Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
March 15 Horoscope: ಹಣಕಾಸು ಕುರಿತಾದ ವಿಚಾರವಾಗಿ ನಿಮ್ಮಲ್ಲಿ ಚಿಂತೆ ಇದೆ
ವೈದಿಕ ಶಾಸ್ತ್ರದ ಪ್ರಕಾರ ಮಾರ್ಚ್ 15 (March 15 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಿಗೆ ಈ ದಿನದಂದು ಅತ್ಯಂತ ಶ್ರಮದಾಯಕ ದಿನವಾಬಹುದು. ನಿಮ್ಮ ಹೊಸ ವ್ಯವಹಾರಗಳಲ್ಲಿ ಹೆಚ್ಚಿನ ಮಾತುಕತೆಯ ಅಗತ್ಯವಿರಲಿದೆ. ಆಪ್ತರಿಂದ ನಿಮಗೆ ಶುಭ ಸುದ್ದಿ ಇದೆ. ಹೊಸ ಆದಾಯ ಮೂಲವು ನಿಮಗೆ ಸಂತಸ ತರಲಿದೆ.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಇಂದು ಪರಿಣಾಮಕಾರಿ ದಿನ. ಯಾರಿಂದಾದರು ಹಣ ಪಡೆಯುವ ನಿಮ್ಮ ಬಯಕೆಯು ಈಡೇರದೆ ಇರಬಹುದು. ನಿಮ್ಮ ಮನೆಯ ಆರ್ಥಿಕ ವಿಚಾರವೊಂದರಿಂದ ನಿಮಗೆ ಚಿಂತೆ ಕಾಡಲಿದೆ. ಕೆಲಸದಲ್ಲಿ ಪ್ರಮಾಣಿಕ ಪ್ರಯತ್ನ ಇರಲಿ.

ಮಿಥುನ ರಾಶಿ
ಮಿಥುನ ರಾಶಿಯ ಜನರಿಗೆ ಈ ದಿನವು ಅನುಕೂಲಕರ. ನೀವು ಮಾಡಬೇಕಿದ್ದ ಹಲವು ಕೆಲಸಗಳನ್ನು ಆದಷ್ಟು ವೇಗವಾಗಿ ಅಥವಾ ಪರಿಣಾಮಕಾರಿಯಾಗಿ ಮಾಡಿ ಮುಗಿಸುವಿರಿ. ಯಾರಿಗಾದರು ಹಣ ನೀಡುವುದು ಬಾಕಿ ಇಟ್ಟುಕೊಂಡಿದ್ದರೆ ನೀಡುವುದು ಉತ್ತಮ.
ಕರ್ಕ ರಾಶಿ
ಕರ್ಕ ರಾಶಿಯ ಗೃಹಿಣಿಯರಿಗೆ ಪ್ರಯಾಣ ಹಾಗೂ ಖರ್ಚುಗಳಿಂದ ತುಂಬಿರುವ ದಿನ. ಸಾಲ ನೀಡಲು ಮುಂದಾಗಬೇಡಿ. ದೇವಾಲಯ ಭೇಟಿಯ ಸಾಧ್ಯತೆ ಇದೆ, ಐಷಾರಾಮಿ ವಸ್ತುಗಳಿಗಾಗಿ ನೀವು ಹಣ ಖರ್ಚು ಮಾಡಬಹುದು. ಯಾರಿಂದಾದರು ಹಣ ಪಡೆಯುವುದು ಬಾಕಿ ಉಳಿದರೆ ದಿನದ ಪ್ರಯತ್ನ ಫಲ ನೀಡಬಹುದು.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಈ ದಿನ ಪ್ರಯಾಣ ಮಾಡಬೇಕಾದ ದಿನವಾಗಲಿದೆ. ದೂರ ಪ್ರಯಾಣಗಳ ಮಾಡುವಾಗ ಎಚ್ಚರ ವಹಿಸಿ. ಅನೇಕರಿಗೆ ಈ ದಿನದಲ್ಲಿ ಖರ್ಚುಗಳಿವೆ. ಮನೆಯ ಆರ್ಥಿಕ ಸಮಸ್ಯೆಯೊಂದು ನಿಮ್ಮನ್ನು ಕಾಡಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಲ್ಲಿ ಈ ದಿನ ದೊಡ್ಡ ಲಾಭವಿದೆ. ವ್ಯಾಪಾರ ವ್ಯವಹಾರದ ದೃಷ್ಟಿಯಲ್ಲಿ ಹಣ ನಿಮ್ಮ ಕೈ ಸೇರಬಹುದು. ಆದಾಯದ ಹೊಸ ಆಯಾಮದ ಕುರಿತಾದ ಚರ್ಚೆಗಳಲ್ಲಿ ನಿಮಗೆ ಶುಭವಿದೆ. ದಾಂಪತ್ಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು.
