Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಪ್ರತಿ ಲೀ ಕತ್ತೆ ಹಾಲಿಗೆ ₹5,000..! 20 ಕತ್ತೆಗಳ ಮೂಲಕ ₹2.5 ಕೋಟಿ ವ್ಯವಹಾರ..!
ತಾಯಿಯ ಹಾಲಿಗೆ ಪಾರ್ಯಾಯ ಹಾಲು ಎಂದು ಯಾವುದಾದರು ಇದ್ದರೆ ಅದು ಕತ್ತೆ ಹಾಲು. ಏಕೆಂದರೆ ಕತ್ತೆ ಹಾಕಿನಲ್ಲಿ ಅಷ್ಟೊಂದು ಖನುಜ, ಫೋಷಕಾಂಶ ಸೇರಿರುವ ಅಂಶವಿದೆ. ಇದು ಆರೋಗ್ಯ ಹಾಗೂ ಸೌಂದರ್ಯಕ್ಕೆ ಬಹಳ ಉತ್ತಮವಾಗಿದೆ. ಹೀಗಾಗಿ ಇತ್ತೀಚಿಗೆ ಕತ್ತೆ ಹಾಲಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ.
ಕತ್ತೆ ಬಹುಪಯೋಗಿ ಪ್ರಾಣಿಯಾಗಿದೆ. ಜೊತೆಗೆ ಕತ್ತೆ ಒಂದು ದಡ್ಡ ಪ್ರಾಣಿ ಅಂತಲೂ ಕರೆಯಲಾಗುತ್ತದೆ. ಭಾರತದಲ್ಲಿ ಪ್ರಾಚೀನ ಕಾಲದಲ್ಲೂ ಕತ್ತೆ ಸಾಕುಪ್ರಾಣಿಯಾಗಿ ಗುರುತಿಸಿಕೊಂಡಿದೆ. ಅಂದರೆ ಕತ್ತೆಯನ್ನು ಹಲವು ಉಪಯೋಗಗಳಿಗಾಗಿ ಸಾಕಲಾಗುತ್ತದೆ. ಕೆಲವರು ಹಾಲಿಗಾಗಿ, ಇನ್ನು ಕೆಲವರು ಅದನ್ನು ತೂಕ ಹೊರವ ಆಳಾಗಿ. ಅಗನಸ ಜೊತೆಗಾರನಾಗಿ, ಎತ್ತಿನ ಬದಲು ಹೆಗಲು ಗಾಡಿಗೆ ಹೆಗಲು ಕೊಡುವ ಶ್ರಮಿಕನಾಗಿಯೂ ಕತ್ತೆ ಬಳಕೆಯಾಗುತ್ತಿದೆ.

ಆದರೆ ಕತ್ತೆಯ ಹಾಲು ಮಾರುಕಟ್ಟೆಯಲ್ಲಿ ಅತ್ಯಂತ ದುಬಾರಿ ಹಾಲು ಎನಿಸಿದೆ. ಏಕೆಂದರೆ ಕತ್ತೆಗಳನ್ನು ಹಾಲಿನ ಉತ್ಪನ್ನಕ್ಕಾಗಿ ಸಾಕುವವರ ಸಂಖ್ಯೆ ಬಹಳ ಕಡಿಮೆ ಇದೆ. ಅಲ್ಲದೆ ಕತ್ತೆ ಹಾಲಿನ ಕುರಿತ ತಿಳುವಳಿಕೆ ಹಾಗೂ ಅದರ ಉಪಯೋಗ ತಿಳಿಯದಿರುವುದು ಕತ್ತೆಯನ್ನು ಹಾಲಿನ ಮೂಲವಾಗಿ ಸಾಕುವುವವರು ಕಡಿಮೆಯಾಗಿದ್ದಾರೆ.
ಆದರೆ ಇಲ್ಲೊಬ್ಬ ವ್ಯಕ್ತಿ ಕತ್ತೆ ಹಾಲನ್ನು ತನ್ನ ಜೀವನ ಸಾಗಿಸಲು ಆದಾಯ ಮೂಲವಾಗಿ ಮಾಡಿಕೊಂಡಿದ್ದಲ್ಲದೆ ಪ್ರತಿ ಲೀಟರ್ ಕತ್ತೆ ಹಾಲನ್ನು ಬರೋಬ್ಬರಿ 5 ಸಾವಿರ ರೂಪಾಯಿ ಮಾರಾಟ ಮಾಡುತ್ತಾ ಇದನ್ನು ಅತ್ಯಂತ ಲಾಭದಾಯಕ ಮೂಲವಾಗಿ ಪರಿವರ್ತಿಸಿಕೊಂಡಿದ್ದಾನೆ. ಗುಜರಾತ್‌ನ ಪಟಾನ್ ಜಿಲ್ಲೆಯ ನಿವಾಸಿಯಾಗಿರುವ ಧೀರೇನ್ ಸೋಲಂಕಿ ಎಂತಾನ ಜೀವನ ನಡೆಸಲು ಕತ್ತೆ ಹಾಲು ಮಾರಾಟ ಮಾಡುವ ದಾರಿ ಹಿಡಿದು ಈಗ ಯಶಸ್ವಿ ಉದ್ಯಮ ಕಟ್ಟಿರುವ ಸಾಧನೆ ಮಾಡಿದ್ದಾನೆ.
