Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ಚಂದ್ರನಲ್ಲಿದೆ ಚಿತಾಭಸ್ಮ: ಸತ್ತ ಮೇಲೆ ಚಂದ್ರಲೋಕದಲ್ಲಿ ಸಮಾಧಿಯಾದ ಈ ಶೂಮೇಕರ್ ಯಾರು?
ಚಂದ್ರ ಲೋಕಕ್ಕೆ ಜನರು ಹೋಗಿದ್ದಾರೆ, ಭಾರತ ಚಂದ್ರಯಾನ 3 ಯಶಸ್ವಿಯಾಗಿ ಮಾಡಿದೆ, ಭಾರತ ಸೇರಿ ಹಲವು ರಾಷ್ಟ್ರಗಳು ಚಂದ್ರನಲ್ಲಿ ಏನಿದೆ? ಅಲ್ಲಿ ಮನುಷ್ಯ ಜೀವಿಸಲು ಯೋಗ್ಯವೇ? ಅಲ್ಲಿಯ ಮಣ್ಣು ಹೇಗಿದೆ? ಅಲ್ಲಿ ಕಂದಕಗಳಿಗೆ ಕಾರಣವೇನು ಎಂಬುವುದರ ಕುರಿತು ಅಧ್ಯಯನ ನಡೆಸುತ್ತಿದೆ, ಆದರೆ ಸತ್ತ ಮೇಲೆ ಚಂದ್ರಲೋಕದಲ್ಲಿ ಮುಕ್ತಿ ಪಡೆದ ಏಕೈಕ ವ್ಯಕ್ತಿಯೆಂದರೆ ಅದು ಇಜೆನೆ ಶೂಮೇಕರ್ ಮಾತ್ರ. ಚಂದ್ರ ಲೋಕದಲ್ಲಿ ಚಿತಾಭಸ್ಮವಿರುವುದು ಇವರದ್ದು ಮಾತ್ರ.

ಇವರೊಬ್ಬ ವಿಜ್ಞಾನಿ, ಖಗೋಳ ವಿಜ್ಞಾನದಲ್ಲಿ ಇವರ ಕೊಡುಗೆ ತುಂಬಾನೇ ಇದೆ. ಇವರ ಹೆಸರನ್ನು ಧೂಮಕೇತುವಿಗೂ ಹಾಕಲಾಗಿದೆ. 1994ರಲ್ಲಿ ಕಾಣಿಸಿದ ಧೂಮಕೇತುವಿಗೆ ಧೂಮಕೇತು ಶೂಮೇಕಪರ್ ಲೆವಿ 9 ಎಂಬ ಹೆಸರಿಟ್ಟರು.
ಶೂಮೇಕರ್ ಖಗೋಳ ವಿಜ್ಞಾನಿ ಅವರ ಪತ್ನಿ ಕೂಡ ವಿಜ್ಞಾನಿಯಾಗಿದ್ದರು. ಚಂದ್ರ ಮೇಲ್ಮೈ ಪರೀಕ್ಷೆ ಮಾಡಿದ ಅಪೋಲೋ ಮಿಷನ್‌ನಲ್ಲಿ ಇವರ ಜ್ಞಾನ ಬಳಕೆಯಾಗಿದೆ. ಆದರೆ ಇವರಿಗೆ ಅಕಾಲಿಕ ಸಾವು ಸಂಭವಿಸಿತು. 1997 ಜುಲೈ 18ರಂದು ನಡೆದ ಕಾರು ಅಪಘಾತದಲ್ಲಿ ಸಾವನ್ನಪ್ಪಿದರು. ಅವರು ಬದುಕಿದಿದ್ದರೆ ವಿಜ್ಞಾನ ಕ್ಷೇತ್ರಕ್ಕೆ ಇನ್ನೂ ಹಲವು ಕೊಡುಗೆ ನೀಡುತ್ತಿದ್ದರು, ಆದರೆ ಸತ್ತ ಮೇಲೂ ಅವರು ಚಂದ್ರನಲ್ಲಿ ಇದ್ದಾರೆ, ಅವರ ಚಿತಾಭಸ್ಮ ಚಂದ್ರನಲ್ಲಿದೆ.
Celestis ಎಂಬ ಮೊದಲ ಕಂಪನಿ ಬಾಹ್ಯಾಕಾಶದಲ್ಲಿ ಒಂದು ಮಹತ್ವದ ಹೆಜ್ಜೆ ಸಾಧಿಸಲು ಮುಂದಾಯ್ತು. ಈ ಕಂಪನಿ ಕೆನಾರಿ ಐಲ್ಯಾಂಡ್‌ನಿಂದ ಫೌಂಡರ್ ಫ್ಲೈಟ್‌ನಲ್ಲಿ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿತು, ಇದರಲ್ಲಿ ಬಾಹ್ಯಾಕಾಶ ವಿಜ್ಞಾನಿಗಳು ಮಾತ್ರವಲ್ಲ ಸಾಮಾನ್ಯ ಜನರೂ ಇದ್ದರು. ಭೂಮಿಯಿಂದ ಏನಾದರೂ ಸ್ಮರಣೀಯ ವಸ್ತು ತೆಗೆದುಕೊಂಡು ಚಂದ್ರನಲ್ಲಿಗೆ ಹೋಗಬೇಕೆಂದು ಆ ಕಂಪನಿ ಬಯಸಿತ್ತು.
