ಬೆರಳುಗಳ ಮೇಲಿನ ಮಚ್ಚೆ- ಜಾತಕವನ್ನೇ ಬಿಚ್ಚಿಡುತ್ತದೆ!

By: Arshad
Subscribe to Boldsky

ಮಾನವರ ದೇಹದ ಮೇಲೆ ಅಲ್ಲಲ್ಲಿ ಇರುವ ಪುಟ್ಟ ಮಚ್ಚೆಗಳು ಆಳವಾದ ಅರ್ಥವನ್ನು ಹೊಂದಿವೆ. ಒಂದು ವೇಳೆ ಈ ಮಚ್ಚೆಗಳು ಕೆಲವು ನಿರ್ದಿಷ್ಟ ಭಾಗಗಳಲ್ಲಿ ಕಂಡುಬಂದರೆ ಇದರಲ್ಲಿ ಗೂಡಾರ್ಥವೂ ಇರುತ್ತದೆ.  ಮಚ್ಚೆಯಲ್ಲಿ ಅಡಗಿದೆಯೇ ನಮ್ಮ ಭವಿಷ್ಯ? 

ಗೂಡಾರ್ಥವನ್ನು ನೀಡುವ ಭಾಗಗಳಲ್ಲಿ, ಕಣ್ಣು, ಗದ್ದ, ಮೂಗು, ಬೆರಳು, ಹುಬ್ಬು, ಕಿವಿ, ತುಟಿ ಇತ್ಯಾದಿಗಳು ಸೇರಿವೆ. ಇಂದಿನ ಲೇಖನದಲ್ಲಿ ಬೆರಳುಗಳ ಮೇಲೆ ಮೂಡಿರುವ ಮಚ್ಚೆಗಳು ಯಾವ ಗೂಡಾರ್ಥವನ್ನು ಹೊಂದಿವೆ ಎಂಬುದನ್ನು ನೋಡೋಣ. ವಿಶೇಷವಾಗಿ ಬೆರಳುಗಳ ಮೇಲಿನ ಮಚ್ಚೆಗಳು ನಿಮ್ಮ ವ್ಯಕ್ತಿತ್ವದ ಬಗ್ಗೆ ಹೆಚ್ಚೇ ವಿವರಗಳನ್ನು ನೀಡುತ್ತವೆ.. ಮುಂದೆ ಓದಿ... 

ಉಂಗುರ ಬೆರಳಿನ ಮೊದಲ ಭಾಗದಲ್ಲಿದ್ದರೆ (ತುದಿಯಿಂದ ಮೊದಲ ಗಿಣ್ಣು)

ಉಂಗುರ ಬೆರಳಿನ ಮೊದಲ ಭಾಗದಲ್ಲಿದ್ದರೆ (ತುದಿಯಿಂದ ಮೊದಲ ಗಿಣ್ಣು)

ಈ ಭಾಗದಲ್ಲಿ ಮಚ್ಚೆ ಇರುವ ವ್ಯಕ್ತಿ ಸಾಮಾನ್ಯವಾಗಿ ತಪ್ಪು ನಿರ್ಧಾರಗಳನ್ನು ಕೈಗೋಳ್ಳುವ ಮೂಲಕ ಸಮಾಜದಲ್ಲಿ ಅವಗಣನೆಗೆ ಗುರಿಯಾಗಿ ಗೌರವವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಈ ಭಾಗದಲ್ಲಿ ಮಚ್ಚೆ ಇರುವವರು ಮುಂಗೋಪಿಗಳಾಗಿದ್ದು ತಮ್ಮದೇ ತರ್ಕ ಸರಿ ಎಂದು ವಾದಿಸುವವರಾಗಿರುತ್ತಾರೆ.

