For Quick Alerts
ALLOW NOTIFICATIONS  
For Daily Alerts

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ 2019: ವಿಶೇಷತೆ ಮತ್ತು ಭಾರತದ ಸ್ಥಿತಿಗತಿ

|

ಹೆಚ್ಚಾಗಿ ನಾವೆಲ್ಲರೂ ದೈಹಿಕ ಆರೋಗ್ಯದ ಕಡೆ ಮಾತ್ರ ಗಮನಹರಿಸುತ್ತೇವೆ. ಇದು ಸಹಜ ಕೂಡ. ನಮಗೆ ಆರೋಗ್ಯವೆಂದರೆ ಹೇಳಲಾಗಿರುವುದು ದೈಹಿಕ ಆರೋಗ್ಯ ಮಾತ್ರ. ಆದರೆ ಮಾನಸಿಕ ಆರೋಗ್ಯವು ಸರಿಯಾಗಿ ಇರದೆ ಇದ್ದರೆ ಆಗ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹೀಗಾಗಿ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವು ಸರಿಯಾಗಿದ್ದರೆ ಮಾತ್ರ ಮನುಷ್ಯನ ಜೀವನವು ಸುಖಕರವಾಗಿ ಇರಲು ಸಾಧ್ಯ.

World Mental Health Day

ಚಿತ್ರ ಕೃಪೆ: ಡಬ್ಲ್ಯೂಎಫ್ ಎಂಎಚ್

ಇಲ್ಲವಾದಲ್ಲಿ ಖಂಡಿತವಾಗಿಯೂ ಯಾವುದಾದರು ಸಮಸ್ಯೆಯು ಬರುವುದು. ಮಾನಸಿಕ ಆರೋಗ್ಯಕ್ಕೂ ಒಂದು ದಿನವಿದೆ ಮತ್ತು ವಿಶ್ವದಾದ್ಯಂತ ಇದನ್ನು ಆಚರಿಸಲಾಗುತ್ತದೆ. ಈ ಬಗ್ಗೆ ನಾವು ಈ ಲೇಖನದಲ್ಲಿ ತಿಳಿದುಕೊಳ್ಳುವ.

ಮಾನಸಿಕ ಆರೋಗ್ಯ ದಿನವೆಂದರೆ ಏನು?

ಮಾನಸಿಕ ಆರೋಗ್ಯ ದಿನವೆಂದರೆ ಏನು?

ವಿಶ್ವ ಮಾನಸಿಕ ಆರೋಗ್ಯ ಫೆಡರೇಶನ್(ಡಬ್ಲ್ಯೂಎಫ್ ಎಂಎಚ್) ಅಕ್ಟೋಬರ್ 10ರಂದು ವಿಶ್ವ ಮಾನಸಿಕ ಆರೋಗ್ಯ ದಿನವನ್ನಾಗಿ ಆಚರಣೆ ಮಾಡುತ್ತಿದೆ. 1992ರಲ್ಲಿ ಈ ದಿನಾಚರಣೆಯನ್ನು ಆರಂಭಿಸಲಾಯಿತು. 90 ರಾಷ್ಟ್ರಗಳಲ್ಲಿ ತನ್ನ ಅಂಗಸಂಸ್ಥೆಗಳನ್ನು ಹೊಂದಿರುವಂತಹ ಡಬ್ಲ್ಯೂಎಫ್ ಎಂಎಚ್ ವಿಶ್ವದಲ್ಲಿ ಜನರು ಖಿನ್ನತೆಯಿಂದ ಬಳಲುವುದು ಮತ್ತು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದೆ.

