For Quick Alerts
ALLOW NOTIFICATIONS  
For Daily Alerts

ಊಟ ಮಾಡಿದ ತಕ್ಷಣ ಮಾಡುವ ಈ ತಪ್ಪುಗಳು ತೂಕ ಹೆಚ್ಚಾಗಲು ಕಾರಣವಾಗಬಹುದು

|

ತೂಕ ಹೆಚ್ಚಾಗಲು, ನಾವು ಸೇವಿಸುವ ಆಹಾರ ಹಾಗೂ ಕುಡಿಯುವ ಪಾನೀಯ ಮಾತ್ರ ಪರಿಣಾಮ ಬೀರುವುದಿಲ್ಲ, ಅದರ ಜೊತೆಗೆ, ಆಹಾರವನ್ನು ಸೇವಿಸಿದ ನಂತರ ಮಾಡುವ ಅನೇಕ ಸಣ್ಣ ಅಭ್ಯಾಸಗಳು ಸಹ ಕಾರಣವಾಗುತ್ತವೆ. ಇದರಿಂದ ತೂಕ ಹೆಚ್ಚಾಗುವುದರೊಂದಿಗೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಆದ್ದರಿಂದ ಇಂತಹ ಅಭ್ಯಾಸಗಳಿಂದ ದೂರವಿರುವುದು ಉತ್ತಮ. ಹಾಗಾಗಿ ಈ ಲೇಖನದಲ್ಲಿ ಊಟ ಮಾಡಿದ ನಂತರ ಮಾಡಬಾರದ ಕೆಲವು ಸಂಗತಿಗಳನ್ನು ಹೇಳಿದ್ದೇವೆ.

ಊಟ ಮಾಡಿದ ನಂತರ ಮಾಡುವ ಈ ಅಭ್ಯಾಸಗಳು ತೂಕ ಹೆಚ್ಚಾಗಲು ಕಾರಣವಾಗುತ್ತವೆ. ಅವುಗಳಾವುವೆಂದರೆ,

ಹಣ್ಣು ಸೇವನೆ:

ಹಣ್ಣು ಸೇವನೆ:

ಊಟದ ನಂತರ ಹಣ್ಣು ಸೇವನೆಯನ್ನು ಅತಿಯಾಗಿ ಮಾಡಬೇಡಿ. ಇದು ಆಹಾರವನ್ನು ಹೀರಿಕೊಳ್ಳುತ್ತವೆ. ಜೊತೆಗೆ ಹಣ್ಣಿನ ತಕ್ಷಣದ ಸೇವನೆ ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಊಟವಾದ ಬಳಿಕ ಹಣ್ಣು ಸೇವನೆ ಮಾಡಬೇಡಿ.

ಧೂಮಪಾನ:

ಧೂಮಪಾನ:

ಊಟವಾದ ತಕ್ಷಣ ಧೂಮಪಾನ ಮಾಡುವ ಅಭ್ಯಾಸ ಹೆಚ್ಚಿನವರಿಗಿರುತ್ತದೆ. ಆದರೆ ಇದು ಒಳ್ಳೆಯದಲ್ಲ್. ಹೀಗೆ ಮಾಡುವುದರಿಂದ ನಿಮ್ಮ ತೂಕ ಹೆಚ್ಚಾಗಬಹುದು. ಜೊತೆಗೆ ಸಿಗರೇಟ್ಗಳಲ್ಲಿ ಕಾರ್ಸಿನೋಜೆನ್ ಗಳಿವೆ, ಅದು ಕರುಳಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ನಿದ್ರೆ:

ನಿದ್ರೆ:

ಊಟದ ನಂತರ ಸಾಮಾನ್ಯವಾಗಿ ಎಲ್ಲರೂ ಹಾಸಿಗೆಗೆ ಜಾರಿಕೊಳ್ಳುತ್ತಾರೆ. ಆದರೆ ಇದು ತಪ್ಪು. ಊಟದ ತಕ್ಷಣ ನಿದ್ದೆ ಮಾಡಿದರೆ, ಹೊಟ್ಟೆಯಿಂದ ಉತ್ಪತ್ತಿಯಾಗುವ ಜೀರ್ಣಕಾರಿ ರಸಗಳು ಮೇಲಕ್ಕೆತ್ತಿ ಹೃದಯ ಸುಡುವಿಕೆಗೆ ಕಾರಣವಾಗುತ್ತವೆ, ಇದು ಜೀರ್ಣಕ್ರಿಯೆಯನ್ನು ಇನ್ನಷ್ಟು ಹದಗೆಡಿಸುತ್ತದೆ. ಆದ್ದರಿಂದ ಊಟದ ಆದ ತಕ್ಷಣವೇ ನಿದ್ದೆಗೆ ಹೋಗಬೇಡಿ.