ಉಂಗುರ ಬೆರಳಿನ ಎರಡನೆಯ ಭಾಗ (ಮೊದಲ ಮತ್ತು ಎರಡನೆಯ ಗಿಣ್ಣುಗಳ ನಡುವೆ)

ಉಂಗುರ ಬೆರಳಿನ ಎರಡನೆಯ ಭಾಗ (ಮೊದಲ ಮತ್ತು ಎರಡನೆಯ ಗಿಣ್ಣುಗಳ ನಡುವೆ)

ಈ ವ್ಯಕ್ತಿಗಳ ವೈಯಕ್ತಿಕ ಸಂಬಂಧ ತುಂಬಾ ದುರ್ಬಲವಾಗಿದ್ದು ಸ್ನೇಹವನ್ನು ಉಳಿಸಿಕೊಳ್ಳಲು ಹೆಣಗಾಡುವವರಾಗಿರುತ್ತಾರೆ. ಇದು ಆ ವ್ಯಕ್ತಿಯ ಸಮಾಜದಲ್ಲಿ ಗೌರವಕ್ಕೆ ಕುಂದುಂಟಾಗಲು ಸಾಧ್ಯವಾಗಬಹುದು.

ಉಂಗುರ ಬೆರಳಿನ ಮೂರನೆಯ ಭಾಗ (ಎರಡನೆಯ ಮತ್ತು ಮೂರನೆಯ ಗಿಣ್ಣುಗಳ ನಡುವೆ)

ಉಂಗುರ ಬೆರಳಿನ ಮೂರನೆಯ ಭಾಗ (ಎರಡನೆಯ ಮತ್ತು ಮೂರನೆಯ ಗಿಣ್ಣುಗಳ ನಡುವೆ)

ಈ ವ್ಯಕ್ತಿಗಳಿಗೆ ತಮ್ಮ ಸಾಮರ್ಥ್ಯದ ಬಗ್ಗೆಯೇ ಅನುಮಾನವಿದ್ದು ಆತ್ಮವಿಶ್ವಾಸದ ಕೊರತೆಯಿಂದ ಹಿಂದುಳಿಯುತ್ತಾರೆ. ಅಲ್ಲದೇ ಇವರಲ್ಲಿ ಅತಿಯಾಸೆ ಹೆಚ್ಚಾಗಿದ್ದು ಇದಕ್ಕೆ ಪೂರಕವಾಗಿ ಕೈಗೊಳ್ಳುವ ಕಾರ್ಯಗಳು ಪ್ರಾರಂಭದಲ್ಲಿ ಲಾಭ ತರುವಂತೆ ಅನ್ನಿಸಿದರೂ ಕ್ರಮೇಣ ಇದು ಕಡಿಮೆಯಾಗುತ್ತಾ ಹೋಗುತ್ತದೆ.

ಉಂಗುರ ಬೆರಳಿನ ಬುಡದ ಗೆರೆಯ ಮೇಲಿದ್ದರೆ

ಉಂಗುರ ಬೆರಳಿನ ಬುಡದ ಗೆರೆಯ ಮೇಲಿದ್ದರೆ

ಹಸ್ತಕ್ಕೆ ಬೆರಳು ತಾಕಿರುವ ಭಾಗದ ಗೆರೆಯ ಮೇಲೆ ಮಚ್ಚೆ ಇದ್ದವರು ತಮ್ಮ ತಂದೆ ಹಾಗೂ ರಕ್ತಸಂಬಂಧಿಗಳೊಂದಿಗೂ ಕಲಹವನ್ನು ಹೊಂದಿರುತ್ತಾರೆ. ಅಲ್ಲದೇ ಇವರು ಸುಲಭವಾಗಿ ಸಮಾಜದ ಕೆಂಗಣ್ಣಿಗೆ ಗುರಿಯಾಗುವುದರಿಂದ ತಮ್ಮ ಗೌರವದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿರುತ್ತದೆ. ಮಣಿಕಟ್ಟಿನ ರೇಖೆಗಳು-ವ್ಯಕ್ತಿಯ ಆಯಸ್ಸು, ಆರೋಗ್ಯದ ರಹಸ್ಯ ಬಿಚ್ಚಿಡುತ್ತದೆ!