ತುಲಾ ರಾಶಿ
ನಿಮ್ಮ ಉದ್ಯೋಗ ಸಂಬಂಧಿತ ಸಮಸ್ಯೆಯ ಕುರಿತಾಗಿ ಚರ್ಚೆ ಮಾಡುವಿರಿ. ಮನೆಯ ಸದಸ್ಯರೊಬ್ಬರಲ್ಲಿ ಅನಾರೋಗ್ಯ ಕಾಡಬಹುದು, ಗೃಹಿಣಿಯರು ಈ ದಿನ ಎಚ್ಚರಿಕೆಯಿಂದ ಓಡಾಟ ಮಾಡುವುದು ಉತ್ತಮ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಲ್ಲಿ ಮಿಶ್ರಫಲದ ದಿನ. ನಿಮ್ಮ ಹಣಕಾಸು ವಿಚಾರದಲ್ಲಿ ಅಂದುಕೊಂಡ ಫಲಿತಾಂಶ ಸಿಗುವುದಿಲ್ಲ. ವಾಹನ ಖರೀದಿ ಅಥವಾ ಮಾರಾಟ ಸಂಬಂಧಿ ವಿಚಾರದಲ್ಲಿ ಹಿನ್ನಡೆ ಇದೆ. ಸಂಬಂಧಿಕರ ಭೇಟಿಯು ನಿಮಗೆ ಹೊಸ ವಿಚಾರದಲ್ಲಿ ತೊಡಗುವಂತೆ ಮಾಡಲಿದೆ.
ಧನು ರಾಶಿ
ಧನು ರಾಶಿಯ ಜನರಿಗೆ ಈ ದಿನವು ಮಿಶ್ರಫಲ. ದಾಂಪತ್ಯ ವಿಚಾರವಾಗಿ ಸಮಸ್ಯೆಗಳ ಎದುರಿಸುವಿರಿ. ಮನೆಯಲ್ಲಿನ ಅಶಾಂತಿಯ ವಾತಾವರಣವು ನಿಮಗೆ ಚಿಂತೆ ತರಬಹುದು. ವ್ಯಾಪಾರದಲ್ಲಿ ಲಾಭದಾಯಕ ದಿನವಾಗಿಲಿದೆ. ಬಹುದಿನದ ಬಾಕಿ ಉಳಿದ ಕೆಲಸಗಳನ್ನು ಪೂರ್ಣ ಮಾಡುವಿರಿ.
ಮಕರ ರಾಶಿ
ಮಕರ ರಾಶಿಯ ಜನರಲ್ಲಿ ಈ ದಿನವು ಪ್ರಯಾಣಗಳ ಮಾಡುವ ದಿನವಾಗಲಿದೆ. ಹೀಗಾಗಿ ದಿನದ ಅಂತ್ಯದಲ್ಲಿ ವಿಶ್ರಾಂತಿ ಪಡೆಯುವಿರಿ. ಹಣಕಾಸು ವಿಚಾರವಾಗಿ ಬುದ್ದಿವಂತಿಕೆಯಿಂದ ವ್ಯವಹರಿಸಿ. ಸ್ವಂತ ಉದ್ಯೋಗದಲ್ಲಿರುವ ಮಂದಿಗೆ ಈ ದಿನವು ಶ್ರಮದಾಯ.
ಕುಂಭ ರಾಶಿ
ಕುಂಭ ರಾಶಿಯ ಜನರಿಗೆ ಈ ದಿನವು ಬಹಳ ಅನುಕೂಲವಿದೆ. ನೀವು ಯಾರಿಂದಾದರು ಹಣ ಪಡೆದಿದ್ದರೆ ಅವರಿಗೆ ಮರಳಿ ನೀಡಬೇಕಾಗುತ್ತದೆ. ಹೊಸ ಆಸ್ತಿ ಖರೀದಿ, ಮನೆ ಖರೀದಿ ಸಂಬಂಧಿತ ವಿಚಾರವಾಗಿ ನಿಮಗೆ ಅನುಕೂಲಕರ ದಿನವಿದು.
ಮೀನ ರಾಶಿ
ಮೀನ ರಾಶಿಯ ಜನರಿಗೆ ಈ ದಿನವು ಅನುಕೂಲಕರ. ನಿಮ್ಮ ಕೆಲಸಗಳಲ್ಲಿ ಈ ದಿನ ಶ್ರಮ ಹಾಕುವಿರಿ. ವಾಹನ ಸಂಬಂಧಿತ ವಿಚಾರವಾಗಿ ಖಚುಗಳಿವೆ. ಮಕ್ಕಳ ಕುರಿತಾಗಿ ಎಚ್ಚರವಿಡಿ. ನಿಮ್ಮ ಮನೆಯಲ್ಲಿ ಶುಭ ಕಾರ್ಯ ಸಂಬಂಧಿತ ಚರ್ಚೆಗಳು ಮುಂದುವರೆಯಲಿದೆ.



Click it and Unblock the Notifications