Latest Updates
-
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ!
ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
ಇತ್ತೀಚಿನ ದಿನಗಳಲ್ಲಿ ಮದುವೆಯಾಗಿ ಕೆಲವು ವರ್ಷಗಳು ಕಳೆದರೂ ಮಕ್ಕಳಾಗಿರಲ್ಲ, ಕೆಲವರು ಮಗು ಬೇಡ ಎಂಬ ತೀರ್ಮಾನದಲ್ಲಿರುತ್ತಾರೆ, ಆದರೆ ಇನ್ನು ಕೆಲವರು ಮಗುವಿಗಾಗಿ ಪ್ರಯತ್ನಿಸಿದರೂ ಗರ್ಭಧಾರಣೆಯಾಗಿರಲ್ಲ. ಬಂಜೆತನದ ಸಮಸ್ಯೆ ಇತ್ತೀಚಿಗೆ ಹೆಚ್ಚಾಗಿ ಕಾಡುತ್ತಿದೆ, ಅದರಲ್ಲೂ ಪುರುಷರಲ್ಲಿ ಹೆಚ್ಚಾಗುತ್ತಿದೆ.

ಅತಿಯಾದ ಮಾನಸಿಕ ಒತ್ತಡ, ಜೀವನಶೈಲಿ, ಆಹಾರಶೈಲಿ ಈ ಕಾರಣಗಳಿಂದಾಗಿ ಪುರುಷರಲ್ಲಿ ಸಂತಾನೋತ್ಪತ್ತಿ ಸಾಮಾರ್ಥ್ಯ ಕಡಿಮೆಯಾಗುತ್ತಿದೆ. ವೀರ್ಯಾಣುಗಳ ಸಂಖ್ಯೆ ಕಡಿಮೆಯಾದರೆ ಪುರುಷರಲ್ಲಿ ಬಂಜೆತನ ಕಾಡುವುದು. ಪುರುಷರು ತಮ್ಮ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸಲು ಆಹಾರಕ್ರಮದಲ್ಲಿ ಈ ಆಹಾರಗಳನ್ನು ಸೇರಿಸುವುದು ಒಳ್ಳೆಯದು:
ಮೊಟ್ಟೆ: ಮೊಟ್ಟೆ ವೀರ್ಯಾಣುಗಳ ಸಂಖ್ಯೆ ಹೆಚ್ಚು ಮಾಡುತ್ತದೆ. ಇದರಲ್ಲಿರುವ ಅಮೈನೋ ಆಮ್ಲ ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸಲು ಸಹಕಾರಿ.
ಬಾಳೆಹಣ್ಣು
ಬಾಳೆಹಣ್ಣಿನಲ್ಲಿ ವಿಟಮಿನ್ ಎ, ಬಿ1 ಮತ್ತು ಸಿ ಇರುವುದರಿಂದ ಪುರುಷರಿಗೆ ತುಂಬಾನೇ ಒಳ್ಳೆಯದು. ಇದು ನಿಮ್ಮ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುತ್ತದೆ.
ಶತಾವರಿ
ಶತಾವರಿಯಲ್ಲಿ ವಿಟಮಿನ್ ಸಿ ಅಧಿಕವಿರಲಿದೆ, ಇದು ದೇಹದಲ್ಲಿರುವ ಕಶ್ಮಲವನ್ನು ಹೊರ ಹಾಕಲು ಸಹಕಾರಿ. ಇದು ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುತ್ತದೆ.
ಡಾರ್ಕ್ ಚಾಕೋಲೆಟ್
ಡಾರ್ಕ್ ಚಾಕ್ಲೆಟ್‌ನಲ್ಲಿ ಅಮೈನೋಆಮ್ಲವಿದೆ, ಇದರ ಸೇವನೆ ಕೂಡ ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸಲು ಸಹಕಾರಿ.
ವಾಲ್ನಟ್: ಇದರಲ್ಲಿ ಒಮೆಗಾ 3 ಕೊಬ್ಬಿನಂಶವಿದೆ, ಇದು ಪುರುಷ ಹಾಗೂ ಮಹಿಳೆಯರಲ್ಲಿ ಸಂತಾನಫತ್ಪತ್ತಿ ಸಾಮರ್ಥ್ಯ ಹೆಚ್ಚಿಸಲು ತುಂಬಾನೇ ಸಹಕಾರಿ.
ಸಿಹಿ ಕುಂಬಳಕಾಯಿ ಬೀಜ'
ಇದು ತುಂಬಾ ಒಳ್ಳೆಯದು, ಇದನ್ನು ಸೇವಿಸುವುದರಿಂದ ಟೆಸ್ಟೋಸ್ಟಿರೋನೆ ಉತ್ಪತ್ತಿ ಹೆಚ್ಚು ಮಾಡಲು ಸಹಕಾರಿ. ಇದು ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸಲು ಸಹಕಾರಿ.
ಸಿಟ್ರಸ್ ಹಣ್ಣುಗಳು
ಪ್ರತಿದಿನ ಸಿಟ್ರಸ್ ಆಹಾರ ಸೇವಿಸಿ, ಇದು ಸಂತಾನೋತ್ಪತ್ತಿ ಹೆಚ್ಚಿಸಲು ತುಂಬಾನೇ ಸಹಕಾರಿ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ, ಪುರುಷರಲ್ಲಿ ಲೈಂಗಿಕ ಸಾಮರ್ಥ್ಯ ಹೆಚ್ಚಿಸುತ್ತದೆ.
