For Quick Alerts
ALLOW NOTIFICATIONS  
For Daily Alerts

ಊಟದ ನಂತರ ನೀರು ಕುಡಿದರೆ ಬೊಜ್ಜು ಬರುವುದೇ?

|

ಪ್ರತಿಯೊಬ್ಬರ ಜೀವನಶೈಲಿಯ ಅಭ್ಯಾಸವು ಅವರ ದಿನಚರಿ ಚಟುವಟಿಕೆಗಳಿಂದ ರೂಪುಗೊಳ್ಳುತ್ತದೆ. ಆಯುರ್ವೇದದ ಪ್ರಕಾರ, ನಿಮ್ಮ ದಿನಚರಿಯು ನಿಮ್ಮ ಜೀವನ ವಿಧಾನಕ್ಕೆ ಸಾಕಷ್ಟು ವ್ಯತ್ಯಾಸವನ್ನುಂಟುಮಾಡುತ್ತದೆ.

ಸಣ್ಣಪುಟ್ಟ ಬದಲಾವಣೆ ಮಾಡುವುದರಿಂದ ಕೆಲವು ಸಮಯದವರೆಗೆ ಆರೋಗ್ಯ ಸಮಸ್ಯೆಗಳ ಬರದೇ ಇರದಂತೆ ನೋಡಿಕೊಳ್ಳಬಹುದು. ಅಂತಹ ಒಂದು ಅಭ್ಯಾಸವೆಂದರೆ ನೀರು ಕುಡಿಯುವುದು.

ನೀವು ದಿನವಿಡೀ ಎಷ್ಟು ಕುಡಿಯುತ್ತೀರಿ, ಮತ್ತು ವಿಶೇಷವಾಗಿ ಊಟದ ಸಮಯದಲ್ಲಿ. ಅನೇಕರು ತಮ್ಮ ಊಟವನ್ನು ನೀರಿನಿಂದ ಮುಗಿಸಲು ಇಷ್ಟಪಡುತ್ತಿದ್ದರೆ, ಅದನ್ನು ಮಾಡುವುದು ಸರಿಯಾದ ಕೆಲಸವೇ? ಈ ಎಲ್ಲಾ ಪ್ರಶ್ನೆಗಳಿಗೆ ಈ ಆಯುರ್ವೇದದ ಮೂಲಕ ಉತ್ತರ ನೀಡಲಿದ್ದೇವೆ.

ನೀರು ಕುಡಿಯಲು ಸರಿಯಾದ ಸಮಯ ಯಾವುದು?:

ನೀರು ಕುಡಿಯಲು ಸರಿಯಾದ ಸಮಯ ಯಾವುದು?:

ಆಯುರ್ವೇದದ ಪ್ರಕಾರ, ಊಟಕ್ಕೆ ಮುಂಚಿತವಾಗಿ ನೀರು ಕುಡಿಯುವುದು ವೀಕ್ ನೆಸ್ ಗೆ ಕಾರಣವಾಗಬಹುದು. ಅದೇ ರೀತಿ ಊಟದ ನಂತರ ನೀರು ಕುಡಿಯುವುದರಿಂದ ಬೊಜ್ಜು ಉಂಟಾಗುತ್ತದೆ.

ಆದ್ದರಿಂದ, ನೀರು ಕುಡಿಯಲು ಉತ್ತಮ ಸಮಯ ಯಾವುದು?

ಆದ್ದರಿಂದ, ನೀರು ಕುಡಿಯಲು ಉತ್ತಮ ಸಮಯ ಯಾವುದು?

ಊಟದ ಮಧ್ಯೆ ಒಂದೊಂದೇ ಸಿಪ್ ನೀರು ಕುಡಿಯುವುದು ಆರೋಗ್ಯಕರ ಅಭ್ಯಾಸವಾಗಿದೆ.

ಇದಕ್ಕೆ ಕಾರಣ ಇಲ್ಲಿದೆ:

ಇದಕ್ಕೆ ಕಾರಣ ಇಲ್ಲಿದೆ:

ಇದು ಆಹಾರವನ್ನು ನಿಧಾನವಾಗಿ ಹೊಟ್ಟೆ ಸೇರಲು ಸಹಾಯ ಮಾಡುತ್ತದೆ, ಜೊತೆಗೆ ಇದು ಜೀರ್ಣಕ್ರಿಯೆಯನ್ನು ಉತ್ತಮವಾಗಿಸುತ್ತದೆ.

ಹಾಗಾದ್ರೆ ಯಾವ ರೀತಿಯ ನೀರನ್ನು ಕುಡಿಯಬೇಕು?

ಹಾಗಾದ್ರೆ ಯಾವ ರೀತಿಯ ನೀರನ್ನು ಕುಡಿಯಬೇಕು?

ಉತ್ತಮ ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆಗೆ ಯಾವಾಗಲೂ ಬೆಚ್ಚಗಿನ ನೀರನ್ನು ಊಟದೊಂದಿಗೆ ಕುಡಿಯಿರಿ. ಉತ್ತಮ ಜೀರ್ಣಕ್ರಿಯೆಗಾಗಿ, ನೀರಿನಲ್ಲಿ ಗಿಡಮೂಲಿಕೆಗಳ ಮಿಶ್ರಣವನ್ನು ಸಹ ಮಾಡಬಹುದು. ಕುದಿಯುವ ನೀರಿಗೆ ಒಣ ಶುಂಠಿ ಪುಡಿ, ವೆಟಿವರ್ ಬೇರುಗಳು, ಬಬೂಲ್ ಅಥವಾ ಸೋಂಪು ಬೀಜಗಳನ್ನು ಸೇರಿಸಿ.

English summary

Drinking Water While Eating; Here’s What An Ayurvedic Practitioner Says

Here we told about Drinking water while eating; Here’s what an ayurvedic practitioner says, read on
X
Desktop Bottom Promotion