Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಚ್ಚೆಯಲ್ಲಿ ಅಡಗಿದೆಯೇ ನಮ್ಮ ಭವಿಷ್ಯ?
ದೇಹದಲ್ಲಿ ಒಂದೂ ಮಚ್ಚೆ ಇಲ್ಲದಿರುವವರು ತುಂಬಾ ಕಮ್ಮಿ. ಕನಿಷ್ಠ ಒಂದು ಮಚ್ಚೆಯಾದರೂ ಇದ್ದೇ ಇರುತ್ತದೆ. ಈ ಮಚ್ಚೆಗಳ ಆಧಾರದ ಮೇಲೆ ನಮ್ಮ ಭವಿಷ್ಯ, ಗುಣ ಇವುಗಳನ್ನು ಹೇಳುವುದನ್ನು ಕೇಳಿರಬಹುದು. ಮೂಗಿನ ಮೇಲೆ ಮಚ್ಚೆ ಇದ್ದರೆ ಮುಂಗೋಪಿ, ನಾಲಗೆಯಲ್ಲಿ ಮಚ್ಚೆ ಇದ್ದವರು ಏನಾದರೂ ಹೇಳಿದರೆ ಅದು ನಿಜವಾಗುವುದು ಹೀಗೆ ಅನೇಕ ನಂಬಿಕೆಗಳು ನಮ್ಮಲ್ಲಿ ಇವೆ.
ಮಚ್ಚೆ ಬಗ್ಗೆ ಹೇಳುವಾಗ ನನ್ನೊಬ್ಬಳು ಫ್ರೆಂಡ್ ನೆನಪಾಗುತ್ತಾಳೆ. ಅವಳ ನಾಲಗೆಯಲ್ಲಿ ಮಚ್ಚೆ ಇತ್ತು, ಆದ್ದರಿಂದ ಅವಳು ಹೇಳಿದಾಗೆ ಆಗುವುದು ಎಂಬ ನಂಬಿಕೆ ನಮ್ಮ ಫ್ರೆಂಡ್ಸ್ ಬಳಗದಲ್ಲಿತ್ತು. ಅವಳ ಅದೃಷ್ಟವ ಅಥವಾ ದುರಾದೃಷ್ಟವ ಗೊತ್ತಿಲ್ಲ ಒಂದೆರೆಡು ಬಾರಿ ಅವಳು ಹೇಳಿದಂತೆ ನಡೆದಿತ್ತು. ಆದ್ದರಿಂದ ನಮ್ಮಲ್ಲಿ ಆ ನಂಬಿಕೆ ಮತ್ತಷ್ಟು ಬಲವಾಗಿತ್ತು. ಒಮ್ಮೆ ಏನಾಯಿತು ಅಂದರೆ ಪರೀಕ್ಷೆಗೆ ನಾವೆಲ್ಲಾ ಓದುತ್ತಾ ಕೂತಿದ್ದಾಗ ನಮ್ಮ ಗ್ರೂಪ್ ನಲ್ಲಿದ್ದ ಒಬ್ಬ ತರಲೆ ಫ್ರೆಂಡ್ ಅವಳ ಬುಕ್ ಅನ್ನು ಕಿತ್ತುಕೊಂಡ, ಅವಳು ಎಷ್ಟು ಕೇಳಿದರೂ ಕೊಡಲಿಲ್ಲ. ಅವಳಿಗೂ ಕೋಪ ಬಂತು, "ನೀನು ಪರೀಕ್ಷೆಯಲ್ಲಿ ಫೇಲ್ ಆಗುತ್ತೀಯ" ಎಂದಳು, ಹೇಳುವುದೇನೋ ಹೇಳಿದಳು ಅವನಿಗೆ ಮಾತ್ರವಲ್ಲ, ನಮಗೆಲ್ಲಾ ಭಯವಾಯಿತು, ಅವಳೂ ಪೇಚಾಡಿಕೊಂಡಳು. ಸ್ವಲ್ಪ ತರಲೆಯಾಗಿದ್ದರೂ ಅವನು ಪರೀಕ್ಷೆಯಲ್ಲಿ ಫೇಲ್ ಆಗಲಿ ಎಂದು ಅವಳೇನು ಬಯಸಲಿಲ್ಲ, ಕೋಪದಿಂದ ಹಾಗೇ ಹೇಳಿದ್ದಳು ಅಷ್ಟೇ. ಕೊನೆಗೂ ಪರೀಕ್ಷೆ ಬಂತು ನಮ್ಮ ಜೊತೆ ಅವನು ಪಾಸಾಗಿದ್ದ!
ಮಚ್ಚೆ ಸ್ವಾಭಾವಿಕವಾಗಿ ಬಂದಂತದ್ದು. ಕೆಲವರಿಗೆ ಮಚ್ಚೆ ಚಿಕ್ಕ ಚುಕ್ಕಿಯಾಗಿ ಕಂಡರೆ ಮತ್ತೆ ಕೆಲವರಿಗೆ ಅಂಗೈ ಅಗಲದಲ್ಲಿ ಇರುತ್ತದೆ. ಜೋತಿಷ್ಯದಲ್ಲಿ ಮಚ್ಚೆ ಶಾಸ್ತ್ರವಿದೆ. ಅಂದರೆ ಮಚ್ಚೆ ನೋಡಿ ಭವಿಷ್ಯ ಹೇಳುವುದು. ಅದರಲ್ಲೂ ಮಚ್ಚೆ ನಮ್ಮ ದೇಹದ ಯಾವ ಭಾಗದಲ್ಲಿದೆ ಅದರ ಮೇಲೆ ಭವಿಷ್ಯ ಹೇಳಲಾಗುವುದು. ದೇಹದಲ್ಲಿರುವ ಮಚ್ಚೆ ಭವಿಷ್ಯದ ಬಗ್ಗೆ ಏನು ಹೇಳುತ್ತದೆ ಎಂದು ನೋಡೋಣವೇ?

