For Quick Alerts
ALLOW NOTIFICATIONS  
For Daily Alerts

ಫುಡ್ ಪಾಯಿಸನ್ ಕಾರಣಗಳೇನು? ಅದಕ್ಕೆ ಚಿಕಿತ್ಸೆ ಮತ್ತು ಪರಿಹಾರ

|

ಭೂಮಿ ಮೇಲಿರುವಂತಹ ಪ್ರತಿಯೊಂದು ಜೀವಿಗೂ ಆಹಾರವೆನ್ನುವುದು ಅತೀ ಅಗತ್ಯವಾಗಿರುವುದು. ಅತೀ ಸಣ್ಣ ಕೀಟದಿಂದ ಹಿಡಿದು ದೈತ್ಯ ಗಾತ್ರದ ಆನೆಯು ಆಹಾರವಿಲ್ಲದೆ ಬದುಕಿರಲಾರದು. ಹೀಗಾಗಿ ಮನುಷ್ಯನಿಗೆ ಕೂಡ ಭೂಮಿ ಮೇಲೆ ಬದುಕಬೇಕು ಎಂದಾದರೆ ಆಹಾರ ಅನಿವಾರ್ಯ. ಆಹಾರದ ಪ್ರಾಮುಖ್ಯತೆ ಅರಿತ ಜಾಗತಿಕ ಆಹಾರ ಸಂಸ್ಥೆಗಳು ಪ್ರತಿ ವರ್ಷ ಅಕ್ಟೋಬರ್ 16ರಂದು ವಿಶ್ವ ಆಹಾರ ದಿನವನ್ನಾಗಿ ಆಚರಿಸುತ್ತಿದೆ. ಪ್ರತಿ ವರ್ಷವೂ ಒಂದು ವಿಷಯವನ್ನಾಧರಿಸಿ ಆಚರಿಸಲಾಗುವ ಆಹಾರ ದಿನವನ್ನು ಈ ವರ್ಷ "ನಮ್ಮ ಕ್ರಿಯೆ ನಮ್ಮ ಭವಿಷ್ಯ. ಜಾಗತಿಕ ಹಸಿವು ನಿರ್ಮೂಲನೆಗೆ ಆರೋಗ್ಯಕರ ಆಹಾರ ಪದ್ಧತಿ,'' ಎಂಬ ವಿಷಯದಡಿ ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ವಿಶ್ವ ಆಹಾರ ದಿನದ ಹಿನ್ನೆಲೆ ಆಹಾರ ವಿಷವಾಗಲು ಕಾರಣಗಳೇನು, ಅದಕ್ಕೆ ಚಿಕಿತ್ಸೆ ಹಾಗೂ ಪರಹಾರವೇನು ಎಂದು ಮುಂದೆ ಲೇಖನದಲ್ಲಿ ತಿಳಿಯೋಣ.

Food Poisoning

ಆಹಾರಕ್ಕಾಗಿಯೇ ಮನುಷ್ಯ ದಿನವಿಡೀ ನಾನಾ ಸರ್ಕಸ್ ಮಾಡಿಕೊಂಡು ಜೀವನ ಸಾಗಿಸುತ್ತಾನೆ. ಆದರೆ ಮನುಷ್ಯ ಕೆಲವೊಮ್ಮೆ ತಿನ್ನುವಂತಹ ಆಹಾರವು ವಿಷವಾಗುವುದು ಇದೆ. ಇಂತಹ ಸಮಸ್ಯೆಯು ಹೆಚ್ಚಿನವರನ್ನು ಕಾಡುವುದು ಇದೆ. ಫುಡ್ ಪಾಯಿಸನ್ ಹಲವಾರು ರೀತಿಯ ಅಡ್ಡಪರಿಣಾಮಗಳು ದೇಹದ ಮೇಲೆ ಆಗಬಹುದು. ಫುಡ್ ಪಾಯಿಸನ್ ಹೇಗೆ, ಅದಕ್ಕೆ ಪರಿಹಾರವೇನು ಎಂದು ನಾವು ಈ ಲೇಖನದ ಮೂಲಕ ತಿಳಿಯುವ....

ಫುಡ್ ಪಾಯಿಸನ್ ಎಂದರೇನು?

ಫುಡ್ ಪಾಯಿಸನ್ ಎಂದರೇನು?