ಕಿರುಬೆರಳಿನ ಮೊದಲ ಭಾಗದಲ್ಲಿದ್ದರೆ (ತುದಿಯಿಂದ ಮೊದಲ ಗಿಣ್ಣು)

ಕಿರುಬೆರಳಿನ ಮೊದಲ ಭಾಗದಲ್ಲಿದ್ದರೆ (ತುದಿಯಿಂದ ಮೊದಲ ಗಿಣ್ಣು)

ಈ ವ್ಯಕ್ತಿಗಳು 'ತಕ್ಷಣವೇ ಹೇಗಾದರೂ ಹಣ ಮಾಡಬೇಕು' ಎಂಬ ಮಹತ್ವಾಕಾಂಕ್ಷೆ ಹೊಂದಿರುತ್ತಾರೆ. ಎಷ್ಟು ಹಣ ಕೂಡಿದರೂ ಸಾಕಾಗದೇ ಇನ್ನೂ ಬೇಕು ಎಂಬ ಹಪಾಹಪಿಯ ಕಾರಣ ತಮ್ಮ ಹಣವನ್ನು ಇವರು ಬೇಕಾದಷ್ಟು ವೃದ್ದಿಸಿದರೂ ಮಾನಸಿಕವಾಗಿ ಅತೃಪ್ತರೇ ಆಗಿರುತ್ತಾರೆ.

ಕಿರು ಬೆರಳಿನ ಎರಡನೆಯ ಭಾಗ (ಮೊದಲ ಮತ್ತು ಎರಡನೆಯ ಗಿಣ್ಣುಗಳ ನಡುವೆ)

ಕಿರು ಬೆರಳಿನ ಎರಡನೆಯ ಭಾಗ (ಮೊದಲ ಮತ್ತು ಎರಡನೆಯ ಗಿಣ್ಣುಗಳ ನಡುವೆ)

ಈ ಭಾಗದಲ್ಲಿ ಮಚ್ಚೆ ಇರುವ ವ್ಯಕ್ತಿಗಳು ಮಾತನಾಡುವ ತೊಂದರೆಯನ್ನು ಹೊಂದಿದ್ದು ಸಮಾಜದಲ್ಲಿ ಇದೇ ಕಾರಣಕ್ಕೆ ಬೆರೆಯಲು ಹಿಂಜರಿಯುತ್ತಾರೆ. ಹಾಗಾಗಿ ಇವರು ಸಮಾಜದಲ್ಲಿ ಗೌರವ ಪಡೆಯುವ ಬದಲಿಗೆ ತಮ್ಮ ಆಪ್ತರಿಂದಲೇ ಪ್ರೀತಿ ವಿಶ್ವಾಸಗಳನ್ನು ಪಡೆಯುವುದಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ.

ಕಿರು ಬೆರಳಿನ ಮೂರನೆಯ ಭಾಗ (ಎರಡನೆಯ ಮತ್ತು ಮೂರನೆಯ ಗಿಣ್ಣುಗಳ ನಡುವೆ)

ಕಿರು ಬೆರಳಿನ ಮೂರನೆಯ ಭಾಗ (ಎರಡನೆಯ ಮತ್ತು ಮೂರನೆಯ ಗಿಣ್ಣುಗಳ ನಡುವೆ)

ಈ ಭಾಗದಲ್ಲಿ ಮಚ್ಚೆ ಇರುವ ವ್ಯಕ್ತಿಗಳು ಸಂದರ್ಭಕ್ಕನುಸಾರವಾಗಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವವರಾಗಿದ್ದು ವಿಶೇಷವಾಗಿ ಹಣಕಾಸಿನ ಹೂಡಿಕೆಯಲ್ಲಿ ಹೆಚ್ಚಿನ ಸಾಮರ್ಥ ಪಡೆದಿರುತ್ತಾರೆ. ಆದರೆ ಮುಂದಿನ ದಿನಗಳಲ್ಲಿ ಇವರಿಗೆ ಭಾರೀ ನಷ್ಟವಾಗುವುದೆಂದೂ ಈ ಮಚ್ಚೆ ತಿಳಿಸುತ್ತದೆ.