ಈ ವರ್ಷದ ಧ್ಯೇಯ

ಈ ವರ್ಷದ ಧ್ಯೇಯ

ಈ ವರ್ಷದ ಧ್ಯೇಯವಾಕ್ಯ ``ಮಾನಸಿಕ ಆರೋಗ್ಯದ ಪ್ರಚಾರ ಮತ್ತು ಆತ್ಮಹತ್ಯೆ ತಡೆಗಟ್ಟುವಿಕೆ'' 21ನೇ ಶತಮಾನದ ಮುಖ್ಯ ವಿಚಾರವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್ ಒ) ಅಂಕಿಅಂಶಗಳ ಪ್ರಕಾರ ಪ್ರತೀವರ್ಷ ಸುಮಾರು ಎಂಟು ಲಕ್ಷ ಜನರು ಆತ್ಮಹತ್ಯೆ ಮಾಡಿಕೊಂಡು ಸಾಯುವರು. ಜನರಿಗೆ ಸರಿಯಾದ ಸಮಯದಲ್ಲಿ ಮತ್ತು ಸೂಕ್ತ ಚಿಕಿತ್ಸೆಯು ಮಾನಸಿಕ ಆರೋಗ್ಯಕ್ಕೆ ಸಿಕ್ಕಿದರೆ ಆಗ ದೊಡ್ಡ ಮಟ್ಟದಲ್ಲಿ ಆತ್ಮಹತ್ಯೆ ಸಮಸ್ಯೆ ನಿವಾರಣೆ ಮಾಡಬಹುದು.

ಭಾರತದಲ್ಲಿ ಮಾನಸಿಕ ತಜ್ಞರ ಕೊರತೆ

ಭಾರತದಲ್ಲಿ ಮಾನಸಿಕ ತಜ್ಞರ ಕೊರತೆ

ಭಾರತದಲ್ಲಿ ಪ್ರತೀ ವರ್ಷ ಸುಮಾರು ಎರಡು ಲಕ್ಷ ಜನರು ಆತ್ಮಹತ್ಯೆ ಮಾಡಿಕೊಳ್ಳುವರು. ಇದರಲ್ಲಿ 15-39ರ ಹರೆಯದವರು ಹೆಚ್ಚಾಗಿರುವರು ಎಂದು 2016ರಲ್ಲಿ ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಸ್ಟಡಿ ನಡೆಸಿರುವಂತಹ ಅಧ್ಯಯನವು ಹೇಳಿದೆ. ಭಾರತದಲ್ಲಿ ಪುರುಷರಗಿಂತಲೂ ಹೆಚ್ಚಾಗಿ ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುವರು. ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ ಪ್ರತೀ ವರ್ಷ ಭಾರತದಲ್ಲಿ ಸುಮಾರು 1 ಲಕ್ಷಕ್ಕೆ 16.3 ಶೇಕಡಾ ಅಥವಾ 2.2 ಲಕ್ಷ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದು ವಿಶ್ವದೆಲ್ಲೆಡೆಯಲ್ಲಿ ನಡೆಯುವಂತಹ ಆತ್ಮಹತ್ಯೆಯ ¼ ಭಾಗವಾಗಿದೆ.

ಇತ್ತೀಚಿನ ದಿನಗಳಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಲಾಗುತ್ತಿದೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಮತ್ತು ಇನ್ಸುರೆನ್ಸ್ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರದ ಸಮಿತಿಯು ಹೇಳಿದೆ. ಅಲ್ಝೈಮರ್ ನಂತಹ ಕಾಯಿಲೆಗಳನ್ನು ಇನ್ಸುರೆನ್ಸ್ ಪ್ಯಾಕೇಜ್ ಗೆ ಸೇರಿಸಿಕೊಳ್ಳಬೇಕು ಎಂದು ಅದು ಹೇಳಿದೆ.

ಈ ಬಗ್ಗೆ ಇನ್ನು ಹೆಚ್ಚಿನ ಕೆಲಸಗಳು ಆಗಬೇಕಾಗಿದೆ. ಭಾರತದಲ್ಲಿ ಸುಮಾರು 1.35 ಬಿಲಿಯನ್ ಜನರಿಗೆ ಆರು ಸಾವಿರ ಮನಶಾಸ್ತ್ರಜ್ಞರು ಇದ್ದಾರೆ. ಭಾರತದಲ್ಲಿ ತುಂಬಾ ಕಡಿಮೆ ಆರೋಗ್ಯ ತಜ್ಞರು ಇರುವರು. ಭಾರತ ಮತ್ತು 192 ದೇಶಗಳು ಜತೆಯಾಗಿ ಸಹಿ ಮಾಡಿರುವ ನಿರಂತರ ಅಭಿವೃದ್ಧಿ ಗುರಿಯಲ್ಲಿ ಮಾನಸಿಕ ಆರೋಗ್ಯವು ಒಂದಾಗಿದೆ. 1ಲಕ್ಷ ಭಾರತೀಯರಿಗೆ 0.3 ಮಾನಸಿಕ ತಜ್ಞರು, 0.12 ಮನಶಾಸ್ತ್ರಜ್ಞರು ಮತ್ತು 0.07 ಸಾಮಾಜಿಕ ಕಾರ್ಯಕರ್ತರು ಇರುವಾಗ ನಿಜವಾಗಿಯೂ ಗುರಿ ಮುಟ್ಟುವುದು ತುಂಬಾ ಕಷ್ಟವಾಗಬಹುದು.

