Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಮೊಲದ ಜೊತೆ ಓಡಿ ಮತ್ತೊಮ್ಮೆ ರೇಸ್ ಗೆದ್ದ ಆಮೆ..! ಈ ಕಥೆ ನಿಜವಾಗಿದ್ದು ಹೇಗೆ ನೋಡಿ.!
ನಿಮಗೆ ಮೊಲ ಮತ್ತು ಆಮೆಯ ಕಥೆ ಗೊತ್ತಿರಬಹುದು. ಯಾವುದಾದರು ಘಟನೆಯನ್ನು ನಿರಂತರ ಶ್ರಮದ ಕುರಿತು ವಿವರಿಸುವಾಗ ಆಮೆ ಮೊಲದ ಕಥೆ ಹೇಳುತ್ತಾರೆ. ಒಂದು ರೇಸ್‌ನಲ್ಲಿ ಆಮೆಯೇ ಮೊಲವನ್ನು ಸೋಲಿಸಿದ ಕಥೆ ಅದು. ಆಮೆ ಅತ್ಯಂತ ನಿಧಾನಗತಿಯ ಪ್ರಾಣಿ ಇತ್ತ ಆಮೆ ಒಂದು ಕ್ಷಣದಲ್ಲಿ ಕಣ್ಣಿಂದ ಮರೆಯಾಗುವಷ್ಟು ವೇಗದ ಪ್ರಾಣಿ. ಆದರೆ ರೇಸ್‌ನಲ್ಲಿ ಮೊಲದ ಸೋಮಾರಿ ತನದಿಂದ ಆಮೆ ಗೆದ್ದು ಬೀಗಿದ ಕಥೆ ಅದು.
ಆದರೆ ಈ ಕಥೆ ಈಗ ಮತ್ತೆ ನಿಜವಾಗಿದೆ. ಹೌದು ಮತ್ತೆ ರೇಸ್‌ನಲ್ಲಿ ಆಮೆ ಗೆದ್ದು ಬೀಗಿದೆ. ಆಮೆ ಮತ್ತಿ ಮೊಲದ ರೇಸ್ ನಡೆದು ಮತ್ತೊಮ್ಮೆ ಮೊಲಕ್ಕೆ ಸೋಲಾಗಿದೆ. ನಿಧಾನಗತಿಯಲ್ಲಿ ಸಾಗುವ ಆಮೆಗೆ ಗೆಲುವಾಗಿದೆ.

ಟ್ವಿಟರ್ (ಎಕ್ಸ್)ನಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದಲ್ಲಿ ಆಮೆ ಮ್ತು ಮೊಲದ ರೇಸ್ ನಡೆಯತ್ತಿದ್ದು ಅದರಲ್ಲಿ ಮತ್ತೆ ಆಮೆಯೇ ಗೆಲುವು ಕಂಡಿದೆ. ಹೀಗಾಗಿ ಹಿರಿಯರು ಹೇಳುತ್ತಿದ್ದ ಕಥೆ ಈಗ ಮತ್ತ ನಿಜವಾಗಿದೆ. ಆಮೆಯಂತೆ ನಿಧಾನವಾಗಿದ್ದರೂ ಪರವಾಗಿಲ್ಲ ಆದರೆ ಆಮೆಯಂತೆ ಎಂದಿಗೂ ಸೋಮಾರಿಯಾಗಬಾರದು ಎಂಬ ನೀತಿಯನ್ನು ಮತ್ತೆ ಮತ್ತೆ ಈ ವಿಡಿಯೋ ನಿರೂಪಿಸುತ್ತಿದೆ.
ವಿಡಿಯೋದಲ್ಲಿ ಏನಿದೆ.?
ಒಂದು ಕಾರ್ಯಕ್ರಮದಲ್ಲಿ ಆಮೆ ಮತ್ತು ಮೊಲದ ರೇಸ್ ಆಯೋಜಿಸಿರುವುದನ್ನು ನೋಡಬಹುದು. ಇಲ್ಲಿ ಈ ರೇಸ್ ನೋಡಲೆಂದೇ ನೂರಾರು ಮಂದಿ ಜಮಾಯಿಸಿದ್ದಾರೆ. ಮೊದಲು 1 ಮೀಟರ್ ಉದ್ದದ ರೇಸ್ ಟ್ರ್ಯಾಕ್‌ನಲ್ಲಿ ಮೊಲ ಹಾಗೂ ಆಮೆಯನ್ನು ಬಿಡಲಾಗಿದೆ. ಈ ವೇಳೆ ಆಮೆ ನಿಧಾನವಾಗಿ ಅಂತಿಮ ಗುರಿ ತಲುಪುವತ್ತ ಸಾಗುತ್ತಿದ್ದರೆ ಮತ್ತೊಂದೆಡೆ ಮೊಲ ಕುಳಿತಲ್ಲೇ ಇರುವುದು ವಿಡಿಯೋದಲ್ಲಿ ನೋಡಬಹುದು. ಇದೇ ಸಮಯದಲ್ಲಿ ಮೊಲ ಒಂದು ಹೆಜ್ಜೆ ಬಂದು ಮತ್ತೆ ಕುಳಿತುಕೊಳ್ಳುತ್ತದೆ. ಆದರೆ ಆಮೆ ಮಾತ್ರ ಎಲ್ಲಿಯೂ ನಿಲ್ಲದೆ ನಿಧಾನವಾಗಿ ಅಂತಿಮ ಗುರಿಯತ್ತ ಸಾಗುತ್ತಲೇ ಇರುತ್ತದೆ.
