For Quick Alerts
ALLOW NOTIFICATIONS  
For Daily Alerts

ಮಕ್ಕಳಿಗೆ ಕಾಡುವ ಗೊರಕೆಯ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ

By Manu
|

ಗೊರಕೆ ಎಂಬುದು ನೀಡುವವರಿಗೆ ಸ್ವರ್ಗದ ಮತ್ತು ಕೇಳುವವರಿಗೆ ನರಕದ ಅನುಭವ ಎಂಬ ಕುಹಕ ಪ್ರಚಲಿತವಾಗಿದೆ. ಗೊರಕೆಯ ಕಾರಣದಿಂದ ವಿಚ್ಛೇದನಗಳೇ ಆಗಿವೆ. ಆದರೆ ಗೊರಕೆಯ ತೊಂದರೆ ಕೇವಲ ಸ್ಥೂಲಕಾಯದವರಲ್ಲಿ ಮಾತ್ರ ಇರುತ್ತದೆ ಎಂದರೆ ತಪ್ಪಾಗುತ್ತದೆ. ಇಂದು ಚಿಕ್ಕಮಕ್ಕಳೂ ಗೊರಕೆ ಹೊಡೆಯುವುದನ್ನು ತಜ್ಞರು ಕಂಡುಕೊಂಡಿದ್ದಾರೆ. ಗರ್ಭಿಣಿಯ ಗೊರಕೆ ಗರ್ಭದಲ್ಲಿರುವ ಮಗುವಿನ ಬೆಳವಣಿಗೆಯ ಮೇಲೂ ಪ್ರಭಾವ ಬೀರಿ ಹುಟ್ಟಿದ ಬಳಿಕ ಕಲಿಕಾ ಸಾಮಥ್ಯವೂ ಕಡಿಮೆಯಾಗುವುದನ್ನು ಸಂಶೋಧನೆಗಳ ಮೂಲಕ ಗಮನಿಸಲಾಗಿದೆ.

 How Snoring Affects Children

ಆದ್ದರಿಂದ ಚಿಕ್ಕ ಮಕ್ಕಳು ಗೊರಕೆ ಹೊಡೆಯುತ್ತಿದ್ದರೆ ಇದರ ಬಗ್ಗೆ ಹೆಚ್ಚಿನ ಅಸ್ಥೆ ವಹಿಸುವುದು ಅಗತ್ಯ. ಒಂದು ವೇಳೆ ಇದು ನಿರಂತರವಾಗಿದ್ದರೆ ಮುಂದಿನ ದಿನಗಳಲ್ಲಿ ಹೆಚ್ಚಿನ ತೊಂದರೆಗೆ ಕಾರಣವಾಗಬಲ್ಲುದು. ನಿದ್ದೆಯಲ್ಲಿ ನಡುನಡುವೆ ತಡೆತಡೆದು ಎಚ್ಚರಾಗುವ Sleep apnea ಎಂಬ ಸ್ಥಿತಿಗೆ ಗೊರಕೆ ಪ್ರಮುಖ ಕಾರಣವಾಗಿದೆ. ಯಾವುದೇ ವ್ಯಕ್ತಿಗೆ ಪ್ರತಿನಿತ್ಯ ಆರರಿಂದ ಎಂಟು ಗಂಟೆಗಳಷ್ಟು ಗಾಢನಿದ್ದೆ ಅಥವಾ ಯಾವುದೇ ತಡೆಯಿಲ್ಲದ ನಿದ್ದೆ ಅವಶ್ಯವಾಗಿದೆ.

ಆದರೆ ಗೊರಕೆಯಿಂದ ಈ ನಿದ್ದೆಯಲ್ಲಿ ಬಾಧತೆಯುಂಟಾದರೆ ಇದು ದಿನದ ಇತರ ಕಾರ್ಯಗಳಲ್ಲಿ ತೊಂದರೆ ಉಂಟುಮಾಡುತ್ತದೆ. ಕೆಲಸ ಅಥವಾ ಕಲಿಕೆಯಲ್ಲಿ ಏಕಾಗ್ರತೆಯ ಕೊರತೆ, ರಾತ್ರಿ ಹಾಸಿಗೆಯಲ್ಲಿ ಮೂತ್ರ ಮಾಡುವುದು, ಮಕ್ಕಳ ಬೆಳವಣಿಗೆಯ ಗತಿ ನಿಧಾನವಾಗುವುದು ಇತ್ಯಾದಿಗಳು ಈ ತೊಂದರೆಯ ಪರಿಣಾಮಗಳಾಗಿವೆ. ಗೊರಕೆಯ ಅಬ್ಬರಕ್ಕೆ ಕಡಿವಾಣ ಹಾಕುವ ಮನೆಮದ್ದು