ಕಿರು ಬೆರಳಿನ ಬುಡದ ಗೆರೆಯ ಮೇಲಿದ್ದರೆ

ಕಿರು ಬೆರಳಿನ ಬುಡದ ಗೆರೆಯ ಮೇಲಿದ್ದರೆ

ವೇದಗಳ ಪ್ರಕಾರ ಈ ಭಾಗದಲ್ಲಿ ಮಚ್ಚೆ ಇರುವವರು ತಮ್ಮ ಆತ್ಮೀಯರಿಂದ ನಿಧಾನವಾಗಿ ಮತ್ತು ಕ್ರಮೇಣವಾಗಿ ದೂರಾಗುತ್ತಾ ಬರುತ್ತಾರೆ. ಸಾಮಾನ್ಯವಾಗಿ ಈ ವ್ಯಕ್ತಿಗಳು ಕೆಟ್ಟ ರಾಜಕೀಯದತ್ತ ಒಲವು ತೋರುವುದೇ ಇದಕ್ಕೆ ಕಾರಣವಾಗಿದ್ದು ಪರಿಣಾಮವಾಗಿ ಆರೋಗ್ಯ ಮತ್ತು ಹಣಕಾಸಿನ ವಿಷಯದಲ್ಲಿ ನಷ್ಟ ಅನುಭವಿಸುವವರಾಗಿದ್ದಾರೆ. ಆದರೆ ಈ ಸ್ಥಿತಿಯಿಂದ ಇವರು ಹೊರಬರಲೂ ಸಮರ್ಥರಿರುತ್ತಾರೆ ಎಂದು ಈ ಮಚ್ಚೆ ತಿಳಿಸುತ್ತದೆ.

ತೋರು ಬೆರಳಿನ ಮೊದಲ ಭಾಗದಲ್ಲಿದ್ದರೆ (ತುದಿಯಿಂದ ಮೊದಲ ಗಿಣ್ಣು)

ತೋರು ಬೆರಳಿನ ಮೊದಲ ಭಾಗದಲ್ಲಿದ್ದರೆ (ತುದಿಯಿಂದ ಮೊದಲ ಗಿಣ್ಣು)

ಈ ಭಾಗದಲ್ಲಿ ಮಚ್ಚೆ ಇರುವವರಿಗೆ ತೀರಾ ಹೆಚ್ಚಿನ ಅಹಮ್ಮಿಕೆ ಅಥವಾ ಪ್ರತಿಷ್ಠೆ ಇರುತ್ತದೆ. ಇವರು ಯಾವುದೇ ವ್ಯಕ್ತಿಗಳೊಂದಿಗೆ ಬೆರೆತು ಅವರ ವಿಶ್ವಾಸ ಗಳಿಸುವಲ್ಲಿ ಸಿದ್ದಹಸ್ತರಾಗಿದ್ದು ಎದುರಿನವರು ಹೇಳುವುದನ್ನು ಗಮನವಿಟ್ಟು ಕೇಳುವವರೂ ಆಗಿದ್ದಾರೆ. ಸಾಮಾನ್ಯವಾಗಿ ಈ ವ್ಯಕ್ತಿಗಳು ಒಂಟಿಜೀವಿಗಳಾಗಿದ್ದು ತಮ್ಮ ಕುಟುಂಬ ಮತ್ತು ಸ್ನೇಹಿತರಿಂದ ಬೇರೆಯೇ ಆಗಿ ಅಭಿವೃದ್ದಿ ಪಡಲು ಇಚ್ಛಿಸುವವರಾಗಿದ್ದಾರೆ.

