Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ?
ಬೇಸಿಗೆಯ ಸಮಯದಲ್ಲಿ ಮಧ್ಯಾಹ್ನದ ಹಾಗೆ ರಾತ್ರಿಯ ಊಟಕ್ಕೆ ತಂಪಾಗಿರುವ ಯಾವುದಾದರು ಸಾರು ಅಥವಾ ಸಂಬಾರ್ ಮಾಡಿ ಸವಿಯೋಕೆ ನೀವು ಮುಂದಾಗಬಹುದು. ಅದ್ರಲ್ಲೂ ಸುಲಭವಾಗಿ ಮಾಡುವ ಹಾಗೆ ಕಡಿಮೆ ವಸ್ತುಗಳ ಬಳಸಿಕೊಂಡು ಮಾಡುವ ವಿಶೇಷ ರುಚಿಯ ಖಾದ್ಯಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಇನ್ನು ಈ ಬಿಸಿಲಿನ ಸಮಯದಲ್ಲಿ ನೀವು ಸುಲಭವಾಗಿ ಈ ರಸಂ ಮಾಡಿ ಊಟದೊಂದಿಗೆ ಸವಿಯಬಹುದು.
ರಸಂ ಅತ್ಯಂತ ಸುಲಭವಾಗಿ ಹಾಗೆ ಕಡಿಮೆ ಸಮಯದಲ್ಲಿ ಮಾಡಿ ಮುಗಿಸಬಹುದು. ಹಾಗೆ ರಸಂ ಎಲ್ಲಾ ಊಟದೊಂದಿಗೆ ರುಚಿ ನೀಡಲಿದೆ. ಬೇಸಿಗೆಯ ಸಮಯದಲ್ಲಿ ಹೆಚ್ಚು ಮಸಾಲೆ ಭರಿತ ಆಹಾರಕ್ಕಿಂತಲೂ ಈ ರಸಂ ಸವಿಯುವುದು ಉತ್ತಮ. ಹಾಗೆ ಬೇಸಿಗೆಯಲ್ಲಿ ರುಚಿ ರುಚಿಯಾದ ಹೋಟೆಲ್ ಶೈಲಿ ರಸಂ ನೀವು ಸಹ ಮಾಡಿರುತ್ತೀರಿ. ಆದರೆ ನಾವಿಂದು ಮನೆಯಲ್ಲಿ ಕಡಿಮೆ ವಸ್ತು ಬಳಸಿ ಮಾಡುವ ರಸಂ ಕುರಿತಾಗಿ ತಿಳಿಯೋಣ.

ಅದ್ರಲ್ಲೂ ಕೇವಲ 10 ನಿಮಿಷದೊಳಗೆ ರುಚಿ ರುಚಿಯಾದ ಹಾಗೆ ದೇಹಲ್ಲೂ ತಂಪೆನಿಸುವ ರಸಂ ಮಾಡುವ ಕುರಿತು ನಾವಿಲ್ಲಿ ತಿಳಿಯೋಣ. ಹಾಗೆ ಸ್ಪೆಷಲ್ ಆಗಿ ಇಂದು ಪೈನಾಪಲ್ ಬಳಸಿ ಮಾಡುವ ರಸಂ ಕುರಿತು ತಿಳಿಯೋಣ. ಈ ಪೈನಾಪಲ್ ರಸಂ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಪೈನಾಪಲ್ ರಸಂ ಮಾಡಲು ಬೇಕಾಗುವ ಪದಾರ್ಥಗಳು
- ಅನಾನಸ್
- ಕಾಳು ಮೆಣಸು
- ಜೀರಿಗೆ
- ಇಂಗು
- ಬೆಳ್ಳುಳ್ಳಿ
- ಟೊಮೆಟೋ
- ತೊಗರಿ ಬೇಳೆ
- ಅರಿಶಿನ ಪುಡಿ
- ಕೊತ್ತಂಬರಿ ಸೊಪ್ಪು
- ಕರಿಬೇವು
- ಸಾಸಿವೆ
- ಒಣ ಮೆಣಸಿನಕಾಯಿ
- ರುಚಿಗೆ ತಕ್ಕಷ್ಟು ಉಪ್ಪು
- ಅಡುಗೆ ಎಣ್ಣೆ
ಪೈನಾಪಲ್ ರಸಂ ಮಾಡುವ ವಿಧಾನವೇನು?
