Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್‌ನಂತೆ ಕುಡಿಯಬಹುದು!
ಊಟದ ಸಮಯಕ್ಕೆ ರುಚಿ ರುಚಿಯಾದ ಹಾಗೆ ಎಲ್ಲರು ಇಷ್ಟಪಟ್ಟು ಸವಿಯುವ ಸಾಂಬಾರ್, ಸಾರಿನ ಜೊತೆಗೆ ರಸಂ ಕೂಡ ಮಾಡುವುದು ಸಾಮಾನ್ಯ. ಕೆಲವರು ನಿತ್ಯ ರಸಂ ಸವಿಯಲು ಇಷ್ಟಪಡುತ್ತಾರೆ. ಅದ್ರಲ್ಲೂ ಬೇಸಿಗೆಯ ಈ ಸಮಯದಲ್ಲಿ ಹೆಚ್ಚು ಮಸಾಲೆ ಪದಾರ್ಥಗಳ ಬಳಸಿ ಮಾಡುವ ಖಾದ್ಯಗಳಿಗಿಂತ ರುಚಿ ರುಚಿಯಾದ ಹಾಗೆ ಬಹಳ ಸುಲಭವಾಗಿ ಕಡಿಮೆ ವಸ್ತುಗಳ ಬಳಸಿಕೊಂಡು ಮಾಡುವ ಖಾದ್ಯ ಅಂದ್ರೆ ಎಲ್ಲರಿಗೂ ಇಷ್ಟವಾಗೋದು ಖಚಿತ.
ತರಕಾರಿ ಇಲ್ಲದೆ ರಸಂ, ಟೊಮೆಟೋ ರಸಂ, ಬೇಳೆ ಸಾರು ಮಾಡಿ ಸವಿಯುವುದು ಕಾಮನ್. ಅದರಲ್ಲೂ ನಾವು ಹಲವು ಬಗೆಯ ರಸಂ ಮಾಡುವುದಂತು ಎಂದಿಗೂ ಸಾಮಾನ್ಯ ಕ್ರಿಯೆ ಎನ್ನಬಹುದು. ಹಾಗೆ ನೀವು ಬೇಳೆಯಿಂದ ಮಾಡುವಂತಹ ಸಾರು ಅದ್ಭುತ ರುಚಿ ನೀಡಲಿದೆ. ಈ ರಸಂನಲ್ಲಿರುವ ಹಲವು ವಿಧಗಳ ಪೈಕಿ ನಾವಿಂದು ಧನಿಯಾ ಬಳಸಿ ಮಾಡುವ ರಸಂ ಕುರಿತಾಗಿ ಹೇಳಲಿದ್ದೇವೆ. ಇದು ಘಮ ಘಮಿಸುವ ರುಚಿಯೊಂದಿಗೆ ಊಟಕ್ಕೆ ಬೆಸ್ಟ್ ಆಗಿರಲಿದೆ.
ಹೋಟೆಲ್‌ನಲ್ಲಿ ಲೋಟದಲ್ಲಿ ನೀಡುವ ರಸಂ ಅತ್ಯಂತ ರುಚಿಯಾಗಿರುತ್ತೆ. ಅದರ ಸುವಾಸನೆ ಕೂಡ ಮತ್ತಷ್ಟು ರಸಂ ಕುಡಿಯಬೇಕು ಎನಿಸುತ್ತದೆ. ಆದ್ರೆ ನಾವಿಂದು ಧನಿಯಾ ಕಾಳಿನ ರುಚಿ ರುಚಿ ರಸಂ ಮಾಡುವ ಕುರಿತು ತಿಳಿಯೋಣ. ಈ ರಸಂ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬೆಲ್ಲಾ ಮಾಹಿತಿ ತಿಳಿದುಕೊಳ್ಳೋಣ.
ಧನಿಯಾ ರಸಂ ಮಾಡಲು ಬೇಕಾಗುವ ಪದಾರ್ಥಗಳು
- ಟೊಮೆಟೋ
- ಈರುಳ್ಳಿ
- ಹುಣಸೆ ಹುಳಿ
- ಹಸಿ ಮೆಣಸು
- ಜೀರಿಗೆ
- ಧನಿಯಾ ಕಾಳು
- ಕರಿಬೇವು
- ಕೊತ್ತಂಬರಿ ಸೊಪ್ಪು
- ಅರಶಿಣ
- ಖಾರದ ಪುಡಿ
- ಉಪ್ಪು
- ಸಾಸಿವೆ
- ಇಂಗು
- ಬೆಳ್ಳುಳ್ಳಿ
ಧನಿಯಾ ರಸಂ ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ನೀರು ಹಾಕಿ ಬಿಸಿಯಾಗಲು ಬಿಡಿ. ನೀರು ಸ್ವಲ್ಪ ಬಿಸಿಯಾದ ಬಳಿಕ ಅದಕ್ಕೆ ಹೆಚ್ಚಿಕೊಂಡಿದ್ದ 4ರಿಂದ 5 ಟೊಮೆಟೋ ಹಾಕಿಕೊಳ್ಳಿ. ಹಾಗೆ ಇದಕ್ಕೆ ಹುಣಸೆ ಹುಳಿಯನ್ನು ಇಡಿಯಾಗಿ ಹಾಕಿ, ಒಂದು ಈರುಳ್ಳಿ, ಖಾರಕ್ಕೆ ಹಸಿ ಮೆಣಸು ಸೇರಿಸಿಕೊಂಡು ಬಳಿಕ ಜೀರಿಗೆ, 4 ಚಮಚ ಧನಿಯಾ ಕಾಳು, ಕರಿಬೇವು ಹಾಗೆ ಕೊತ್ತಂಬರಿ ಸೊಪ್ಪು, ಅರಶಿಣ, ಖಾರದ ಪುಡಿ ಹಾಗೆ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಇದೆಲ್ಲಾ ವಸ್ತು ಹಾಕಿದ ಬಳಿಕ ಮಿಶ್ರಣ ಮಾಡಿ ಮುಚ್ಚಳ ಮುಚ್ಚಿ ಇದನ್ನು ಬೇಯಿಸಿಕೊಳ್ಳಬೇಕು. 5 ನಿಮಿಷ ಆದರೂ ಇದು ಬೇಯಿಸಬೇಕು. ಅನಂತರ ಮುಚ್ಚಳ ತೆಗೆದು ಮಿಕ್ಸ್ ಮಾಡಿ. ಹಾಗೆ ಸ್ವಲ್ಪ ತಣ್ಣಗಾಗಲು ಬಿಡಿ. ಈಗ ಜರಡಿ ಹಿಡಿದುಕೊಂಡು ನೀರು ಬೇರ್ಪಡಿಸಿಕೊಳ್ಳಿ. ನಂತರ ಅದರ ಉಳಿದ ವಸ್ತುಗಳನ್ನು ಚೆನ್ನಾಗಿ ಹಿಂಡಿಕೊಂಡು ಅದರ ರಸ ತೆಗೆದು ನೀರಿನೊಂದಿಗೆ ಸೇರಿಸಿಕೊಳ್ಳಿ.
ನಂತರ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿಯಾಗಲು ಬಿಟ್ಟು, ನಂತರ ಸಾಸಿವೆ, ಜೀರಿಗೆ, ಹಸಿ ಮೆಣಸು, ಒಣ ಮೆಣಸು, ಬೆಳ್ಳುಳ್ಳಿ, ಕರಿವೇವು, ಇಂಗು ಹಾಕಿಕೊಂಡು ಬಿಸಿ ಮಾಡಿ. ಈಗ ಇದೇ ಒಗ್ಗರಣೆ ಪಾತ್ರೆಗೆ ಟೊಮೆಟೋ ರಸವನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಸ್ವಲ್ಪ ನೀರು ಸಹ ಸೇರಿಸಿ ಕುದಿಬರಲು ಬಿಡಿ.
ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿ ಕುದಿಬರಲು ಬಿಡಿ. ಹಾಗೆ ಇದಕ್ಕೆ ಒಂದು ಚೂರು ಬೆಲ್ಲ ಸಹ ಸೇರಿಸಿಕೊಳ್ಳಿ. ನಂತರ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಕುದಿಬರಲು ಬಿಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಇಳಿಸಿಕೊಳ್ಳಿ. ಇಷ್ಟಾದರೆ ರುಚಿ ರುಚಿಯಾದ ಧನಿಯಾ ರಸಂ ಸಿದ್ದವಾಗುತ್ತೆ ನೀವು ಸಹ ಮನೆಯಲ್ಲಿ ಇದನ್ನು ಮಾಡಿ ಸವಿದು ನೋಡಿ. ಮನೆಯಲ್ಲಿ ಎಲ್ಲರಿಗೂ ಇದು ಇಷ್ಟವಾಗುತ್ತೆ. ಹಾಗೆ ಇದನ್ನು ಬಿಸಿ ಬಿಸಿಯಾಗಿ ಸೂಪ್‌ನಂತೆಯೂ ಕುಡಿಯಬಹುದು.



Click it and Unblock the Notifications