ಆದ್ದರಿಂದ ಮಕ್ಕಳ ನಿದ್ದೆ ಯಾವುದೇ ತಡೆಯಿಲ್ಲದೇ ನಡೆಯುತ್ತಿದೆಯೇ ಎಂದು ಗಮನಿಸುವುದು ಪಾಲಕರ ಕರ್ತವ್ಯವಾಗಿದೆ. ವಿಶೇಷವಾಗಿ Sleep apnea ಸ್ಥಿತಿ ಇದೆಯೇ ಎಂದು ಗಮನಿಸಿ. ಏಕೆಂದರೆ ನಮ್ಮ ಹಿರಿಯರಿಂದ ನಾವು ತಿಳಿದುಕೊಂಡು ಬಂದಂತೆ ಗೊರಕೆ ಹೆಚ್ಚಿದ್ದಷ್ಟೂ ಸುಖವಾದ ನಿದ್ದೆ ಆಗಿದೆ ಎಂಬ ನಂಬಿಕೆ ತಪ್ಪು. ಆದ್ದರಿಂದ ವಿಶೇಷವಾಗಿ ಮಕ್ಕಳಲ್ಲಿ ಗೊರಕೆ ಕಂಡುಬಂದರೆ ತಜ್ಞರಲ್ಲಿ ತೋರಿಸಿ ಚಿಕಿತ್ಸೆ ಪಡೆದುಕೊಳ್ಳುವುದು ಅನಿವಾರ್ಯವಾಗಿದೆ.

ಈ ತೊಂದರೆಯನ್ನು ಎಷ್ಟು ಬೇಗನೇ ಕಂಡುಕೊಳ್ಳುತ್ತೇವೆಯೋ ಅಷ್ಟೂ ಒಳ್ಳೆಯದು. ಇಂದು ವೈದ್ಯವಿಜ್ಞಾನದಲ್ಲಿ ಈ ತೊಂದರೆಗಳಿಗೂ ಸಮರ್ಥವಾದ ಚಿಕಿತ್ಸಾ ವಿಧಾನಗಳಿವೆ. ಮಕ್ಕಳ ನಿದ್ದೆಯ ಅಭ್ಯಾಸ ಮತ್ತು ಗೊರಕೆಗ ತೀವ್ರತೆಯನ್ನು ಗಮನಿಸಿ ವೈದ್ಯರೇ ಸೂಕ್ತ ಚಿಕಿತ್ಸೆಯನ್ನು ನಿರ್ಧರಿಸುತ್ತಾರೆ.


ಸಾಮಾನ್ಯವಾಗಿ ಮಕ್ಕಳ ಗೊರಕೆಯನ್ನು ಲಘುವಾಗಿ ಪರಿಗಣಿಸುವ ಮೂಲಕ ಹೆಚ್ಚಿನ ಸಂದರ್ಭಗಳಲ್ಲಿ ಮಕ್ಕಳು ಅಗತ್ಯವಾದ ಚಿಕಿತ್ಸೆಯಿಂದ ವಂಚಿತರಾಗುತ್ತಾರೆ. ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಗೊರಕೆ ಇಲ್ಲದ ನಿದ್ದೆ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಪ್ರತಿ ಪಾಲಕರೂ ತಮ್ಮ ಮಕ್ಕಳ ನಿದ್ದೆಯನ್ನು ಗಮನಿಸುವುದು ಅಗತ್ಯ.
English summary

How Snoring Affects Children

If your kid has the habit of snoring then it may affect his or her focus and learning capacities, says a new research. Yes, snoring in children must be taken seriously according to researchers. Most of us snore occasionally which is known as periodic snoring. That is common but when snoring occurs daily, it is known as persistent snoring and that is a serious problem.
X
Desktop Bottom Promotion