For Quick Alerts
ALLOW NOTIFICATIONS  
For Daily Alerts

ದಸರಾ ಹಬ್ಬದ ಸ್ಪೆಷಲ್: ಸಿಹಿ ತಿನಿಸುಗಳ ರಸದೂಟ ರೆಡಿ!

By Jaya Subramanya
|

ವಿಜಯ ದಶಮಿ ಅಥವಾ ದಸರಾವನ್ನು ಭಾರತದಾದ್ಯಂತ ಬಹು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ನವರಾತ್ರಿ ಎಂದರೆ ಒಂಭತ್ತು ರಾತ್ರಿಗಳನ್ನು ಇದು ಸೂಚಿಸುತ್ತದೆ. ದುಷ್ಟರನ್ನು ಸದೆಬಡಿದು ವಿಜಯವನ್ನು ದುರ್ಗಾಮಾತೆಯು ಆಚರಿಸಿದ ಸಂಕೇತವಾಗಿ ನವರಾತ್ರಿ ಹಬ್ಬದ ಹತ್ತನೇ ದಿನವಾದ ವಿಜಯದಶಮಿಯನ್ನು ಆಚರಿಸಲಾಗುತ್ತದೆ.

ದುರ್ಗಾ ಮಾತೆಯು ಕೆಟ್ಟ ಶಕ್ತಿಗಳನ್ನು ನಿಗ್ರಹಿಸಲು ಭೂಮಿಗೆ ಅವತರಿಸುತ್ತಾರೆ ಎಂಬ ನಂಬಿಕೆಯೂ ಇದೆ ಅಂತೆಯೇ ದುಷ್ಟತನದ ಮೇಲೆ ಒಳ್ಳೆಯದರ ವಿಜಯ ಎಂಬಂತೆ ಕೂಡ ನವರಾತ್ರಿಯನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ನವರಾತ್ರಿಗೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದ್ದು ದೇವಿಯನ್ನು ಆರಾಧಿಸುವುದು ಒಂಬತ್ತು ದಿನವೂ ಅಲಂಕರಿಸುವುದು ಹೆಚ್ಚು ಮಹತ್ವದ್ದಾಗಿದೆ.

ಹಬ್ಬ ಎಂದಾಗ ರುಚಿಯಾದ ಸಿಹಿತಿಂಡಿಗಳನ್ನು ಖಾದ್ಯ ವಸ್ತುಗಳನ್ನು ತಯಾರಿಸುವ ಪದ್ಧತಿ ಇದ್ದೇ ಇದೆ. ಅದರಲ್ಲೂ ಸಿಹಿಗೆ ಹೆಚ್ಚಿನ ಪ್ರಾಧಾನ್ಯತೆ. ಹಬ್ಬದ ಕಳೆಯನ್ನು ಇನ್ನಷ್ಟು ರಂಗೇರಿಸಲು ನೀವು ಸುಲಭಾಗಿ ಮತ್ತು ಸ್ವಾದಿಷ್ಟವಾಗಿ ತಯಾರಿಸಬಹುದಾದ ಸಿಹಿತಿಂಡಿಗಳ ಪಟ್ಟಿಯನ್ನು ನಾವಿಲ್ಲಿ ನೀಡುತ್ತಿದ್ದೇವೆ. ಹಾಗಿದ್ದರೆ ತಡೆಮಾಡದೇ ಅದೇನು ಎಂಬುದನ್ನು ನೋಡಿಕೊಂಡು ಬನ್ನಿ...

ಗುಲಾಬ್ ಜಾಮೂನು

ಗುಲಾಬ್ ಜಾಮೂನು

ದಸರಾಕ್ಕಾಗಿ ನೀವು ಸಿದ್ಧಪಡಿಸಬಹುದಾದ ಸಿಹಿ ಇದಾಗಿದೆ. ಮನೆಯ ಎಲ್ಲಾ ಸದಸ್ಯರು ಹೆಚ್ಚು ಇಷ್ಟಪಡುವ ಮೆಚ್ಚಿನ ಸಿಹಿ ಇದಾಗಿದೆ.

