Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಟೀ ಜೊತೆ ಸವಿಯಲು-ಆಲೂ ಚೀಸ್ ಬಾಲ್
ಆಲೂ ಬೋಂಡಕ್ಕಿಂತ ಸ್ವಲ್ಪ ಭಿನ್ನವಾದ ತಿಂಡಿಯಿದು. ಇದನ್ನು ಆಲೂಗಡ್ಡೆ, ಚೀಸ್ ಹಾಗೂ ಬ್ರೆಡ್ ಈ ಮೂರು ಪ್ರಮುಖ ಸಾಮಾಗ್ರಿಗಳನ್ನು ಹಾಕಿ ಮಾಡಲಾಗುವುದು. ಇದನ್ನು ಮಾಡಲು ಅಧಿಕ ಸಾಮಾಗ್ರಿಗಳು ಬೇಕಾಗಿಲ್ಲ, ಹೆಚ್ಚಿನ ಶ್ರಮ ಪಡಬೇಕಾಗಿಲ್ಲ. ಅರ್ಧ ಗಂಟೆಯ ಒಳಗೆ ಈ ತಿಂಡಿಯನ್ನು ತಯಾರಿಸಬಹುದು.
ಟೀ ಜೊತೆ ಸವಿಯಲು ಏನಾದರೂ ಹೊಸ ರುಚಿಯ ತಿಂಡಿ ಮಾಡಬಯಸುವುದಾದರೆ ಇದನ್ನು ಟ್ರೈ ಮಾಡಬಹುದು:

ಬೇಕಾಗುವ ಸಾಮಾಗ್ರಿಗಳು
ಆಲೂಗೆಡ್ಡೆ4
ಚೀಸ್ 1 ಕಪ್
ಹಸಿ ಮೆಣಸಿನ ಕಾಯಿ 2
ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಕರಿ ಮೆಣಸಿನ ಪುಡಿ ಅರ್ಧ ಚಮಚ
ಬ್ರೆಡ್ ತುಂಡು 10-12 ಪೀಸ್
ಎಣ್ಣೆ 1 ಕಪ್
ತಯಾರಿಸುವ ವಿಧಾನ:
1. ಒಂದು ಬಟ್ಟಲಿನಲ್ಲಿ ಬೇಯಿಸಿ, ಸಿಪ್ಪೆ ಸುಲಿದ ಆಲೂಗಡ್ಡೆ ಹಾಕಿ ಚೆನ್ನಾಗಿ ಹಿಸುಕಬೇಕು. ನಂತರ ಚೀಸ್ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಿ ಕಲೆಸಬೇಕು.
2. ನಂತರ ಹಸಿ ಮೆಣಸಿನಕಾಯಿ, ಕರಿ ಮೆಣಸಿನ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರಣ ಮಾಡಿ.
3. ಬ್ರೆಡ್ ಚೂರುಗಳ ತುದಿಯ ಕಪ್ಪು ಭಾಗವನ್ನು ತೆಗೆದು ನಂತರ ಅದನ್ನು ನೀರಿನಲ್ಲಿ ಅದ್ದಿ, ನೀರನ್ನು ಹಿಂಡಿ ಅದರಲ್ಲಿ ಆಲೂಗಡ್ಡೆ-ಚೀಸ್ ಮಿಶ್ರಣವನ್ನು ಹಾಕಿ ಉಂಡೆ ಕಟ್ಟಿ.
4. ಎಣ್ಣೆಯನ್ನು ಬಾಣಲಿಯಲ್ಲಿ ಹಾಕಿ ಕಾಯಿಸಿ, ನಂತರ ಉಂಡೆಗಳನ್ನು ಹಾಕಿ ಕಂದು ಬಣ್ಣ ಬರುವಾಗ ತೆಗೆದರೆ ಆಲೂ-ಚೀಸ್ ಉಂಡೆ ರೆಡಿ.
ಇದನ್ನು ಮಾಡಿ ಟೀ ಜೊತೆ ಸವಿಯಲು ರುಚಿಯಾಗಿರುತ್ತದೆ.



Click it and Unblock the Notifications
