For Quick Alerts
ALLOW NOTIFICATIONS  
For Daily Alerts

ಮನೆಯೊಳಗೆ ಪಾದರಕ್ಷೆ ನಿಷೇಧ- ಇಲ್ಲಿದೆ ವೈಜ್ಞಾನಿಕ ಸತ್ಯಾಸತ್ಯತೆ

ಭಾರತದ ಹೊರತಾಗಿ ವಿಶ್ವದ ಹಲವು ದೇಶಗಳಲ್ಲಿ ಚಪ್ಪಲಿಯನ್ನು ಮನೆಯೊಳಗೆ ಕೊಂಡೊಯ್ಯುವುದಿಲ್ಲ. ಭಾರತದಲ್ಲಿಯೂ ಹೆಚ್ಚಿನ ಮನೆಗಳಲ್ಲಿ ಮೊದಲ ಕೋಣೆಯೊಳಕ್ಕೆ ಕೊಂಡೊಯ್ಯಬಹುದಾದರೂ ಒಳಗಣ ಇತರ ಕೋಣೆಗಳಿಗೆ ಮಾತ್ರ ಸರ್ವಥಾ ಕೊಂಡೊಯ್ಯುವುದಿಲ್ಲ.

By Manu
|
ಮನೆಯೊಳಗೆ ಪಾದರಕ್ಷೆಗಳನ್ನ ನಿಷೇಧ ಮಾಡಲು ಕಾರಣವೇನು? ಇಲ್ಲಿದೆ ವೈಜ್ಞಾನಿಕ ಮಹತ್ವ? | Oneindia Kannada

ಭಾರತ ಮತ್ತು ಭಾರತೀಯರ ಬಗ್ಗೆ ಅತೀವ ಆಸಕ್ತಿ ಕೆರಳಿಸುವ ಹಲವು ಸಂಪ್ರದಾಯಗಳಲ್ಲಿ ಪಾದರಕ್ಷೆಗಳನ್ನು ಮನೆಯೊಳಗೆ ಕೊಂಡೊಯ್ಯದಿರುವ ವಿಧಿಯೂ ಒಂದು. ಸಾಮಾನ್ಯವಾಗಿ ಇಡಿಯ ಭಾರತದಲ್ಲಿ ಬಹುತೇಕ ಎಲ್ಲಾ ಧರ್ಮಗಳಲ್ಲಿಯೂ ಮನೆಯೊಳಗೆ ಹೋಗಬೇಕಾದರೆ ಪಾದರಕ್ಷೆಯನ್ನು ಕಳಚಿಟ್ಟೇ ಬರೆಯ ಪಾದಗಳಲ್ಲಿ ಒಳಗೆ ಅಡಿಯಿಡುವಂತೆ ಸೂಚಿಸಲಾಗುತ್ತದೆ. ಆದರೆ ಇದು ಹೀಗೇಕೆ ಎಂದು ಗೊತ್ತೇ? ನಾವು ಧರಿಸಿದ ಪಾದರಕ್ಷೆ ನಮ್ಮ ವ್ಯಕ್ತಿತ್ವ ಬಿಂಬಿಸುವುದೇ?

ಈ ಪ್ರಶ್ನೆಗೆ ಅತಿ ಸಾಮಾನ್ಯವಾದ ಉತ್ತರವೆಂದರೆ ಹೊರಗಿನ ನೆಲದಲ್ಲಿ ನಡೆದಾಡಿ ಬಂದಾಗ ಪಾದರಕ್ಷೆಗಳ ಕೆಳಭಾಗದಲ್ಲಿ ಅಂಟಿರುವ ಧೂಳು, ಕಲ್ಮಶಗಳು ಮನೆಯೊಳಗೆ ಬರುತ್ತವೆ, ಇದನ್ನು ಸ್ವಚ್ಛಗೊಳಿಸಲು ಹೆಚ್ಚಿನ ಶ್ರಮ ಬೇಕಾಗುತ್ತದೆ. ಒಂದು ವೇಳೆ ಈಗ ತಾನೇ ಒರೆಸಿ ಸ್ವಚ್ಛಗೊಳಿಸಿದ ನೆಲದ ಮೇಲೆ ಚಪ್ಪಲಿ ತೊಟ್ಟು ನಡೆದಾಡಿ ಪಾದರಕ್ಷೆಯ ಛಾಪು ಮೂಡಿಸಿದರೆ ತಕ್ಷಣವೇ ಒರೆಸಿದವರಿಂದ ಬೈಗಳು ಖಾತರಿ.