ಆಹಾರಕ್ಕೆ ಸಂಬಂಧಿಸಿದ ಕೆಲವೊಂದು ಅನಾರೋಗ್ಯವನ್ನು ಫುಡ್ ಪಾಯಿಸನ್ ಎಂದು ಕರೆಯಲಾಗುತ್ತದೆ. ಕಲುಷಿತ ಆಹಾರ, ಕೆಟ್ಟ ಆಹಾರ ಅಥವಾ ವಿಷವಾಗಿರುವಂತಹ ಆಹಾರ ಸೇವನೆಯೇ ಫುಡ್ ಪಾಯಿಸನ್ ಆಗಲು ಕಾರಣವಾಗಿದೆ. ಫುಡ್ ಪಾಯಿಸನ್ ಪ್ರಮುಖ ಲಕ್ಷಣಗಳೆಂದರೆ ವಾಕರಿಕೆ, ವಾಂತಿ ಮತ್ತು ಅತಿಸಾರ.

ಫುಡ್ ಪಾಯಿಸನ್ ಅಸಾಮಾನ್ಯವಲ್ಲದ ಕಾರಣದಿಂದಾಗಿ ಇದು ತುಂಬಾ ಅಹಿತರ ಭಾವನೆ ಉಂಟು ಮಾಡುವುದು. ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆಂಟೇಷನ್(ಸಿಡಿಸಿ) ಹೇಳುವ ಪ್ರಕಾರ ಅಮೆರಿಕಾದಲ್ಲಿ 6 ಮಂದಿಯಲ್ಲಿ ಒಬ್ಬರು ಪ್ರತೀ ವರ್ಷ ಫುಡ್ ಪಾಯಿಸನ್ ಆಗುವ ಸಮಸ್ಯೆಗೆ ಒಳಗಾಗುವರು.

ಫುಡ್ ಪಾಯಿಸನ್ ಲಕ್ಷಣಗಳು

ಫುಡ್ ಪಾಯಿಸನ್ ಲಕ್ಷಣಗಳು

ಫುಡ್ ಪಾಯಿಸನ್ ಆಗಿದ್ದರೆ , ಆಗ ಖಂಡಿತವಾಗಿಯೂ ಅದರ ಲಕ್ಷಣಗಳು ನಿಮಗೆ ಕಾಣಿಸಿಕೊಳ್ಳುವುದು. ಇದರ ಲಕ್ಷಣಗಳು ತುಂಬಾ ಭಿನ್ನವಾಗಿ ಇರಬಹುದು. ಸೋಂಕಿನ ಮೂಲ ಯಾವುದು ಎನ್ನುವುದನ್ನು ಅನುಸರಿಸಿಕೊಂಡು ಅದು ಲಕ್ಷಣ ತೋರಿಸಲು ಸಮಯ ತೆಗೆದುಕೊಳ್ಳಬಹುದು. ಆಹಾರ ವಿಷವಾಗಿದೆ ಎಂದು ನಿಮ್ಮ ದೇಹದಲ್ಲಿ ಲಕ್ಷಣ ತೋರಿಸಲು ಒಂದು ಗಂಟೆಯಿಂದ 28 ದಿನಗಳು ಬೇಕಾಗಬಹುದು. ಫುಡ್ ಪಾಯಿಸನ್ ಆಗಿರುವ ಕೆಲವೊಂದು ಸಾಮಾನ್ಯ ಲಕ್ಷಣಗಳು ಈ ರೀತಿಯಾಗಿ ಇರಬಹುದು.

* ಹೊಟ್ಟೆಯಲ್ಲಿ ಸೆಳೆತ

* ಅತಿಸಾರ

* ವಾಂತಿ

* ಹಸಿವಾಗದೆ ಇರುವುದು

* ಜ್ವರ

* ವಾಕರಿಕೆ

* ತಲೆನೋವು

ಫುಡ್ ಪಾಯಿಸನ್ ಆಗಿರುವುದರಿಂದ ಕಾಣಿಸಿಕೊಳ್ಳುವ ಕೆಲವೊಂದು ಲಕ್ಷಣಗಳು ಪ್ರಾಣಹಾನಿಗೆ ಕಾರಣವಾಗಬಹುದು. ಅವು ಈ ರೀತಿಯಾಗಿದೆ...

* ಮೂರು ದಿನಗಳಿಗೂ ಹೆಚ್ಚು ಸಮಯ ಅತಿಸಾರ ಇರುವುದು

* 101.5ಎಫ್ ಗಿಂತಲೂ ತೀವ್ರವಾದ ಜ್ವರ

* ನೋಡಲು ಮತ್ತು ಮಾತನಾಡಲು ಕಷ್ಟವಾಗುವುದು

* ತೀವ್ರ ನಿರ್ಜಲೀಕರಣವಾಗುವ ಲಕ್ಷಣಗಳು ಕಾಣಿಸಬಹುದು. ಇದರಲ್ಲಿ ಮುಖ್ಯವಾಗಿ ಬಾಯಿ ಒಣಗುವುದು, ಮೂತ್ರ ಬರದೆ ಇರುವುದು.