ಮಚ್ಚೆ ನೆತ್ತಿಯ ಬಲಭಾಗದಲ್ಲಿದ್ದರೆ
ಮಚ್ಚೆ ನೆತ್ತಿಯ ಬಲಭಾಗದಲ್ಲಿದ್ದರೆ ಅದೃಷ್ಟ ಲಕ್ಷ್ಮಿ ಅವರಿಗೆ ಒಲಿದಿರುತ್ತಾಳೆ ಎನ್ನುತ್ತಾರೆ.

ನೆತ್ತಿಯ ಎಡ ಭಾಗದಲ್ಲಿ ಮಚ್ಚೆ
ಮಚ್ಚೆ ನೆತ್ತಿಯ ಎಡ ಭಾಗದಲ್ಲಿದ್ದರೆ ಅವರಿಗೆ ಜೀವನದಲ್ಲಿ ಸಾಕಷ್ಟು ಕಷ್ಟಗಳು ಎದುರಾಗುವುದು ಎಂದು ಮಚ್ಚೆ ಶಾಸ್ತ್ರ ಹೇಳುತ್ತದೆ.

ಮಚ್ಚೆ ನಡು ನೆತ್ತಿಯಲ್ಲಿದ್ದರೆ
ಇವರು ಪ್ರಸಿದ್ಧ ವ್ಯಕ್ತಿಯಾಗುತ್ತಾರೆ, ಐಶ್ವರ್ಯವಂತರಾಗುತ್ತಾರೆ.

ಗಲ್ಲದಲ್ಲಿ
ಗಲ್ಲದಲ್ಲಿ ಮಚ್ಚೆ ಇದ್ದವರ ವೈವಾಹಿಕ ಜೀವನ ಅಷ್ಟೇನು ಚೆನ್ನಾಗಿರುವುದಿಲ್ಲ ಅನ್ನುತ್ತಾರೆ. ಆದರೆ ವೈವಾಹಿಕ ಜೀವನ ನಿಂತಿರುವುದು ಹೊಂದಾಣಿಕೆಯಲ್ಲಿ, ಮಚ್ಚೆಯಲ್ಲಿ ಅಲ್ಲ ಅಲ್ಲವೇ?

