For Quick Alerts
ALLOW NOTIFICATIONS  
For Daily Alerts

ನಿಂತುಕೊಂಡು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೇ? ಇಲ್ಲಿದೆ ಉತ್ತರ

|

ನೆಲದ ಮೇಲೆ ಕುಳಿತುಕೊಂಡು, ಕಾಲುಗಳನ್ನು ಮಡಚಿಟ್ಟು ತಟ್ಟೆಯಲ್ಲಿ ಬಡಿಸಿಟ್ಟ ಊಟ ಮಾಡುವ ಸೊಗಸೇ ಬೇರೆ. ಈ ರೀತಿಯಾಗಿ ಊಟ ಮಾಡಿದರೆ ಅದರಿಂದ ಜೀರ್ಣಕ್ರಿಯೆಯು ಸರಾಗವಾಗಿ ಆಗುವುದು ಎಂದು ಆಯುರ್ವೇದವು ಹೇಳಿದೆ. ಆದರೆ ಇಂದಿನ ಸೂಪರ್ ಫಾಸ್ಟ್ ಯುಗದಲ್ಲಿ ನಮಗೆ ಕುಳಿತುಕೊಂಡು ಆರಾಮವಾಗಿ ತಿನ್ನಲು ಪುರುಸೊತ್ತೇ ಇಲ್ಲ. ಅದು ಹೋಟೆಲ್ ಗಳಿಗೆ ಹೋದರೂ ಅಲ್ಲಿ ಕಾರ್ಮಿಕರ ಕೊರತೆಯಿಂದಾಗಿ ಸೆಲ್ಫ್ ಸರ್ವೀಸ್ ಮಾಡಿ, ನಿಂತುಕೊಂಡೇ ತಿನ್ನುವ ವ್ಯವಸ್ಥೆ ಮಾಡಿರುವರು. ಆದರೆ ನಿಂತುಕೊಂಡು ತಿನ್ನುವುದು ನಮ್ಮ ದೇಹಕ್ಕೆ ಒಳ್ಳೆಯದೇ ಅಥವಾ ಕೆಟ್ಟದೇ ಎನ್ನುವ ಪ್ರಶ್ನೆ ಮೂಡುವುದು.

Is Eating While Standing Bad For Your Health?

ನಿಂತುಕೊಂಡು ತಿಂದರೆ ಅದರಿಂದ ನಮ್ಮ ಆರೋಗ್ಯದ ಮೇಲೆ ಯಾವ ಪರಿಣಾಮಗಳು ಬೀರಬಹುದು ಎಂದು ನಾವು ತಿಳಿದುಕೊಳ್ಳಬೇಕು. ನಾವು ಆರೋಗ್ಯವನ್ನು ಕಡೆಗಣಿಸಿ, ಆಸ್ಪತ್ರೆಗಳಿಗೆ ಸಾವಿರಾರು ರೂಪಾಯಿ ಸುರಿಯುತ್ತೇವೆ. ಆದರೆ ನಾವು ತಿನ್ನುವ ಆಹಾರ ಹಾಗೂ ಅದನ್ನು ಯಾವ ರೀತಿ ತಿನ್ನುತ್ತೇವೆ ಎಂದು ತಿಳಿದುಕೊಂಡರೆ ಆಗ ಖಂಡಿತವಾಗಿಯೂ ನಾವು ಆರೋಗ್ಯವಾಗಿ ಇರಬಹುದು. ನೀವು ನಿಂತುಕೊಂಡು ತಿಂದರೆ ಆಗ ಅದು ಆರೋಗ್ಯದ ಮೇಲೆ ಪರಿಣಾಮ ಬೀರುವುದು.

ಜೀರ್ಣಕ್ರಿಯೆ ಮೇಲೆ ಭಂಗಿ ಪರಿಣಾಮ

ಜೀರ್ಣಕ್ರಿಯೆ ಮೇಲೆ ಭಂಗಿ ಪರಿಣಾಮ

ಹೌದು, ನೀವು ತಿನ್ನುವಂತಹ ಭಂಗಿಯು ನಿಮ್ಮ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುವುದು. ಕೆಲವೊಂದು ಮಂದಿ ತಾವು ಮಲಗಿಕೊಂಡು ತಿನ್ನುತ್ತೇವೆ ಎಂದು ಹೇಳುತ್ತಾರೆ. ಆದರೆ ಇದರಿಂದ ಆತ್ಮತೃಪ್ತಿ ಸಿಗುತ್ತದೆಯೇ ಹೊರತು, ದೇಹಕ್ಕೆ ಲಾಭವಿಲ್ಲ. ಇದರಿಂದ ಅಜೀರ್ಣ ಬರಬಹುದು. ಹಾಗೆ ಹೊಟ್ಟೆಉಬ್ಬರ ಮತ್ತು ಕಿರಿಕಿರಿ ಉಂಟಾಗಬಹುದು. ಮಹಿಳೆಯರ ಮೇಲೆ ನಡೆಸಿದಂತಹ ಒಂದು ಅಧ್ಯಯನದ ಪ್ರಕಾರ ಮಲಗಿ ತಿನ್ನುವಂತಹ ಜನರಲ್ಲಿ ಸ್ವಲ್ಪ ಸಮಯದ ಬಳಿಕ ತೊಂದರೆ ಕಂಡುಬರುವುದು. ಇದರಲ್ಲಿ ಬೇರೆಯವರಿಗೆ ಹೋಲಿಸಿದರೆ ಜೀರ್ಣಕ್ರಿಯೆಯು ತುಂಬಾ ನಿಧಾನವಾಗುವುದು.

