For Quick Alerts
ALLOW NOTIFICATIONS  
For Daily Alerts

ಜಿಲೇಬಿ ರೆಸಿಪಿ: ದೀಪಾವಳಿ ರೆಸಿಪಿ

ಕೇಸರಿ ಅಥವಾ ಹಳದಿ ಬಣ್ಣದ ಜಿಲೇಬಿ ನೋಡುವಾಗ ಪ್ರತಿಯೊಬ್ಬರ ಬಾಯಲ್ಲೂ ನೀರೂರುವುದು. ಸಿಹಿ ಪ್ರಿಯರಿಗಂತೂ ಜಿಲೇಬಿಯೆಂದರೆ ಪಂಚಪ್ರಾಣ. ಇಲ್ಲಿ ನಾವು ನಿಮ್ಮ ಇಷ್ಟದ ಜಿಲೇಬಿಯನ್ನು ಸುಲಭದಲ್ಲಿ ಮಾಡುವ ರೆಸಿಪಿ ನೀಡಿದ್ದೇವೆ.

By Staff
|

ಕೇಸರಿ ಅಥವಾ ಹಳದಿ ಬಣ್ಣದ ಜಿಲೇಬಿ ನೋಡುವಾಗ ಪ್ರತಿಯೊಬ್ಬರ ಬಾಯಲ್ಲೂ ನೀರೂರುವುದು. ಸಿಹಿ ಪ್ರಿಯರಿಗಂತೂ ಜಿಲೇಬಿಯೆಂದರೆ ಪಂಚಪ್ರಾಣ. ಇಲ್ಲಿ ನಾವು ನಿಮ್ಮ ಇಷ್ಟದ ಜಿಲೇಬಿಯನ್ನು ಸುಲಭದಲ್ಲಿ ಮಾಡುವ ರೆಸಿಪಿ ನೀಡಿದ್ದೇವೆ. ದೀಪಾವಳಿ ವಿಶೇಷ: ರುಚಿ ರುಚಿಯಾದ ಹಾಲಿನ ಪಾಯಸ

ಇದನ್ನು ಮಾಡುವ ವಿಧಾನ ತುಂಬಾ ಸರಳವಾಗಿರುವುದರಿಂದ ಹಬ್ಬ-ಹರಿದಿನಗಳಲ್ಲಿ ಸುಲಭವಾಗಿ ಮಾಡಬಹುದು.

ಜಿಲೇಬಿಗೆ ಬೇಕಾಗುವ ಸಾಮಗ್ರಿಗಳು
100 ಗ್ರಾಂ ಮೈದಾ ಹಿಟ್ಟು
10 ಗ್ರಾಂ ಮೊಸರು
ಫುಡ್ ಕಲರ್
ಕಾಲು ಕೆಜಿ ತುಪ್ಪ
ಎರಡು ಕಪ್ ನೀರು
250 ಗ್ರಾಂ ಸಕ್ಕರೆ
ಚಿಟಿಕೆಯಷ್ಟು ಕೇಸರಿ ದೀಪಾವಳಿ ಹಬ್ಬದ ಸಂಭ್ರಮಕ್ಕಾಗಿ ಸಿಹಿ ಸಮೋಸ ರೆಸಿಪಿ

ಮಾಡುವ ವಿಧಾನ-

* ಮೈದಾ ಹಿಟ್ಟಿಗೆ ಮೊಸರು ಹಾಗೂ ಎರಡು ಕಪ್ ನೀರು, ಮತ್ತು ಸ್ವಲ್ಪ ಕೇಸರಿ ಬಣ್ಣದ ಫುಡ್ ಕಲರ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಹೀಗೆ ಮಾಡಿಟ್ಟ ಹಿಟ್ಟನ್ನು 24 ಗಂಟೆಗಳ ಕಾಲ ಇಡಿ.

* ನಂತರ ಸಕ್ಕರೆ ಪಾಕವನ್ನು ಮಾಡಿಡಬೇಕು. ಸಕ್ಕರೆ ಪಾಕದಲ್ಲಿಯೇ ಕೇಸರಿಯನ್ನು ಉದುರಿಸಿಡಿ.

* ನಂತರ ತುಪ್ಪವನ್ನು ಪ್ಯಾನ್ ಗೆ ಹಾಕಿ ಕುದಿಸಿ.

* ತುಪ್ಪ ಕುದಿ ಬರುವಾಗ ಶುದ್ಧ ಬಟ್ಟೆ ತೆಗೆದುಕೊಂಡು ಅದರಲ್ಲಿ ಚಿಕ್ಕ ತೂತು ಮಾಡಿ, ಆ ಬಟ್ಟೆಗೆ ಜಿಲೇಬಿ ಹಿಟ್ಟನ್ನು ಹಾಕಿ ನೇರವಾಗಿ ಬಿಸಿಯಾದ ತುಪ್ಪಕ್ಕೆ ಹಾಗೇ ಜಿಲೇಬಿ ಆಕಾರದಲ್ಲಿ ಹಿಟ್ಟನ್ನು ಹಾಕಿ ಹೊಂಬಣ್ಣ ಬರುವವರೆಗೆ ಕರಿಯಿರಿ. ನಂತರ ಕರಿದ ಜಿಲೇಬಿಯನ್ನು ಸಕ್ಕರೆ ಪಾಕಕ್ಕೆ ಹಾಕಿದರೆ ಸವಿಯಲು ಜಿಲೇಬಿ ರೆಡಿ. ದೀಪಾವಳಿಯ ವಿಶೇಷ: ಮನತಣಿಸುವ ವೈವಿಧ್ಯ 10 ರೆಸಿಪಿಗಳು

English summary

Diet Sweet: Diwali Jalebi Recipe

We are talking about your favourite 'Jalebi recipe'. The yellow, sugary, web shaped sweet dishes are famous not only in India but even Bangladesh, Nepal and Pakistan. They are made with maida and gram flour and are then soaked in sugar syrup. Take a look to know how to make theses sweets.
X
Desktop Bottom Promotion