ಎಂತಹ ಹುಚ್ಚು ಜನರಪ್ಪ? ವಿವಾಹಕ್ಕೂ ಮುನ್ನವೇ ದೈಹಿಕ ಸಂಪರ್ಕ ಮಾಡುತ್ತಾರೆ!

By: Arshad
Subscribe to Boldsky

ಈ ದೇಶದಲ್ಲಿ ಓರ್ವ ಮಹಿಳೆ ನಿರ್ಭಯದಿಂದ ರಾತ್ರಿಹೊತ್ತು ಒಬ್ಬಳೇ ಓಡಾಡಬಹುದು ಎಂದು ನೀವು ಕಡೆಯ ಬಾರಿ ಯಾವಾದ ಕೇಳಿದ್ದಿರಿ? ಪ್ರಸ್ತುತ ವಿಶ್ವದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಪರಿಗಣಿಸಿದರೆ ಗಾಂಧೀಜಿಯವರು ಕಂಡಿದ್ದ ಈ ಕನಸು ಸಾಧ್ಯವಾಗಲಾರದೇನೋ ಅಂಬ ಅನುಮಾನ ಮೂಡುತ್ತದೆ. ಈ ಜಗತ್ತಿನಲ್ಲಿ ಮಹಿಳೆಯರಿಗೆ ಮಾತ್ರವಲ್ಲ, ಇತರರಿಗೂ ಸಾಕಷ್ಟು ಸುರಕ್ಷತೆ ಇಲ್ಲವಾಗಿದೆ.

ಆದರೆ ಈ ಭಾವನೆಗೆ ವ್ಯತಿರಿಕ್ತವಾದ ಸ್ವಾತಂತ್ರ್ಯವೊಂದನ್ನು ಸಮಾಜವೇ ನೀಡಿರುವ ಬುಡಕಟ್ಟು ಜನಾಂಗದವರ ಬಗ್ಗೆ ಕೇಳಿದ್ದೀರಾ? ಹೌದು, ಇಂತಹ ಒಂದು ಬುಡಕಟ್ಟು ಜನಾಂಗವಿದ್ದು ಇಲ್ಲಿ ಮಹಿಳೆಯರು ತಮಗೆ ಬೇಕಾದವರೊಂದಿಗೆ ಕೂಡುವ ಅಥವಾ ಇಷ್ಟವಿಲ್ಲದ ಪತಿಯನ್ನು ತ್ಯಜಿಸುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ. ಅಷ್ಟೇ ಅಲ್ಲ, ವಿಚ್ಛೇದನದ ಬಳಿಕ ಹಿಂದಿನ ಪತಿ ಹೊಂದಿದ್ದ ಗುಡಿಸಲು ಹಾಗೂ ಪ್ರಾಣಿಗಳೂ ಆಕೆಯದ್ದಾಗುತ್ತವೆ. ವಿಚಿತ್ರವಾದರೂ ಅಸಾಧ್ಯ ಎನ್ನಿಸಿತೇ? ಆದರೆ ಟ್ಯೂರೇಗ್ ಎಂಬ ಬುಡಕಟ್ಟು ಜನಾಂಗದಲ್ಲಿ ಈ ವಿಧಿ ಸಾವಿರಾರು ವರ್ಷಗಳಿಂದ ಪ್ರಚಲಿತದಲ್ಲಿದೆ. ಬನ್ನಿ, ಇವರ ಬಗ್ಗೆ ಹೆಚ್ಚಿನ ವಿವರಗಳನ್ನು ಅರಿಯೋಣ...

ಈ ಬುಡಕಟ್ಟು ಜನಾಂಗ ಎಲ್ಲಿದೆ?

ಈ ಬುಡಕಟ್ಟು ಜನಾಂಗ ಎಲ್ಲಿದೆ?

ವಿಶ್ವದಲ್ಲಿಯೇ ಅತಿ ಹೆಚ್ಚು ಕಷ್ಟಸಹಿಷ್ಣುಗಳು ಎಂಬ ಪಟ್ಟವನ್ನು ಪಡೆದಿರುವ ಈ ಜನಾಂಗವೇ 'ಟ್ಯೂರೇಗ್'. ವಿಶ್ವದ ಅತಿ ದೊಡ್ಡ ಮರುಭೂಮಿಯಾದ ಸಹಾರ ಮರುಭೂಮಿಯ ಅತಿಯಾದ ಬಿಸಿ ಮತ್ತು ಅತಿಯಾದ ಚಳಿಯನ್ನು ಸಹಿಸಿಕೊಂಡು ಬಾಳುತ್ತಾ ಬಂದಿರುವ ಇವರು ಉತ್ತರ ಆಫ್ರಿಕಾದ ದೇಶಗಳಾದ ಮಾಲಿ, ನೈಜರ್, ಲಿಬ್ಯಾ, ಆಲ್ಜೀರಿಯಾ ಹಾಗೂ ಛಾಡ್ ಗಳಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ.