ತಿಂದ ಕೂಡಲೇ ಎದ್ದು ನಿಂತರೇ ನೆರವಾಗುವುದೇ?

ತಿಂದ ಕೂಡಲೇ ಎದ್ದು ನಿಂತರೇ ನೆರವಾಗುವುದೇ?

ಮಲಗಿ ಅಥವಾ ಕುಳಿತುಕೊಂಡು ತಿನ್ನುವುದಕ್ಕೆ ಹೋಲಿಸಿದರೆ, ತಿಂದ ಬಳಿಕ ನಿಲ್ಲುವುದು ಮತ್ತು ನಡೆಯುವುದು ವೇಗದ ಜೀರ್ಣಕ್ರಿಯೆಗೆ ಸಹಕಾರಿ ಆಗಿದೆ ಎಂದು ಮತ್ತೊಂದು ಅಧ್ಯಯನವು ಹೇಳಿದೆ. ಅದಾಗ್ಯೂ, ಇದರಲ್ಲಿ ಅತೀ ಕೆಟ್ಟದು ಎಂದರೆ ಅದು ಮಲಗಿಕೊಂಡು ತಿನ್ನುವುದು. ತಿಂದ ಬಳಿಕ ನಡೆಯುವುದರಿಂದ ಸ್ವಲ್ಪ ಮಟ್ಟಿಗೆ ನೆರವಾಗಿದೆ ಮತ್ತು ಇದರಿಂದ ಸುಮಾರು 50 ಕ್ಯಾಲರಿ ದಹಿಸಲು ನೆರವಾಗಿದೆ. ಇದು ದೀರ್ಘಕಾಲಕ್ಕೆ ತೂಕ ಇಳಿಸಿಕೊಳ್ಳಲು ನೆರವಾಗಲಿದೆ. ಆದರೆ ಇಲ್ಲಿ ಹೇಗೆ ತಿನ್ನುತ್ತೀರಿ ಎನ್ನುವುದಕ್ಕಿಂತಲೂ ನೀವು ಏನು ತಿನ್ನುತ್ತೀರಿ ಎನ್ನುವುದು ಮುಖ್ಯವಾಗಿರುವುದು.

ನಿಂತುಕೊಂಡು ತಿಂದರೆ ಅದು ಆರೋಗ್ಯಕ್ಕೆ ಒಳ್ಳೆಯದೇ?

ನಿಂತುಕೊಂಡು ತಿಂದರೆ ಅದು ಆರೋಗ್ಯಕ್ಕೆ ಒಳ್ಳೆಯದೇ?

ನಿಂತುಕೊಂಡು ತಿಂದರೆ ಆಗ ಕ್ಯಾಲರಿ ದಹಿಸಬಹುದು ಎಂದು ಹೆಚ್ಚಿನವರು ಭಾವಿಸಿರಬಹುದು. ಆದರೆ ತೂಕ ಕಳೆದುಕೊಳ್ಳಲು ಇದು ಆರೋಗ್ಯಕಾರಿ ವಿಧಾನವೇ? ಖಂಡಿತವಾಗಿಯೂ ಇದು ಆರೋಗ್ಯಕಾರಿ ವಿಧಾನವಲ್ಲ. ನಿಂತುಕೊಂಡು ತಿಂದರೆ ಆಗ ತಿನ್ನುವ ವೇಗ ಅಧಿಕವಾಗುವುದು ಮತ್ತು ಸ್ವಲ್ಪ ಹೆಚ್ಚು ಆಹಾರ ಹೊಟ್ಟೆ ಸೇರುವುದು. ನೀವು ನಿಂತುಕೊಂಡು ಹೆಚ್ಚು ಆಹಾರ ತಿಂದರೆ ಆಗ ಅದಕ್ಕೆ ಯಾವುದೇ ರೀತಿಯಿಂದಲೂ ಪರಿಹಾರ ಸಿಗದು.

ಇದರಿಂದಾಗಿ ನಿಮಗೆ ಹಸಿವಾಗುತ್ತಿದೆಯಾ?

ಇದರಿಂದಾಗಿ ನಿಮಗೆ ಹಸಿವಾಗುತ್ತಿದೆಯಾ?