* ಮೂತ್ರದಲ್ಲಿ ರಕ್ತದ ಅಂಶವಿರುವುದು

ಈ ಎಲ್ಲಾ ಲಕ್ಷಣಗಳು ಕಾಣಿಸಿಕೊಂಡರೆ ಆಗ ನೀವು ತಕ್ಷಣವೇ ವೈದ್ಯರ ಬಳಿಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಅತೀ ಅಗತ್ಯವಾಗಿರುವುದು.

ಫುಡ್ ಪಾಯಿಸನ್ ಆಗಲು ಕಾರಣಗಳು ಏನು?

ಫುಡ್ ಪಾಯಿಸನ್ ಆಗಲು ಕೆಲವೊಂದು ಕಾರಣಗಳನ್ನು ಈ ರೀತಿಯಾಗಿ ಪತ್ತೆ ಮಾಡಲಾಗಿದೆ.

ಬ್ಯಾಕ್ಟೀರಿಯಾ

ಬ್ಯಾಕ್ಟೀರಿಯಾ

ಫುಡ್ ಪಾಯಿಸನ್ ಆಗಲು ಪ್ರಮುಖ ಕಾರಣ ಬ್ಯಾಕ್ಟೀರಿಯಾ ಎಂದು ಹೇಳಲಾಗುತ್ತದೆ. ತುಂಬಾ ಅಪಾಯಕಾರಿ ಬ್ಯಾಕ್ಟೀರಿಯಾಗಳಾಗಿರುವಂತಹ ಇ ಕೋಲಿ, ಲಿಸ್ಟೇರಿಯಾ, ಮತ್ತು ಸಾಲ್ಮೊನೆಲ್ಲಾಕಮ್ ಇದರಲ್ಲಿ ಪ್ರಮುಖವಾಗಿದೆ. ಸಾಲ್ಮೊನೆಲ್ಲಾಕಮ್ ಆಹಾರ ವಿಷವಾಗಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸಿಡಿಸಿಟಿ ಪ್ರಕಾರ ಸುಮಾರು ಒಂದು ಮಿಲಿಯನ್ ಆಹಾರ ವಿಷವಾಗುವ ಪ್ರಕರಣಗಳು ಪತ್ತೆಯಾಗಿದೆ ಮತ್ತು ಇದರಲ್ಲಿ 20 ಸಾವಿರ ಮಂದಿ ಆಸ್ಪತ್ರೆಗೆ ದಾಖಲಾಗಿರುವರು. ಈ ಎಲ್ಲಾ ಪ್ರಕರಣದಲ್ಲಿ ಸಾಲ್ಮೊನೆಲ್ಲಾಕಮ್ ಆಹಾರ ವಿಷವಾಗಲು ಪ್ರಮುಖ ಕಾರಣವಾಗಿದೆ. ಕ್ಯಾಂಪಿಲೋಬ್ಯಾಕ್ಟರ್ ಮತ್ತು ಸಿ. ಬೊಟುಲಿನಮ್ (ಬೊಟುಲಿಸಮ್) ಆಹಾರ ವಿಷವಾಗಲು ಕಾರಣವಾಗುವಂತಹ ಇತರ ಬ್ಯಾಕ್ಟೀರಿಯಾಗಳಾಗಿವೆ.

ಪರಾವಲಂಬಿ ಜೀವಿಗಳು

ಪರಾವಲಂಬಿ ಜೀವಿಗಳು

ಬ್ಯಾಕ್ಟೀರಿಯಾಗಳು ಆಹಾರ ವಿಷವನ್ನಾಗಿಸುವುದು ಮತ್ತು ಪರಾವಲಂಬಿ ಜೀವಿಗಳು ಆಹಾರ ವಿಷವಾಗಿಸುವುದಕ್ಕೆ ವ್ಯತ್ಯಾಸವಿದೆ. ಆದರೆ ಪರಾವಲಂಬಿ ಜೀವಿಗಳು ಆಹಾರದ ಮೂಲಕ ಬೆಳೆಯುವುದು ತುಂಬಾ ಅಪಾಯಕಾರಿ. ಟೊಕ್ಸೊಪ್ಲಾಸ್ಮೈಸ್ ಎನ್ನುವ ಪರಾವಲಂಬಿ ಜೀವಿಯು ಆಹಾರ ವಿಷವಾಗಲು ಹೆಚ್ಚು ಕಾರಣವಾಗಿದೆ. ಈ ಪರಾವಲಂಬಿ ಜೀವಿಯು ವರ್ಷಗಳ ಕಾಲ ಯಾವುದೇ ಸೂಚನೆಯಿಲ್ಲದೆ ನಿಮ್ಮ ಜೀರ್ಣಕ್ರಿಯೆ ವ್ಯವಸ್ಥೆಯಲ್ಲಿ ಕುಳಿತುಕೊಳ್ಳುವುದು. ಅದಾಗ್ಯೂ, ಪ್ರತಿರೋಧಕ ಶಕ್ತಿ ತುಂಬಾ ದುರ್ಬಲವಾಗಿರುವ ಮತ್ತು ಗರ್ಭಿಣಿ ಮಹಿಳೆಯರಿಗೆ ಈ ಪರಾವಲಂಬಿ ಜೀವಿಯ ಅಡ್ಡ ಪರಿಣಾಮಗಳನ್ನು ಉಂಟುಮಾಡುವುದು.

