Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ!
ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಶಿ ಬದಲಾವಣೆ ಹಾಗೆ ಸ್ಥಾನಪಲ್ಲಟವನ್ನು ಮುಖ್ಯ ವಿದ್ಯಮಾನ ಎಂದು ಪರಿಗಣಿಸಲಾಗುತ್ತದೆ. ಹಾಗೆ ಗ್ರಹಗಳ ನಕ್ಷತ್ರ ಬದಲಾವಣೆ ಕೂಡ ಬಹಳಷ್ಟು ಬದಲಾವಣೆಗಳಿಗೆ ಕಾರಣವಾಗುವುದು ನೋಡಬಹುದು. ಹಾಗೆ ಗ್ರಹಗಳ ನಕ್ಷತ್ರ ಬದಲಾವಣೆಗೆ ಮುಂದಾದಾಗ ಹಲವು ರೀತಿಯ ಶುಭ ಹಾಗೂ ಅಶುಭ ಯೋಗ ಸಹ ಉಂಟಾಗುವುದು ನೋಡಬಹುದು.
ಸದ್ಯ ಈಗ ಶುಕ್ರ ರೇವತಿ ನಕ್ಷತ್ರಕ್ಕೆ ಚಲಿಸುತ್ತಿದ್ದಾನೆ. ಮಾರ್ಚ್ 15ರಂದು ಶುಕ್ರ ತನ್ನ ನಕ್ಷತ್ರ ಬದಲಾಯಿಸುತ್ತಾನೆ. ಶುಕ್ರನನ್ನು ಸಂತೋಷ, ಸಂಪತ್ತು, ಪ್ರೀತಿ, ಐಷಾರಾಮಿ ಮತ್ತು ಸಮೃದ್ಧಿಯ ಅಂಶವೆಂದು ಪರಿಗಣಿಸಲಾಗುತ್ತದೆ. ಶುಕ್ರನು ಒಂದು ನಿರ್ದಿಷ್ಟ ನಕ್ಷತ್ರಕ್ಕೆ ಪ್ರವೇಶಿಸಿದಾಗ, ಅದು ಬಹುತೇಕ ಎಲ್ಲಾ ರಾಶಿಗಳ ಜೀವನದ ಮೇಲೆ ಪ್ರಭಾವ ಬೀರುತ್ತದೆ.

ಶುಕ್ರನ ನಕ್ಷತ್ರ ಬದಲಾವಣೆ ಪ್ರತಿಯೊಬ್ಬರ ಜೀವನದಲ್ಲಿಯೂ ಬದಲಾವಣೆಗೆ ಕಾರಣವಾಗಲಿದೆ. ಆರ್ಥಿಕ ವಿಚಾರಗಳಿಂದ ಹಿಡಿದು ಕೌಟುಂಬಿಕ, ವ್ಯಾಪಾರ ವ್ಯವಹಾರ ಹಾಗೆ ವೈಯಕ್ತಿಕ ಬದಲಾವಣೆಗಳಿಗೆ ಇದು ಕಾರಣವಾಗಲಿದೆ. ಹಾಗೆ ಮತ್ತೆ ಕೆಲವು ರಾಶಿಗಳಿಗೆ ಇದೇ ವಿಚಾರದಲ್ಲಿ ಅಶುಭ ಕಾರಕ ಎಂದು ಸಾಬೀತಾಗಲಿದೆ ಹಾಗಾದ್ರೆ ಈ ಶುಕ್ರನು ತನ್ನ ನಕ್ಷತ್ರ ಬದಲಾಯಿಸುವುದು ಯಾರಿಗೆಲ್ಲಾ ಲಾಭದಾಯಕ ಅನ್ನೋದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಮೇಷ ರಾಶಿ
ರೇವತಿ ನಕ್ಷತ್ರಕ್ಕೆ ಶುಕ್ರ ಚಲನೆಯಿಂದ ಮೇಷ ರಾಶಿಯವರಿಗೆ ಅನಾನುಕೂಲವಿದೆ. ನಿಮ್ಮ ಅತೀಯಾದ ಖರ್ಚುಗಳು ಆರ್ಥಿಕವಾಗಿ ನಿಮಗೆ ಹಾಗೂ ಕುಟುಂಬಕ್ಕೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಲಿದೆ. ಈ ಸಮಯದಲ್ಲಿ ಐಷಾರಾಮಿ ಮತ್ತು ಸಂತೋಷಗಳಿಗಾಗಿ ಅತಿಯಾದ ಖರ್ಚು ನಿಮ್ಮ ಕುಟುಂಬದ ಹಣಕಾಸಿನ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು. ಈ ಸಮಯದಲ್ಲಿ ವ್ಯವಹಾರ ಸಂಬಂಧವಾಗಿ ನೀವು ಬಹಳ ಎಚ್ಚರಿಕೆಯಿಂದ ಇರಬೇಕಿ, ಅನಗತ್ಯ ಖರ್ಚುಗಳಿಂದ ನಿಮ್ಮ ಹಣಕಾಸಿನ ಸ್ಥಿತಿಯೂ ನೀವು ಅಂದುಕೊಂಡ ರೀತಿಗಿಂತ ಸಮಸ್ಯೆಗಳ ತರಬಹುದು. ಸಾಲದ ಪ್ರಮಾಣ ಏರಿಕೆಯಾಗುವ ಕಾರಣದಿಂದ ನಿಮಗೆ ಚಿಂತೆಗಳು ಕಾಡಬಹುದು. ಅನಾರೋಗ್ಯ ಸಂಬಂಧಿತ ವಿಚಾರದಲ್ಲು ನಿಮಗೆ ನಿರೀಕ್ಷಿತ ಫಲಿತಾಂಶಗಳು ಸಿಗದೆ ಇರಬಹುದು.