ಈ ಪ್ರಯಾಣದಲ್ಲಿ ಶೂಮೇಕರ್ ಶವವನ್ನು ಕೊಂಡೊಯ್ಯಬಹುದೇ ಎಂದು ಕೇಳಿ ಶೂಮೇಕರ್‌ನ ಸೋದರ ಸಂಬಂಧಿ ಕಾರ್ಲೋನ್ ಪೋರ್ಕೋ ಬಂದರು, ಆದರೆ ವೈದ್ಯಕೀಯ ಕಾರಣದಿಂದ ನಾಶ ಇದನ್ನು ನಿರಾಕರಿಸಿತು,ಆವಾಗ ಅವರು ಶೂಮೇಕರ್‌ನ ಚಿತಾಭಸ್ಮ ತರಬಹುದೇ ಎಂದು ಕೇಳಿದಾಗ ನಾಸಾ ಅನುಮತಿ ನೀಡಿತು. ಇದನ್ನು ತೆಗೆದುಕೊಂಡು ಹೀಗಲು ಮಾತ್ರೆಯನ್ನು ತೆಗೆದುಕೊಂಡು ಹೋಗಲು ಎಷ್ಟು ಚಾರ್ಜ್ ಮಾಡಿದೆವೋ ಅಷ್ಟೇ($600) ಮಾಡಿದ್ದು ಎಂದು Celestis ಸಹ ಸಂಸ್ಥಾಪಕ ಹೇಳುತ್ತಾರೆ.
1998 ಜನವರಿ 6ರಂದು ನಾಸಾ ರಾಕೆಟ್ ಅನ್ನು ಚಂದ್ರನ ದಕ್ಷಿಣ ಧ್ರುವಕ್ಕೆ ಕಳುಹಿಸಿತು. ಒಂದು ಔನ್ಸ್‌ನಷ್ಟು ಚಿತಾಭಸ್ಮವನ್ನು ತಾಮ್ರದ ಹಾಳೆಯಲ್ಲಿ ಸುತ್ತಿ ತೆಗೆದುಕೊಂಡು ಹೋಗಲಾಯ್ತು, ಆದರೆ 1999 ಜುಲೈ 31ಕ್ಕೆ ಈ ಮಿಷನ್ ಚಂದ್ರನ ಮೇಲ್ಮೈಯಲ್ಲಿ ಕ್ರಾಷ್ ಆಯ್ತು ಅಲ್ಲಿಂದ ಇಲ್ಲಿಯವರೆಗೆ ಚಂದ್ರನಲ್ಲಿರುವ ಮನುಷ್ಯ ಚಿತಾಭಸ್ಮವೆಂದರೆ ಅದು ಶೂಮೇಕರ್ದ್ದು ಮಾತ್ರ.
ಇಜೇಜ್ ಶೂಮೇಕರ್ ಚಿತಾಭಸ್ಮ ಮಾತ್ರ ಇನ್ನು ಕೆಲವರು ವರ್ಷಗಳಲ್ಲಿ ತೀರಿ ಹೋಗಿರುವ ಹಲವು ಪ್ರಮುಖ ವ್ಯಕ್ತಿಗಳ ಚಿತಾಭಸ್ಮವನ್ನು ಕೊಂಡೊಯ್ಯುವ ಪ್ಲ್ಯಾನ್ Celestis ಕಂಪನಿಗೆ ಇದೆ. ಶೋಮೇಕರ್ ಒಬ್ಬ ಭೂವಿಜ್ಞಾನಿ ಹಾಗೂ ಖಗೋಳಶಾಸ್ತ್ರದ ಬಗ್ಗೆ ಆಸಕ್ತಿ ಹೊಂದಿ, ಖಗೋಳ ವಿಜ್ಞಾನದಲ್ಲಿಯೂ ಹಲವಾರು ಸಾಧನೆ ಮಾಡಿದ ವ್ಯಕ್ತಿ.
ಚಂದ್ರ ಲೋಕಕ್ಕೆ ಮೊದಲು ಕಾಲಿಟ್ಟ ವ್ಯಕ್ತಿ ನೀಲ್ ಆರ್ಮ್‌ಸ್ಟ್ರಾಂಗ್, ಸತ್ತ ಮೇಲೆ ಚಂದ್ರನಲ್ಲಿರುವ ವ್ಯಕ್ತಿಯೆಂದರೆ ಅದು ಶೂಮೇಕರ್. ಅವರು ಸತ್ತ ಮೇಲೆ ಚಂದ್ರನ ಲೋಕ ತಲುಪಿದ್ದಾರೆ. ಒಂದು ವೇಳೆ ಕಂಪನಿ ಸತ್ತ ವ್ಯಕ್ತಿಗಳನ ಚಿತಾ ಭಸ್ಮ ಚಂದ್ರನಲ್ಲಿಗೆ ತೆಗೆದುಕೊಂಡು ಹೋಗುವ ಬ್ಯುಸ್‌ನೆಸ್ ಪ್ರಾರಂಭಿಸಿದರೆ ಕೆಲವರು ತಮ್ಮ ಆಪ್ತರ ಚಿತಾಭಸ್ಮ ಚಂದ್ರನಲ್ಲಿಗೆ ಕಳುಹಿಸಿ ಅವರನ್ನು ಮತ್ತಷ್ಟು ಸ್ಪೆಷಲ್ ಆಗಿಸಬಹುದು. ಮುಂಬರುವ ದಿನಗಳಲ್ಲಿ ಇದು ಸಾಧ್ಯವಾಗಲೂ ಬಹುದು, ಏಕೆಂದರೆ ವಿಜ್ಞಾನ ಅಷ್ಟು ವೇಗವಾಗಿ ಬೆಳೆಯುತ್ತಿದೆ.



Click it and Unblock the Notifications