For Quick Alerts
ALLOW NOTIFICATIONS  
For Daily Alerts

ಬಿಸಿಬಿಸಿಯಾಗಿ ತಿನ್ನಬೇಕು ಸಾಬೂದಾನಾ ವಡೆ

|

ಮಳೆಗಾಲ ಶುರುವಾಯಿತು. ಹೊರಗಡೆ ಜೋರಾಗಿ ಮಳೆ ಸುರಿಯುತ್ತಿದ್ದರೆ ಮಳೆ ಚೆಂದ ನೋಡುತ್ತಾ ಬಿಸಿಬಿಸಿಯಾಗಿ ಏನಾದರೂ ತಿನ್ನಬೇಕೆಂದು ಅನಿಸುತ್ತದೆ. ಆಗ ಹೊರಗಿನಿಂದ ತಂದು ತಿನ್ನುವ ತಿಂಡಿಗಿಂತ ಮನೆಯಲ್ಲಿಯೇ ಬಿಸಿಬಿಸಿಯಾದ ತಿಂಡಿ ಮಾಡಿ ತಿನ್ನಲು ಇಷ್ಟಪಡುತ್ತೇವೆ. ಆದರೆ ಹೀಗೆ ಮನೆಯಲ್ಲಿ ತಿಂಡಿ ಮಾಡುವಾಗ ಮಾಡಲು ಸುಲಭವಾದ ಮತ್ತು ಬಾಯಿಗೆ ರುಚಿಯನ್ನು ಕೊಡುವಂತಹ ತಿಂಡಿ ತಯಾರಿಸಲು ಇಷ್ಟಪಡುತ್ತೇವೆ. ಇವತ್ತು ನಾವು ಸಾಬೂದಾನಾ ವಡೆ ಮಾಡುವ ವಿಧಾನ ತಿಳಿಯೋಣ. ಇದನ್ನು ತಯಾರಿಸುವುದು ಸುಲಭವಾಗಿದ್ದು ಮಾಡುವ ವಿಧಾನ ನೋಡಿ ಇಲ್ಲಿದೆ.

Sabudana Vada Recipe

ಬೇಕಾಗುವ ಸಾಮಾನುಗಳು :
* 2 ಬೇಯಿಸಿದ ಆಲೂಗಡ್ಡೆ
* 1 ಕಪ್ ನೆನೆಹಾಕಿದ ಸಾಬೂದಾನಾ
* 1/2 ಕಪ್ ಹುರಿದು ತರಿ ತರಿಯಾಗಿ ಪುಡಿ ಮಾಡಿದ ಕಡಲೆಕಾಯಿ ಬೀಜ
* ಸಣ್ಣಗೆ ಹೆಚ್ಚಿದ ಮೆಣಸಿನಕಾಯಿ 6-8 ಅಥವಾ ಖಾರಕ್ಕೆ ತಕ್ಕ
* ಕೊತ್ತಂಬರಿ ಸೊಪ್ಪು
* ಹಿಂಗು
* ಜೀರಿಗೆ,
* ರುಚಿಗೆ ತಕ್ಕ ಉಪ್ಪು
* ಸ್ವಲ್ಪ ಜಜ್ಜಿದ ಶುಂಠಿ
* ಚಿಟಿಕೆಯಷ್ಟು ಅರಿಶಿಣ
* ನಿಂಬೆ ರಸ ಅರ್ಧ ಚಮಚ

ಮಾಡುವ ವಿಧಾನ :

1. ಸಾಬೂದಾನಾವನ್ನು ಚೆನ್ನಾಗಿ ತೊಳೆದು 2 ಗಂಟೆ ಕಾಲ ನೆನೆ ಹಾಕಬೇಕು.

2. ನಂತರ ಸಾಬೂದಾನಾ ಮತ್ತು ಉಳಿದ ಎಲ್ಲಾ ಸಾಮಗ್ರಿಗಳನ್ನು ಒಂದು ಬಟ್ಟಲಿನಲ್ಲಿ ಹಾಕಿ ಚೆನ್ನಾಗಿ ಕಲೆಸಬೇಕು. ಕಲೆಸುವಾಗ ತುಂಬಾ ನೀರು ಮಾಡಬೇಡಿ.

3. ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಬೇಕು.

4. ಸಾಬೂದಾನ ಮಿಶ್ರಣದಿಂದ ವಡೆ ರೀತಿ ತಟ್ಟಿ ಬಿಸಿ ಎಣ್ಣೆಯಲ್ಲಿ ಹಾಕಿ ಕರಿಯಿರಿ. ಸ್ವಲ್ಪ ಕಂದು ಬಣ್ಣ ಬರುವಾಗ ತೆಗೆದರೆ ವಡೆ ರೆಡಿ.

ಸೂಚನೆ:

* ಇದನ್ನು ಬಿಸಿಬಿಸಿಯಾಗಿ ತಿನ್ನಬೇಕು. ಇಟ್ಟರೆ ತಣ್ಣಗಾಗಿ ರಬ್ಬರಿನಂತೆ ಆಗುವುದು. ಆದ್ದರಿಂದ ಮಾಡುವಾಗ ಎಷ್ಟು ಬೇಕು ಅಷ್ಟು ಅಳತೆಯಲ್ಲಿ ಮಾಡಿ.

* ಇದನ್ನು ತೆಂಗಿನಕಾಯಿ ಚಟ್ನಿ ಜೊತೆ, ಅಥವಾ ತಣ್ಣನೆಯ ಸಕ್ಕರೆ ಹಾಕಿದ ಗಟ್ಟಿ ಮೊಸರಿನೊಂದಿಗೆ ತಿನ್ನಲು ತುಂಬಾ ರುಚಿಯಾಗಿರುತ್ತದೆ.

English summary

Sabudana Vada Recipe | Variety Of Snacks | ಸಾಬೂದಾನಾ ವಡೆ ರೆಸಿಪಿ | ಅನೇಕ ಬಗೆಯ ತಿಂಡಿಗಳು

These vadas is one of the best snacks to prepare in rainy season. This recipe is easy to prepare and fill the stomach while the tongue craves for more.
Story first published: Wednesday, June 20, 2012, 10:00 [IST]
X
Desktop Bottom Promotion