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಶುಕ್ರನ ಸಂಚಾರವು ಅವರ ಅದೃಷ್ಟದ ಮೇಲೆ ನೇರ ಪರಿಣಾಮ ಬೀರಬಹುದು. ಪರಿಣಾಮವಾಗಿ ಕೆಲಸದಲ್ಲಿ ಅಡೆತಡೆಗಳು ಉಂಟಾಗಬಹುದು. ಒಂದು ಯೋಜನೆ ಪೂರ್ಣಗೊಳ್ಳುವ ಹಂತದಲ್ಲಿ ನೀವು ವಿಳಂಬವನ್ನು ಎದುರಿಸಬಹುದು. ಇದು ಸಂಭಾವ್ಯವಾಗಿ ಆರ್ಥಿಕ ನಷ್ಟಗಳಿಗೆ ಕಾರಣವಾಗಬಹುದು. ಹೊಸ ಉದ್ಯೋಗ ಹುಡುಕುತ್ತಿದ್ದ ಮಂದಿಗೆ ಅಥವಾ ನಿರುದ್ಯೋಗಿಗಳು ಮತ್ತಷ್ಟು ಕಠಿಣ ದಿನಗಳ ಎದುರಿಸುತ್ತಾರೆ. ಪೂರ್ವಜರ ಆಸ್ತಿ ಕುರಿತಾದ ವಿಚಾರದಲ್ಲಿ ನಿಮಗೆ ಸಂತೋಷಕ್ಕಿಂತ ದೊಡ್ಡ ನೋವುಗಳಿವೆ. ಹೊಸ ವಿವಾದಗಳಿಗೆ ನೀವು ತೆರೆದುಕೊಳ್ಳಬಹುದು.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಶುಕ್ರನ ನಕ್ಷತ್ರ ಬದಲಾವಣೆಯು ಮಿಶ್ರಫಲಕ್ಕೆ ಕಾರಣವಾಗುತ್ತಿದೆ. ನೀವು ಅಂದುಕೊಂಡ ಕೆಲಸಗಳಲ್ಲಿ ನಿಧಾನಗತಿ ನೋಡಬಹುದು. ಬಹು ಸಮಯದಿಂದ ಉಳಿತಾಯ ಮಾಡಿದ್ದ ಹಣ ಕೈ ಸೇರದೆ ಇರಬಹುದು. ಅನಿರೀಕ್ಷಿತ ಅಥವಾ ಗುಪ್ತ ಕಾರಣಗಳಿಂದಾಗಿ ವ್ಯಾಪಾರ ಉದ್ಯಮಗಳು ಗಮನಾರ್ಹ ನಷ್ಟವನ್ನು ಅನುಭವಿಸಬಹುದು. ಆರೋಗ್ಯಕ್ಕೆ ಸಂಬಂಧಿಸಿದ ವೆಚ್ಚಗಳನ್ನು ಪೂರೈಸಲು ನೀವು ನಿಮ್ಮ ಉಳಿತಾಯವನ್ನು ಖರ್ಚು ಮಾಡಬೇಕಾಗಬಹುದು. ಹೊಸದಾಗಿ ನೀವು ಸಾಲ ಮಾಡಬೇಕಾಗಬಹುದು.
ಧನು ರಾಶಿ
ಧನು ರಾಶಿಯ ಮೇಲೆ ಶುಕ್ರನ ಪ್ರಭಾವವು ಹಲವು ರೀತಿಯ ಸಮಸ್ಯೆಗಳ ತರಬಹುದು. ಮನೆಯ ವಿಚಾರದಲ್ಲಿ ನಿಮಗೆ ಹಣಕಾಸಿನ ಒತ್ತಡ ಹೆಚ್ಚಾಗಲಿದೆ. ವಾಹನ ಸಂಬಂಧಿತ ವಿಚಾರವಾಗಿ ಅಡ್ಡಿಗಳು ಎದುರಾಗುವುದು ನೋಡಬಹುದು. ಅನಗತ್ಯ ವೆಚ್ಚಗಳಿಂದ ನಿಮ್ಮ ಆರ್ಥಿಕ ವಿಚಾರವು ಫಲ ನೀಡದೆ ಇರಬಹುದು. ದೂರ ಪ್ರಯಾಣಗಳು ನೀವು ಬಯಸಿದಂತಹ ಲಾಭ ಅಥವಾ ಫಲಿತಾಂಶ ನೀಡದೆ ಇರಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ವಿಶ್ವಾಸಾರ್ಹವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications