ಅಂಗೈಯ ಹುಟ್ಟು ಮಚ್ಚೆ-ವ್ಯಕ್ತಿಯ ವ್ಯಕ್ತಿತ್ವ ಹೇಳುವ ಭವಿಷ್ಯವಾಣಿ!

By: manu
Subscribe to Boldsky

ಭೂಮಿಯ ಮೇಲೆ ಇರುವ ಪ್ರತಿಯೊಬ್ಬ ವ್ಯಕ್ತಿಯೂ ಭಿನ್ನವಾಗಿದ್ದರೂ ಆತನ ದೇಹದ ಯಾವುದಾದರೊಂದು ಭಾಗದಲ್ಲಿ ಮಚ್ಚೆ ಎನ್ನುವುದು ಇದ್ದೇ ಇರುತ್ತದೆ. ಕೆಲವು ಸಲ ಏನೇ ಅವಘಡವಾದರೂ ಮಚ್ಚೆ ಮೂಲಕವೇ ವ್ಯಕ್ತಿಯ ಗುರುತನ್ನು ಪತ್ತೆ ಹಚ್ಚಲಾಗುತ್ತದೆ. ಸಣ್ಣದಾಗಲಿ ಅಥವಾ ದೊಡ್ಡದಾಗಲಿ ಮಚ್ಚೆ ದೇಹದಲ್ಲಿ ಇದ್ದೇ ಇರುತ್ತದೆ. ಕೆಲವರ ಮುಖ, ಕೈ ಹಾಗೂ ಕಾಲಿನ ಭಾಗದಲ್ಲಿ ಮಚ್ಚೆ ಇರುತ್ತದೆ. ಇದು ಕಣ್ಣಿಗೆ ಕಾಣುವಂತಿರುತ್ತದೆ. ಮಚ್ಚೆಯಲ್ಲಿ ಅಡಗಿದೆಯೇ ನಮ್ಮ ಭವಿಷ್ಯ?

ಮಚ್ಚೆಗಳು ನಮ್ಮ ಚರ್ಮದಲ್ಲಿ ಕೆಲವು ಸ್ಥಳಗಳಲ್ಲಿ ದಟ್ಟವಾಗುವ ವರ್ಣದ್ರವ್ಯವೇ ಹೊರತು ಇದು ಯಾವ ಕಾಯಿಲೆಯಾಗಲೀ ಇದರಿಂದ ಯಾವುದೇ ತೊಂದರೆಯಾಗಲೀ ಇಲ್ಲ. ಕೆಲವು ಇದ್ದ ಹಾಗೇ ಇದ್ದರೆ ಕೆಲವು ವರ್ಷಗಳೆದಂತೆ ಅಗಲವಾಗುತ್ತಾ ಹೋಗುತ್ತವೆ. ಇನ್ನೂ ಕೆಲವು ವರ್ಷಗಳೆದಂತೆ ಪುಟ್ಟ ದ್ರಾಕ್ಷಿ ಹಣ್ಣಿನಂತೆ ಚರ್ಮದ ಹೊರಕ್ಕೆ ತೂಗಾಡುತ್ತಿರುತ್ತದೆ. ಕೆಲವೊಮ್ಮೆ ಮಚ್ಚೆಗಳು ಧಿಡೀರನೇ ಯಾವುದೋ ಸ್ಥಳದಲ್ಲಿ ಪ್ರತ್ಯಕ್ಷವಾಗಿ ನಿಧಾನವಾಗಿ ಬೆಳೆಯುತ್ತಾ ಹೋಗುತ್ತದೆ. ಬೆರಳುಗಳ ಮೇಲಿನ ಮಚ್ಚೆ- ಜಾತಕವನ್ನೇ ಬಿಚ್ಚಿಡುತ್ತದೆ!

ಸಾಮಾನ್ಯವಾಗಿ ದೇಹದ ಕೆಲವೊಂದು ಭಾಗದಲ್ಲಿ ಇರುವಂತಹ ಮಚ್ಚೆಗಳು ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ. ಇನ್ನು ಕೆಲವು ಭಾಗದಲ್ಲಿದ್ದರೆ ಅದು ಅಪಶಕುನ ಎನ್ನುವ ಮೂಢನಂಬಿಕೆಯೂ ಇದೆ... ಅದು ಏನೇ ಇರಲಿ, ಆದರೆ ಒಂದು ವೇಳೆ ಮಚ್ಚೆಗಳು ಅಂಗೈಯಲ್ಲಿ ಇದ್ದರೆ ಅದರ ಅರ್ಥವೇನು ಎಂದು ತಿಳಿದುಕೊಳ್ಳಬೇಕೆಂದರೆ ಈ ಲೇಖನವನ್ನು ಮುಂದಕ್ಕೆ ಓದುತ್ತಾ ಹೋಗಿ......  

ಶುಕ್ರನ ನಡುಕಟ್ಟಿನಲ್ಲಿ ಮಚ್ಚೆ

ಶುಕ್ರನ ನಡುಕಟ್ಟಿನಲ್ಲಿ ಮಚ್ಚೆ

ಈ ಭಾಗದಲ್ಲಿ ಮಚ್ಚೆಯಿದ್ದರೆ ಅಂತವರು ಆದಷ್ಟು ಬೇಗೆ ನ್ಯಾಯ ಹಾಗೂ ಸದ್ಗುಣಗಳಿಂದ ದೂರ ಹೋಗುತ್ತಾರೆ ಎಂದು ಹೇಳಲಾಗುತ್ತದೆ.

ಚಂದ್ರನ ಬೆಟ್ಟದಲ್ಲಿ ಮಚ್ಚೆ

ಚಂದ್ರನ ಬೆಟ್ಟದಲ್ಲಿ ಮಚ್ಚೆ

ಈ ಭಾಗದಲ್ಲಿ ಮಚ್ಚೆಯಿದ್ದರೆ ಇಂತಹ ವ್ಯಕ್ತಿಗಳು ನೀರಿನಿಂದ ದೂರವಿರಬೇಕು. ಇಂತಹ ವ್ಯಕ್ತಿಗಳು ಬಾವಿ, ಕರೆ, ನದಿ ಮತ್ತು ಸಮುದ್ರದಿಂದ ದೂರವಿರಬೇಕು. ಮದುವೆ ಕೂಡ ವಿಳಂಬವಾಗುವುದನ್ನು ಇದು ಸೂಚಿಸುತ್ತದೆ.

ಗುರುವಿನ ನಡುಕಟ್ಟುವಿನಲ್ಲಿ ಮಚ್ಚೆ

ಗುರುವಿನ ನಡುಕಟ್ಟುವಿನಲ್ಲಿ ಮಚ್ಚೆ

ಈ ಭಾಗದಲ್ಲಿ ಮಚ್ಚೆ ಕಂಡು ಬಂದರೆ ಇಂತಹ ವ್ಯಕ್ತಿಗಳ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇಂತಹ ವ್ಯಕ್ತಿಗಳು ಭಾರೀ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇತರರಿಗೆ ಹೋಲಿಸಿದರೆ ಇಂತಹವರು ಹೆಚ್ಚು ಶ್ರಮ ವಹಿಸಬೇಕಾಗುತ್ತದೆ.

ಶನಿಯ ಬೆಟ್ಟದಲ್ಲಿ ಮಚ್ಚೆ

ಶನಿಯ ಬೆಟ್ಟದಲ್ಲಿ ಮಚ್ಚೆ

ಈ ಭಾಗದಲ್ಲಿ ಮಚ್ಚೆ ಕಂಡುಬರುವ ವ್ಯಕ್ತಿಗಳಲ್ಲಿ ಮದುವೆಯು ವಿಳಂಬವಾಗುತ್ತದೆ ಮತ್ತು ವೈಯಕ್ತಿಕ ಜೀವನವು ಸುಗಮವಾಗಿರುವುದಿಲ್ಲ. ಜತೆಗಾರರೊಂದಿಗೆ ಬೆರೆಯಲು ಅವರು ಕಷ್ಟಪಡುತ್ತಾರೆ.

ಸೂರ್ಯನ ಬೆಟ್ಟದಲ್ಲಿ ಮಚ್ಚೆ

ಸೂರ್ಯನ ಬೆಟ್ಟದಲ್ಲಿ ಮಚ್ಚೆ

ಈ ಭಾಗದಲ್ಲಿ ಮಚ್ಚೆ ಇರುವ ವ್ಯಕ್ತಿಯ ವೈಯಕ್ತಿಕ ಜೀವನದಲ್ಲಿ ಹಲವಾರು ರೀತಿಯ ಪರಿಣಾಮ ಉಂಟಾಗುತ್ತದೆ. ಅವರು ತಮ್ಮ ಸುತ್ತಲಿರುವ ವ್ಯಕ್ತಿಗಳಿಂದಲೇ ದೌರ್ಜನ್ಯಕ್ಕೆ ಒಳಗಾಗುತ್ತಾರೆ.

ಬುಧದ ನಡುಕಟ್ಟಿನಲ್ಲಿ ಮಚ್ಚೆ

ಬುಧದ ನಡುಕಟ್ಟಿನಲ್ಲಿ ಮಚ್ಚೆ

ಸಣ್ಣ ಬೆರಳಿನ ಕೆಳಭಾಗದಲ್ಲಿ ಈ ಮಚ್ಚೆಯು ಕಾಣಿಸಿಕೊಳ್ಳುತ್ತದೆ. ಇಂತಹ ಭಾಗದಲ್ಲಿ ಮಚ್ಚೆಯಿರುವ ವ್ಯಕ್ತಿಗಳು ಹಠಾತ್ ನಷ್ಟ, ಭೌತಿಕ ಮತ್ತು ಭಾವನಾತ್ಮಕ ನೋವಿಗೆ ಒಳಗಾಗುತ್ತಾರೆ.

English summary

Meaning Of Moles Present On Your Palms

According to the Shastras, moles on different body parts have certain indications about a person's past, present and future, his wealth and destiny.Check out on what exactly do these mole positions mean.
Story first published: Friday, April 21, 2017, 23:14 [IST]
Please Wait while comments are loading...
Subscribe Newsletter