ವೈರಸ್

ವೈರಸ್

ವೈರಸ್ ನಿಂದಾಗಿಯೂ ಆಹಾರವು ವಿಷವಾಗಬಹುದು. ನೊರೊವೈರಸ್ ಅಥವಾ ನೊರವಾಕ್ ವೈರಸ್ ಪ್ರತೀ ವರ್ಷ ಸುಮಾರು 19 ಮಿಲಿಯನ್ ಪ್ರಕರಣಗಳಲ್ಲಿ ಆಹಾರವನ್ನು ವಿಷವಾಗಿಸುವುದು ಎಂದು ಮೂಲಗಳು ಹೇಳಿವೆ. ಅಪರೂಪದ ಸಂದರ್ಭದಲ್ಲಿ ಇದು ಪ್ರಾಣಹಾನಿಗೆ ಕಾರಣವಾಗಬಹುದು. ಸಪೋವೈರಸ್, ರೋಟವೈರಸ್ ಮತ್ತು ಆಸ್ಟ್ರೋವೈರಸ್ ಒಂದೇ ರೀತಿಯ ಲಕ್ಷಣಗಳನ್ನು ತೋರಿಸಬಹುದು. ಆದರೆ ಇದು ಸಾಮಾನ್ಯವಾಗಿ ಇರುವುದಿಲ್ಲ. ಹೆಪಟಿಟಿಸ್ ಎ ವೈರಸ್ ಆಹಾರದ ಮೂಲಕವೇ ದೇಹದೊಳಗೆ ಪ್ರವೇಶಿಸಿ, ಗಂಭೀರ ಪರಿಣಾಮ ಬೀರುವುದು.

ಫುಡ್ ಪಾಯಿಸನ್ ಆಗಲು ಕಾರಣಗಳು ?

ಫುಡ್ ಪಾಯಿಸನ್ ಆಗಲು ಕಾರಣಗಳು ?

ಮನುಷ್ಯ ತಿನ್ನುವಂತಹ ಹೆಚ್ಚಿನ ಆಹಾರಗಳಲ್ಲಿ ರೋಗಕಾರಕಗಳು ಕಂಡುಬರುವುದು. ಅದಾಗ್ಯೂ, ಆಹಾರವು ಬಿಸಿಯಾಗುವ ಕಾರಣದಿಂದಾಗಿ ಅದು ದೇಹ ಸೇರುವ ಮೊದಲು ರೋಗಕಾರಕಗಳು ನಾಶವಾಗುವುದು. ಹಸಿಯಾಗಿರುವಂತಹ ಯಾವುದೇ ಆಹಾರವು, ನಮ್ಮ ದೇಹದಲ್ಲಿ ಆಹಾರ ವಿಷವಾಗಿಸುವುದು. ಯಾಕೆಂದರೆ ಇದು ಬಿಸಿಯಾಗದೆ ಇರುವ ಪರಿಣಾಮ ರೋಗಕಾರಗಳು ಹಾಗೆ ಉಳಿಯುವುದು.

ಕೆಲವೊಂದು ಸಲ ಸೂಕ್ಷ್ಮಾಣು ಜೀವಿಗಳು ಆಹಾರವನ್ನು ಸೇರಿಕೊಳ್ಳುವುದು. ಇದಕ್ಕೆ ಮುಖ್ಯ ಕಾರಣವೆಂದರೆ ಆಹಾರ ತಯಾರಿಸುವ ಮೊದಲು ಸರಿಯಾಗಿ ಕೈಗಳನ್ನು ತೊಳೆಯದೆ ಇರುವುದು. ಮಾಂಸ, ಮೊಟ್ಟೆ ಮತ್ತು ಹಾಲಿನ ಉತ್ಪನ್ನಗಳು ಬೇಗನೆ ಕಲುಷಿತವಾಗುವುದು. ನೀರು ಕೂಡ ಕೆಲವೊಂದು ಕಾಯಿಲೆಗಳಿಗೆ ಕಾರಣವಾಗುವಂತಹ ರೋಗಕಾರಕಗಳಿಂದ ಕಲುಷಿತವಾಗಬಹುದು.

