಿದಿದೆ ಎಂಬುವುದು ನಾಳೆಯಷ್ಟೇ ನಿರ್ಧಾರವಾಗಲಿದೆ. ನಾಳೆಯ ಫಲಿತಾಂಶವನ್ನು ಬರೀ ರಾಜಕಾರಣಿಗಳಷ್ಟೇ ಅಲ್ಲ ನಾಡಿನ ಜನತೆ ಕೂಡ ಅಷ್ಟೇ ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಪ್ರಜಾಪ್ರಭುತ್ವದ ಚೆಂದನೇ ಇದು ಅಲ್ವಾ...
ನಮ್ಮನ್ನು ಯಾರು ಆಳಬೇಕು ಎಂಬುವುದನ್ನು ಸಾಮಾನ್ಯ ಪ್ರಜೆಗಳು ನಿರ್ಧರಿಸುತ್ತೇವೆ. ಇಂದು ನಾಳೆ ರಿಸಲ್ಟ್ ಬರುವವರೆಗೆ ಯಾವ ಪಕ್ಷ ಜಾರಿಗೆ ಬರಬಹುದು ಎಂಬ ಊಹೆಯ ಮಾತುಗಳೇ ಕೇಳಿ ಬರುತ್ತಿರುವುದರಿಂದ ಸ್ನೇಹಿತರ ಜೊತೆ ಅದರಲ್ಲೂ ಭಿನ್ನ ಪಕ್ಷವನ್ನು ಬೆಂಬಲಿಸುವ ಸ್ನೇಹಿತರ ಜೊತೆ ಮಾತನಾಡುವಾಗ ಹುಷಾರ್ ಕಣ್ರೀ...

ಪಕ್ಷಗಾಗಿ ಸ್ನೇಹ ಕಳೆದುಕೊಳ್ಳಬೇಡಿ
ಈ ಸಮಯದಲ್ಲಿ ಭಿನ್ನ ನಿಲುವಿನ ಸ್ನೇಹಿತರ ಜೊತೆ ಮಾತನಾಡುವಾಗ ತುಂಬಾ ಹುಷಾರ್! ಏಕೆಂದರೆ ನೀವು ಬಯಸಿದ ಅಭ್ಯರ್ಥಿಗೆ ಈಗಾಗಲೇ ಮತ ಹಾಕಿ ಆಗಿದೆ. ಜನತೆ ನೀವು ಬೆಂಬಲಿಸಿದ ಆ ವ್ಯಕ್ತಿಯನ್ನು ಬೆಂಬಲಿಸಿದ್ದಾರಾ, ಇಲ್ವಾ ಎಂಬುವುದು ನಾಳೆಯಷ್ಟೇ ತಿಳಿಯುವುದು. ಇಂದು ಅನಗ್ಯತ ವಾದ, ವಿವಾದ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ.
