Latest Updates
-
ಬಿಸಿಲ ಬೇಗೆಯಲ್ಲಿ ಡೇಟಿಂಗ್ ಪ್ಲಾನ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಬೇಡಿ! -
ಬಿಸಿಗಾಳಿಯ ಅಬ್ಬರ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಉಪಾಯಗಳು -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮ ಪಾಲಿಸಿ -
ಫ್ಯಾಶನ್ ರೆವಲ್ಯೂಷನ್ ಡೇ: ಬಟ್ಟೆಯನ್ನು ಉಲ್ಟಾ ಧರಿಸಿ ಫೋಟೋ ಹಾಕುತ್ತಿರುವುದೇಕೆ? ಈ ಟ್ರೆಂಡ್ ಹಿಂದಿದೆ ದೊಡ್ಡ ಕಥೆ! -
ಬಿಸಿಲ ಅಲೆ: ಸುಡುವ ಬಿಸಿಲಿನಲ್ಲಿ ವ್ಯಾಯಾಮ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಉತ್ತರ ಭಾರತದ ಬಿಸಿಲ ಬೇಗೆ: ಮದುವೆ ಶಾಸ್ತ್ರಗಳೆಲ್ಲಾ ಈಗ ಸೂರ್ಯ ಮುಳುಗಿದ ಮೇಲೆ! -
ಬಿಸಿಗಾಳಿಯ ಆರ್ಭಟ: ನಿಮ್ಮ ಮನೆಯನ್ನು ಫ್ರಿಡ್ಜ್ನಂತೆ ತಂಪಾಗಿಡಲು ಇಲ್ಲಿವೆ ಅದ್ಭುತ ದೇಸಿ ಟಿಪ್ಸ್! -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ಹೊಡೆತದಿಂದ ಪಾರಾಗಲು ಮನೆಯಲ್ಲೇ ತಯಾರಿಸಿ ಈ ಜೀವ ರಕ್ಷಕ ಪಾನೀಯ! -
ಬಿಸಿಗಾಳಿಯ ಆರ್ಭಟ: ಸುಡುವ ಬಿಸಿಲಿನಿಂದ ಪಾರಾಗಲು ನೀವು ಮಾಡಲೇಬೇಕಾದ ಬದಲಾವಣೆಗಳೇನು? -
ಬಿಸಿಗಾಳಿಯ ಆರ್ಭಟ: ನಿಮ್ಮ ಬೆಳಗಿನ ವ್ಯಾಯಾಮದ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ
ಮಂಗಳ-ಗುರು ಸಂಯೋಗದಿಂದ ಕಾದಿಗೆ ಅಪರೂಪದ ಯೋಗ: ಈ ಮೂರು ರಾಶಿಯವರ ಜೀವನದಲ್ಲಿ ಶುಭಯೋಗ!
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಅಧಿಪತಿಯಾದ ಮಂಗಳನು ಸುಮಾರು 18 ತಿಂಗಳ ನಂತರ ಗುರುವಿನ ರಾಶಿಯಾದ ಮೀನ ರಾಶಿಗೆ ಪ್ರವೇಶಿಸುತ್ತಾನೆ. ಭವಿಷ್ಯದ ಪಂಚಾಂಗದ ಪ್ರಕಾರ ಈ ಸಂಚಾರವು ಏಪ್ರಿಲ್ 2 ರಂದು ಸಂಭವಿಸುತ್ತದೆ. ಇದಲ್ಲದೆ ಮಂಗಳನ ಈ ಸಂಚಾರವು ಹಲವಾರು ರಾಶಿಗಿಗೆ ಮಹತ್ವದ ಬದಲಾವಣೆಗಳಿಗೆ ಕಾರಣವಾಗಲಿದೆ. ಜ್ಯೋತಿಷ್ಯದಲ್ಲಿ ಮಂಗಳ ಹಾಗೂ ಗುರುವನ್ನು ಪ್ರಮುಖ ಗ್ರಹವೆಂದು ಹಾಗೆ ಇಬ್ಬರೂ ಸ್ನೇಹಿತರು ಎಂದು ಪರಿಗಣಿಸಲಾಗಿದೆ.
