Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
March 05 Horoscope: ಮನೆಯ ಕುರಿತಾಗಿದ್ದ ಚಿಂತೆ ದೂರಾಗಲಿದೆ!
ವೈದಿಕ ಶಾಸ್ತ್ರದ ಪ್ರಕಾರ ಮಾರ್ಚ್ 05 (March 05 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಈ ದಿನದ ಅಂತ್ಯದಲ್ಲಿ ಕೆಲವು ಸಮಸ್ಯೆಗಳು ಬರಬಹುದು. ನಿಮ್ಮ ಹಣಕಾಸಿನ ವಿಚಾರದಲ್ಲಿ ದೊಡ್ಡ ಒಪ್ಪಂದಗಳ ಮಾಡಿಕೊಳ್ಳದೆ ಇರುವುದು ಉತ್ತಮ. ಯಾರಿಗೂ ಮಾತು ನೀಡುವುದು, ಸಾಲ ನೀಡುವುದು ಹಾಗೆ ವಸ್ತುಗಳ ನೀಡಲು ಮುಂದಾಗದೆ ಇರುವುದು ಉತ್ತಮ.
ವೃಷಭ ರಾಶಿ
ವೃಷಭ ರಾಶಿ ಜನರಲ್ಲಿ ಈ ದಿನವು ಮಿಶ್ರಫಲವನ್ನು ತರಲಿದೆ. ಆಸ್ಪತ್ರೆ ಕುರಿತಾದ ಪ್ರಯಾಣಗಳಲ್ಲಿ ನೀವು ಭಾಗಿಯಾಗಬಹುದು. ಅಪಾಯಕಾರಿ ಸ್ಥಳ ಅಥವಾ ಕೆಲಸದಲ್ಲಿ ಭಾಗಿಯಾಗುವ ಮುನ್ನ ಎಚ್ಚರಿಕೆಯಿಂದಿರಿ. ವಾಹನ ಕುರಿತ ವಿಚಾರದಲ್ಲಿ ಸಮಸ್ಯೆಯಲ್ಲಿ ಸಿಲುಕಬಹುದು.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಈ ದಿನವು ಬಹಳ ಅನುಕೂಲಕರ. ನೀವು ಮಾಡಬೇಕಿದ್ದ ಕೆಲಸವನ್ನು ಶ್ರದ್ಧೆಯಿಂದ ಮಾಡುವುದು ಬಹಳ ಉತ್ತಮ ಫಲಿತಾಂಶಕ್ಕೆ ಕಾರಣವಾಗಲಿದೆ. ಯಾರಿಗೂ ಸಾಲ ನೀಡಬೇಡಿ. ಗೃಹಿಣಿಯರು ಇಂದು ಪ್ರಯಾಣ ಮಾಡಬಹುದು.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಈ ದಿನವು ಅಚ್ಚರಿಯ ಫಲಿತಾಂಶಗಳ ತರಬಹುದು. ಯಾರಿಂದಾದರು ಹಣ ಬರುವುದು ಬಾಕಿ ಉಳಿಸಿಕೊಂಡಿದ್ದರೆ ಮೊದಲ ಪ್ರಯತ್ನಕ್ಕೆ ಫಲ ಸಿಗಬಹುದು. ಪ್ರಾಮಾಣಿಕ ಕೆಲಸಕ್ಕೆ ಪ್ರಶಂಸೆ ಇದೆ. ಪ್ರೇಮಿಗಳಿಗೆ ಇಂದು ಉತ್ತಮ ಸಮಯ ಆಗಿರಲಿದೆ.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಇಂದು ಬಹಳ ಅನುಕೂಲಕರ ನೀವು ಮಾಡಬೇಕಿದ್ದ ಕೆಲಸಗಳ ಮಾಡಿ ಮುಗಿಸುವ ದಿನವಿದು. ಹಣಕಾಸು ವಿಚಾರದಲ್ಲಿ ಶುಭವಿದೆ. ಆಪ್ತರಿಗೆ ನಿಮ್ಮಿಂದ ಸಹಕಾರವಿದೆ. ಶುಭ ಕಾರ್ಯ ಸಂಬಂಧಿತ ಕೆಲಸದಲ್ಲಿ ಭಾಗಿಯಾಗುತ್ತೀರಿ. ನಿರುದ್ಯೋಗಿಗಳಿಗೆ ಶುಭ ಸಮಯ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಿಗೆ ಈ ದಿನವು ಬಹಳ ಅನುಕೂಲಕರವಾಗಿದೆ. ಯಾರಿಗಾದರು ಹಣ ನೀಡುವುದು ಬಾಕಿ ಉಳಿಸಿಕೊಂಡಿದ್ದರೆ ಶುಭವಿದೆ. ಪ್ರೇಮಿಗಳಿಗೆ ಅನುಕೂಲಕರ ದಿನ. ದೊಡ್ಡ ಕೆಲಸಗಳಲ್ಲಿ ನೀವು ಭಾಗಿಯಾಗುತ್ತೀರಿ. ಯಾರ ಜೊತೆಯೂ ಅನಾವಶ್ಯಕ ಕಲಹದಲ್ಲಿ ಭಾಗಿಯಾಬೇಡಿ.
