ಗರ್ಭಿಣಿಯರು ಉಪವಾಸ ಮಾಡಬಹುದೇ? ವೈದ್ಯರು ಏನು ಹೇಳುತ್ತಾರೆ?

Posted By: Arshad
Subscribe to Boldsky

ನವರಾತ್ರಿಯ ಸಂಭ್ರಮ ಶುರುವಾಗಿ ಎರಡು ಮೂರು ದಿನಗಳು ಕಳದಿವೆ...ಈ ಹಬ್ಬದ ಅತಿ ಮುಖ್ಯ ವಿಧಿ ಎಂದರೆ ಉಪವಾಸದ ಆಚರಣೆ. ಆದರೆ ಗರ್ಭಿಣಿಯರಿಗೆ ಈ ಅವಧಿಯಲ್ಲಿ ಉಪವಾಸವಿದ್ದರೆ ಅವರ ಆರೋಗ್ಯದ ಮೇಲೆ ಪರಿಣಾಮವಾಗಬಹುದು ಎಂಬ ವಿಷಯದ ಹೆಚ್ಚಾಗಿ ಚರ್ಚಿಸಲಾಗುತ್ತಿದೆ. ವೈದ್ಯರಲ್ಲಿ ಈ ಬಗ್ಗೆ ವಿಚಾರಿಸಿದಾಗ ಗರ್ಭಿಣಿಯ ಆರೋಗ್ಯವನ್ನು ಪರೀಕ್ಷಿಸಿದ ಬಳಿಕವೇ ಆಕೆ ಉಪವಾಸ ಆಚರಿಸಲು ಅರ್ಹರೋ ಎಂಬುದನ್ನು ತಿಳಿಸಬಹುದು, ಆದರೆ ಸಾಮಾನ್ಯ ಆರೋಗ್ಯ ಹೊಂದಿರುವ ಗರ್ಭಿಣಿಯರು ಒಂದು ವೇಳೆ ಮೂರು ತಿಂಗಳು ದಾಟಿದ್ದು ಆರು ತಿಂಗಳ ಒಳಗಿದ್ದರೆ ಉಪವಾಸ ಆಚರಿಸಬಹುದು, ಉಳಿದ ಹಂತಗಳಲ್ಲಿರುವ ಗರ್ಭಿಣಿಯರಿಗೆ ಉಪವಾಸ ಸೂಕ್ತವಲ್ಲ ಎಂದು ತಿಳಿಸುತ್ತಾರೆ.

ನವರಾತ್ರಿಯ ಉಪವಾಸವೆಂದರೆ ಅತಿ ಕಠಿಣವೇನೂ ಅಲ್ಲ, ಬದಲಿಗೆ ನಡುನಡುವೆ ಆರೋಗ್ಯಕರ ಆಹಾರವನ್ನು ಸೇವಿಸಲು ಅನುವುಮಾಡಿಕೊಡುತ್ತದೆ. ಇದೇ ಕಾರಣದಿಂದ ಹೆಚ್ಚಿನ ಗರ್ಭಿಣಿಯರಿಗೆ ಈ ಉಪವಾಸವನ್ನು ಆಚರಿಸಲು ಹೆಚ್ಚು ತೊಂದರೆಯಾಗದು. ಆದರೆ ಗರ್ಭಿಣಿಯರು ಹೆಚ್ಚಿನ ಅವಧಿ ಉಪವಾಸವಿರಬಾರದು. ಗರ್ಭದಲ್ಲಿ ಬೆಳೆಯುತ್ತಿರುವ ಕಂದನಿಗೆ ತಾಯಿಯ ಆಹಾರವೇ ಮೂಲವಾಗಿದ್ದು ತಾಯಿ ಉಪವಾಸವಿದ್ದರೆ ಮಗುವಿನ ಬೆಳವಣಿಗೆಗೆ ಅಡ್ಡಿಯಾಗಬಹುದು.

ಗರ್ಭಿಣಿಯರ ಆಹಾರ ಹೀಗಿದ್ದರೆ, ಮಗುವಿನ ಆರೋಗ್ಯ ಚೆನ್ನಾಗಿರುತ್ತದೆ

ಆದ್ದರಿಂದ ಗರ್ಭಾವಸ್ಥೆಯ ಯಾವುದೇ ಹಂತದಲ್ಲಿ ಉಪವಾಸ ಆಚರಿಸದಿರುವುದೇ ಆರೋಗ್ಯ ದೃಷ್ಟಿಯಿಂದ ಅಗತ್ಯವಾಗಿದೆ. ಆದರೆ ಧಾರ್ಮಿಕ ಕಾರಣಗಳಿಂದ ಗರ್ಭಿಣಿ ಉಪವಾಸವಿರಲೇಬೇಕೆಂಬ ಅನಿವಾರ್ಯತೆ ಹೊಂದಿದ್ದರೆ ಮಾತ್ರ ಕೆಲವು ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಅಗತ್ಯವಾಗಿದೆ ಎಂದು ವೈದ್ಯರು ತಿಳಿಸುತ್ತಾರೆ...