ಫುಡ್ ಪಾಯಿಸನ್ ಅಪಾಯವು ಯಾರಿಗೆ ಇರುವುದು?

ಫುಡ್ ಪಾಯಿಸನ್ ಅಪಾಯವು ಯಾರಿಗೆ ಇರುವುದು?

ಯಾರೂ ಕೂಡ ಫುಡ್ ಪಾಯಿಸನ್ ಆಗುವ ಸಮಸ್ಯೆಗೆ ಸಿಲುಕಬಹುದು. ಜೀವಮಾನದಲ್ಲಿ ಒಂದು ಸಲವಾದರೂ ಪ್ರತಿಯೊಬ್ಬರು ಆಹಾರ ವಿಷವಾಗುವ ಸಮಸ್ಯೆಗೆ ಸಿಲುಕುವರು. ಆದರೆ ಕೆಲವರು ಬೇರೆಯವರಿಗಿಂತಲೂ ಹೆಚ್ಚು ಅಪಾಯದಲ್ಲಿ ಇರುವರು. ತುಂಬಾ ದುರ್ಬಲ ಪ್ರತಿರೋಧಕ ಶಕ್ತಿ ಹೊಂದಿರುವವರು ಅಥವಾ ಆಟೋ ಇಮ್ಯೂನ್ ಕಾಯಿಲೆಗಳು ಸೋಂಕಿಗೆ ದೊಡ್ಡ ಅಪಾಯವನ್ನು ಉಂಟು ಮಾಡುವುದು ಮತ್ತು ಇದರಿಂದಾಗಿ ಆಹಾರವು ವಿಷವಾಗುವ ಸಮಸ್ಯೆಯು ಕಾಡುವುದು.

ಗರ್ಭಧಾರಣೆ ವೇಳೆ ಹಲವಾರು ರೀತಿಯ ದೈಹಿಕ ಬದಲಾವಣೆಗಲು ಮತ್ತು ಚಯಾಪಚಯದಲ್ಲಿ ಬದಲಾವಣೆಗಳು ಆಗುವ ಕಾರಣದಿಂದಾಗಿ ಗರ್ಭಿಣಿಯರಲ್ಲಿ ಆಹಾರ ವಿಷವಾಗುವಂತಹ ಸಮಸ್ಯೆಯು ಹೆಚ್ಚಾಗಿ ಇರುವುದು. ವಯಸ್ಸಾದವರಲ್ಲಿ ಪ್ರತಿರೋಧಕ ವ್ಯವಸ್ಥೆಯು ತುಂಬಾ ದುರ್ಬಲವಾಗಿರುವ ಕಾರಣದಿಂದಾಗಿ ರೋಗಕಾರಕ ಸೋಂಕಿಗೆ ಪ್ರತಿಕಿಯಿಸದೆ ಇರುವ ಪರಿಣಾಮ ಬೇಗನೆ ಆಹಾರವು ವಿಷವಾಗಬಹುದು. ಮಕ್ಕಳಲ್ಲಿ ಕೂಡ ಪ್ರತಿರೋಧಕ ಶಕ್ತಿಯು ದೊಡ್ಡವರಿಗಿಂತಲೂ ಕಡಿಮೆ ಇರುವ ಪರಿಣಾಮವಾಗಿ ಆಹಾರ ವಿಷವಾಗುವ ಸಾಧ್ಯತೆಯು ಅವರಲ್ಲಿ ಹೆಚ್ಚಾಗಿರುವುದು. ಈ ಪರಿಣಾಮ ಸಣ್ಣ ಮಕ್ಕಳು ಬೇಗನೆ ವಾಂತಿ ಮತ್ತು ಅತಿಸಾರ ಸಮಸ್ಯೆಗೆ ಒಳಗಾಗುವರು.

ಫುಡ್ ಪಾಯಿಸನ್ಗೆ ಚಿಕಿತ್ಸೆ ಏನು?

ಫುಡ್ ಪಾಯಿಸನ್ಗೆ ಚಿಕಿತ್ಸೆ ಏನು?