ಈ ರಸಂ ಮಾಡಲು ಮೊದಲೇ ತೊಗರಿ ಬೇಳೆ ಬೇಯಿಸಿಕೊಳ್ಳಬೇಕು. ಕುಕ್ಕರ್‌ನಲ್ಲಿ 2 ಕಪ್ ಬೇಳೆ ಹಾಕಿ ಅದಕ್ಕೆ ನೀರು ಹಾಕಿ 2 ಸೀಟಿ ಹೊಡೆಯಲು ಬಿಡಿ. ಅನಂತರ ತಗೆದಿಟ್ಟುಕೊಳ್ಳಿ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಕಾಳು ಮೆಣಸು, ಜೀರಿಗೆ, ಇಂಗು, ಅರಶಿಣ ಪುಡಿ, ಬೆಳ್ಳುಳ್ಳಿ ಹಾಕಿ ತರಿತರಿಯಾಗಿ ರುಬ್ಬಿ ತೆಗೆದಿಡಿ. ಈಗ ಮಿಕ್ಸಿ ಜಾರ್‌ಗೆ ಪೈನಾಪಲ್ ಹಣ್ಣು ಕತ್ತರಿಸಿ ಹಾಕಿ ಹಾಗೆ 2 ಟೊಮೆಟೋ ಸಹ ಹಾಕಿ ರುಬ್ಬಿಕೊಳ್ಳಿ.
ಈಗ ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ರುಬ್ಬಿಕೊಂಡಿರುವ ಮಸಾಲೆ, ಪೈನಾಪಲ್ ಹಾಗೂ ಟೊಮೆಟೋ ಪೇಸ್ಟ್ ಹಾಕಿ ಅನಂತರ ಬೇಯಿಸಿಕೊಂಡಿದ್ದ ಬೇಳೆ ಸಹ ಇದಕ್ಕೆ ಹಾಕಿ. ಅನಂತರ ನೀರು ಸಹ ಇದಕ್ಕೆ ಹಾಕಿಕೊಂಡು ಕೊತ್ತಂಬರಿ ಸೊಪ್ಪು, ಹಸಿ ಮೆಣಸು, ಉಪ್ಪು ಹಾಕಿ ಮಿಕ್ಸ್ ಮಾಡಿ ಒಲೆ ಮೇಲೆ ಇಟ್ಟು ಕುದಿಬರಲು ಬಿಡಿ.
ಇದು ಚೆನ್ನಾಗಿ ಕುದಿಬರಬೇಕು. ಹಾಗೆ ಇದಕ್ಕೆ ಬೇಕಿದ್ದ ಇಂಗು ಹಾಕಿಕೊಳ್ಳಿ. ಚೆನ್ನಾಗಿ ಕುದಿಬರಬೇಕು. ತಿಳಿ ಎಷ್ಟು ಬೇಕು ಎಂಬುದನ್ನು ನಿರ್ಧರಿಸಿ. 5 ನಿಮಿಷ ಕುದಿಬಂದ ಬಳಿಕ ಇದಕ್ಕೆ ಒಗ್ಗರಣೆ ಕೊಡಿ. ಎಣ್ಣೆಯಲ್ಲಿ ಸಾಸಿವೆ, ಜೀರಿಗೆ, ಒಣ ಮೆಣಸು, ಕರಿಬೇವು ಹಾಕಿ ಒಗ್ಗರಣೆ ಮಾಡಿ ಈ ರಸಂಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಪೈನಾಪಲ್ ರಸಂ ಸಿದ್ದವಾಗುತ್ತೆ. ಅನ್ನದೊಂದಿಗೆ ಸವಿಯುವ ಜೊತೆಗೆ ಇದನ್ನು ಸೂಪ್‌ನಂತೆಯೂ ನೀವು ಕುಡಿಯಬಹುದು. ಅನ್ನದೊಂದಿಗೆ ರುಚಿ ನೀಡುವ ಹಾಗೆ ಬಾಯಿ ರುಚಿಗೂ ಸಹ ಇದು ಉತ್ತಮ. ಸೂಪ್ ಕುಡಿದಂತಹ ರುಚಿ ನೀಡಲಿದೆ.



Click it and Unblock the Notifications
