For Quick Alerts
ALLOW NOTIFICATIONS  
For Daily Alerts

ನವರಾತ್ರಿಗೆ ಸುಲಭದಲ್ಲಿ ಮಾಡಬಹುದಾದ ಸ್ನ್ಯಾಕ್ಸ್ ರೆಸಿಪಿ

|

ನವರಾತ್ರಿ ಸಮಯದಲ್ಲಿ ಹಬ್ಬದ ಅಡುಗೆಯನ್ನು ತಯಾರಿಸುವಾಗ 2 ಬಗೆಯ ಪಾಯಸ 2-3 ಬಗೆಯ ತಿಂಡಿಯಿದ್ದರೆ ಹೆಚ್ಚುವುದು ಹಬ್ಬದ ಅಡುಗೆಯ ಘಮ್ಮತ್ತು. ಹಬ್ಬದ ದಿನ ತುಂಬಾ ಕೆಲಸವಿರುವುದರಿಂದ ಸರಳವಾದ ತಿಂಡಿಗಳನ್ನು ಮಾಡಿದರೆ, ಬೇಗನೆ ಕೆಲಸ ಮುಗಿಸಿ, ಮನೆಯವರ ಜೊತೆ ಸ್ವಲ್ಪ ಸಮಯ ಕಳೆಯಬಹುದು, ಇಲ್ಲದಿದ್ದರೆ ಹಬ್ಬದಂದು ಅಡುಗೆ ಮನೆಯಲ್ಲೇ ಕಾಲ ಕಳೆಯಬೇಕಾಗುತ್ತದೆ.

ಆದ್ದರಿಂದ ಸುಲಭವಾಗಿ ಮಾಡಬಹುದಾದ , ರುಚಿಕರವಾದ ತಿಂಡಿಯ ರೆಸಿಪಿಗೆ ಹುಡುಕುತ್ತಿದ್ದರೆ, ಈ ಲೇಖನದತ್ತ ಕಣ್ಣಾಡಿಸಿ, ನಿಮಗೆ ಇಷ್ಟವಾದ ತಿಂಡಿಯನ್ನು ಟ್ರೈ ಮಾಡಿ ಹಬ್ಬದ ಅಡುಗೆಯ ಸೊಗಸನ್ನು ಹೆಚ್ಚಿಸಿ.

ಸಾಬೂದಾನಾ ವಡೆ

ಸಾಬೂದಾನಾ ವಡೆ

ಮನೆಯಲ್ಲಿ ತಿಂಡಿ ಮಾಡುವಾಗ ಮಾಡಲು ಸುಲಭವಾದ ಮತ್ತು ಬಾಯಿಗೆ ರುಚಿಯನ್ನು ಕೊಡುವಂತಹ ತಿಂಡಿ ತಯಾರಿಸಲು ಇಷ್ಟಪಡುತ್ತೇವೆ. ಇವತ್ತು ನಾವು ಸಾಬೂದಾನಾ ವಡೆ ಮಾಡುವ ವಿಧಾನ ತಿಳಿಯೋಣ. ಇದನ್ನು ತಯಾರಿಸುವುದು ಸುಲಭವಾಗಿದ್ದು ಮಾಡುವ ವಿಧಾನ ನೋಡಿ ಇಲ್ಲಿದೆ.

ಪಾಲಾಕ್ ಪಕೋಡ

ಪಾಲಾಕ್ ಪಕೋಡ

ಪಾಲಾಕ್ ಸೊಪ್ಪು ಹಾಕಿದರೆ ಆಹಾರದ ರುಚಿ ಹೆಚ್ಚುವುದು ಮತ್ತು ಈ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈರುಳ್ಳಿ ಪಕೋಡದ ರುಚಿ ಮತ್ತು ಅದನ್ನು ಮಾಡುವ ವಿಧಾನ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತದೆ. ಈರುಳ್ಳಿ ಪಕೋಡಕ್ಕಿಂತ ಸ್ವಲ್ಪ ಭಿನ್ನ ರುಚಿಯ ಪಾಲಾಕ್ ಪಕೋಡ ಮಾಡುವ ವಿಧಾನ ನೋಡಿ ಇಲ್ಲಿದೆ.

