Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಅರ್ಧದಷ್ಟು ಭಾರತೀಯರಲ್ಲಿ 6 ಗಂಟೆಗೂ ಕಡಿಮೆ ನಿದ್ರೆ: ಸಮೀಕ್ಷೆಯಲ್ಲಿದೆ ಆತಂಕಕಾರಿ ವಿಚಾರ!
ಮನುಷ್ಯನ ದಿನಚರಿ ಸರಿಯಾಗಿರಬೇಕಾದರೆ, ಇಡೀ ದಿನ ಚಟುವಟಿಕೆಯಿಂದ ಇರುವಾಗ ರಾತ್ರಿಯ ನಿದ್ರೆ ಬಹಳ ಅಗತ್ಯ. ನಾವು ಎಷ್ಟು ಗಂಟೆ ನಿದ್ರೆ ಮಾಡುತ್ತೇವೆ ಎಂಬ ಆಧಾರದಲ್ಲಿ ನಮ್ಮ ಒಟ್ಟಾರೆ ಆರೋಗ್ಯ ನಿರ್ಧರಿತವಾಗಲಿದೆ. ಹೀಗಾಗಿ ನಮ್ಮ ದೇಹಕ್ಕೆ ಆಹಾರದಷ್ಟೇ ಮುಖ್ಯವಾಗಿರುವುದು ಈ ನಿದ್ರೆ. ಸರಿಯಾದ ಆಹಾರ, ಸೂಕ್ತ ಕೆಲಸ, ಅಗತ್ಯ ಪ್ರಮಾಣದ ವಿರಾಮ ಎಲ್ಲವೂ ಮುಖ್ಯ. ಆದರೆ ಇವುಗಳ ಜೊತೆಗೆ ಇವುಗಳಿಗಿಂತಲೂ ಹೆಚ್ಚು ಅಗತ್ಯವಾದ ಇನ್ನೊಂದು ವಿಚಾರವಿದೆ. ಅದೇ ನಿದ್ದೆ. ನಿದ್ದೆ ಸರಿಯಾಗಿ ಬಾರದ ದಿನಗಳನ್ನು ಎಲ್ಲರೂ ಅನಿಭವಿಸಿರಬಹುದು.
ನಿದ್ರೆಯು ನಿಮ್ಮ ಒಟ್ಟಾರೆ ಆರೋಗ್ಯ ಮತ್ತು ತೂಕದ ಪ್ರಮುಖ ಸ್ತಂಭಗಳಲ್ಲಿ ಒಂದಾಗಿದೆ. ಹೆಚ್ಚಿನ ಒತ್ತಡ ಮತ್ತು ಆಧುನಿಕ ಜೀವನದ ವೇಗದಿಂದಾಗಿ, ಅನೇಕ ಜನರು ಅದನ್ನು ತ್ಯಾಗ ಮಾಡುತ್ತಲೇ ಇರುತ್ತಾರೆ. ಹಾಗೆ ನಿದ್ರೆ ಇಲ್ಲದೆ ಪರದಾಡುವ ಮಂದಿಯ ಸಂಖ್ಯೆಯೂ ಈಗ ಹೆಚ್ಚಾಗುತ್ತಲೇ ಇದೆ. ಅದ್ರಲ್ಲೂ ಈ ಹೊಸ ಸಮೀಕ್ಷೆಯೊಂದು ಆತಂಕಕಾರಿ ವಿಚಾರವನ್ನು ಹೊರತಂದಿದೆ.

ಸುಮಾರು ಅರ್ಧದಷ್ಟು ಭಾರತೀಯರು ರಾತ್ರಿ ಆರು ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುತ್ತಿದ್ದಾರೆ, ಇದು ಹೆಚ್ಚುತ್ತಿರುವ ನಿದ್ರಾಹೀನತೆಯ ಬಿಕ್ಕಟ್ಟಿನ ಬಗ್ಗೆ ಆರೋಗ್ಯ ತಜ್ಞರಲ್ಲಿ ಕಳವಳವನ್ನು ಹುಟ್ಟುಹಾಕಿದೆ. ನಿದ್ರಾಹೀನತೆ ಅಥವಾ ನಿದ್ರಾಭಾವವು ವಿಶ್ವದೆಲ್ಲೆಡೆ ಇರುವ ಒಂದು ಸಾಮಾನ್ಯವಾದ ಆರೋಗ್ಯ ಸಂಬಂಧಿ ಕಾಯಿಲೆಯಾಗಿದೆ. ಇದು ಪುರುಷ ಮತ್ತು ಮಹಿಳೆಯರಿಬ್ಬರನ್ನೂ ಹಾಗೂ ಎಲ್ಲಾ ವಯೋಮಾನದ ಜನರನ್ನೂ ಸಾಮಾನ್ಯವಾಗಿ ಕಾಡುತ್ತಿದೆ.
ನಿದ್ರಾಹೀನತೆ ಎಂದರೇನು?
ನಿದ್ರೆಯು ನಿಮ್ಮ ಒಟ್ಟಾರೆ ಆರೋಗ್ಯ ಮತ್ತು ತೂಕದ ಪ್ರಮುಖ ನಿರ್ಧಾರಕ ಎನ್ನಬಹುದು. ಇತ್ತೀಚಿಗೆ ವ್ಯಕ್ತಿಯೊಬ್ಬ ಶಿಫಾರಸ್ಸು ಮಾಡಿರುವ ಪ್ರಮಾಣಕ್ಕಿಂತಲೂ ಕಡಿಮೆ ನಿದ್ರೆ ಮಾಡುವುದರಿಂದ ದೈಹಿಕ ಆರೋಗ್ಯ, ಮಾನಸಿಕ ಯೋಗಕ್ಷೇಮ, ಉತ್ಪಾದಕತೆ ಮತ್ತು ದೀರ್ಘಕಾಲೀನ ಕಾಯಿಲೆಗಳ ಅಪಾಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಲೋಕಲ್ ಸರ್ಕಲ್ಸ್ ವರದಿಯ ಪ್ರಕಾರ ಕಳೆದ 12 ತಿಂಗಳುಗಳಲ್ಲಿ ಸುಮಾರು ಶೇ.46ರಷ್ಟು ಭಾರತೀಯರು 6 ಗಂಟೆಗಿಂತಲೂ ಕಡಿಮೆ ಸಮಯ ನಿದ್ರೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಅದ್ರಲ್ಲೂ ಸುಮಾರು ಶೇ. 60ರಷ್ಟು ವಯಸ್ಕರು ನಿದ್ರಾಹೀನರಾಗಿದ್ದಾರೆ ಎಂದು ವರದಿಯಾಗಿದೆ. ಭಾರತದ 393 ಜಿಲ್ಲೆಗಳಲ್ಲಿ ಸಮಾರು 89 ಸಾವಿರ ಜನರ ಪ್ರತಿಕ್ರಿಯೆ ಸಂಗ್ರಹಿಸಿ ದತ್ತಾಂಶ ವಿಶ್ಲೇಷಿಸಲಾಗಿದೆ ಎಂದು ತಿಳಿದುಬಂದಿದೆ. ಇದರಲ್ಲಿ ನಿದ್ರೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗಳಿಗೆ ಬಹುತೇಕರು ನ್ಯೂನತೆಯ ಉತ್ತರ ನೀಡಿರುವುದು ವರದಿಯಾಗಿದೆ.
ಭಾರತದಲ್ಲಿ ನಿದ್ರಾ ಹೀನತೆಗೆ ಕಾರಣವೇನು?
ವೈದ್ಯರು ವಯಸ್ಕರಿಗೆ ಸೂಕ್ತ ಆರೋಗ್ಯವನ್ನು ಕಾಪಾಡಿಕೊಳ್ಳಲು 7 ರಿಂದ 9 ಗಂಟೆಗಳ ನಿದ್ರೆಯನ್ನು ಶಿಫಾರಸು ಮಾಡುತ್ತಾರೆ. ಆದ್ರೆ ಭಾರತದಲ್ಲಿ ಬಹುತೇಕರು ಈ ಪ್ರಮಾಣದಲ್ಲಿ ನಿದ್ರೆ ಮಾಡುತ್ತಿಲ್ಲ. ನೈಟ್ ಶಿಫ್ಟ್‌ಗಳು, ಅತಿಯಾದ ಸ್ಕ್ರೀನ್ ಸಮಯ, ಒತ್ತಡ, ಅನಿಯಮಿತ ಮತ್ತು ಜಡ ಜೀವನಶೈಲಿ ಮತ್ತು ಜಂಕ್ ಅಥವಾ ಸಂಸ್ಕರಿಸಿದ ಆಹಾರ ಸೇವಿಸುವುದು ಸೇರಿ ಹಲವು ಅಂಶಗಳು ಭಾರತದಲ್ಲಿ ನಿದ್ರಾಹೀನತೆಗೆ ಪ್ರಮುಖ ಕಾರಣವಾಗಿದೆ. ಅದ್ರಲ್ಲೂ ಗ್ರಾಮೀಣ ಭಾಗಕ್ಕಿಂತಲೂ ನಗರ ಭಾಗದಲ್ಲಿ ಈ ಪ್ರಮಾಣ ಹೆಚ್ಚಾಗಿದೆ. ಈ ವ್ಯಾಪಕವಾದ ನಿದ್ರೆಯ ಕೊರತೆಗೆ ಪರಿಹಾರ ಕಂಡುಕೊಳ್ಳದಿದ್ದರೆ ಸಾರ್ವಜನಿಕ ಆರೋಗ್ಯದ ಮೇಲೆ ಇದು ದೊಡ್ಡ ಪರಿಣಾಮ ಬೀರಬಹುದು ಎಂದು ತಜ್ಞರು ಹೇಳುತ್ತಾರೆ.