ಸತುವಿನಂಶ ಇರುವ ಆಹಾರ
ಸತುವಿನಂಶದ ಕೊರತೆ ಉಂಟಾದರೆ ಕೂಡ ಸಂತಾನೋತ್ಪತ್ತಿ ಸಾಮರ್ಥ್ಯಕ್ಕೆ ತೊಂದರೆಯಾಗುವುದು. ಸತುವಿನಂಶವಿರುವ ಆಹಾರ ಸೇವಿಸಿ.
ಬೆಣ್ಣೆ ಹಣ್ಣು
ಬೆಣ್ಣೆ ಹಣ್ಣಿನಲ್ಲಿ ವಿಟಮಿನ್ ಇ, ಸತುವಿನಂಶ ಇರುತ್ತದೆ. ಇದರಲ್ಲಿರುವ ಆರೋಗ್ಯಕರ ಕೊಬ್ಬಿನಂಶ ಕೂಡ ಪುರುಷ ಹಾಗೂ ಮಹಿಳೆಯರ ಆರೋಗ್ಯಕ್ಕೆ ಒಳ್ಳೆಯದು.
ಪುರುಷರಲ್ಲಿ ಬಂಜೆತನದ ಲಕ್ಷಣಗಳು
ಲೈಂಗಿಕ ಕ್ರಿಯೆ ನಡೆಸುವಾಗ ಸಮಸ್ಯೆಯಾಗುವುದು: ಉದಾಹರಣೆಗೆ ಶೀಘ್ರ ಸ್ಖಲನ, ಲೈಂಗಿಕ ಆಸಕ್ತಿ ಕಡಿಮೆಯಾಗಿರುವುದು
ಶಿಶ್ನ ಭಾಗದಲ್ಲಿ ನೋವು, ಊತ
ಉಸಿರಾಟದ ಸಮಸ್ಯೆಯಾವುದು
ಸ್ತನ ಗಾತ್ರ ಹೆಚ್ಚಾಗುವುದು
ಮುಖದಲ್ಲಿ ಗಡ್ಡ, ಮೀಸೆ ಕಡಿಮೆಯಾಗುವುದು
ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು
ವೈದ್ಯರನ್ನು ಯಾವಾಗ ಭೇಟಿಯಾಗಬೇಕು?.
ಲೈಂಗಿಕ ಆಸಕ್ತಿ ಕಡಿಮೆಯಾಗದೇ ಇರುವುದು, ಶೀಘ್ರ ಸ್ಖಲನವಾಗುವುದು ಅಥವಾ ಎಷ್ಟೇ ಹೊತ್ತಾದರೂ ಸ್ಖಲನವಾಗದಿರುವುದು
ಶಿಶ್ನ ಭಾಗದಲ್ಲಿ ಸಮಸ್ಯೆ'
ಆ ಭಾಗದಲ್ಲಿ ಸರ್ಜರಿಯಾಗಿದ್ದರೆ
ವಯಸ್ಸು 35 ದಾಟಿದ್ದರೆ
ಈ ಕಾರಣಗಳಿಂದಲೂ ಬಂಜೆತನ ಉಂಟಾಗುತ್ತಿದೆ
ಅತ್ಯಧಿಕ ವ್ಯಾಯಾಮ: ಕೆಲವರು ತುಂಬಾ ವ್ಯಾಯಾಮ ಮಾಡುತ್ತಾರೆ, ಆದರೆ ಯಾವುದೇ ಆಗಿರಲಿ ಮಿತಿಯಲ್ಲಿ ಇದ್ದರೆ ಒಳ್ಳೆಯದು, ವ್ಯಾಯಾಮ ಅತಿಯಾದರೆ ಸ್ನಾಯುಗಳಿಗೆ ಪೆಟ್ಟಾಗುವುದು
ಮಾನಸಿಕ ಒತ್ತಡ: ಅತ್ಯಧಿಕ ಮಾನಸಿಕ ಒತ್ತಡದಿಂದ ಕೂಡ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು
ಡ್ರಗ್ಸ್ ಬಳಕೆ': ಡ್ರಗ್ಸ್ ಚಟಕ್ಕೆ ಒಳಗಾದರೆ ಪುರುಷ ಸಾಮರ್ಥ್ಯ ಕಡಿಮೆಯಾಗುವುದು
ರಾಸಾಯನಿಕ ವಸ್ತುಗಳು ಮೈಗೆ ತಾಗುವುದು: ರಾಸಾಯನಿಕ ವಸ್ತುಗಳನ್ನು ಉತ್ಪತ್ತಿ ಮಾಡುವಲ್ಲಿ ಕೆಲಸ ಮಾಡುವುದು ಅಥವಾ ತೋಟಗಳಿಗೆ ಔಷಧ ಸಿಂಪಡಿಸುವುದು (ಕೆಲವರು ವರ್ಷ ಪೂರ್ತಿ ಕೂಲಿಗೆ ಈ ಕೆಲಸ ಮಾಡುತ್ತಾರೆ, ಇದರಿಂದ ಪುರುಷಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಕಡಿಮೆಯಾಗುವುದು)
ಅತ್ಯಧಿಕ ಉಷ್ಣಾಂಶ: ಬಿಗಿಯಾದ ಒಳ ಉಡುಪು ಧರಿಸುವುದು ಒಳ್ಳೆಯದಲ್ಲ, ಕಾಟನ್‌ನ ಸಡಿಲ ಒಳ ಉಡುಪು ಧರಿಸಬೇಕು.



Click it and Unblock the Notifications