ತೋರು ಬೆರಳಿನ ಎರಡನೆಯ ಭಾಗ (ಮೊದಲ ಮತ್ತು ಎರಡನೆಯ ಗಿಣ್ಣುಗಳ ನಡುವೆ)

ತೋರು ಬೆರಳಿನ ಎರಡನೆಯ ಭಾಗ (ಮೊದಲ ಮತ್ತು ಎರಡನೆಯ ಗಿಣ್ಣುಗಳ ನಡುವೆ)

ಈ ಭಾಗದಲಿ ಮಚ್ಚೆ ಇರುವ ವ್ಯಕ್ತಿಗಳು ತಮ್ಮ ಭಾವನೆಗಳ ಮೇಲೆ ಹತೋಟಿಯಿಟ್ಟುಕೊಳ್ಳುವ ಅಪ್ರತಿಮ ಸಾಮರ್ಥ್ಯ ಹೊಂದಿರುತ್ತಾರೆ. ಇವರಿಗೆ ಜನರೊಂದಿಗೆ ಬೆರೆಯುವುದು ತುಂಬಾ ಕಷ್ಟದ ವಿಷಯವಾಗಿದ್ದು ಯಾವುದೇ ಸಂದರ್ಭದಲ್ಲಿ ಗಾಂಭೀರ್ಯವನ್ನು ಪ್ರಕಟಿಸುವ ಸಾಮಥ್ಯ ಇವರಿಗೆ ಕಡಿಮೆ ಇರುತ್ತದೆ.

ತೋರು ಬೆರಳಿನ ಮೂರನೆಯ ಭಾಗ (ಎರಡನೆಯ ಮತ್ತು ಮೂರನೆಯ ಗಿಣ್ಣುಗಳ ನಡುವೆ)

ತೋರು ಬೆರಳಿನ ಮೂರನೆಯ ಭಾಗ (ಎರಡನೆಯ ಮತ್ತು ಮೂರನೆಯ ಗಿಣ್ಣುಗಳ ನಡುವೆ)

ಈ ಭಾಗದಲ್ಲಿರುವ ಮಚ್ಚೆ ಇರುವ ವ್ಯಕ್ತಿಗಳು ಅನಾರೋಗ್ಯಕರ ಆಹಾರ ಕ್ರಮದ ಅಭ್ಯಾಸವನ್ನು ಹೊಂದಿದ್ದು ಇದರೊಂದಿಗೆ ಇನ್ನೂ ಹಲವು ಕೆಟ್ಟ ಅಭ್ಯಾಸಗಳನ್ನೂ ಹೊಂದಿರುತ್ತಾರೆ. ಸಂದರ್ಭ ಎದುರಾದರೆ ಇವರೆಷ್ಟು ಕಠಿಣ ಹೃದಯಿಗಳು ಎಂಬುದು ಆಗಲೇ ಗೊತ್ತಾಗುತ್ತದೆ.

ತೋರು ಬೆರಳಿನ ಬುಡದ ಗೆರೆಯ ಮೇಲಿದ್ದರೆ

ತೋರು ಬೆರಳಿನ ಬುಡದ ಗೆರೆಯ ಮೇಲಿದ್ದರೆ

ಈ ಭಾಗದಲ್ಲಿ ಮಚ್ಚೆ ಇರುವ ವ್ಯಕ್ತಿಗಳು ಸದಾ ಒತ್ತಡದಲ್ಲಿಯೇ ಇರುವ ವ್ಯಕ್ತಿಗಳಾಗಿದ್ದು ವಿವಾಹವನ್ನೂ ಅತಿ ತಡವಾಗಿ ಆಗುತ್ತಾರೆ. ಇದೇ ಕಾರಣಕ್ಕೆ ವೈವಾಹಿಕ ಜೀವನವೂ ಸುಖಕರವಾಗಿರದೇ ತೊಂದರೆಗಳಿಂದ ಕೂಡಿರುತ್ತದೆ.

