Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಹೆಣ್ಣಿನಂಥ ಗುಲಾಬ್ ಜಾಮೂನ್
ಜಾಮೂನ್ - ಐಸ್ ಕ್ರೀಂ ಕಾಂಬಿನೇಷನ್... ವಾರೆವಾ!! ನಾಲಿಗೆಯಲ್ಲಿ ನೀರೂರಿಸುವ ಜಾಮೂನಿನಲ್ಲಿ ಎಷ್ಟೊಂದು ಬಗೆ? ಗಂಡಸರೆಲ್ಲ ಬನ್ನಿ, ಗುಲಾಬ್ ಜಾಮೂನ್ ಕ್ರೀಂ ಜತೆ ಹನಿಮೂನ್ ಮಾಡುವಾ!
ಇತ್ತೀಚಿನ ದಿನಗಳಲ್ಲಿ ಯಾವುದೇ ಪಾರ್ಟಿಗೆ ಹೋದರೂ ಜಾಮೂನ್ ಜತೆ ಐಸ್ ಕ್ರೀಂ ಕೊಡೋದು ಲೇಟೆಸ್ಟ್ ಫ್ಯಾಷನ್ ಆಗಿದೆ. ಈ ಎರಡರ ಸಮ್ಮಿಲನದ ರುಚಿಯ ಮಜವೇ ಬೇರೆ. ಅದಕ್ಕೇ ಅಲ್ಲವೇ ಹಿರಿಯರು ಹೇಳೋದು. ಊಟ ತನ್ನಿಷ್ಟ, ನೋಟ ಪರರಿಷ್ಟ ಅಂತ.
ನಾವು ನಮಗೆ ಹಿತವೆನಿಸಿದ ರೀತಿ ತಿನ್ನಬೇಕು. ಇತರರು ಮೆಚ್ಚುವಂತೆ ಬಟ್ಟೆ ತೊಡಬೇಕು ಎಂಬುದೇ ಈ ನುಡಿಯ ಆಂತರ್ಯ. ಅಂದಹಾಗೆ ಗುಲಾಬ್ ಜಾಮೂನ್‌ಗೆ ಕ್ರೀಮ್ ಬೆರೆಸಿದರೆ ಇನ್ನೂ ಸ್ವಾದಿಷ್ಟ. ಬನ್ನಿ ಗುಲಾಬ್ ಜಾಮೂನ್ ಕ್ರೀಂ ಮಾಡೋಣ.
ಬೇಕಾಗುವ ಸಾಮಗ್ರಿ : 50 ಗ್ರಾಂ ಖೋವಾ, 75 ಗ್ರಾಂ ಮೈದಾ, 200 ಗ್ರಾಂ ಸಕ್ಕರೆ, 250 ಗ್ರಾಂ. ಒಳ್ಳೆ ಕ್ರೀಂ. 4-5 ಚಮಚ ಪುಡಿ ಸಕ್ಕರೆ, ಗುಲಾಬಿ ನೀರು, 1 ಹೋಳು ನಿಂಬೆ ಹಣ್ಣು, ಕರೆಯಲು ಬಾಣಲೆ ಹಾಗೂ ಎಣ್ಣೆ.
ಮಾಡುವ ವಿಧಾನ : ಮೊದಲು ಸಕ್ಕರೆ ನೀರು ಬೆರೆಸಿ ಚೆನ್ನಾಗಿ ಕುದಿಸಿ, ಪಾಕ ಸಿದ್ಧಮಾಡಿಕೊಳ್ಳಬೇಕು. ಖೋವಾ ಹಾಗೂ ಮೈದಾ ಸೇರಿಸಿ ಚೆನ್ನಾಗಿ ನಾದಬೇಕು. ಒಂದಿಷ್ಟು ತುಪ್ಪ ಬೆರೆಸಿ ಕಲೆಸಿದರೆ, ಗಂಟು ಇಲ್ಲದಂತೆ ಹಿಟ್ಟು ಅಚ್ಚುಕಟ್ಟಾಗಿರುತ್ತದೆ. ಆನಂತರ ದೊಡ್ಡ ಗೋಲಿ ಗಾತ್ರದ ಉಂಡೆಗಳನ್ನು ಮಾಡಿಟ್ಟುಕೊಳ್ಳಬೇಕು.
ಕಾದ ಎಣ್ಣೆಯಲ್ಲಿ ಗುಲಾಬಿ ಬಣ್ಣ ಬರುವಂತೆ ಜಾಮೂನನ್ನು ಕರೆಯಬೇಕು. ನಂತರ ಅದನ್ನು ಪಾಕಕ್ಕೆ ಹಾಕಿಡಬೇಕು. 5-6 ನಿಮಿಷದ ನಂತರ ಸ್ವಲ್ಪ ಹೊತ್ತು ಹದವಾದ ಉರಿಯ ಒಲೆಯ ಮೇಲಿಟ್ಟು ತುಸು ಬೆಚ್ಚಗೆ ಮಾಡಿ ಕೆಳಗಿಳಿಸಬೇಕು.
ಇಷ್ಟಾದ ಬಳಿಕ ಪುಡಿ ಸಕ್ಕರೆಗೆ ಕ್ರೀಂ ಮತ್ತು ಗುಲಾಬಿ ನೀರು, ನಿಂಬೆ ರಸ ಸೇರಿಸಿ ಮಿಶ್ರಣ ಮಾಡಬೇಕು. ಅಷ್ಟರಲ್ಲಿ ಪಾಕದೊಂದಿಗೆ ಚೆನ್ನಾಗಿ ಉಬ್ಬಿದ ಜಾಮೂನುಗಳನ್ನು ಕ್ರೀಮಿರುವ ಪಾತ್ರೆಗೆ ಸ್ಥಳಾಂತರಿಸಿ, ಗುಲಾಬಿ ದಳದಿಂದ ಅಲಂಕರಿಸಿದರೆ, ಗುಲಾಬ್ ಜಾಮೂನ್ ಕ್ರೀಂ ತಿನ್ನಲು ರೆಡಿ.



Click it and Unblock the Notifications