ಪಕ್ಷ ಬೇರೆ ಸ್ನೇಹ ಬೇರೆ
ಪಕ್ಷ ನೋಡಿ ಹುಟ್ಟಿಕೊಂಡಿದ್ದಲ್ಲ ಸ್ನೇಹ. ನೀವು ಒಂದು ಪಕ್ಷವನ್ನು ಬೆಂಬಲಿಸುವುದು ಅದು ನಿಮ್ಮ ಸೈದ್ದಾಂತಿಕ ನಿಲುವು, ಆದರೆ ಸ್ನೇಹ ಬೇರೆ, ಪಕ್ಷದ ಬಗ್ಗೆ ನಿಮ್ಮ ತೀರ್ಮಾನವನ್ನು ಈಗಾಗಲೇ ಓಟ್ ಮೂಲಕ ನೀಡಿಯಾಗಿದೆ, ಆದ್ದರಿಂದ ಸ್ನೇಹಿತರ ಗುಂಪಿನ ಜೊತೆ ಮಾತನಾಡುವಾಗ ಈ ರೀತಿ ಮಾಡದಿರಿ:
1. ಅವರು ಹೇಳುವುದನ್ನು ಕೇಳಿ
ನಿಮ್ಮ ಫ್ರೆಂಡ್ ಬಂದು ಅವನು ಬೆಂಬಲಿಸುವ ಪಕ್ಷದ ಬಗ್ಗೆ ಏನಾದರೂ ಹೇಳಿದರೆ ನೀವು ಕೌಂಟರ್ ಕೊಡಲು ಹೋಗಬೇಡಿ, ಸಮಧಾನದಿಂದ ಕೇಳಿ, ಅವರು ಹೇಳುವ ಕೆಲವೊಂದು ವಿಚಾರಗಳು ನಿಮಗೆ ಇಷ್ಟವಾಗದೇ ಇರಬಹುದು, ಹಾಗಂತ ಅವರು ಹೇಳಿದ್ದು ಸರಿಯಿಲ್ಲ ಎಂದು ವಾದ ಮಾಡಲು ಹೋಗಬೇಡಿ. ಬೇಕಿದ್ದರೆ ಅವರ ಪಕ್ಷದ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಪ್ರಶ್ನೆಗಳನ್ನು ಕೇಳಿ, ವಿರೋಧಿಸಲು ಹೋಗ ಬೇಡಿ.
2. ಮಾತುಗಳು ಬೇರೆ ಕಡೆ ತಿರುಗುತ್ತಿದೆ ಎಂದಾದರೆ ಆ ಜಾಗದಲ್ಲಿ ನಿಲ್ಲಬೇಡಿ
ಸ್ನೇಹಿತರು ಒಂದು ಗುಂಪಿನಲ್ಲಿ ನಿಂತು ಮಾತನಾಡುವಾಗ ಅವರು ಅನಾವಶ್ಯಕವಾಗಿ ಮಾತನಾಡುತ್ತಿದ್ದಾರೆ, ತುಂಬಾ ಒತ್ತಡಕ್ಕೆ ಒಳಗಾದವರಂತೆ ವರ್ತಿಸುತ್ತಿದ್ದಾರೆ ಎಂದಾದರೆ ಕೆಲಸವಿದೆ ಎಂದು ಹೇಳಿ ಅಲ್ಲಿಂದ ಹೊರಡಿ, ಇಲ್ಲದಿದ್ದರೆ ಹೋದ-ವಿವಾದಗಳಿಂದ ಜಗಳ ಉಂಟಾಗಬಹುದು.
3. ನಿಮ್ಮ ಸ್ನೇಹಿತರ ದೃಷ್ಟಿಕೋನ ಬದಲಾಯಿಸಲು ಪ್ರಯತ್ನಿಸಬೇಡಿ
ಸ್ನೇಹಿತರ ಜೊತೆ ರಾಜಕೀಯ ಚರ್ಚೆ ಮಾಡುವಾಗ ನಿಮ್ಮ ದೃಷ್ಟಿಕೋನವನ್ನು ಅವರ ಮೇಲೆ ಹೇರಲು ಪ್ರಯತ್ನಿಸಬೇಡಿ. ಅವರು ಒಂದು ಪಕ್ಷವನ್ನು ಬೆಂಬಲಿಸುವುದಕ್ಕೂ ಅವರ ಸೈದ್ಧಾಂತ ನಿಲುವಿಗೂ ಸಂಬಂಧವಿರುತ್ತದೆ, ಹಾಗಾಗಿ ಅವರು ಆ ಪಕ್ಷವನ್ನು ಬೆಂಬಲಿಸಿರುತ್ತಾರೆ. ಆದ್ದರಿಂದ ನೀವು ನಿಮ್ಮ ನಿಲುವು ಅವರ ಮೇಲೆ ಹೇರಲು ಪ್ರಯತ್ನಿಸಿದರೆ ಅವರಿಗದು ಇಷ್ಟವಾಗಲ್ಲ, ಇದರಿಂದ ನಿಮ್ಮ ನಡುವೆ ಬಿರುಕು ಉಂಟಾಗುವುದು.