ಕತ್ತೆ ಹಾಲು ಮಾರಾಟ ಸಾಂಪ್ರದಾಯಿಕ ಪ್ರಕಾರವಾದ ಉದ್ಯಮವಾಗಿಲ್ಲ. ಇದೊಂದು ಅಸಂಪ್ರದಾಯಿಕ ವ್ಯವಹಾರವಾಗಿದೆ. ಆತ ಕೇವಲ 20 ಕತ್ತೆಗಳ ಇಟ್ಟುಕೊಂಡು ಈ ವ್ಯಾಪಾರಕ್ಕೆ ಇಳಿದಿದ್ದರು. ಆದರೆ ಇದಕ್ಕೆ 22 ಲಕ್ಷ ರೂಪಾಯಿ ಹೂಡಿಕೆ ಮಾಡಿ ಮೊದಲು ವ್ಯವಹಾರ ಆರಂಭಿಸಿ ಈಗ ಕೋಟಿ ಕೋಟಿ ಗಳಿಸಿದ್ದಾರೆ.
ಆರಂಭದ ದಿನದಲ್ಲಿ ಪ್ರತಿ ಲೀಟರ್ ಕತ್ತೆ ಹಾಲಿಗೆ ಕೇವಲ 65 ರೂಪಾಯಿಯಂತೆ ಮಾರಾಟ ಮಾಡಿದ್ದಾರೆ. ಬರುಬರುತ್ತಾ ಈ ಹಾಲಿನ ದರ ಏರಿಕೆಯಾಗುತ್ತಲೇ ಸಾಗಿದೆ. ಈಗ ಅವರ ಬಳಿ 42 ಕತ್ತೆಗಳಿದ್ದು, ಪ್ರತಿ ಲೀಟರ್ ಕತ್ತೆ ಹಾಲಿಗೆ ಬರೋಬ್ಬರಿ 5 ಸಾವಿರ ರೂಪಾಯಿಯಿಂದ 7 ಸಾವಿರ ರೂಪಾಯಿ ವರೆಗೂ ಮಾರಾಟ ಮಾಡಿದ್ದಾರೆ. ಹಸುವಿನ ಹಾಲಿಗೆ ಹೋಲಿಸಿದರೆ ಇದು 100 ಪಟ್ಟು ಲಾಭ ಹೆಚ್ಚಾಗಿದೆ. ಆರಂಭದಲ್ಲಿ ಕತ್ತೆಗಳ ಪಾಲನೆಗೆ ಹೆಚ್ಚು ಹಣ ಖರ್ಚಾಗುತ್ತಿತ್ತಂತೆ. ಆದರೆ ಬರು ಬರುತ್ತಾ ಈ ಪ್ರಮಾಣ ಕಡಿಮೆಯಾಗಿದ್ದಲ್ಲದೆ ಲಾಭದ ಪ್ರಮಾಣ ಹೆಚ್ಚಾಗಿತ್ತು.
ಈಗ ಸೋಲಂಕಿ ತಮ್ಮ ಕತ್ತೆಯ ಹಾಲಿನ ಮಾರಾಟವನ್ನು ಕರ್ನಾಟಕ ಹಾಗೂ ಕೇರಳ ರಾಜ್ಯಗಳಿಗೂ ವಿಸ್ತರಿಸಿದ್ದಾರೆ. ಇದರಿಂದ ಅವರ ಆದಾಯದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಅಲ್ಲದೆ ಸೌಂದರ್ಯ ವರ್ಧಕ ಕಂಪನಿಗಳಿಂದ ಅವರಿಗೆ ಕತ್ತೆ ಹಾಲಿಗೆ ಬೇಡಿಕೆ ಬಂದಿದೆಯಂತೆ, ಕತ್ತೆ ಹಾಲನ್ನು ಹಲವು ಸೌಂದರ್ಯ ವರ್ಧಕ ಕ್ರೀಮ್‌ಗಳು ಉತ್ಪನ್ನಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಹೀಗಾಗಿ ಯಾವಾಗಲು ಬೇಡಿಕೆ ಅಧಿಕವಾಗಿರುತ್ತದೆಯಂತೆ.
ಈಗ ಸೋಲಂಕಿ ತಮ್ಮದೇ ವೆಬ್‌ಸೈಟ್ ಮೂಲಕ ಡೈರಿ ಉತ್ಪನ್ನ ಮಾರಾಟಕ್ಕೂ ಮುಂದಾಗಿದ್ದಾರೆ. ಅಲ್ಲದೆ ಅವರ ಸಂಸ್ಥೆ ವಾರ್ಷಿಕವಾಗಿ ಈಗ 0.5 ಕೋಟಿಯಿಂದ 2.5 ಕೋಟಿ ರೂಪಾಯಿ ವ್ಯವಹಾರ ನಡೆಸುವ ಕಂಪನಿಯಾಗಿ ಬೆಳೆದು ನಿಂತಿದೆ.



Click it and Unblock the Notifications

