For Quick Alerts
ALLOW NOTIFICATIONS  
For Daily Alerts

ಚುಂಯ್‌ : ಗರಿಗರಿ ಜೀರಿಗೆ ರವಾದೋಸೆ!

By Super
|

ಮಸಾಲೆ ದೋಸೆ ಗೊತ್ತು, ಪೇಪರ್‌ ದೋಸೆ ಗೊತ್ತು, ಈರುಳ್ಳಿ ದೋಸೆ ಗೊತ್ತು, ಜೀರಿಗೆ-ರವೆ ದೋಸೆ ಗೊತ್ತಿಲ್ಲವೇ? ಸರಿ ಈಗಲೇ ಟ್ರೇಮಾಡಿ. ಬೆಳಗಿನ ತಿಂಡಿಗೆ ಅದರಲ್ಲೂ ಉದ್ಯೋಗಸ್ಥರಿಗೆ ಈ ದೋಸೆ ಕ್ಷಿಪ್ರ ಉಪಾಹಾರ!

ಸಾಮಗ್ರಿಗಳು :

ಅಕ್ಕಿ ಹಿಟ್ಟು -3 ಕಪ್‌(ಮೀಡಿಯಂ ಸೈಜ್‌)
ರವೆ(ಮೀಡಿಯಂ) -1/2 ಕಪ್‌(ಅದೇ ಸೈಜ್‌)
ತುರಿದ ತೆಂಗಿನಕಾಯಿ -ಒಂದು ಹಿಡಿ/ಒಂದೂವರೆ ಹಿಡಿ
ಜೀರಿಗೆ -2 ಟೇಬಲ್‌ ಸ್ಪೂನ್‌
ಹಸಿ ಮೆಣಸಿನಕಾಯಿ -2(ಹೆಚ್ಚಿರೋದು)
ಕೊತ್ತಂಬರಿ ಸೊಪ್ಪು -ಸ್ವಲ್ಪ
ಉಪ್ಪು-ರುಚಿಗೆ ತಕ್ಕಷ್ಟು
(ಇಷ್ಟು ಪದಾರ್ಥಗಳು ಇಬ್ಬರಿಗೆ ಸಾಕಾಗುತ್ತವೆ)

ಮಾಡುವ ವಿಧಾನ :

ಮೇಲೆ ತಿಳಿಸಿದ ಎಲ್ಲ ಪದಾರ್ಥಗಳನ್ನು ಒಂದು ಪಾತ್ರೆಯಲ್ಲಿ ಹಾಕಿ. ನಂತರ ಅವುಗಳನ್ನು ಸ್ವಲ್ಪ ಉಗುರು ಬೆಚ್ಚಗಿನ ನೀರಿನಲ್ಲಿ ಕಲಸಿಕೊಳ್ಳಬೇಕು. ಹೆಚ್ಚು ನೀರು ಹಾಕಬಾರದು.

ಈ ಮಿಶ್ರಣವನ್ನು ಮಿಕ್ಸಿಯಲ್ಲಿ ಹಾಕಿ ಸ್ವಲ್ಪ ನೀರಿನ ಜೊತೆ ನುಣ್ಣಗೆ ರುಬ್ಬಿ. ಆನಂತರ ಹಿಟ್ಟನ್ನು ಪಾತ್ರೆಯಲ್ಲಿ ಹಾಕಿ, ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿ, ಸ್ವಲ್ಪ ತೆಳ್ಳಗೆ ಮಾಡಿಕೊಳ್ಳಿ. ಗ್ಯಾಸ್‌ ಸ್ಟವ್‌ ಮೇಲೆ ತವೆಯನ್ನು ಇಟ್ಟು (ನಾನ್‌ ಸ್ಟಿಕ್‌ ಅಥವಾ ದೋಸೆ ಕಾವಲಿ) ತವೆ ಕಾದ ಮೇಲೆ ತೆಳ್ಳಗೆ ದೋಸೆ ಹಾಕಿ.

ಜೀರಿಗೆ-ರವೆ ದೋಸೆ ತಿನ್ನಲು ರುಚಿ, ಅದರಲ್ಲೂ ಬಿಸಿಬಿಸಿಯಾಗಿದ್ದಾಗ ಇನ್ನೂ ತುಂಬಾ ರುಚಿ. ಯಾವುದೇ ಚಟ್ನಿಯ ಜೊತೆಗಾದರೂ ಜೀರಿಗೆ ದೋಸೆ ಜೋಡಿಯಾಗುತ್ತದೆ. ಜೀರಿಗೆ ದೋಸೆ ಮಾಡೋದು ಎಷ್ಟು ಸುಲಭ ಅಲ್ವಾ, ಇವತ್ತೇ ಟ್ರೆೃ ಮಾಡಿ!

X
Desktop Bottom Promotion