ಮಧ್ಯ ಬೆರಳಿನ ಮೊದಲ ಭಾಗದಲ್ಲಿದ್ದರೆ (ತುದಿಯಿಂದ ಮೊದಲ ಗಿಣ್ಣು)

ಮಧ್ಯ ಬೆರಳಿನ ಮೊದಲ ಭಾಗದಲ್ಲಿದ್ದರೆ (ತುದಿಯಿಂದ ಮೊದಲ ಗಿಣ್ಣು)

ಈ ಭಾಗದಲ್ಲಿ ಮಚ್ಚೆ ಇರುವ ವ್ಯಕ್ತಿಗಳು ಸಾಮಾನ್ಯವಾಗಿ ಸೂಕ್ತ ನಿರ್ಧಾರ ಕೈಗೊಳ್ಳುವ ವ್ಯಕ್ತಿಗಳಾಗಿದ್ದು ವಿಶೇಷವಾಗಿ ಇತರರ ಪರವಾಗಿ ದಕ್ಷ ನಿರ್ಧಾರಗಳನ್ನು ಕೈಗೊಂಡು ಅವರ ಏಳ್ಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಸಾಮಾನ್ಯವಾಗಿ ಇವರ ಮೂಲಕ ಇವರ ಆಪ್ತರಿಗೆ ಅದೃಷ್ಟ ಒಲಿಯುತ್ತದೆ.

ಮಧ್ಯ ಬೆರಳಿನ ಎರಡನೆಯ ಭಾಗ (ಮೊದಲ ಮತ್ತು ಎರಡನೆಯ ಗಿಣ್ಣುಗಳ ನಡುವೆ)

ಮಧ್ಯ ಬೆರಳಿನ ಎರಡನೆಯ ಭಾಗ (ಮೊದಲ ಮತ್ತು ಎರಡನೆಯ ಗಿಣ್ಣುಗಳ ನಡುವೆ)

ವೇದಗಳ ಪ್ರಕಾರ ಈ ಭಾಗದಲಿಲ್ ಮಚ್ಚೆ ಇರುವವರು ಅತಿ ಅದೃಷ್ಟಶಾಲಿಗಳಾಗಿದ್ದಾರೆ ಹಾಗೂ ಅಕ್ಕಪಕ್ಕದವರನ್ನು ರಂಜಿಸುವವರೂ ಆಗಿರುತ್ತಾರೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಇವರು ಸದಾ ಅನಾರೋಗ್ಯದಿಂದ ಬಳಲುತ್ತಿರುತ್ತಾರೆ.

ಮಧ್ಯ ಬೆರಳಿನ ಎರಡನೆಯ ಭಾಗ (ಮೊದಲ ಮತ್ತು ಎರಡನೆಯ ಗಿಣ್ಣುಗಳ ನಡುವೆ)

ಮಧ್ಯ ಬೆರಳಿನ ಎರಡನೆಯ ಭಾಗ (ಮೊದಲ ಮತ್ತು ಎರಡನೆಯ ಗಿಣ್ಣುಗಳ ನಡುವೆ)

ಈ ಭಾಗದಲ್ಲಿ ಮಚ್ಚೆ ಇರುವ ವ್ಯಕ್ತಿಗಳು ಏಕಾಗ್ರತೆಯ ಕೊರತೆಯನ್ನು ಎದುರಿಸುತ್ತಾರೆ. ಆದ್ದರಿಂದ ತೀರ ಹೆಚ್ಚಿನ ಏಕಾಗ್ರತೆ ಬಯಸುವ ಕೆಲಸಗಳಿಂದ, ಉದಾಹರಣೆಗೆ ಶಸ್ತ್ರಚಿಕಿತ್ಸೆಯ ವೈದ್ಯರ ಕೆಲಸಗಳನ್ನು ಇವರು ಆರಿಸಿಕೊಳ್ಳಬಾರದು. ಅಲ್ಲದೇ ಇವರು ಸದಾ ಅನಾರೋಗ್ಯಪೀಡಿತರಾಗಿರುತ್ತಾರೆ.