ಸಾಕಷ್ಟು ನೀರು ಕುಡಿಯಿರಿ

ಸಾಕಷ್ಟು ನೀರು ಕುಡಿಯಿರಿ

ಗರ್ಭದಲ್ಲಿರುವ ಮಗುವಿಗೆ ತಾಯಿ ಸೇವಿಸುವ ಆಹಾರವೇ ಪ್ರಧಾನವಾಗಿದ್ದು ಸಂಪೂರ್ಣವಾಗಿ ಇದನ್ನೇ ಅವಲಂಬಿಸಿರುತ್ತದೆ. ಗರ್ಭವಸ್ಥೆಯ ಯಾವುದೇ ದಿನದಲ್ಲಿ ನೀರು ಸಿಗದ ಹೊತ್ತು ಮಗುವಿಗೆ ಅಪಾಯಕಾರಿಯಾಗಬಹುದು. ನೀರಿಲ್ಲದೇ ಇರುವ ಹೊತ್ತು ತಾಯಿಗೂ ಸೂಕ್ತವಲ್ಲ. ಅಲ್ಲದೇ ಇತರರಿಗಿಂತ ಗರ್ಭಿಣಿಗೆ ಹೆಚ್ಚಿನ ನೀರಿನ ಅವಶ್ಯಕತೆ ಇರುವುದರಿಂದ ನೀರಿನ ಉಪವಾಸದಿಂದ ಇತರರಿಗಿಂತಲೂ ಬೇಗನೇ ಗರ್ಭಿಣಿ ನಿರ್ಜಲೀಕರಣಕ್ಕೆ ಒಳಗಾಗುವ ಭೀತಿ ಇರುವ ಕಾರಣ ನೀರನ್ನು ಕುಡಿಯುವುದನ್ನು ಮಾತ್ರ ನಿಲ್ಲಿಸಬಾರದು. ಸಾಕಷ್ಟು ನೀರು ಕುಡಿಯುತ್ತಿರಬೇಕು.

ವೈದ್ಯರ ಸಲಹೆ ಪಡೆಯಿರಿ

ವೈದ್ಯರ ಸಲಹೆ ಪಡೆಯಿರಿ

ಉಪವಾಸ ಆಚರಿಸಲೇಬೇಕೆಂದಿದ್ದರೆ ಮೊದಲು ನಿಮ್ಮ ವೈದ್ಯರ ಸಲಹೆ ಪಡೆಯಿರಿ. ಹೊರಗಿನಿಂದ ಎಲ್ಲವೂ ಸುಸೂತ್ರವಾಗಿಯೇ ಇದೆ ಎಂದು ಅನ್ನಿಸಿದರೂ ಗರ್ಭಕೋಶದಲ್ಲಿ ಕೆಲವು ಸೂಕ್ಷ್ಮ ಕ್ಲಿಷ್ಟತೆಗಳಿರಬಹುದು. ಇವನ್ನು ಕೇವಲ ವೈದ್ಯರು ಮಾತ್ರ ಕೆಲವು ಪರೀಕ್ಷೆಗಳಿಂದ ಗುರುತಿಸಬಲ್ಲರು. ಆದ್ದರಿಂದ ವೈದ್ಯರು ಅಪ್ಪಣೆ ನೀಡಿದ ಹೊರತು ಉಪವಾಸ ಮಾಡುವುದು ಸರ್ವಥಾ ಒಳ್ಳೆಯದಲ್ಲ. ಸಾಮಾನ್ಯವಾಗಿ ಎರಡನೆಯ ತ್ರೈಮಾಸಿಕ ಉಪವಾಸ ಆಚರಿಸಲು ಸುರಕ್ಷಿತ ಎಂಬುದು ಸಾಮಾನ್ಯ ಮನೋಭಾವನೆಯಾಗಿದ್ದರೂ ಈ ಅವಧಿಯಲ್ಲಿಯೂ ಉಪವಾಸ ಆಚರಿಸಲು ವೈದ್ಯರು ಅಪ್ಪಣೆ ನೀಡಿದರೆ ಮಾತ್ರವೇ ಆಚರಿಸಬೇಕು.