ಭಾರತದ ಹೊರತಾಗಿ ವಿಶ್ವದ ಹಲವು ದೇಶಗಳಲ್ಲಿ ಚಪ್ಪಲಿಯನ್ನು ಮನೆಯೊಳಗೆ ಕೊಂಡೊಯ್ಯುವುದಿಲ್ಲ. ಭಾರತದಲ್ಲಿಯೂ ಹೆಚ್ಚಿನ ಮನೆಗಳಲ್ಲಿ ಮೊದಲ ಕೋಣೆಯೊಳಕ್ಕೆ ಕೊಂಡೊಯ್ಯಬಹುದಾದರೂ ಒಳಗಣ ಇತರ ಕೋಣೆಗಳಿಗೆ ಮಾತ್ರ ಸರ್ವಥಾ ಕೊಂಡೊಯ್ಯುವುದಿಲ್ಲ. ಬನ್ನಿ, ಇದರ ಹಿಂದಿನ ಕಾರಣವೇನು ಎಂಬುದನ್ನು ನೋಡೋಣ......


ಮನೆಯೇ ಒಂದು ದೇವಸ್ಥಾವವಿದ್ದಂತೆ

ಮನೆಯೇ ಒಂದು ದೇವಸ್ಥಾವವಿದ್ದಂತೆ

ದೇವರ ಅಸ್ತಿತ್ವವನ್ನು ಬಹುವಾಗಿ ನಂಬುವ ಭಾರತೀಯರಿಗೆ ಮನೆಯೂ ಒಂದು ಮಂದಿರವಿದ್ದಂತೆ. ಮನೆಯೊಳಗೆ ನಡೆಯುವ ಪೂಜೆ, ಪ್ರಾರ್ಥನೆ, ನಮಾಜುಗಳ ಪರಿಣಾಮವಾಗಿ ಮನೆಯೊಳಗೆ ಮಂದಿರದಷ್ಟೇ ಸ್ವಚ್ಛತೆ ಮತ್ತು ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಬರಲಾಗುತ್ತದೆ. ಪ್ರತಿದಿನ ಧೂಳು ಗುಡಿಸಿ ನೆಲವನ್ನು ಸಾರಿಸಿ ಚೊಕ್ಕಟವಾಗಿಡಲು ಮನೆಯ ಒಡತಿ ಹೆಚ್ಚಿನ ಅಸ್ಥೆ ವಹಿಸುತ್ತಾಳೆ.

ಮನೆಯೇ ಒಂದು ದೇವಸ್ಥಾವವಿದ್ದಂತೆ

ಮನೆಯೇ ಒಂದು ದೇವಸ್ಥಾವವಿದ್ದಂತೆ

ಮಂದಿರದಲ್ಲಿ ಹೇಗೆ ಪಾದರಕ್ಷೆಗಳಿಗೆ ಪ್ರವೇಶವಿಲ್ಲವೋ, ಹಾಗೇ ಮನೆಯೆಂಬ ಮಂದಿರದಲ್ಲಿಯೂ ಪಾದರಕ್ಷೆಗೆ ಸ್ಥಾನವಿಲ್ಲ. ಮಲೆನಾಡಿನಲ್ಲಂತೂ ಪಾದರಕ್ಷೆಗಳನ್ನು ಮನೆಯಿಂದ ಕೊಂಚ ದೂರದಲ್ಲಿಟ್ಟು ಬರುವುದರ ಹೊರತಾಗಿ ಕಾಲುಗಳನ್ನು ತೊಳೆದುಕೊಂಡೇ ಬರುವಂತೆ ಒಂದು ದೊಡ್ಡ ಹಂಡೆಯನ್ನು ಹೊರಭಾಗದಲ್ಲಿ ಇರಿಸಲಾಗುತ್ತದೆ. ಇವೆಲ್ಲಾ ನಮ್ಮ ಹಿರಿಯರು ನಡೆಸಿಕೊಂಡು ಬಂದ ಸಂಪ್ರದಾಯವಾಗಿದೆ.

ವೈಜ್ಞಾನಿಕ ಮಹತ್ವ...

ವೈಜ್ಞಾನಿಕ ಮಹತ್ವ...