ನಿಮ್ಮ ಆರೋಗ್ಯಕ್ಕೆ ನಿದ್ರೆ ಏಕೆ ಮುಖ್ಯ ಗೊತ್ತಾ?
ನಿದ್ರೆ ಮಾಡುವುದು ದೇಹಕ್ಕೆ ಮಾತ್ರವಲ್ಲ ನಿಮ್ಮ ಮಾನಸಿಕ ಆರೋಗ್ಯಕ್ಕೂ ಬಹಳ ಉತ್ತಮ. ನಿದ್ರೆ ಮಾಡಿದಾಗ ನಿಮ್ಮ ದೇಹ ವಿಶ್ರಾಂತಿ ಪಡೆಯುತ್ತದೆ. ಮಾಂಸ ಖಂಡಗಳು ವಿಶ್ರಾಂತಿಯ ಸಮಯವದು, ಮೆದುಳು ಕೂಡ ದೀರ್ಘ ಕೆಲಸದ ಬಳಿಕ ವಿಶ್ರಾಂತಿಗೆ ಜಾರಲಿದೆ. ನಿದ್ದೆ ಮಾಡುವಾಗ ನಿಮ್ಮ ದೇಹವು ಅಂಗಾಂಶಗಳನ್ನು ಸರಿಪಡಿಸುವುದು, ಹಾರ್ಮೋನುಗಳನ್ನು ನಿಯಂತ್ರಿಸುವುದು, ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು ಮತ್ತು ಸ್ಮರಣ ಶಕ್ತಿ ಸುಧಾರಿಸುವುದು ಸೇರಿ ಹಲವು ನಿರ್ಣಾಯಕ ವಿಚಾರಗಳಿಗೆ ನಿದ್ರೆ ಮುಖ್ಯ.
ನಿದ್ರಾಹೀನತೆಯಿಂದ ಕಾಡುವ ಸಮಸ್ಯೆಗಳೇನು?
- ಹೃದಯ ಕಾಯಿಲೆಯ ಅಪಾಯ ಹೆಚ್ಚಾಗಿದೆ
- ಟೈಪ್ 2 ಮಧುಮೇಹದ ಹೆಚ್ಚಿನ ಸಾಧ್ಯತೆಗಳು
- ತೂಕ ಹೆಚ್ಚಾಗುವುದು ಮತ್ತು ಚಯಾಪಚಯ ಅಸ್ವಸ್ಥತೆಗಳು
- ಕಡಿಮೆ ಏಕಾಗ್ರತೆ ಮತ್ತು ಕಡಿಮೆ ಉತ್ಪಾದಕತೆ
- ಹೆಚ್ಚಿದ ಒತ್ತಡ, ಆತಂಕ ಮತ್ತು ಖಿನ್ನತೆ
- ಹಗಲಿನಲ್ಲಿ ನಿರಂತರ ಆಯಾಸ
- ನೆನಪಿಟ್ಟುಕೊಳ್ಳುವಲ್ಲಿ ತೊಂದರೆ
- ಕಿರಿಕಿರಿ ಅಥವಾ ಮನಸ್ಥಿತಿ ಬದಲಾವಣೆಗಳು
- ತಲೆನೋವು



Click it and Unblock the Notifications