ಉಪ್ಪು ಅಗತ್ಯ

ಉಪ್ಪು ಅಗತ್ಯ

ಈ ಉಪವಾಸದಲ್ಲಿ ಕೆಲವರು ಉಪ್ಪನ್ನು ಸೇವಿಸುವುದಿಲ್ಲ. ಆದರೆ ಗರ್ಭಿಣಿಯರಿಗೆ ಉಪ್ಪು ಅಗತ್ಯವಾಗಿ ಬೇಕಾಗಿರುವ ಲವಣವಾಗಿದ್ದು ಉಪ್ಪಿನ ಕೊರತೆಯಿಂದ ದೇಹ ಬಳಲಬಹುದು. ಕಲ್ಲುಪ್ಪು ಅಥವಾ ಸೇಂಧಾ ಉಪ್ಪು ಗರ್ಭಿಣಿಯರಿಗೆ ಸೂಕ್ತವಾಗಿದ್ದು ಯಾವುದೇ ಕಾರಣಕ್ಕೂ ಉಪ್ಪನ್ನು ಸೇವಿಸದೇ ಇರಬಾರದು.

ಸಾಕಷ್ಟು ವಿಶ್ರಾಂತಿ ಪಡೆಯಿರಿ

ಸಾಕಷ್ಟು ವಿಶ್ರಾಂತಿ ಪಡೆಯಿರಿ

ಹಬ್ಬದ ಸಂಭ್ರಮದಲ್ಲಿ ಎಲ್ಲರೂ ಕುಣಿದಾಡುತ್ತಿರುವಾಗ ಗರ್ಭಿಣಿಯೂ ಸುಮ್ಮನೇ ಕುಳಿತಿರಲು ಸಾಧ್ಯವಿಲ್ಲ. ಈ ಚಟುವಟಿಕೆಗಳಲ್ಲಿ ಗರ್ಭಿಣಿ ಹೆಚ್ಚು ಆಯಾಸಗೊಳ್ಳಬಹುದು ಹಾಗೂ ಸಂಭ್ರಮದ ಭರದಲ್ಲಿ ಗಮನಕ್ಕೆ ಬರದೇ ಹೋಗಬಹುದು. ಆದ್ದರಿಂದ ಯಾವಾಗ ಸುಸ್ತು ಆಯಾಸವೆಂದು ಅನ್ನಿಸಿತೋ ತಕ್ಷಣವೇ ವಿಶ್ರಾಂತಿ ತೆಗೆದುಕೊಂಡುಬಿಡಬೇಕು. ಸಾಕಷ್ಟು ವಿಶ್ರಾಂತಿ ಹಾಗೂ ನಿದ್ದೆ ಗರ್ಭಿಣಿಗೆ ಹೆಚ್ಚು ಅಗತ್ಯವಾಗಿದೆ. ಉಪವಾಸದ ಅವಧಿಯಲ್ಲಿ ಹೆಚ್ಚಿನ ಕಾಲ ನಿದ್ರಿಸಿ ಕಳೆಯುವುದು ಒಂದು ಜಾಣತನದ ಕ್ರಮವಾಗಿದೆ. ಅಲ್ಲದೇ ಹಬ್ಬದ ಸಂಭ್ರದಲ್ಲಿ ಎಲ್ಲರ ನಡುವೆ ಇರುವುದೂ ಅಗತ್ಯ. ಎಲ್ಲರೂ ಅತ್ತ ಸಂಭ್ರಮಿಸುತ್ತಿರುವಾಗ ಗರ್ಭಿಣಿ ಒಂಟಿಯಾಗಿ ಪ್ರತ್ಯೇಕವಾಗಿದ್ದರೆ ಆಕೆಯ ಯೋಚನೆಗಳು ಋಣಾತ್ಮಕವಾಗಿ ಬದಲಾಗಬಹುದು. ಆದ್ದರಿಂದ ಉಪವಾಸ ಆಚರಿಸಲೇಬೇಕೆಂದಿದ್ದರೆ ವೈದ್ಯರ ಅಪ್ಪಣೆಯ ಮೇರೆಗೆ ಮಾತ್ರ ಸರಿಯಾದ ಕ್ರಮಗಳನ್ನು ಅನುಸರಿಸಿಯೇ ಆಚರಿಸಬೇಕು. ಇದರಿಂದ ತಾಯಿ ಹಾಗೂ ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ.

English summary

Navratri – Expert tips for fasting during pregnancy

Navratri is just around the corner and one of the most important customs during this period is fasting. The concept of fasting for pregnant women is debatable and many health care providers raise an eyebrow when asked about it. Women in their first trimester or in their third trimester should avoid fasting, but in case you want to fast, you may consult your doctor in this regard.