ಆತ್ಮಹತ್ಯೆ ತಡೆಯುವ ವಿಧಾನ

ಆತ್ಮಹತ್ಯೆ ತಡೆಯುವ ವಿಧಾನ

ವಿಶ್ವ ಆರೋಗ್ಯ ಸಂಸ್ಥೆಯು ಈಗಾಗಲೇ ಆತ್ಮಹತ್ಯೆ ತಡೆಗಟ್ಟುವ ಬಗ್ಗೆ ಹಲವಾರು ಸಂಶೋಧನೆಗಳನ್ನು ನಡೆಸಿವೆ. ಶಾಲೆ ಮತ್ತು ಸಮುದಾಯಗಳಲ್ಲಿ ಆತ್ಮಹತ್ಯೆ ತಡೆ ಕಾರ್ಯಕ್ರಮಗಳನ್ನು ಆಯೋಜಿಸುವುದು. ಅದೇ ರೀತಿಯಾಗಿ ವಿಷಕಾರಿ ರಾಸಾಯನಿಕ ಮತ್ತು ಆಯುಧಗಳು ಅಷ್ಟು ಸುಲಭವಾಗಿ ಸಿಗದಂತೆ ಮಾಡುವುದು ಆತ್ಮಹತ್ಯೆ ತಡೆಯುವ ಕೆಲವೊಂದು ವಿಧಾನಗಳು ಎಂದು ಡಬ್ಲ್ಯೂಎಚ್ ಎಂ ಎಫ್ ಹೇಳಿದೆ.

ಒಳ್ಳೆಯ ಮಾನಸಿಕ ಆರೋಗ್ಯ ಒದಗಿಸುವುದು ಮತ್ತು ಆತ್ಮಹತ್ಯೆ ತಡೆಯಲು ಕೆಲವೊಂದು ಸಲಹೆಗಳನ್ನು ನೀಡಲಾಗಿದೆ. ಅವುಗಳು ಈ ರೀತಿಯಲ್ಲಿದೆ.

• ಮಾನಸಿಕ ಆರೋಗ್ಯದ ಬಗ್ಗೆ ಜನರನ್ನು ಸುಶೀಕ್ಷಿತರನ್ನಾಗಿ ಮಾಡಿ ಮತ್ತು ಅವರಿಗೆ, ಅವರ ಜತೆಯಲ್ಲಿರುವವರು, ಸಹೋದ್ಯೋಗಿಗಳು, ಸ್ನೇಹಿತರು ಮತ್ತು ಕುಟುಂಬದವರಿಗೆ ಮಾನಸಿಕ ಸಮಸ್ಯೆ ಮತ್ತು ಅನಾರೋಗ್ಯ ಬಂದಾಗ ಇದನ್ನು ಪತ್ತೆ ಮಾಡಬಹುದು.

• ವೈದ್ಯಕೀಯ ಸಿಬ್ಬಂದಿ ಮತ್ತು ಮೊದಲು ಚಿಕಿತ್ಸೆ ನೀಡುವಂತಹವರಿಗೆ ಮಾನಸಿಕ ಪ್ರಥಮ ಚಿಕಿತ್ಸೆ ಬಗ್ಗೆ ತರಬೇತಿ ನೀಡುವುದು.

• ಆತ್ಮಹತ್ಯೆ ತಡೆ ಕಾರ್ಯಕ್ರಮಕ್ಕೆ ಸರ್ಕಾರಿ ಅನುದಾನ ಹೆಚ್ಚಿಸುವುದು.

ಭಾರತದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಇದನ್ನು ತಡೆಯುವ ಕಾರ್ಯಕ್ರಮಗಳು ಬೆರಳೆಣಿಕೆಯಷ್ಟು ಮಾತ್ರ ಇದೆ.

English summary

World Mental Health Day 2019: Theme And Indian Senario

The World Federation for Mental Health (WFMH) has observed 10 October as World Mental Health Day every year since 1992. With partners in 90 countries, WFMH works to raise awareness about mental health conditions from depression to suicide around the world. This year's theme This year’s theme – “Mental Health Promotion and Suicide Prevention” is an important subject for us in the 21st century.
X
Desktop Bottom Promotion