ಈ ಮಂಗಳ ಹಾಗೂ ಗುರುವಿನಿಂದ ವಿಶೇಷ ಯೋಗ ಸಹ ರೂಪುಗೊಳ್ಳುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳವನ್ನು ಶಕ್ತಿ, ಧೈರ್ಯ, ನಾಯಕತ್ವ ಮತ್ತು ಶೌರ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ, ಆದರೆ ಗುರು ಜ್ಞಾನ, ಸಮೃದ್ಧಿ, ಧರ್ಮ ಮತ್ತು ವಿಸ್ತರಣೆಯನ್ನು ಪ್ರತಿನಿಧಿಸುತ್ತಾನೆ. ಈ ಎರಡು ಗ್ರಹಗಳು ಪರಸ್ಪರ ಪ್ರಭಾವಕ್ಕೆ ಒಳಗಾದಾಗ ಪ್ರಗತಿ, ಅವಕಾಶಗಳು ಮತ್ತು ಆರ್ಥಿಕ ಲಾಭಗಳು ವ್ಯಕ್ತಿಯ ಜೀವನದಲ್ಲಿ ಹೊರಹೊಮ್ಮಲು ಕಾರಣವಾಗುತ್ತದೆ.

ಮಂಗಳವು ಗುರುವಿನ ರಾಶಿಗೆ ಪ್ರವೇಶಿಸಿದಾಗ ವ್ಯಕ್ತಿಗಳ ಹಲವು ರೀತಿಯ ಬದಲಾವಣೆಗಳತರಬಹುದು. ಅದ್ರಲ್ಲೂ ಅನೇಕ ವಿಚಾರಗಳಲ್ಲಿ ನಿಮಗೆ ಆತ್ಮಸ್ಥೈರ್ಯ, ಧೈರ್ಯ, ಹೊಸ ವೃತ್ತಿ ಅವಕಾಶಗಳು, ವ್ಯವಹಾರ ವಿಸ್ತರಣೆ ಸೇರಿದಂತೆ ಹಲವು ವಿಚಾರಗಳಲ್ಲಿ ಧನಾತ್ಮಕ ಬದಲಾವಣೆಗಳು ನಡೆಯಲಿದೆ. ಇದರಿಂದ ಪ್ರತಿಷ್ಠೆ, ಆದಾಯ ಹೆಚ್ಚಳದತಹ ಬಹ್ಯ ಪ್ರಗತಿಯನ್ನು ಸಹ ನೋಡಬಹುದು. ಹಾಗಾದ್ರೆ ಏಪ್ರಿಲ್‌ನಲ್ಲಿ ಉಂಟಾಗುತ್ತಿರುವ ಈ ವಿಶೇಷ ಸಂಯೋಗದಿಂದ ಯಾವ ರಾಶಿಯವರಿಗೆ ಧನಾತ್ಮಕ ಬದಲಾವಣೆಗಳಿವೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಮೇಷ ರಾಶಿ
ಮಂಗಳವು ಮೇಷ ರಾಶಿಯ ಅಧಿಪತಿ, ಆದ್ದರಿಂದ ಮಂಗಳನ ಈ ಸಂಚಾರವು ನಿಮಗೆ ತುಂಬಾ ಅನುಕೂಲಕರವಾಗಿದೆ ಎಂದು ಸಾಬೀತುಪಡಿಸಬಹುದು. ಮೇಷ ರಾಶಿಯ 12ನೇ ಮನೆಯಲ್ಲಿ ಗುರು ಹಾಗೂ ಮಂಗಳನ ಸಂಯೋಗ ನೋಡಬಹುದು. ಇದು ನಿಮ್ಮ ವೃತ್ತಿ ಜೀವನದಲ್ಲಿ ದೊಡ್ಡ ಬದಲಾವಣೆಗಳಿಗೆ ಕಾರಣವಾಗುವುದು ನೋಡಬಹುದು. ಉದ್ಯೋಗದ ಸ್ಥಳದಲ್ಲಿ ಹಿರಿಯ ವ್ಯಕ್ತಿಯಾಗಿದ್ದರೆ ನಿಮಗೆ ಸಿಗಬೇಕಿದ್ದ ಗೌರವ ಹಾಗೆ ಹೊಸ ಜವಾಬ್ದಾರಿಗಳು ಒಲಿದು ಬರಲಿದೆ. ನಿಮ್ಮ ಲಾಭದಾಯಕ ಕೆಲಸಗಳನ್ನು ಸುಲಭವಾಗಿ ಮಾಡಿ ಮುಗಿಸುವಿರಿ. ಅನೇಕರಿಗೆ ಇದು ಖರ್ಚುಗಳಿಂದ ಮುಕ್ತಿ ಪಡೆಯುವ ಸಮಯ ಆಗಿರಲಿದೆ.