ತೂಕ ಕಳೆದುಕೊಳ್ಳಲು ನೀವು ನಿಂತುಕೊಂಡು ತಿನ್ನುವ ವಿಧಾನ ಅನುಸರಿಸಿದರೆ, ಆಗ ಇದರಿಂದ ನಿಮಗೆ ಮತ್ತೆ ಹಸಿವಾಗುತ್ತದೆಯಾ ಎನ್ನುವ ಪ್ರಶ್ನೆ ಬರುವುದು. ಊಟದ ಬಳಿಕ ನಡೆದರೆ ಆಗ ಜೀರ್ಣಕ್ರಿಯೆಯು ಹೆಚ್ಚಾಗುವುದು. ಇದರಿಂದ ಹಸಿವಿನ ಭಾವನೆ ಬರುವುದು. ಆದರೆ ನಿಂತುಕೊಂಡು ತಿಂದರೆ ಆಗ ಹಸಿವಿನ ಭಾವನೆ ಆಗದು. ಇದರಿಂದ ನೀವು ಕುಳಿತುಕೊಂಡು ತಿಂದರೆ ಆಗ ಹಸಿವಿನ ಭಾವನೆ ಆಗುವುದು.

ಆಮ್ಲೀಯ ಹಿಮ್ಮುಖ ಹರಿವು ತಗ್ಗಿಸಲು ನೆರವಾಗುವುದು

ಆಮ್ಲೀಯ ಹಿಮ್ಮುಖ ಹರಿವು ತಗ್ಗಿಸಲು ನೆರವಾಗುವುದು

ಎದೆಯುರಿ ಮತ್ತು ಆಮ್ಲೀಯ ಹಿಮ್ಮುಖ ಹಿರಿವಿನ ಸಮಸ್ಯೆ ಇರುವ ಜನರು ನಿಂತುಕೊಂಡು ತಿಂದರೆ ಆಗ ಅದರಿಂದ ಲಾಭವಾಗಲಿದೆ. ನಿಂತುಕೊಂಡು ತಿಂದರೆ ಆಗ ಜೀರ್ಣಕ್ರಿಯೆಯು ವೇಗ ಪಡೆಯುವುದು ಮತ್ತು ಆಮ್ಲೀಯ ಹಿಮ್ಮುಖ ಹರಿವು ತಗ್ಗುವುದು ಎಂದು ಹೇಳಲಾಗುತ್ತದೆ. ಕೆಲವೊಂದು ಸಂದರ್ಭದಲ್ಲಿ ಇದು ಹೊಟ್ಟೆ ಉಬ್ಬರಕ್ಕೆ ಕಾರಣವಾಗಬಹುದು. ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿದೆ.

ಎಚ್ಚರ!!!

ಎಚ್ಚರ!!!

ನಿಂತುಕೊಂಡು ತಿಂದರೆ ಅದರಿಂದ ಕ್ಯಾಲರಿ ದಹಿಸಬಹುದು ಎಂದು ಕೆಲವೊಂದು ಸಂದರ್ಭದಲ್ಲಿ ಸಾಬೀತು ಆಗಿದೆ. ಆದರೆ ನಿಂತುಕೊಂಡು ತಿನ್ನುವುದು ದೀರ್ಘಕಾಲಕ್ಕೆ ಒಳ್ಳೆಯ ಅಭ್ಯಾಸವಲ್ಲ. ನಿಂತುಕೊಂಡು ತಿಂದರೆ ಆಗ ಅತಿಯಾಗಿ ತಿನ್ನಬಹುದು ಮತ್ತು ಹೊಟ್ಟೆ ಉಬ್ಬರ ಬರಬಹುದು. ಕೆಲವೊಂದು ಪ್ರಕರಣದಲ್ಲಿ ಎದೆಯುರಿ ಮತ್ತು ಆಮ್ಲೀಯ ಹಿಮ್ಮುಖ ಹರಿವು ತಗ್ಗಿಸುವುದು. ಆದರೆ ಆಹಾರ ಸೇವಿಸಲು ಇದು ಸರಿಯಾದ ಕ್ರಮವಲ್ಲ. ಇದರಿಂದ ನೆಲದ ಮೇಲೆ ಕುಳಿತುಕೊಂಡು, ಆರಾಮವಾಗಿ ತಿನ್ನಬೇಕು. ಇದರಿಂದ ಮನಸ್ಸಿಗೂ ಖುಷಿ ಸಿಗುವುದು ಮತ್ತು ದೇಹವು ಎಲ್ಲಾ ರೀತಿಯ ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುವುದು. ಇಷ್ಟು ಮಾತ್ರವಲ್ಲದೆ ಜೀರ್ಣಕ್ರಿಯೆಗೆ ಇದು ಸಹಕಾರಿ ಆಗಲಿದೆ.

English summary

Is Eating While Standing Bad For Your Health?

Gone are the days, when we had all the time to sit back and relish every meal, but with our fast paced-lives and hectic schedules, we are hardly left with the time to relax and enjoy every bit of life! But have you ever wondered, how this habit of gobbling up on-the-go or eating while standing effects your health?
Story first published: Wednesday, October 23, 2019, 17:34 [IST]
X
Desktop Bottom Promotion