4. ಪಕ್ಷಗಳಿಗಾಗಿ ನೀವು ಜಗಳವಾಡಿದರೆ ನಿಮಗೆ ನಷ್ಟ ಹೊರತು ಪಕ್ಷಗಳಿಗಲ್ಲ
ನೀವು ಪಕ್ಷಗಳಿಗಾಗಿ ಹೊಡೆದಾಡಿದರೆ ಇದರಿಂದ ನಿಮ್ಮ ಸಂಬಂಧ ಹಾಳಾಗುತ್ತದೆ ಹೊರತು ಪಕ್ಷಗಳಿಗೆ ಯಾವುದೇ ನಷ್ಟ ಸಂಭವಿಸುವುದಿಲ್ಲ. ಅಲ್ಲದೆ ರಾಜಕಾರಣಿಗಳು ಇಂದು ಒಂದು ಪಕ್ಷದಲ್ಲಿದ್ದವರು ನಾಳೆ ಮತ್ತೊಂದು ಪಕ್ಷಕ್ಕೆ ಹೋಗುವುದನ್ನು ಕಾಣುತ್ತೇವೆ, ಬಹುಮತ ಬರದಿದ್ದರೆ ಶತ್ರು ಪಕ್ಷದವರಾಗಿದ್ದವರು ಮಿತ್ರರಾಗಿ ಆಡಳಿತ ನಡೆಸಿರುವುದನ್ನೂ ಕಂಡಿದ್ದೇವೆ. ಆದ್ದರಿಂದ ಸುಮ್ಮನೆ ರಾಜಕಾರಣಿಗಳಿಗಾಗಿ ನೀವು ಬಡಿದಾಡಬೇಡಿ, ನಿಮ್ಮ ಸ್ನೇಹ ಕಳೆಯಬೇಡಿ.
ಈ ಚುನಾವಣೆ ಬಿಸಿ ಕಡಿಮೆಯಾದ ಮೇಲೆ ಎಲ್ಲರೂ ಅವರವರ ಕೆಲಸಗಳಲ್ಲಿ ಬ್ಯುಸಿಯಾಗುತ್ತಾರೆ. ಆವಾಹಗ ಒಂದು ಕಷ್ಟ ಎಂದಾಗ ಸ್ನೇಹಿತರು ಓಡಿ ಬರುತ್ತಾರೆ, ಆವಾಗ ಅವರು ನೀನು ಆ ಪಕ್ಷ-ಈ ಪಕ್ಷ ಎಂದು ಹೇಳುವುದಿಲ್ಲ ಅಲ್ವಾ? ಮತ್ಯಾಕೆ ಪಕ್ಷಗಳಿಗಾಗಿ ನಿಮ್ಮ ಸ್ನೇಹ ಕಳೆದುಕೊಳ್ಳುತ್ತೀರಾ? ನಿಮಗೆ ಇಷ್ಟವಾದ ಒಕ್ಷವನ್ನು ಓಟು ಹಾಕುವ ಮೂಲಕ ಬೆಂಬಲಿಸಿ ಆದ ಮೇಲೆ ಆ ಕುರಿತು ಚರ್ಚೆ ಮಾಡದಿರುವುದೇ ಒಳ್ಳೆಯದು. ನಾಳೆ ಚುನಾವಣೆಯ ಫಲಿತಾಂಶ ಬರಲಿದೆ, ಅದರತ್ತ ಕುತೂಹಲ ಎಲ್ಲರಲ್ಲೂ ಇದೆ, ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿ, ನಿಮ್ಮ ವರ್ತನೆಯಿಂದ ಸ್ನೇಹಕ್ಕೆ ಕುತ್ತು ಬರದಂತೆ ಜಾಗ್ರತೆವಹಿಸಿ ಅಷ್ಟೇ.. ಈ ಕುರಿತು ನಿಮ್ಮ ಅಭಿಪ್ರಾಯದ ಬಗ್ಗೆ ಕಮೆಂಟ್ ಮಾಡಿ.



Click it and Unblock the Notifications