Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಬೆಂಗಾಲಿ ಸಿಹಿ ರಸಗುಲ್ಲ ಮಾಡುವ ವಿಧಾನ

ಮನೆಯಲ್ಲೇ ಈ ಸಿಹಿ ತಿಂಡಿಯನ್ನು ಮಾಡುವ ಪ್ರಯತ್ನ ಎಂದಾದರೂ ನೀವು ಮಾಡಿದ್ದೀರಾ? ಇಲ್ಲವೆಂದರೆ ಇಂದೇ ಟ್ರೈ ಮಾಡಿ. ಒಡೆದ ಹಾಲನ್ನು ಹಾಗೆ ಚೆಲ್ಲುವ ಬದಲು ಸ್ವಾದಭರಿತ ರಸಗುಲ್ಲ ಮಾಡಿ ಬಾಯಿ ಸಿಹಿ ಮಾಡಿಕೊಳ್ಳಿ.
ರಸಗುಲ್ಲವನ್ನು ಮನೆಯಲ್ಲೇ ಮಾಡಿದರೆ ರುಚಿ ಇನ್ನೂ ಹೆಚ್ಚು. ಇದಕ್ಕೆ ಅಧಿಕ ಸಾಮಾನುಗಳೂ ಬೇಕಿಲ್ಲ. ಒಂದು ಲೀಟರ್ ಹಾಲು, 2 ಚಮಚ ನಿಂಬೆಹಣ್ಣಿನ ರಸ, ಅರ್ಧ ಚಮಚ ಸಣ್ಣ ರವೆ ಮತ್ತು ಅರ್ಧ ಕೆ.ಜಿ ಸಕ್ಕರೆ ಇವಿಷ್ಟು ಸಾಕು.
ರಸಗುಲ್ಲ ಮಾಡೋದು ಹೇಗೆ? ಮೊದಲು ಹಾಲನ್ನು ಕಾಯಿಸಿಕೊಳ್ಳಬೇಕು. ಕಾದಿರುವ ಹಾಲಿಗೆ ನಿಂಬೆರಸ ಹಿಂಡಿ ಅರ್ಧ ನಿಮಿಷ ಕುದಿಸಿ ಕೆಳಗಿಳಿಸಬೇಕು. (ಒಡೆದ ಹಾಲಿದ್ದರೆ ಹಾಗೇ ತಯಾರಿಸಬಹುದು) ತೆಳು ಬಟ್ಟೆಯಲ್ಲಿ ಒಡೆದ ಹಾಲನ್ನು ಶೋಧಿಸಿ ಗಟ್ಟಿ ಭಾಗವನ್ನು ಬಟ್ಟೆಯಲ್ಲಿಯೇ ಸುತ್ತಿ 2 ಗಂಟೆ ನಂತರ ಗಂಟು ಬಿಚ್ಚಿ ಒಂದು ತಟ್ಟೆಯಲ್ಲಿ ಈ ಮಿಶ್ರಣವನ್ನು 10 ನಿಮಿಷ ಚೆನ್ನಾಗಿ ನಾದಬೇಕು.
ಉಂಡೆಗಳನ್ನು ಮಾಡಲು ಸುಲಭವಾಗಲೆಂದು ಸ್ವಲ್ಪ ಸಣ್ಣ ರವೆ ಬೆರೆಸಬಹುದು. ಈ ಮಿಶ್ರಣದಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿಕೊಂಡು ಒಂದು ತಟ್ಟೆಯಲ್ಲಿಡಬೇಕು.
ಈಗ ಸಕ್ಕರೆ ನೀರನ್ನು ಒಲೆಯ ಮೇಲಿಟ್ಟು ಕುದಿದ ನಂತರ ಅದರಲ್ಲಿ ಕಾಲು ಭಾಗವನ್ನು ಇನ್ನೊಂದು ಪಾತ್ರೆಗೆ ಹಾಕಿ. ಒಲೆಯ ಮೇಲೆ ಇರುವ ಪಾಕಕ್ಕೆ ಉಂಡೆ ಮಾಡಿದ ಮಿಶ್ರಣ ಹಾಕಿ. ಸ್ವಲ್ಪ ದೊಡ್ಡ ಉರಿಯಲ್ಲಿ ಕುದಿಸಿ. ಆದರೆ ತಳ ಸೀಯದಂತೆ ನೋಡಿಕೊಳ್ಳಿ.
ತೆಗೆದಿಟ್ಟುಕೊಂಡಿರುವ ಪಾಕವನ್ನು ಆಗಾಗ್ಗೆ ಉಂಡೆಗಳ ಮೇಲೆ ಚುಮುಕಿಸುತ್ತಿರಬೇಕು. ಉಂಡೆ ಸಕ್ಕರೆ ಪಾಕದಲ್ಲೇ ಅರ್ಧ ಗಂಟೆ ಬೇಯಬೇಕು. ಬೆಂದ ನಂತರ ಉಂಡೆಗಳು ಉಬ್ಬುತ್ತದೆ. ನಂತರ ಪಾಕದ ಸಮೇತ ಹಾಗೇ ಇಳಿಸಿ. ಈಗ ರುಚಿಭರಿತ ರಸಗುಲ್ಲ ತಿನ್ನಲು ರೆಡಿ. ಇದನ್ನು ಒಂದು ದಿನದ ನಂತರ ಬಿಟ್ಟು ತಿಂದರೆ ಸ್ವಾದ ಇನ್ನೂ ಹೆಚ್ಚು.



Click it and Unblock the Notifications