ಮಧ್ಯ ಬೆರಳಿನ ಬುಡದ ಗೆರೆಯ ಮೇಲಿದ್ದರೆ

ಮಧ್ಯ ಬೆರಳಿನ ಬುಡದ ಗೆರೆಯ ಮೇಲಿದ್ದರೆ

ಈ ಭಾಗದಲ್ಲಿ ಮಚ್ಚೆ ಇರುವವರು ಜೀವನದಲ್ಲಿ ಸದಾ ಹೆಣಗಾಡುತ್ತಲೇ ಇರುತ್ತಾರೆ. ಇವರಿಗೆ ಸಮಾಜದಲ್ಲಿ ಪ್ರೇರಿತರಾಗಿ ಮತ್ತು ಬಲಿಷ್ಠರಾಗಿರಬೇಕೆಂದರೆ ಸಮಾಜದ ಎಲ್ಲಾ ವ್ಯಕ್ತಿಗಳೊಂದಿಗೆ ಉತ್ತಮ ಸಂಬಂಧವಿರಿಸಿಕೊಳ್ಳುವುದು ಅಗತ್ಯವಾಗಿರುತ್ತದೆ.

ಹೆಬ್ಬೆರಳಿನ ಮೊದಲ ಭಾಗದಲ್ಲಿದ್ದರೆ (ತುದಿಯಿಂದ ಮೊದಲ ಗಿಣ್ಣು)

ಹೆಬ್ಬೆರಳಿನ ಮೊದಲ ಭಾಗದಲ್ಲಿದ್ದರೆ (ತುದಿಯಿಂದ ಮೊದಲ ಗಿಣ್ಣು)

ಈ ಭಾಗದಲ್ಲಿ ಮಚ್ಚೆ ಇರುವ ವ್ಯಕ್ತಿಗಳು ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಅಸಮರ್ಥರಾಗಿದ್ದು ಇವರಿಗೆ ಒಳ ಅರಿವಿನ ಶಕ್ತಿಯೂ ತುಂಬಾ ಕಡಿಮೆ ಇರುತ್ತದೆ. ಇವರು ಯಾವುದೇ ಬಗೆಯ ಸವಾಲುಗಳನ್ನು ಎದುರಿಸಲು ಹಿಂಜರಿಯುವವರಾಗಿದ್ದು ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ವಿಫಲರಾಗುವವರಾಗಿರುತ್ತಾರೆ.

ಹೆಬ್ಬೆರಳಿನ ಎರಡನೆಯ ಭಾಗ (ಮೊದಲ ಮತ್ತು ಎರಡನೆಯ ಗಿಣ್ಣುಗಳ ನಡುವೆ)

ಹೆಬ್ಬೆರಳಿನ ಎರಡನೆಯ ಭಾಗ (ಮೊದಲ ಮತ್ತು ಎರಡನೆಯ ಗಿಣ್ಣುಗಳ ನಡುವೆ)

ಈ ಭಾಗದಲ್ಲಿ ಮಚ್ಚೆ ಇರುವ ವ್ಯಕ್ತಿಗಳಿಗೆ ಪ್ರಯಾಣಕ್ಕೆ ಕುರಿತಂತೆ ಹಲವು ತೊಂದರೆಗಳಿರುತ್ತವೆ. ಇವರು ಅತಿ ಹೆಚ್ಚಿನ ಕಲ್ಪನಾಶಕ್ತಿ ಹೊಂದಿರುವ ವ್ಯಕ್ತಿಗಳಾಗಿದ್ದು ಇವರು ತುಂಬಾ ಹೆಚ್ಚಾಗಿ ವಿಷಯಗಳನ್ನು ಯೋಜಿಸುತ್ತಾರೆ. ಆದರೆ ಇವರಿಗೆ ತಮ್ಮ ವಿವಾಹದ ಸಹಿತ ಇತರ ಯಾವುದೇ ಸಂಬಂಧದಲ್ಲಿ ಹೆಚ್ಚಿನ ಆಸಕ್ತಿ ಇರುವುದಿಲ್ಲ. ಶರೀರದ ಮೇಲಿನ 'ಮಚ್ಚೆ'- ವ್ಯಕ್ತಿತ್ವದ ವಿವರ ನೀಡುವ ಕನ್ನಡಿ!

 
English summary

What Do Moles On Your Fingers Reveal

Moles have a deeper meaning to them when they are present on the human body. If they are placed on certain points, it has a hidden meaning to it. Here, in this article, we are about to share some of the things that moles on your fingers reveal.
Subscribe Newsletter