ಆದರೆ ಈ ಸಂಪ್ರದಾಯಕ್ಕೆ ವೈಜ್ಞಾನಿಕ ಮಹತ್ವವೇನು ಎಂಬುದನ್ನು ಈಗ ನೋಡೋಣ. ಗಾಳಿಯಲ್ಲಿ ಲಕ್ಷಾಂತರ ವಿಧದ ಸೂಕ್ಷ್ಮಜೀವಿಗಳು, ಧೂಳು ಮೊದಲಾದ ಸೂಕ್ಷ್ಮಕಣಗಳು ಹಾರಿಕೊಂಡಿರುತ್ತವೆ. ಇವೆಲ್ಲಾ ನಿಧಾನವಾಗಿ ಇಳಿದು ನೆಲದಲ್ಲಿ ಅಂಟಿಕೊಂಡಿರುತ್ತವೆ. ಪ್ರತಿ ಹೆಜ್ಜೆಯೂರಿದಾಗಲೂ ಇವೆಲ್ಲವೂ ಪಾದರಕ್ಷೆಗಳ ತಳಕ್ಕೆ ಅಂಟಿಕೊಳ್ಳುತ್ತವೆ.

ವೈಜ್ಞಾನಿಕ ಮಹತ್ವ...

ವೈಜ್ಞಾನಿಕ ಮಹತ್ವ...

ಎಷ್ಟು ಅಂಟಿಕೊಂಡಿವೆ ಎಂದು ಬರೆಯ ಒಂದು ಪಾದರಕ್ಷೆಯ ತಳವನ್ನು ಸೂಕ್ಷ್ಮವಾಗಿ ಪರೀಕ್ಷಿಸಿದ ಅರಿಜೋನಾ ವಿಶ್ವವಿದ್ಯಾಲಯದ ವಿಜ್ಞಾನಿಗಳಿಗೆ 421,000 ಬ್ಯಾಕ್ಟೀರಿಯಾಗಳು ಇದ್ದುದು ಕಂಡುಬಂದಿವೆ. ಎರಡು ಚಪ್ಪಲಿಯಿಂದ ಇನ್ನೆಷ್ಟು ಬರಬಹುದು. ಅದೂ ನೆಲ ತೇವವಾಗಿದ್ದಾಗ ಇದು ಇನ್ನೆಷ್ಟು ಹೆಚ್ಚಬಹುದು, ಯಾರೋ ಕ್ಯಾಕರಿಸಿ ಉಗಿದ ಭಾಗದ ಮೇಲೆ ನಡೆದು ಬಂದಾಗ ಇವು ಎಷ್ಟು ಅಧಿಕವಾಗಬಹುದು?

ಬ್ಯಾಕ್ಟೀರಿಯಾಗಳ ಹಾವಳಿ....

ಬ್ಯಾಕ್ಟೀರಿಯಾಗಳ ಹಾವಳಿ....

ಇಷ್ಟಕ್ಕೇ ಬೆಚ್ಚಿ ಬೀಳುವುದು ಬೇಡ, ಈ ವಿಜ್ಞಾನಿಗಳು ವಿವಿಧ ಪ್ರದೇಶಗಳ ಚಪ್ಪಲಿಗಳನ್ನೂ ಪರೀಕ್ಷಿಸಿದಾಗ ಸೂಕ್ಷ್ಮಜೀವಿಗಳು ಬೇರೆ ಬೇರೆಯಾಗಿದ್ದರೂ ಒಂದು ಅಂಶ ಮಾತ್ರ ಸಮಾನವಾಗಿ ಕಂಡುಬಂದಿತ್ತು. ಅಂದರೆ 96% ಪಾದರಕ್ಷೆಗಳ ತಳದಲ್ಲಿ Coliform ಎಂಬ ಬ್ಯಾಕ್ಟೀರಿಯಾ ಮಾತ್ರ ಇದ್ದೇ ಇತ್ತು.

ಬ್ಯಾಕ್ಟೀರಿಯಾಗಳ ಹಾವಳಿ....

ಬ್ಯಾಕ್ಟೀರಿಯಾಗಳ ಹಾವಳಿ....

ಈ ಬ್ಯಾಕ್ಟೀರಿಯಾ ಮಾನವರ ಮತ್ತು ಇತರ ಬಿಸಿರಕ್ತದ ಪ್ರಾಣಿಗಳ ಮಲದಲ್ಲಿರುತ್ತದೆ. ಅಷ್ಟೇ ಅಲ್ಲ, ಆರೋಗ್ಯಕ್ಕೆ ಮಾರಕವಾದ ಈ ಕೊಲೈ ( E coli) ಮತ್ತು Klebsiella pneumonia (ಮೂತ್ರನಾಳ ಮತ್ತು ಮೂತ್ರಕೋಶದಲ್ಲಿ ಸೋಂಕು ಉಂಟುಮಾಡುವ ಬ್ಯಾಕ್ಟೀರಿಯಾ) ಹಾಗೂ Serratia ficaria (ಶ್ವಾಸನಾಳ ಮತ್ತು ಉಸಿರಾಟದ ಅಂಗಗಳಲ್ಲಿ ಸೋಂಕು ಉಂಟುಮಾಡುವ ಬ್ಯಾಕ್ಟೀರಿಯಾ) ಸಹಾ ಗಣನೀಯ ಪ್ರಮಾಣದಲ್ಲಿದ್ದುದು ಕಂಡುಬಂದಿದೆ.