ಸಮೋಸ ಚಾಟ್

ಸಮೋಸ ಚಾಟ್

ಸಮೋಸ ಚಾಟ್ ಮಾಡಿ ಅದನ್ನು ಖಾರ ಬೇಕೆನ್ನುವರು ಖಾರ ಅಥವಾ ಸಿಹಿ ಬೇಕೆನ್ನುವರು ಸಿಹಿ ಚಟ್ನಿಯಲ್ಲಿ ಬಳಸಿ ತಿನ್ನಬಹುದಾಗಿದೆ. ಈ ಸಮೋಸವನ್ನು ಮಾಡುವ ವಿಧಾನ ನೋಡಿ ಇಲ್ಲಿದೆ.

ಪನ್ನೀರ್ ಕಟ್ಲೇಟ್

ಪನ್ನೀರ್ ಕಟ್ಲೇಟ್

ಇಲ್ಲಿ ನಾವು ಎಣ್ಣೆ ಕಮ್ಮಿ ಹಾಕಿ ಮಾಡುವ ಪನ್ನೀರ್ ಕಟ್ಲೇಟ್ ರೆಸಿಪಿ ನೀಡಿದ್ದೇವೆ. ಆದರೆ ಇದನ್ನು ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿಯೂ ಮಾಡಬಹುದು. ಮೈ ತೂಕದ ಬಗ್ಗೆ ಗಮನ ಕೊಡುವವರು ನೀವಾದರೆ ಈ ಖಾದ್ಯ ನಿಮಗೆ ಬೆಸ್ಟ್.

ಆಲೂ ಚೀಸ್ ಬೋಂಡಾ

ಆಲೂ ಚೀಸ್ ಬೋಂಡಾ

ಆಲೂ ಬೋಂಡಕ್ಕಿಂತ ಸ್ವಲ್ಪ ಭಿನ್ನವಾದ ತಿಂಡಿಯಿದು. ಇದನ್ನು ಆಲೂಗಡ್ಡೆ, ಚೀಸ್ ಹಾಗೂ ಬ್ರೆಡ್ ಈ ಮೂರು ಪ್ರಮುಖ ಸಾಮಾಗ್ರಿಗಳನ್ನು ಹಾಕಿ ಮಾಡಲಾಗುವುದು. ಇದನ್ನು ಮಾಡಲು ಅಧಿಕ ಸಾಮಾಗ್ರಿಗಳು ಬೇಕಾಗಿಲ್ಲ, ಹೆಚ್ಚಿನ ಶ್ರಮ ಪಡಬೇಕಾಗಿಲ್ಲ. ಅರ್ಧ ಗಂಟೆಯ ಒಳಗೆ ಈ ತಿಂಡಿಯನ್ನು ತಯಾರಿಸಬಹುದು.

 ಹೆಸರುಕಾಳಿನ ಪಕೋಡ

ಹೆಸರುಕಾಳಿನ ಪಕೋಡ

ಈ ನವರಾತ್ರಿಗೆ ಹೆಸರುಕಾಳಿನ ಪಕೋಡ ಮಾಡಬಯಸುವುದಾದರೆ ಸರಳವಾದ ರೆಸಿಪಿ ನೋಡಿ ಇಲ್ಲಿದೆ. ಇದಕ್ಕೆ ಈರುಳ್ಳಿ ಬೇಡವೆಂದರೆ ಈರುಳ್ಳಿ ಹಾಕದೆಯೂ ಮಾಡಬಹುದು.

English summary

Snacks Recipe For Navaratri

Do you want to prepare 2-3 snacks recipe for navaratri festival? Here we are adding a few spices here and there to the simplest of these vegetarian items can give you some very interesting dishes.
Story first published: Thursday, October 10, 2013, 16:17 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more