ಮಚ್ಚೆ ಬಲಗಣ್ಣಿನ ಮೇಲ್ಭಾಗದಲ್ಲಿದ್ದರೆ
ಈ ರೀತಿ ಮಚ್ಚೆ ಇದ್ದರೆ ಅವರ ಸಂಗಾತಿ ಅವರನ್ನು ತುಂಬಾ ಪ್ರೀತಿಸುತ್ತಾರೆ ಎಂದು ಮಚ್ಚೆ ಶಾಸ್ತ್ರ ಹೇಳುತ್ತದೆ.

ಮಚ್ಚೆ ಎಡ ಕಣ್ಣಿನ ಮೇಲ್ಭಾಗದಲ್ಲಿದ್ದರೆ
ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುವುದು.

ಕೆನ್ನೆಯಲ್ಲಿ ಇದ್ದರೆ
ಮಚ್ಚೆ ಬಲಗೆನ್ನೆಯಲ್ಲಿದ್ದರೆ ಅದೃಷ್ಟ ಲಕ್ಷ್ಮಿ ಒಲಿಯುವವಳು, ಎಡ ಭಾಗದಲ್ಲಿದ್ದರೆ ಕಷ್ಟ ಅನ್ನುವ ನಂಬಿಕೆ ಇದೆ.

ತುಟಿಯಲ್ಲಿ ಮಚ್ಚೆ ಇದ್ದರೆ
ತುಟಿಯಲ್ಲಿ ಮಚ್ಚೆ ಇದ್ದವರಿಗೆ ಲೈಂಗಿಕಾಸಕ್ತಿ ತುಂಬಾ ಇರುತ್ತದೆ ಎಂದು ಹೇಳುತ್ತಾರೆ.

ಕಿವಿಯ ಮೇಲೆ ಮಚ್ಚೆ ಇದ್ದರೆ
ಕಿವಿಯ ಮೇಲೆ ಮಚ್ಚೆ ಇದ್ದರೆ ಆಯಸ್ಸು ಕಡಿಮೆ ಎಂದು ಹೇಳುತ್ತಾರೆ. ಆದರೆ ಕಿವಿಯ ಮೇಲೆ ಮಚ್ಚೆ ಇದ್ದೂ ದೀರ್ಘಾಯುಸ್ಸು ಹೊಂದಿರುವವರನ್ನೂ ಕಾಣುತ್ತೇವೆ.

ಕತ್ತಿನಲ್ಲಿ ಮಚ್ಚೆ
ಕತ್ತಿನಲ್ಲಿ ಮಚ್ಚೆ ಇರುವವರು ವೈಭೋಗದ ಜೀವನ ಶೈಲಿ ನಡೆಸುತ್ತಾರೆ ಹಾಗೂ ದೀರ್ಘಾಯುಸ್ಸು ಹೊಂದಿರುತ್ತಾರೆ.

ಕೈಯಲ್ಲಿ ಮಚ್ಚೆ
ಬಲಗೈಯ ಮಚ್ಚೆ ಇರುವವರು ತುಂಬಾ ಧೈರ್ಯ ಶಾಲಿಗಳಾಗಿರುತ್ತಾರೆ. ಎಡ ಕೈಯಲ್ಲಿ ಮಚ್ಚೆ ಇರುವವರಿಗೆ ಪುತ್ರ ಭಾಗ್ಯವಿದೆ ಎನ್ನಲಾಗುವುದು.

ಮೂಗಿನ ಮೇಲೆ ಮಚ್ಚೆ
ಮೂಗಿನ ಮೇಲೆ ಮಚ್ಚೆ ಇರುವವರು ತಮ್ಮ ಜೀವನದ ಹೆಚ್ಚಿನ ಪಾಲನ್ನು ಪ್ರಯಾಣದಲ್ಲಿ ಕಳೆಯುತ್ತಾರೆ, ಹೊಸ-ಹೊಸ ಸ್ಥಳಗಳನ್ನು ನೋಡುತ್ತಾರಂತೆ.