ಇವರು ಮುಸ್ಲಿಂ ಸಮುದಾಯವನ್ನು ಅನುಸರಿಸುತ್ತಾರೆ

ಇವರು ಮುಸ್ಲಿಂ ಸಮುದಾಯವನ್ನು ಅನುಸರಿಸುತ್ತಾರೆ

ಮುಸ್ಲಿಮರು ಎಂದ ತಕ್ಷಣ ಹೆಚ್ಚಿನ ಎಲ್ಲರ ಮನಸ್ಸಿಗೆ ಬರುವುದು ಬುರ್ಖಾ ಮತ್ತು ಮುಖವನ್ನು ಮುಚ್ಚಿದ ದಾವಣಿ. ಆದರೆ ಇದಕ್ಕೆ ವ್ಯತಿರಿಕ್ತವೆಂಬಂತೆ ಟ್ಯೂರೇಗ್ ಮಹಿಳೆಯರು ಮುಖವನ್ನು ಮುಚ್ಚುವುದಿಲ್ಲ. ಬದಲಿಗೆ ತಮ್ಮ ಸುಂದವ ಮುಖವನ್ನು ಪುರುಷರು ಸ್ಪಷ್ಟವಾಗಿ ನೋಡಬೇಕೆಂದು ಬಯಸುತ್ತಾರೆ. ಅಂದರೆ ಹುಡುಗಿಯರು ಸಹಾ ಹುಡುರಷ್ಟೇ ಸಮಾನವಾದ ಸ್ವಾತಂತ್ರ್ಯ ಪಡೆದೇ ಬೆಳೆಯುತ್ತಾರೆ.

 ಆದರೆ ಪುರುಷರು ಇಲ್ಲಿ ಮುಖ ಮುಚ್ಚುತ್ತಾರೆ

ಆದರೆ ಪುರುಷರು ಇಲ್ಲಿ ಮುಖ ಮುಚ್ಚುತ್ತಾರೆ

ಈ ಪುರುಷರನ್ನು 'ಸಹಾರಾದ ನೀಲಿ ಪುರುಷರು' ಎಂಬ ಅನ್ವರ್ಥನಾಮದಿಂದಲೂ ಕರೆಯಲಾಗುತ್ತದೆ. ಏಕೆಂದರೆ ಈ ಪುರುಷರು ಹೆಚ್ಚಿನ ಸಮಯದಲ್ಲಿ ತಮ್ಮ ಮುಖವನ್ನು ನೀಲಿ ಬಣ್ಣದ ಮುಂಡಾಸಿನಿಂದ ತಲೆಯಿಂದ ಕುತ್ತಿಗೆಯವರೆಗೂ ಸುತ್ತಿಕೊಂಡಿರುತ್ತಾರೆ. ವರ್ಷಗಟ್ಟಲೇ ಹೀಗೆ ನೀಲಿ ಬಣ್ಣದ ಮುಖವನ್ನು ಮುಚ್ಚಿಕೊಂಡು ಆ ಬಿರುಬಿಸಿಲಿನಲ್ಲಿ ತಿರುಗಾಡುವ ಕಾರಣ ಬಟ್ಟೆಯ ನೀಲಿ ಬಣ್ಣ ಕೊಂಚ ಚರ್ಮಕ್ಕೂ ತಟ್ಟಿದಂತಿರುವ ಕಾರಣ ಈ ಅನ್ವರ್ಥನಾಮ ಬಂದಿದೆ.

