For Quick Alerts
ALLOW NOTIFICATIONS  
For Daily Alerts

ಅವರೆಕಾಳಿನ ರೊಟ್ಟಿ

By Super
|
Avarekalu
ಈಗ ಅವರೆಕಾಯಿ ಕಾಲ. ಅವರೆ ಕಾಳಿನ ಸಾರು, ಉಪ್ಪಿಟ್ಟು ಎಲ್ಲಾ ತಿಂದು ನಿಮಗೆ ಬೋರ್‌ ಆಗಿರಬಹುದು. ಅವರೆಕಾಳಿನ ಬಗ್ಗೆ ವೈರಾಗ್ಯ ಬಂದಿರಬಹುದು. ಆದರೆ ಈ ಅವರೆಕಾಳಿನ ರೊಟ್ಟಿಯ ರುಚಿಯನ್ನು, ನೀವೂ ಸವಿಯಲೇ ಬೇಕು.

ಈ ರೊಟ್ಟಿ ಮಾಡೋದಕ್ಕೆ ಏನೇನ್‌ ಬೇಕು ಗೊತ್ತೆ ?

ಮೂರು ಕಪ್‌ ಅವರೆಕಾಳು, ಮೂರು ಕಪ್‌ ಅಕ್ಕಿ ಹಿಟ್ಟು, ಒಂದೂವರೆ ಕಪ್‌ ತೆಂಗಿನ ತುರಿ, ಸ್ವಲ್ಪ ಉಪ್ಪು, ಕೊತ್ತಂಬರಿ ಸೊಪ್ಪು, ಕರಿಬೇವು, ಒಂದೈದಾರು ಹಸಿಮೆಣಸಿನಕಾಯಿ, ರವಷ್ಟು ಇಂಗು(ಮಂಗನೂ ಅಡಿಗೆ ಮಾಡುತ್ತೆ ಅನ್ನುವಷ್ಟು ಖ್ಯಾತಿ ಇಂಗಿಗೆ ಇದೆ!), ಒಂದೂವರೆ ಕಪ್‌ ಎಣ್ಣೆ, ಒಂದೂವರೆ ಚಮಚ ಸಾಸಿವೆ ಮತ್ತು ಒಂದೂವರೆ ಚಮಚ ಜೀರಿಗೆ ಇದ್ದರೆ ಸಾಕು.

ಮಾಡೋದು ಹೇಗೆ?

ಒಗ್ಗರಣೆ ಹಾಕೋದನ್ನು ನಿಮಗೆ ಹೇಳಿಕೊಡುವ ಅವಶ್ಯಕತೆ ಇಲ್ಲ. ಸಾಸಿವೆ, ಜೀರಿಗೆ, ಇಂಗು ಹಾಕಿ ಒಗ್ಗರಣೆ ರೆಡಿ ಮಾಡಿ. ಮೊದಲೇ ಸಣ್ಣಸಣ್ಣದಾಗಿ ಹೆಚ್ಚಿಟ್ಟಿದ್ದ ಹಸಿ ಮೆಣಸಿನಕಾಯಿ, ಕೊತ್ತಂಬರಿಸೊಪ್ಪು, ಕರಿಬೇವನ್ನು ಈ ಒಗ್ಗರಣೆಗೆ ಸೇರಿಸಿ ಬಾಡಿಸಿ. ನಂತರ ಅವರೆ ಕಾಳು ಮತ್ತು ತೆಂಗಿನ ತುರಿ ಸೇರಿಸಿ ಹುರಿಯಿರಿ.

ಈ ಮಿಶ್ರಣಕ್ಕೆ ಮೂರು ಕಪ್‌ ನೀರು, ಉಪ್ಪು ಸೇರಿಸಿ ಬೇಯಿಸಿ. ಆಮೇಲೆ ಅಕ್ಕಿ ಹಿಟ್ಟು ಸೇರಿಸಿ ಕಲಸಿ. ಕಲಸಿದ ಮೇಲೆ ಉಂಡೆಗಳನ್ನು ಮಾಡಿ... ರೊಟ್ಟಿ ತಟ್ಟಿ... ಚೆನ್ನಾಗಿ ಬೇಯಿಸಿ, ಚೆನ್ನಾಗಿ ತಿನ್ನಿ!

English summary

Avare Roti | Avarekalu Rotti | ಅವರೆಕಾಳಿನ ರೊಟ್ಟಿ | ಪೌಷ್ಟಿಕ ಆಹಾರ

Avarekai Rotti makes a perfect item during this Avare season.
Story first published: Wednesday, March 28, 2012, 14:06 [IST]
X
Desktop Bottom Promotion