For Quick Alerts
ALLOW NOTIFICATIONS  
For Daily Alerts

ಕಾಜು ಬರ್ಫಿ: ದೀಪಾವಳಿಗೆ ಸ್ಪೆಷಲ್ ರೆಸಿಪಿ

By Neha Mathur
|

ಈ ದೀಪಾವಳಿಗೆ ಕಾಜೂ ಬರ್ಫಿಯನ್ನು ಬೇಕರಿಯಿಂದ ಕೊಂಡುಕೊಳ್ಳಬೇಕಾಗಿಲ್ಲ, ಅಷ್ಟೇ ರುಚಿಕರವಾದ ಬರ್ಫಿಯನ್ನು ನೀವೇ ತಯಾರಿಸಬಹುದು. ಇದನ್ನು ಮಾಡುವಾಗ ಸಕ್ಕರೆ ಪಾಕದ ಹದ ಸರಿಯಾಗಿದ್ದರೆ ಸಾಕು, ಸೂಪರ್ ರುಚಿಯ ಕಾಜು ಬರ್ಫಿ ರೆಡಿಯಾಗುವುದು.

ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಪದಾರ್ಥಗಳು
ಗೋಡಂಬಿ 1 ಕಪ್
ಜೋಳದ ಹಿಟ್ಟು 1 ಚಮಚ
ಸಕ್ಕರೆ ಅರ್ಧ ಕಪ್
ನೀರು 1/4 ಕಪ್
ತುಪ್ಪ
ಸಿಲ್ವರ್ ಕವರ್(ಬೇಕಿದ್ದರೆ ಬಳಸಬಹುದು)

ಮಾಡುವ ವಿಧಾನ:

* ಗೋಡಂಬಿಯನ್ನು ಪುಡಿ ಮಾಡಿ, ನಂತರ ಅದನ್ನು ಜೋಳದ ಹಿಟ್ಟಿನ ಜೊತೆ ಹಾಕಿ ಮಿಕ್ಸ್ ಮಾಡಿ ಇಡಿ.

* ಪ್ಯಾನ್ ಗೆ ನೀರು ಹಾಕಿ ಕುದಿಸಿ, ನೀರು ಕುದಿ ಬರುತ್ತಿರುವಾಗ ಸಕ್ಕರೆಯನ್ನು ಹಾಕಿ. ಸಕ್ಕರೆ ಕರಗಿ ಸಿರಪ್ ರೀತಿಯಾಗುವವರೆಗೆ ಕುದಿಸಿ.

* ಈಗ ಜೋಳ ಮತ್ತು ಗೋಡಂಬಿ ಮಿಶ್ರಣ ಪುಡಿಯನ್ನು ನಿಧಾನಕ್ಕೆ ಸಿರಪ್ ಗೆ ಹಾಕಿ, ಅದೇ ಸಮಯದಲ್ಲಿ ಪುಡಿ ಗಂಟು-ಗಂಟು ಆಗದಿರಲು ಸೌಟ್ ನಿಂದ ತಿರುಗಿಸಿ. ನಂತರ ಸಾಧಾರಣ ಉರಿಯಲ್ಲಿ ಪಾತ್ರೆಯ ಬಾಯಿ ಮುಚ್ಚದೆ ಬೇಯಿಸಿ, ಮಿಶ್ರಣ ತಳ ಹಿಡಿಯದಿರಲು ಸೌಟ್ ನಿಂದ ತಿರುಗಿಸುತ್ತಾ ಇರಿ. ಈ ರೀತಿ 5-6 ನಿಮಿಷ ಬೇಯಿಸಿದ ಬಳಿಕ, ತಟ್ಟೆಗೆ ಸುರಿಯಿರಿ. ಅದರ ಮೇಲೆ ಸ್ವಲ್ಪ ತುಪ್ಪವನ್ನು ಸುರಿದು ತಣ್ಣಗಾಗಲು ಬಿಡಿ. ನಂತರ ಅದನ್ನು ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿ, ಸಿಲ್ವರ್ ಪೇಪರ್ ಸುತ್ತಿ, ನಂತರ ಗಾಳಿಯಾಡದ ಡಬ್ಬಿದಲ್ಲಿ ಹಾಕಿ ಫ್ರಿಜ್ ನಲ್ಲಿಟ್ಟರೆ ಒಂದು ವಾರದವರೆಗೆ ಹಾಳಾಗುವುದಿಲ್ಲ.

English summary

Kaju Ki Barfi: Diwali Special Recipe

Diwali is approaching, so I thought to share this recipe with you all. I also make stuffed rolls with the same recipe. The only trick to make perfect barfis is to get the consistency of sugar syrup right.
X
Desktop Bottom Promotion