ಮಹಿಳೆಯರಿಗಿಲ್ಲಿ ಹೆಚ್ಚಿನ ಪುರುಷರೊಂದಿಗೆ ಕೂಡುವ ಸ್ವಾತಂತ್ರ್ಯವಿದೆ

ಮಹಿಳೆಯರಿಗಿಲ್ಲಿ ಹೆಚ್ಚಿನ ಪುರುಷರೊಂದಿಗೆ ಕೂಡುವ ಸ್ವಾತಂತ್ರ್ಯವಿದೆ

ಮಹಿಳೆಯರು ಒಂದು ಸಮಯದಲ್ಲಿ ಒಂದೇ ಪತಿಯನ್ನು ಹೊಂದಿರುವುದು ಕಡ್ಡಾಯವಾದರೂ ವಿವಾಹದ ಹೊರತಾಗಿ ಇತರ ಪುರುಷರೊಂದಿಗೆ ಸಂಬಂಧ ಹೊಂದಬಹುದು. ಪತಿ ಇಷ್ಟವಾಗಲಿಲ್ಲವಾದರೆ ಆತನಿಗೆ ವಿಚ್ಛೇದನ ನೀಡಿ ಆತನಿಂದ ಪಡೆದ ಮಕ್ಕಳು, ಆತನ ಗುಡಿಸಲು ಹಾಗೂ ಪ್ರಾಣಿಗಳ ಒಡೆತನವನ್ನು ಹೊಂದುತ್ತಾಳೆ.

ಆದರೆ ಇದಕ್ಕೂ ಕೆಲವು ನಿಯಮಗಳಿವೆ

ಆದರೆ ಇದಕ್ಕೂ ಕೆಲವು ನಿಯಮಗಳಿವೆ

ವಿವಾಹದ ಹೊರಗಿನ ಸಂಬಂಧ ಪಡೆಯಲು ಕೆಲವು ಕಟ್ಟುಪಾಡುಗಳನ್ನು ಅನುಸರಿಸಬೇಕಾಗುತ್ತದೆ. ಈ ಸಂಬಂಧಗಳನ್ನು ಹಾಡು ಹಗಲೇ ಎಲ್ಲರೆದುರು ಪಡೆಯುವಂತಿಲ್ಲ. ಬದಲಿಗೆ ಪುರುಷ ಕತ್ತಲಾದ ಬಳಿಕವೇ ಮಹಿಳೆಯನ್ನು ಭೇಟಿಯಾಗಿ ಮರುದಿನ ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನವೇ ಅಲ್ಲಿಂದ ನಿರ್ಗಮಿಸಬೇಕಾಗುತ್ತದೆ. ಒಂದು ಸಮೀಕ್ಷೆಯ ಪ್ರಕಾರ ಹಿಂದಿನ ದಿನಗಳಲ್ಲಿ ಮನೆಯಿಂದ ಹೊರಹೋದ ಪುರುಷರು ಜೀವಂತ ವಾಪಸ್ ಬರುವ ಯಾವುದೇ ಖಾತರಿ ಇಲ್ಲದಿದ್ದಾಗ ಮಹಿಳೆಯರು ನಿಸರ್ಗ ಬಯಕೆಯಿಂದ ವಂಚಿತರಾಗಬಾರದು ಎಂದು ಅಂದಿನ ಹಿರಿಯರು ಮಾಡಿದ್ದ ವ್ಯವಸ್ಥೆ ಇರಬಹುದು ಎಂದು ಹೇಳಲಾಗುತ್ತದೆ. ಕಾರಣವೇನೇ ಇರಲಿ, ಇಂದು ವಿಶ್ವದ ಹಲವೆಡೆ ವರದಕ್ಷಿಣೆಗಾಗಿ ಮಹಿಳೆಯರನ್ನು ಬಲಿಪಶುಗಳಾಗಿಸುವ ಪದ್ದತಿ ಇರುವಾಗ ಮಹಿಳೆಗೆ ಅಗತ್ಯಕ್ಕೂ ಹೆಚ್ಚೇ ಅನಿಸುವಷ್ಟು ಸ್ವಾತಂತ್ರ್ಯವನ್ನು ನೀಡಿರುವ ಈ ಜನಾಂಗದ ಬಗ್ಗೆ ಕುತೂಹಲ ಹುಟ್ಟುವುದಂತೂ ನಿಜ. ಈ ಬಗ್ಗೆ ನಿಮಗೇನೆನಿಸಿತು ಎಂಬುದನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ಖಂಡಿತಾ ತಿಳಿಸಿ.

English summary

A Tribe Where Women Are Free To Have Sex Before Wedding

When was the last time you heard about a woman walking free without fear? There are times when you would have heard all this in history as there is hardly anything that is safe in this big bad world. But do you know about a tribe where the women get all the freedom that they wish to have? They are free to have sex and divorce their husbands and yet own the tents and the animals that the man had once owned..
Subscribe Newsletter