ಸ್ನಾನ:

ಸ್ನಾನ:

ಊಟ ಮಾಡಿದ ನಂತರ ಸ್ನಾನ ಮಾಡುವುದನ್ನು ತಪ್ಪಿಸಿ . ಊಟದ ನಂತರ ನೀವು ಸ್ನಾನ ಮಾಡಿದರೆ, ದೇಹದ ಉಷ್ಣತೆಯನ್ನು ನಿಯಂತ್ರಿಸಲು ರಕ್ತವು ಚರ್ಮಕ್ಕೆ ಹೋಗುತ್ತದೆ, ಇದು ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ ಏಕೆಂದರೆ ಜೀರ್ಣಕ್ರಿಯೆಗೆ ಹೆಚ್ಚಿನ ಶಕ್ತಿಯ ಅಗತ್ಯವಿರುತ್ತದೆ.

ವ್ಯಾಯಾಮ:

ವ್ಯಾಯಾಮ:

ಊಟ ಮಾಡಿದ ತಕ್ಷಣ ವ್ಯಾಯಾಮ ಮಾಡುವುದನ್ನು ತಪ್ಪಿಸಿ, ಇದು ನಿಮ್ಮ ಜೀರ್ಣಾಂಗ ಪ್ರಕ್ರಿಯೆಯನ್ನು ಅಡ್ಡಿಪಡಿಸುತ್ತದೆ. ನೀವು ವಾಂತಿ, ಹೊಟ್ಟೆ ನೋವನ್ನು ಸಹ ಅನುಭವಿಸಬಹುದು. ವಜ್ರಾಸನ ಊಟದ ನಂತರ ಸೂಚಿಸುವ ಏಕೈಕ ವ್ಯಾಯಾಮವಾಗಿದೆ. ಇದು ಜೀರ್ಣಕಾರಿ ಪ್ರಕ್ರಿಯೆಯನ್ನು ಸರಿಪಡಿಸುತ್ತದೆ.

ಚಹಾ / ಕಾಫಿ:

ಚಹಾ / ಕಾಫಿ:

ನಮ್ಮಲ್ಲಿ ಹಲವರು ಊಟವಾದ ಕೂಡಲೇ ಚಹಾ ಅಥವಾ ಕಾಫಿ ಕುಡಿಯಲು ಇಷ್ಟಪಡುತ್ತೇವೆ. ಇದು ನಮ್ಮ ಆರೋಗ್ಯಕ್ಕೆ ಕೆಟ್ಟದು. ಅವು ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಸೀಮಿತಗೊಳಿಸುವ ಕೆಲವು ಫೀನಾಲಿಕ್ ಸಂಯುಕ್ತಗಳನ್ನು ಒಳಗೊಂಡಿರುತ್ತವೆ. ಆದ್ದರಿಂದ, ಊಟ ಮಾಡಿದ ಒಂದು ಗಂಟೆಯ ನಂತರವೇ ಅವುಗಳನ್ನು ಸೇವಿಸಬೇಕು.

ನೀರು ಕುಡಿಯುವುದು:

ನೀರು ಕುಡಿಯುವುದು:

ನೀವು ಊಟವಾದ ಕೂಡಲೇ ನೀರನ್ನು ಕುಡಿದ್ರೆ, ಅದು ಹೊಟ್ಟೆಯಲ್ಲಿರುವ ಕಿಣ್ವಗಳು ಮತ್ತು ರಸಗಳ ಸ್ರವಿಸುವಿಕೆಯನ್ನು ಕಡಿಮೆ ಮಾಡುತ್ತದೆ. ಇದು ಅಸಿಡಿಟಿ ಮತ್ತು ಉರಿಯೂತಕ್ಕೆ ಕಾರಣವಾಗಬಹುದು, ಇದು ಜೀರ್ಣಕ್ರಿಯೆಯನ್ನು ಕಷ್ಟಕರವಾಗಿಸುತ್ತದೆ. ಸ್ವಲ್ಪ ಸಮಯದ ನಂತರ ನೀವು ನೀರು ಕುಡಿಯಬಹುದು.

English summary

Mistakes Can Increase Weight After Having Food In Kannada

Here we told about Mistakes can increase weight after having food in kannada, read on
Story first published: Tuesday, March 30, 2021, 12:21 [IST]
X
Desktop Bottom Promotion