ಕೊನೆಯದಾಗಿ ಆಮೆ ಈ ರೇಸ್ ಗೆಲ್ಲುತ್ತದೆ. ಅಲ್ಲಿದ್ದವರು ಅಚ್ಚರಿ ವ್ಯಕ್ತಪಡಿಸುತ್ತ ರೇಸ್ ಗೆದ್ದ ಆಮೆಗೆ ಚಪ್ಪಾಳೆ ಹೊಡೆಯುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಮೊಲದ ಎದುರು ರೇಸ್ ಗೆದ್ದ ಆಮೆ ಕಂಡು ಜನ ಅಚ್ಚರಿಗೆ ಒಳಗಾಗಿದ್ದಾರೆ. ಈ ವಿಡಿಯೋ ಹಳೆಯದ್ದಾಗಿದ್ದರೂ ಈಗಲೂ ಪ್ರಸ್ತುತವಾಗಿದೆ.
ಆಮೆ ಮತ್ತು ಮೊಲದ ಮೂಲ ಕಥೆ ಏನು? ಅದರ ನೀತಿ ಏನಾಗಿತ್ತು?
ಮೊಲಕ್ಕೆ ತನ್ನ ವೇಗದ ಓಟದ ಬಗ್ಗೆ ಜಂಬ ಇತ್ತು. ಅದು ಯಾವಾಗಲು ಆಮೆಯನ್ನು ಕಂಡು ಗೇಲಿ ಮಾಡುತ್ತಿತ್ತು. ಒಂದು ದಿನ ಆಮೆ ಮತ್ತು ಮೊಲದ ನಡುವೆ ಗಲಾಟೆಯೇ ನಡೆದಿತ್ತು. ಈ ವೇಳೆ ಕಾಡಿನ ಎಲ್ಲಾ ಪ್ರಾಣಿಗಳು ಸೇರಿ ಇವೆರಡರ ನಡುವೆ ರೇಸ್ ನಡೆಸಲು ನಿರ್ಧರಿಸಿದವು. ಕಾಡಿನ ಮಧ್ಯದಿಂದ ಓಟದ ಸ್ಪರ್ಧೆ ನಡೆಯಿತು. ರೇಸ್ ಆರಂಭವಾಗುತ್ತಿದ್ದಂತೆ ಬೆಳಕಿನ ವೇಗದಲ್ಲಿ ಮೊಲ ಎಲ್ಲಾ ಪ್ರಾಣಿಗಳ ನೋಟದಿಂದ ಕಣ್ಮರೆಯಾಗಿತ್ತು. ಆದ್ರೆ ಆಮೆ ನಿಧಾನವಾಗಿ ಸಾಗುತ್ತಿತ್ತು.
ಹೀಗೆ ವೇಗವಾಗಿ ಓಡುತ್ತಿದ್ದ ಮೊಲ ಮುಂದೆ ಓಡುವಾಗ ಕ್ಯಾರೆಟ್ ಬೆಳೆಯನ್ನು ಕಂಡು ನಿಂತಿತು. ಹಿಂದೆ ತಿರುಗಿ ನೋಡಿದಾಗ ಆಮೆಯ ಸುಳಿವೇ ಇರಲಿಲ್ಲ. ಆಮೆ ಓಡಿ ಇಲ್ಲಿಯವರೆಗೆ ಬರಲು ಗಂಟೆಗಳು ಬೇಕಾಗುತ್ತದೆ ಎಂದು ತಿಳಿದ ಮೊಲ ಒಂದೆರಡು ದೊಡ್ಡ ಕ್ಯಾರೆಟ್ ತಿಂದಿತು. ಬಳಿಕ ಹೊಟ್ಟೆ ತುಂಬಿದ್ದರಿಂದ ಮರವೊಂದರ ಅಡಿ ಬಂದು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಬಳಿಕ ಮತ್ತೆ ಎದ್ದು ಓಡುವುದಾಗಿ ತೀರ್ಮಾನಿಸಿತು. ಅದರಂತೆ ಮಲಗಿದಾಗ ಗಾಢ ನಿದ್ರೆಗೆ ಜಾರಿತು. ಆದರೆ ಎಲ್ಲಿಯೂ ನಿಲ್ಲದ ಆಮೆ ನಿಧಾನವಾಗಿ ಓಡಿ ಓಡಿ ಅಂತಿಮ ಗುರಿ ತಲುಪಿತು. ಮೊಲಕ್ಕೆ ಎಚ್ಚರವಾದಾಗ ಆಮೆ ಈ ರೇಸ್ ಗೆದ್ದುಬಿಟ್ಟಿತ್ತು. ಬಳಿಕ ಮೊದಲ ಮೂರ್ಖತನ ಮತ್ತು ಅತೀಯಾದ ಆತ್ಮವಿಶ್ವಾಸಕ್ಕೆ ತಕ್ಕ ಶಾಸ್ತಿಯಾಗಿತ್ತು.
ಹೀಗಾಗಿ ನಿರಂತರ ಶ್ರಮವೇ ಗುರಿ ತಲುಪಲು ಮಾರ್ಗ ಎಂಬುದು ಹಾಗೂ ತನ್ನ ಸಾಮರ್ಥ್ಯದ ಮುಂದೆ ಅನ್ಯರದ್ದು ಕೇವಲ ನಾಕಾವಸ್ತೆ ಎಂಬ ಜಂಬ ನಮ್ಮಲ್ಲಿ ಇರಬಾರದು ಗುರಿ ತಲುಪುವುದು ನಮ್ಮ ಶಕ್ತಿಗೆ ಸಂಬಂಧಿಸಿದ್ದೇ ಹೊರತು ಎಂದಿಗೂ ಬೇರೆಯವರನ್ನು ಕೀಳಾಗಿ ಪರಿಗಣಿಸಬಾರದು ಎಂಬುದು ಇದರ ನೀತಿಯಾಯಿತು.



Click it and Unblock the Notifications