ತುಲಾ ರಾಶಿ
ತುಲಾ ರಾಶಿ ಜನರಲ್ಲಿ ಈ ದಿನವು ಅನುಕೂಲ ತರಬಹುದು. ನೀವು ಮಾಡಬೇಕಿದ್ದ ಕೆಲಸವನ್ನು ಪೂರ್ಣ ಮಾಡುವಿರಿ. ನಿಮಗೆ ಅನಾರೋಗ್ಯ ಸಂಬಂಧಿತ ವಿಚಾರದಿಂದ ಮುಕ್ತಿ ಪಡೆಯುವ ಸಮಯವಾಗಲಿದೆ. ಉದ್ಯೋಗದ ಸ್ಥಳದಲ್ಲಿನ ಒತ್ತಡ ಕಡಿಮೆಯಾಗಲಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರಿಗೆ ಇಂದು ದಿನದ ಅಂತ್ಯದಲ್ಲಿ ಉತ್ತಮ ದಿನದ ನಿರೀಕ್ಷೆ ಇದೆ. ನಿಮ್ಮಿಂದ ಇಂದು ನೋವಾಗುವ ಸಾಧ್ಯತೆ ಇದೆ, ಹೀಗಾಗಿ ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಿ. ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ಸಮಯದೊಳಗೆ ನಿಮ್ಮ ಕೆಲಸಗಳ ಮುಗಿಸಿ.
ಧನು ರಾಶಿ
ಧನು ರಾಶಿ ಜನರಿಗೆ ಈ ದಿನವು ಮಿಶ್ರಫಲ ತರಲಿದೆ. ಇಂದು ದೊಡ್ಡ ಕೆಲಸಗಳ ಮಾಡುವ ದಿನವಾಗುತ್ತಿದೆ. ನಿಮ್ಮ ವಸ್ತುಗಳ ಮೇಲೆ ಗಮನವಿಡಿ. ಯಾರಿಂದಾದರು ಹಣ ಪಡೆಯುವುದು ನಿಮಗೆ ಕಷ್ಟವಾಗಬಹುದು. ಪ್ರೇಮಿಗಳು ಇಂದು ದೊಡ್ಡ ಸಮಸ್ಯೆಯಲ್ಲಿ ಸಿಲುಕಬಹುದು.
ಮಕರ ರಾಶಿ
ಮಕರ ರಾಶಿಯವರಿಗೆ ದಿನದ ಆರಂಭ ಅದ್ಭುತವಾಗಿರಲಿದೆ. ಯಾವುದಾದರು ಹಣಕಾಸಿನ ವಿಚಾರವಾಗಿ ಮನಸ್ತಾಪಗಳು ಮೂಡಬಹುದು. ದಾಂಪತ್ಯ ವಿಚಾರವಾಗಿ ನಿಮ್ಮ ಮನೆಯಲ್ಲಿ ಚರ್ಚೆಗಳು ನಡೆಯಬಹುದು. ಮನೆಯಲ್ಲಿ ಅನಗತ್ಯ ವಿಚಾರಕ್ಕೆ ನಿಮಗೆ ನೋವಾಗಬಹುದು. ಪ್ರಯಾಣದಲ್ಲಿ ಸುಖವಿದೆ.
ಕುಂಭ ರಾಶಿ
ನೀವು ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡಬೇಕಾದ ಅನಿವಾರ್ಯ ಪರಿಸ್ಥಿತಿಗೆ ಬರುವಿರಿ. ಆಪ್ತರೊಬ್ಬರ ಸಲಹೆಯನ್ನು ಪಾಲಿಸುವುದು ಉತ್ತಮ. ವಿದ್ಯಾರ್ಥಿಗಳಿಗೆ ಸಂಕಷ್ಟದ ದಿನ. ನೀವು ಮಾಡುವ ಖರ್ಚುಗಳ ಮೇಲೆ ನಿಗಾ ಇಡಿ. ಭವಿಷ್ಯದ ದೃಷ್ಟಿಯಲ್ಲಿ ಉಳಿತಾಯದ ಕಡೆ ಆಸಕ್ತಿ ಹೊಂದುವುದು ಉತ್ತಮ.
ಮೀನ ರಾಶಿ
ಮೀನ ರಾಶಿಯವರಿಗೆ ಈ ದಿನ ಮಿಶ್ರಫಲವಿದೆ. ಇದು ಶ್ರಮದಾಯಕ ಆಗುವುದು ನಿಮ್ಮಲ್ಲಿ ಆಯಾಸ ತರಲಿದೆ. ಬ್ಯಾಂಕಿಂಗ್ ವಿಚಾರಗಳು ನಿಧಾನವಾಗಲಿದೆ. ಯಾರಿಗಾದರು ಸಹಾಯ ಮಾಡುವ ಅವಕಾಶ ಪಡೆಯಲಿದ್ದೀರಿ. ಹಣಕಾಸು ವಿಚಾರದಲ್ಲಿ ನಿಮ್ಮ ನಿರ್ಧಾರಗಳನ್ನು ಮತ್ತೆ ಪರಿಶೀಲಿಸಿ ತೆಗೆದುಕೊಳ್ಳುವುದು ಉತ್ತಮ.



Click it and Unblock the Notifications