ಫುಡ್ ಪಾಯಿಸನ್ ಆದಾಗ ಮನೆಯಲ್ಲೇ ಚಿಕಿತ್ಸೆ ನೀಡಬಹುದು ಮತ್ತು ಹೆಚ್ಚಿನ ಸಂದರ್ಭದಲ್ಲಿ ಇದು ಮೂರರಿಂದ ಐದು ದಿನಗಳಲ್ಲಿ ನಿವಾರಣೆ ಆಗುವುದು.

ಆಹಾರ ವಿಷವಾಗಿದ್ದರೆ, ಆಗ ನೀವು ಹೆಚ್ಚು ನೀರಿನಾಂಶ ಸೇವಿಸಬೇಕು. ಕ್ರೀಡಾ ಪಾನೀಯಗಳಲ್ಲಿ ಹೆಚ್ಚಿನ ಮಟ್ಟದ ವಿದ್ಯುದ್ವಿಚ್ಛೇದ (ಎಲೆಕ್ಟ್ರಾಲ್) ಗಳು ಇರುವ ಕಾರಣದಿಂದಾಗಿ ಇದು ಸಹಕಾರಿ. ಹಣ್ಣಿನ ಜ್ಯೂಸ್ ಮತ್ತು ಎಳನೀರು ಕಾರ್ಬೋಹೈಡ್ರೇಟ್ಸ್ ನ್ನು ಮರು ಸ್ಥಾಪಿಸುವುದು ಮತ್ತು ನಿಶ್ಯಕ್ತಿ ದೂರ ಮಾಡುವುದು.

ಈ ಸಂದರ್ಭದಲ್ಲಿ ಕೆಫಿನ್ ಸೇವನೆ ಮಾಡಬೇಡಿ, ಇದು ಜೀರ್ಣಕ್ರಿಯೆ ವ್ಯವಸ್ಥೆಗೆ ಕಿರಿಕಿರಿ ಉಂಟು ಮಾಡುವುದು. ಕ್ಯಾಮೊಮೈಲ್, ಪುದೀನಾ ಮತ್ತು ದಂಡೇಲಿಯನ್ ಇಂತಹ ಕೆಫಿನ್ ಮುಕ್ತ ಗಿಡಮೂಲಿಕೆ ಚಾ ಸೇವಿಸಬಹುದು. ಇದು ಹೊಟ್ಟೆಗೆ ಶಮನ ನೀಡುವುದು.

ಇನ್ನು ಹೆಚ್ಚಿನ ಔಷಧಿಗಳ ಬಗ್ಗೆ ತಿಳಿಯಿರಿ. ಇಮೋಡಿಯಮ್ ಮತ್ತು ಪೆಪ್ಟೋ-ಬಿಸ್ಮೋಲ್ ನಂತಹ ಔಷಧಿಗಳು ಅತಿಸಾರ ಮತ್ತು ವಾಂತಿ ನಿವಾರಣೆ ಮಾಡುವುದು. ಆದರೆ ನೀವು ಈ ಔಷಧಿಗಳನ್ನು ತೆಗೆದುಕೊಳ್ಳುವ ಮೊದಲು ವೈದ್ಯರ ಸಲಹೆ ಪಡೆಯುವುದ ಸೂಕ್ತ. ಯಾಕೆಂದರೆ ದೇಹವು ವಿಷವನ್ನು ಹೊರಹಾಕಲು ವಾಂತಿ ಮತ್ತು ಬೇಧಿಯನ್ನು ಬಳಸಿಕೊಳ್ಳುವುದು. ನೀವು ಈ ಮಾತ್ರೆ ತೆಗೆದುಕೊಂಡರೆ ಆಗ ತೀವ್ರತೆ ಕಡಿಮೆ ಆಗಬಹುದು.

ಆಹಾರ ವಿಷವಾದ ಸಮಯದಲ್ಲಿ ಹೆಚ್ಚಿನ ವಿಶ್ರಾಂತಿ ಪಡೆಯುವುದು ಅತೀ ಅಗತ್ಯವಾಗಿರುವುದು. ಆಹಾರ ವಿಷವಾಗುವ ಸಮಸ್ಯೆಯು ತೀವ್ರವಾಗಿದ್ದರೆ ಆಗ ಆಸ್ಪತ್ರೆಯಲ್ಲಿ ದಾಖಲುಗೊಂಡು ರೋಗಿಗೆ ಹೆಚ್ಚಿನ ಮಟ್ಟದ ದ್ರವಾಹಾರ ನೀಡಬೇಕಾಗುತ್ತದೆ. ಪರಿಸ್ಥಿತಿ ಹದಗೆಟ್ಟಿದ್ದರೆ ಆಗ ಹಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ದಾಖಲಾಗಬೇಕಾಗಬಹುದು.