ದಾರಿಯಲ್ಲಿ ಹೋಗುತ್ತಿದ್ದ ಮಾರಿಯನ್ನು ಮನೆಯೊಳಗೆ ಕರೆತಂದಂತೆ.....

ದಾರಿಯಲ್ಲಿ ಹೋಗುತ್ತಿದ್ದ ಮಾರಿಯನ್ನು ಮನೆಯೊಳಗೆ ಕರೆತಂದಂತೆ.....

ಇಂತಹ ಭಯಾನಕ ಬ್ಯಾಕ್ಟೀರಿಯಾಗಳನ್ನು ಹೊತ್ತಿರುವ ಪಾದರಕ್ಷೆಯನ್ನು ಮನೆಯ ಒಳಗೂ ತಂದಾಗ ಮಾತ್ರ ದಾರಿಯಲ್ಲಿ ಹೋಗುತ್ತಿದ್ದ ಮಾರಿಯನ್ನು ಮನೆಯೊಳಗೆ ಕರೆತಂದಂತೆ ಆಗುತ್ತದೆ. ಪಾದರಕ್ಷೆಯನ್ನು ಮನೆಯಿಂದ ಹೊರಗಿಡುವ ಮೂಲಕ ಈ ತೊಂದರೆಯಿಂದ ರಕ್ಷಣೆ ಪಡೆದಂತಾಗುತ್ತದೆ.

ದಾರಿಯಲ್ಲಿ ಹೋಗುತ್ತಿದ್ದ ಮಾರಿಯನ್ನು ಮನೆಯೊಳಗೆ ಕರೆತಂದಂತೆ.....

ದಾರಿಯಲ್ಲಿ ಹೋಗುತ್ತಿದ್ದ ಮಾರಿಯನ್ನು ಮನೆಯೊಳಗೆ ಕರೆತಂದಂತೆ.....

ಈ ತೊಂದರೆಯನ್ನು ನಮ್ಮ ಹಿರಿಯರು ತಮ್ಮ ಅನುಭವದಿಂದ ಕಂಡುಕೊಂಡ ಬಳಿಕ ಪಾದರಕ್ಷೆಗಳನ್ನು ಮನೆಯಿಂದ ಹೊರಗಿಟ್ಟು ಬರುವುದನ್ನು ಕಡ್ಡಾಯಗೊಳಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಕ್ರಮ ಕೈಗೊಂಡಿದ್ದರು. ಕ್ರಮೇಣ ಇದೇ ಸಂಪ್ರದಾಯವಾಗಿ ನಡೆಯುತ್ತಾ ಬಂದಿದ್ದು ಇಂದು ನಾವು ಉತ್ತಮ

ಆರೋಗ್ಯದಲ್ಲಿರಲು ಕಾರಣವಾಗಿದೆ.

ಹಾಗಾದರೆ ಚಪ್ಪಳಿಯನ್ನು ಮನೆಯಿಂದ ಹೊರಗಿಡುತ್ತಿರಲ್ಲವೇ?

ಹಾಗಾದರೆ ಚಪ್ಪಳಿಯನ್ನು ಮನೆಯಿಂದ ಹೊರಗಿಡುತ್ತಿರಲ್ಲವೇ?

ಈ ಸಂಪ್ರದಾಯದ ವೈಜ್ಞಾನಿಕ ಮಹತ್ವವನ್ನು ತಿಳಿದ ಬಳಿಕ ಎಲ್ಲರೂ ಈ ವಿಧಾನವನ್ನು ಅನುಸರಿಸುವುದು ಖಂಡಿತ. ಇದು ಮುಂದಿನ ಪೀಳಿಗೆಗೂ ಮುಂದುವರೆಯಲಿದೆ.

English summary

Why Do Indians Not Wear Footwear Inside Their House?

Here, in this article, we are about to share the reason as to why people, especially Indians, do not wear footwear or any kind of a chappal inside their house! Read further to know more.
X
Desktop Bottom Promotion