ಅಂಗೈಯಲ್ಲಿ ಮಚ್ಚೆ
ಬಲಗೈಯಲ್ಲಿ ಮಚ್ಚೆ ಇದ್ದರೆ ಅದೃಷ್ಟ , ಎಡ ಕೈಯಲ್ಲಿ ಇದ್ದರೆ ಅದಕ್ಕೆ ವಿರುದ್ಧ ಎಂದು ಮಚ್ಚೆ ಶಾಸ್ತ್ರ ಹೇಳುತ್ತದೆ.

ಕಾಲಿನಲ್ಲಿ ಮಚ್ಚೆ ಇದ್ದರೆ
ಕಾಲಿನಲ್ಲಿ ಮಚ್ಚೆ ಇರುವವರು ತುಂಬಾ ಪ್ರಯಾಣ ಮಾಡುತ್ತಾರೆ ಎಂದು ಹೇಳುತ್ತದೆ.

ಮಚ್ಚೆ ಕಣ್ಣು ರೆಪ್ಪೆಗಳ ನಡುವೆ ಇದ್ದರೆ
ಕಣ್ಣು ರೆಪ್ಪೆಗಳ ನಡುವೆ ಮಚ್ಚೆ ಇರುವವರಿಗೆ ವಿದೇಶಕ್ಕೆ ಹೋಗುವ ಯೋಗವಿದೆಯಂತೆ.

ಸೊಂಟದಲ್ಲಿ ಮಚ್ಚೆ ಇದ್ದರೆ
ಸೊಂಟದಲ್ಲಿ ಮಚ್ಚೆ ಇದ್ದರೆ ಐಶ್ವರ್ಯವಂತರಾಗಿರುತ್ತಾರಂತೆ.

ಬೆನ್ನಿನಲ್ಲಿ ಇದ್ದರೆ
ಬೆನ್ನಿನಲ್ಲಿ ಮಚ್ಚೆ ಇರುವವರು ಇತರರನ್ನು ಅವಲಂಬಿಸುತ್ತೀರಾ, ಅಲ್ಲದೆ ಜನರು ಅವರನ್ನು ಹಿಂದಿನಿಂದ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಎನ್ನಲಾಗುವುದು.

ಹೊಕ್ಕಳಿನಲ್ಲಿ ಮಚ್ಚೆ
ಹೊಕ್ಕಳಿನಲ್ಲಿ ಮಚ್ಚೆ ಇರುವವರಿಗೆ ಲೈಂಗಿಕಾಸಕ್ತಿ ಅಧಿಕ ಹಾಗೂ ಮಕ್ಕಳ ಯೋಗ ತುಂಬಾನೇ ಇದೆ.

ಎಡ ಭಾಗದ ತೋಳಿನಲ್ಲಿ ಮಚ್ಚೆ
ಎಡತೋಳಿನಲ್ಲಿ ಮಚ್ಚೆ ಇರುವವರು ಸ್ವಲ್ಪ ಅಂಜಿಕೆಯ ಸ್ವಭಾವದವರಾಗಿರುತ್ತಾರೆ.

ಬಲ ತೋಳಿನಲ್ಲಿ ಮಚ್ಚೆ
ಬಲ ತೋಳಿನಲ್ಲಿ ಮಚ್ಚೆ ಇರುವವರು ಧೈರ್ಯ ಇರುವವರು ಹಾಗೂ ಸಾಧಿಸಿದ ಛಲ ಇರುವವರು ಎಂದು ಹೇಳುತ್ತಾರೆ.
ಅಂದ ಹಾಗೆ ಈ ಮಚ್ಚೆ ಶಾಸ್ತ್ರದಲ್ಲಿ ನಿಮಗೆ ನಂಬಿಕೆ ಇದೆಯೇ?



Click it and Unblock the Notifications