ಫುಡ್ ಪಾಯಿಸನ್ ಸಂದರ್ಭದಲ್ಲಿ ಏನು ಸೇವಿಸಬೇಕು?

ಫುಡ್ ಪಾಯಿಸನ್ ಸಂದರ್ಭದಲ್ಲಿ ಏನು ಸೇವಿಸಬೇಕು?

ವಾಂತಿ ಹಾಗೂ ಬೇಧಿ ಕಡಿಮೆ ಆಗುವ ತನಕ ಯಾವುದೇ ಘನ ಆಹಾರ ಸೇವನೆ ಮಾಡದೆ ಇದ್ದರೆ ತುಂಬಾ ಒಳ್ಳೆಯದು. ಇದು ಕಡಿಮೆ ಆದ ಬಳಿಕ ನೀವು ಸಾಮಾನ್ಯವಾಗಿ ಸೇವಿಸುವ, ಆದರೆ ಸುಲಭವಾಗಿ ಕರಗುವ ಆಹಾರ ಸೇವಿಸಿ. ನೀವು ಈ ರೀತಿಯ ಆಹಾರ ಸೇವಿಸಬಹುದು. ಬಾಳೆಹಣ್ಣು, ಅನ್ನ, ಓಟ್ ಮೀಲ್, ಬಟಾಟೆ, ಬೇಯಿಸಿದ ತರಕಾರಿ, ಬ್ರೆಡ್ ಟೋಸ್ಟ್, ಕೆಫಿನ್ ಇಲ್ಲದೆ ಇರುವ ಸೋಡಾ, ಹಣ್ಣಿನ ಜ್ಯೂಸ್, ಕ್ರೀಡಾ ಪಾನೀಯಗಳು ಸೂಕ್ತ.

ಆಹಾರ ವಿಷವಾಗಿದ್ದ ಸಂದರ್ಭದಲ್ಲಿ ಏನು ತಿಂದರೆ ಮತ್ತಷ್ಟು ಸಮಸ್ಯೆಯಾಗುವುದು?

ಆಹಾರ ವಿಷವಾಗಿದ್ದ ಸಂದರ್ಭದಲ್ಲಿ ಏನು ತಿಂದರೆ ಮತ್ತಷ್ಟು ಸಮಸ್ಯೆಯಾಗುವುದು?

ಹೊಟ್ಟೆಯು ಇನ್ನಷ್ಟು ಸಮಸ್ಯೆಗೆ ಒಳಗಾಗುವುದನ್ನು ತಪ್ಪಿಸಲು ಈ ರೀತಿಯ ಘನ ಆಹಾರ ಸೇವಿಸುವುದನ್ನು ನೀವು ಕಡೆಗಣಿಸಬೇಕು. ಇದರಲ್ಲಿ ಮುಖ್ಯವಾಗಿ, ಹಾಲಿನ ಉತ್ಪನ್ನಗಳು, ವಿಶೇಷವಾಗಿ ಹಾಲು ಮತ್ತು ಚೀಸ್, ಕೊಬ್ಬಿನ ಆಹಾರಗಳು, ಹೆಚ್ಚು ಸಕ್ಕರೆ ಇರುವ ಆಹಾರ, ಖಾರದ ಆಹಾರ, ಕರಿದ ಆಹಾರಗಳನ್ನು ತಿನ್ನಬಾರದು.

ನೀವು ಇವುಗಳನ್ನು ಸಹ ಕಡೆಗಣಿಸಬೇಕು: ಕೆಫಿನ್(ಸೋಡಾ, ಶಕ್ತಿ ಪೇಯ, ಕಾಫಿ), ಆಲ್ಕೋಹಾಲ್, ನಿಕೋಟಿನ್.

ಫುಡ್ ಪಾಯಿಸನ್ ಆಗದಂತೆ ರಕ್ಷಿಸಿಕೊಳ್ಳುವುದು ಹೇಗೆ?

ಫುಡ್ ಪಾಯಿಸನ್ ಆಗದಂತೆ ರಕ್ಷಿಸಿಕೊಳ್ಳುವುದು ಹೇಗೆ?

* ಆಹಾರವನ್ನು ತುಂಬಾ ಸುರಕ್ಷಿತವಾಗಿ ನೀವು ಇಟ್ಟುಕೊಳ್ಳಬೇಕು ಮತ್ತು ಅಸುರಕ್ಷಿತ ವಾತಾವರಣದಲ್ಲಿ ಆಹಾರವನ್ನು ತೆರೆದಿಡಬಾರದು.