ರೆಸಿಪಿಗಾಗಿ ಇಲ್ಲಿ ಕ್ಲಿಕ್ ಮಾಡಿ ಹೆಣ್ಣಿನಂಥ ಗುಲಾಬ್‌ ಜಾಮೂನ್‌

ಒಬ್ಬಟ್ಟು

ಒಬ್ಬಟ್ಟು

ದಕ್ಷಿಣ ಭಾರತದಲ್ಲಿ ಹೆಚ್ಚು ಜನಪ್ರಿಯ ಸಿಹಿ ಇದಾಗಿದೆ. ಒಬ್ಬಟ್ಟು ತಯಾರು ಮಾಡಲು ಪ್ರಮುಖವಾಗಿ ಬೇಕಾಗಿರುವುದು ಬೆಲ್ಲ ಮತ್ತು ತೆಂಗಿನ ಕಾಯಿಯಾಗಿದೆ

ರೆಸಿಪಿಗಾಗಿ ಇಲ್ಲಿ ಕ್ಲಿಕ್ ಮಾಡಿ ಯುಗಾದಿ ಗಮ್ಮತ್ತಿಗೆ ಬೇಕು ಒಬ್ಬಟ್ಟು ಸಾಥ್

ಜಿಲೇಬಿ

ಜಿಲೇಬಿ

ಜಿಲೇಬಿ ಹೆಸರು ಕೇಳಿದಾಗಲೇ ಬಾಯಲ್ಲಿ ನೀರೂರುತ್ತದೆ. ಬಿಸಿ ಬಿಸಿಯಾಗಿ ಸಿಹಿಯಾದ ಜಿಲೇಬಿಯನ್ನು ನಿಮಗೆ ಹಬ್ಬಕ್ಕಾಗಿ ಸಿದ್ಧ ಪಡಿಸಬಹುದಾಗಿದೆ ರೆಸಿಪಿಗಾಗಿ ಇಲ್ಲಿ ಕ್ಲಿಕ್ ಮಾಡಿ ಜಿಲೇಬಿ ರೆಸಿಪಿ: ದೀಪಾವಳಿ ರೆಸಿಪಿ

ಕಾಜು ಬರ್ಫಿ

ಕಾಜು ಬರ್ಫಿ

ಹೆಚ್ಚು ನ್ಯೂಟ್ರೀನ್ ಅಂಶಗಳಿಂದ ಒಳಗೊಂಡು ಹೆಚ್ಚು ರುಚಿಕರವಾಗಿರುವ ಸಿಹಿ ಇದಾಗಿದೆ. ಇದಕ್ಕೆ ಬಳಸುವ ಮುಖ್ಯ ಸಾಮಾಗ್ರಿ ಬಾದಾಮ್, ತುಪ್ಪ ಮತ್ತು ಹಾಲಾಗಿದೆ.ರೆಸಿಪಿಗಾಗಿ ಇಲ್ಲಿ ಕ್ಲಿಕ್ ಮಾಡಿ ಕಾಜು ಬರ್ಫಿ: ದೀಪಾವಳಿಗೆ ಸ್ಪೆಷಲ್ ರೆಸಿಪಿ

ರಸಗುಲ್ಲಾ

ರಸಗುಲ್ಲಾ

ಬಾಯಲ್ಲಿ ನೀರೂರಿಸುವ ಅದ್ಭುತ ಸಿಹಿಗಾಗಿ ನೀವು ಬಯಸುತ್ತಿದ್ದೀರಿ ಎಂದಾದಲ್ಲಿ ರಸಗುಲ್ಲಾ ಇದಕ್ಕೆ ಹೇಳಿಮಾಡಿಸಿರುವಂತಹದ್ದಾಗಿದೆ. ದಸರಾಕ್ಕಾಗಿ ಈ ಸಿಹಿಯನ್ನು ಎಂದಿಗೂ ಮಿಸ್ ಮಾಡಲೇಬೇಡಿ ರೆಸಿಪಿಗಾಗಿ ಇಲ್ಲಿ ಕ್ಲಿಕ್ ಮಾಡಿ -

ಬೆಂಗಾಲಿ ಸಿಹಿ ರಸಗುಲ್ಲ ಮಾಡುವ ವಿಧಾನ

English summary

Delicious Sweet Recipes For Dusshera

Vijayadashami or Dusshera is one of the important festivals that is celebrated by Hindus all over the world. Vijayadashami is the tenth day of the Navratri festival. It is belived that on the tenth day, Goddess Durga destroyed all the evils, marking the victory over the evil.
Story first published: Saturday, September 24, 2016, 19:38 [IST]
X
Desktop Bottom Promotion