ಧನು ರಾಶಿ
ಗುರು ಧನು ರಾಶಿಯ ಅಧಿಪತಿಯಾಗಿದ್ದು ಈ ರಾಶಿಯಲ್ಲಿ ಜನಿಸಿದವರಿಗೆ ಮಂಗಳನ ಪ್ರವೇಶವು ಸಕಾರಾತ್ಮಕವಾಗಿರಲಿದೆ. ನಿಮ್ಮ ರಾಶಿಯ 4ನೇ ಮನೆಯಲ್ಲಿ ನಡೆಯುವ ಈ ಸಂಯೋಗದಿಂದ ನಿಮಗೆ ಹಲವು ರೀತಿಯ ಲಾಭಗಳಿವೆ. ನಿಮ್ಮ ವ್ಯವಹಾರದಲ್ಲಿ ಲಾಭ ನೋಡಬಹುದು. ಹಾಗೆ ವ್ಯಾಪಾರ ಪ್ರಗತಿಗೆ ದಾರಿಗಳಿವೆ. ಉದ್ಯೋಗ ಬದಲಾವಣೆಯ ಕನಸು ಕಂಡಿದ್ದರೆ ಅಥವಾ ವೇತನ ಹೆಚ್ಚಳ ಸಂಬಂಧಿತ ಅಡ್ಡಿಗಳು ನಿವಾರಣೆಯಾಗಲಿದೆ. ತಂದೆ ತಾಯಿಯ ಆರೋಗ್ಯದಲ್ಲಿ ಚೇತಕರಿಕೆ ಕಾಣಲಿದ್ದಾರೆ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಯಾರಿಂದಾದರು ನಿಮಗೆ ಹಣ ಬರುವುದು ಬಾಕಿ ಉಳಿದಿದ್ದರೆ ಪೂರ್ಣವಾಗಲಿದೆ.
ಮೀನ ರಾಶಿ
ಮೀನ ರಾಶಿಯವರಿಗೆ ಈ ಸಂಚಾರವು ಆರ್ಥಿಕ ಮತ್ತು ವೃತ್ತಿ ನಿರೀಕ್ಷೆಗಳಲ್ಲಿ ಪ್ರಗತಿಯನ್ನು ಸೂಚಿಸುತ್ತದೆ. ಇದು ನಿಮ್ಮ ರಾಶಿಯ ಲಗ್ನ ಮನೆಯಲ್ಲಿ ಸಂಭವಿಸುತ್ತಿರುವುದರಿಂದ, ನೀವು ಹೊಸ ಯೋಜನೆಗಳಲ್ಲಿ ಯಶಸ್ಸನ್ನು ಕಾಣಬಹುದು. ಹೊಸ ವ್ಯಾಪಾರ ಪಾಲುದಾರಿಕೆ ಪ್ರಸ್ತಾಪಗಳು ಉದ್ಭವಿಸಬಹುದು. ಉದ್ಯೋಗದಲ್ಲಿರುವವರಿಗೆ, ಬಡ್ತಿ ಮತ್ತು ವೇತನ ಹೆಚ್ಚಳ ಕುರಿತಾಗಿ ಧನಾತ್ಮಕ ವಿಚಾರಗಳಿವೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ವಿಶ್ವಾಸಾರ್ಹವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications