Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಗ್ಯಾಸ್ ಹಚ್ಚೋದೆ ಬೇಡ; ಸುಲಭವಾಗಿ ಮಾಡಿ ಈ ಅದ್ಭುತ ರುಚಿಯ ಸ್ವೀಟ್!
ದೇಶದಲ್ಲಿ ಅಡುಗೆ ಅನಿಲ ಬಳಕೆ ಹಾಗೂ ವಿತರಣೆಯಲ್ಲಿ ಏರುಪೇರು ಉಂಟಾಗಿರುವುದರಿಂದ ಹಲವು ಹೋಟೆಲ್‌ಗಳ ಸೇವೆಯಲ್ಲಿ ವ್ಯತ್ಯಯ ಆಗಿರುವುದು ನೀವು ಗಮನಿಸಿರಬಹುದು. ಹಾಗೆ ಗೃಹಬಳಕೆ ಸಿಲಿಂಡರ್ ಬುಕ್ಕಿಂಗ್‌ನಲ್ಲೂ ಬದಲಾವಣೆಯನ್ನು ತರಲಾಗಿದ್ದು, ತಿಂಗಳಿಗೆ ಒಂದೇ ಒಂದು ಸಿಲಿಂಡರ್ ವಿತರಣೆಯಾಗಲಿದೆ. ಇದು ಮುಂದಿನ ಆದೇಶದವರೆಗೂ ಮುಂದುವರೆಯಲಿದೆ. ಆದ್ರೆ ಮನೆಯಲ್ಲಿ ಗ್ಯಾಸ್ ಬಳಸದೆಯೂ ಒಂದಿಷ್ಟು ಅಡುಗೆಯನ್ನು ಮಾಡಿಕೊಳ್ಳಬಹುದು ಎಂಬುದು ನಿಮಗೂ ತಿಳಿದಿದೆ.
ಹಾಗೆ ಬಹುತೇಕರ ಮನೆಯಲ್ಲಿ ಈಗ ಇಂಡಕ್ಷನ್ ಸ್ಟವ್ ಸಹ ಬಳಸುತ್ತಾರೆ. ಆದ್ರೆ ಇದ್ಯಾವುದರ ಅಗತ್ಯವೂ ಇಲ್ಲದೆ ಸುಲಭಾಗಿ ಈ ಸ್ವೀಟ್ ಮಾಡಬಹುದು. ನಿಮಿಷದೊಳಗೆ ಮಾಡಬಹುದಾದ ಈ ಸ್ವೀಟ್ ಎಲ್ಲರಿಗೂ ಇಷ್ಟವಾಗುತ್ತೆ. ಆದ್ರೆ ಗ್ಯಾಸ್ ಬಳಸದೆಯೇ ಇದನ್ನು ಮಾಡಬಹುದು. ಹಾಗಾದ್ರೆ ಗ್ಯಾಸ್ ಇಲ್ಲದೆ ಸುಲಭವಾಗಿ ಮಾಡುವ ತಿಂಡಿ ಯಾವುದು? ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.
ಮನೆಯಲ್ಲಿ ಗ್ಯಾಸ್ ಬಳಸದೆಯ ಈ ಸ್ವೀಟ್ ಮಾಡಬಹುದು. ಎಲ್ಲರಿಗೂ ಇಷ್ಟವಾಗುವಂತಹ ಹಾಗೆ ಕಡಿಮೆ ಸಮಯದಲ್ಲಿ ಕಡಿಮೆ ವಸ್ತುಗಳ ಬಳಸಿಕೊಂಡು ಈ ರುಚಿ ರುಚಿಯ ಸ್ವೀಟ್ ಮಾಡಿ ಸವಿಯಬಹುದು. ಹಾಗಾದ್ರೆ ಈ ಸ್ವೀಟ್ ಮಾಡುವುದು ಹೇಗೆ? ಗ್ಯಾಸ್ ಬಳಸದೆಯೇ ಸ್ವೀಟ್ ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಗ್ಯಾಸ್ ಬಳಸದೆಯೇ ಸ್ವೀಟ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಸಕ್ಕರೆ
- ಏಲಕ್ಕಿ
- ಹಾಲು
- ಬಾದಾಮಿ
- ಗೋಡಂಬಿ
- ತುಪ್ಪ
ಗ್ಯಾಸ್ ಬಳಸದೆಯೇ ಸ್ವೀಟ್ ಮಾಡುವ ವಿಧಾನವೇನು?
ಮೊದಲು ಒಂದು ಮಿಕ್ಸಿ ಜಾರ್‌ಗೆ ಮುಕ್ಕಾಲು ಕಪ್ ಸಕ್ಕರೆ, ಏಲಕ್ಕಿ ಹಾಕಿಕೊಂಡು ಪುಡಿ ಮಾಡಬೇಕು. ನುಣ್ಣಗೆ ಪುಡಿ ಮಾಡಿದ ಸಕ್ಕರೆ ಪುಡಿ ಒಂದು ಬೌಲ್‌ಗೆ ಹಾಕಿ ಅದಕ್ಕೆ ಚೂರು ಹಾಲು ಹಾಕಿ ಮಿಕ್ಸ್ ಮಾಡಬೇಕು. ಇದು ಮೆತ್ತನೆಯ ಹಿಟ್ಟಿನ ಹದಕ್ಕೆ ಬರಬೇಕು. ಪೇಸ್ಟ್ ಹದಕ್ಕೆ ಬಂದಾಗ ತೆಗೆದಿಡಿ. ಈಗ ಮಿಕ್ಸಿ ಜಾರ್‌ಗೆ 1 ಕಪ್ ಹುರಿಗಡಲೆ ಹಾಕಿ ನುಣ್ಣಗೆ ಪುಡಿ ಮಾಡಿ. ಈ ಪುಡಿಯನ್ನು ಜರಡಿ ಹಿಡಿದು ನುಣ್ಣಗಿರುವ ಪುಡಿಯನ್ನು ಮಾತ್ರ ತೆಗೆದು ಬೌಲ್‌ಗೆ ಹಾಕಿಟ್ಟುಕೊಳ್ಳಿ. 1 ಕಪ್ ಪುಡಿ ಆಗಬೇಕು.
ಈಗ ಈ ಪುಡಿಗೆ 1 ಸ್ಪೂನ್ ತುಪ್ಪ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಚೆನ್ನಾಗಿ ಮಿಕ್ಸ್ ಆದ ಬಳಿಕ ಇದಕ್ಕೆ ಸ್ವಲ್ಪ ಸ್ವಲ್ಪ ಹಾಲನ್ನು ಹಾಕಿಕೊಳ್ಳುತ್ತಾ ಮಿಶ್ರಣ ಮಾಡಿ. ಹಿಟ್ಟು ಸ್ವಲ್ಪ ತೇವಾಂಶ ಬರುವಂತೆ ಹಾಕಬೇಕು. ಹಿಟ್ಟು ಹುಡಿ ಹುಡಿಯಾಗಿಯೇ ಇರಬೇಕು. ಈಗ ಮತ್ತೆ ಮಿಕ್ಸಿ ಜಾರ್‌ಗೆ ಹಾಕಿ 2 ಸೆಕೆಂಡ್ ರುಬ್ಬಿದರೆ ಸಾಕು. ಅನಂತರ ಇದನ್ನು ಸಕ್ಕರೆ ಮಿಶ್ರಣದೊಳಗೆ ಈ ಹಿಟ್ಟು ಹಾಕಿ ಮಿಕ್ಸ್ ಮಾಡಿ.
ಈ ಮಿಕ್ಸಿ ಜಾರ್‌ಗೆ ಬಾದಾಮಿ, ಗೋಡಂಬಿ ಹಾಕಿ ಪುಡಿ ಅದನ್ನು ಸಹ ಹಿಟ್ಟಿನೊಂದಿಗೆ ಸೇರಿಸಿಕೊಳ್ಳಿ. ಈಗ ಕೈಯಿಂದ ಹಿಟ್ಟನ್ನು ಚೆನ್ನಾಗಿ ಕಲಸಿಕೊಳ್ಳಿ. ಹಾಲು ಹಾಕಿಕೊಳ್ಳುತ್ತಾ ಮಿಶ್ರಣ ಮಾಡಿಕೊಳ್ಳಬೇಕು. ಇದು ಬೆಲ್ಲದ ಹುಡಿಯಂತೆ ಹದಕ್ಕೆ ಬರಬೇಕು. ಚೆನ್ನಾಗಿ ಅಂಟು ಅಂಟಾಗಿ ಬಂದ ಬಳಿಕ ಈಗ ಒಂದು ಬಾಕ್ಸ್‌ಗೆ ಹಾಕಿ. ಅದ್ರಲ್ಲೂ ತಟ್ಟೆ ಅಥವಾ ಬಾಕ್ಸ್‌ಗೆ ತುಪ್ಪ ಸವರಿಕೊಂಡು ಈ ಹಿಟ್ಟನ್ನು ಹಾಕಿ ಚೆನ್ನಾಗಿ ಒತ್ತಿ ಸೆಟ್ ಮಾಡಿಕೊಳ್ಳಿ. ನಂತರ ಇದನ್ನು ಗಟ್ಟಿಯಾಗಲು ಬಿಡಿ. ಸಲ್ಪ ಗಟ್ಟಿಯಾದ ಬಳಿಕ ಕತ್ತರಿಸಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯಾದ ಸ್ವಿಟ್ ಸಿದ್ದವಾಗುತ್ತೆ.
ಈ ಸ್ವೀಟ್ ಮಾಡಲು ಕೆಲವೇ ವಸ್ತುಗಳು ಸಾಕು. ಮಾಡೋದು ಕೂಡ ಬಹಳ ಸುಲಭ.



Click it and Unblock the Notifications