* ಕೆಲವೊಂದು ಆಹಾರಗಳು ಉತ್ಪನ್ನವಾಗುವ ಕ್ರಮದಿಂದಾಗಿ ಬೇಗನೆ ವಿಷವಾಗುವುದು. ಉದಾಹರಣೆಗೆ ಮಾಂಸ, ಕೋಳಿಮಾಂಸ, ಮೊಟ್ಟೆ ಮತ್ತು ಚಿಪ್ಪುಮೀನು ಬೇಗನೆ ಕೆಡುವುದು. ಆದರೆ ಇದೆಲ್ಲವನ್ನು ಬಿಸಿ ಮಾಡುವ ವೇಳೆ ಸೋಂಕು ನಿವಾರಣೆ ಆಗುವುದು. ಇಂತಹ ಆಹಾರಗಳನ್ನು ನೀವು ಹಸಿಯಾಗಿ ತಿಂದರೆ ಅಥವಾ ಸರಿಯಾಗಿ ಬೇಯಿಸದೆ ತಿಂದರೆ ಆಗ ಆಹಾರವು ಬೇಗನೆ ವಿಷವಾಗುವುದು.

ಫುಡ್ ಪಾಯಿಸನ್ಗೆ ಕಾರಣವಾದ ಕೆಲವೊಂದು ಖಾದ್ಯಗಳು

ಫುಡ್ ಪಾಯಿಸನ್ಗೆ ಕಾರಣವಾದ ಕೆಲವೊಂದು ಖಾದ್ಯಗಳು

ಕೆಲವೊಂದು ಮೀನಿನ ಖಾದ್ಯಗಳು ಹಸಿಯಾಗಿರುವುದು ಮತ್ತು ಅರೆ ಬೇಯಿಸಿದ ಮಾಂಸ ಬಳಸಿರುವಂತಹ ಖಾದ್ಯಗಳು ಹಾಗೂ ಹಾಟ್ ಡಾಗ್ ನ್ನು ಸರಿಯಾಗಿ ಬಿಸಿ ಮಾಡದೆ ಇರುವ ಪರಿಣಾಮವಾಗಿ ಇದು ವಿಷವಾಗುವುದು. ಪಾಶ್ಚರೀಕರಿಸದೆ ಇರುವ ಹಾಲು, ಚೀಸ್ ಮತ್ತು ಜ್ಯೂಸ್, ತೊಳೆಯದೆ ಇರುವ ಹಣ್ಣುಗಳು ಹಾಗೂ ತರಕಾರಿಗಳು ಆಹಾರ ವಿಷವಾಗಿಸಬಹುದು.

ಫುಡ್ ಪಾಯಿಸನ್ ಆಗದಂತೆ ತಡೆಯುವ ಎಚ್ಚರಿಕೆಗಳು

ಫುಡ್ ಪಾಯಿಸನ್ ಆಗದಂತೆ ತಡೆಯುವ ಎಚ್ಚರಿಕೆಗಳು

* ಅಡುಗೆ ಮಾಡುವ ಮೊದಲು ಅಥವಾ ಊಟ ಮಾಡುವ ಮೊದಲು ಸರಿಯಾಗಿ ಕೈಗಳನ್ನು ತೊಳೆಯಿರಿ.

* ಆಹಾರವು ಸರಿಯಾಗಿ ಸೀಲ್ ಆಗಿದೆಯಾ ಅಥವಾ ಶೇಖರಣೆ ಮಾಡಲಾಗಿದೆಯಾ ಎಂದು ನೋಡಿ.

* ಮಾಂಸ ಮತ್ತು ಮೊಟ್ಟೆಯನ್ನು ಸರಿಯಾಗಿ ಬೇಯಿಸಿ.

* ಯಾವುದೇ ತಾಜಾ ಆಹಾರವನ್ನು ಬಳಸುವ ಮೊದಲು ಅದನ್ನು ಸರಿಯಾಗಿ ತೊಳೆಯಿರಿ.

* ಹಣ್ಣುಗಳು ಹಾಗೂ ತರಕಾರಿಗಳನ್ನು ಸರಿಯಾಗಿ ತೊಳೆದ ಬಳಿಕ ಬಳಸಿಕೊಂಡರೆ ಆಹಾರ ವಿಷವಾಗುವುದನ್ನು ತಪ್ಪಿಸಬಹುದು.

English summary

Food Poisoning Types, Symptoms & Treatment

Foodborne illness, more commonly referred to as food poisoning, is the result of eating contaminated, spoiled, or toxic food. The most common symptoms of food poisoning include nausea, vomiting, and diarrhea. Although it’s quite uncomfortable, food poisoning isn’t unusual. According to the Centers for Disease Control and Prevention (CDC)Trusted Source, 1 in 6 Americans will contract some form of food poisoning every year.
X
Desktop Bottom Promotion