For Quick Alerts
ALLOW NOTIFICATIONS  
For Daily Alerts

ರಾತ್ರಿ ವೇಳೆ ಬೇಳೆಕಾಳು ತಿನ್ನಬೇಕೋ ಬೇಡವೋ, ಆಯುರ್ವೇದ ಏನು ಹೇಳುತ್ತದೆ?

|

ಪ್ರತಿ ಭಾರತೀಯ ಕುಟುಂಬದಲ್ಲಿ, ದ್ವಿದಳ ಧಾನ್ಯಗಳು ಮತ್ತು ರೊಟ್ಟಿಗಳನ್ನು ಪೌಷ್ಠಿಕ ಆಹಾರವೆಂದು ಪರಿಗಣಿಸಲಾಗುತ್ತದೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಅವಶ್ಯಕವಾದ ಪ್ರೋಟೀನ್ ಬೇಳೆಕಾಳುಗಳಲ್ಲಿ ಹೇರಳವಾಗಿದೆ.

ಬೇಳೆಯನ್ನು ಸೇವಿಸುವುದರಿಂದ, ಒಬ್ಬ ವ್ಯಕ್ತಿಗೆ ಅಗತ್ಯವಿರುವ ಎಲ್ಲಾ ಪೌಷ್ಟಿಕ ಆಹಾರವನ್ನು ದೊರೆಯುವುದಲ್ಲದೇ, ಬೇಗನೆ ಹೊಟ್ಟೆ ತುಂಬುತ್ತದೆ. ಆದರೆ ನೀವು ಈ ದ್ವಿದಳ ಧಾನ್ಯಗಳನ್ನು ತಪ್ಪಾದ ಸಮಯದಲ್ಲಿ ಸೇವಿಸಿದರೆ, ಅದು ನಿಮಗೆ ಪ್ರಯೋಜನವಾಗುವ ಬದಲು ಹಾನಿಯನ್ನುಂಟುಮಾಡುತ್ತದೆ. ಬೇಳೆಕಾಳುಗಳನ್ನು ತಿನ್ನಲು ಉತ್ತಮ ಸಮಯ ಮತ್ತು ನಿಯಮ ಯಾವುದು ಎಂದು ಆಯುರ್ವೇದದ ಪ್ರಕಾರ ತಿಳಿದುಕೊಳ್ಳೋಣ.

ಆಯುರ್ವೇದದಲ್ಲಿ ಬೇಳೆಕಾಳು ತಿನ್ನಲು ಸರಿಯಾದ ನಿಯಮ ಯಾವುದು?

ಆಯುರ್ವೇದದಲ್ಲಿ ಬೇಳೆಕಾಳು ತಿನ್ನಲು ಸರಿಯಾದ ನಿಯಮ ಯಾವುದು?

ಒಬ್ಬ ವ್ಯಕ್ತಿಯು ಏನು ತಿನ್ನುತ್ತಾನೋ ಅದು ಆತನ ವಾತ, ಕಫ ಮತ್ತು ಪಿತ್ತರಸದ ಮೇಲೆ ನೇರ ಪರಿಣಾಮ ಬೀರುತ್ತದೆ. ಆಯುರ್ವೇದ ತಜ್ಞರ ಪ್ರಕಾರ, ಲಘು ಆಹಾರವನ್ನು ಯಾವಾಗಲೂ ರಾತ್ರಿಯಲ್ಲಿ ಸೇವಿಸಬೇಕು. ರಾತ್ರಿ ಹೆಚ್ಚು ತಿನ್ನುವುದು ವ್ಯಕ್ತಿಯ ಹೊಟ್ಟೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಬೇಳೆಕಾಳುಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಆದರೆ ರಾತ್ರಿಯಲ್ಲಿ ದ್ವಿದಳ ಧಾನ್ಯಗಳನ್ನು ತಿನ್ನುವುದರಿಂದ ವ್ಯಕ್ತಿಗೆ ಅಜೀರ್ಣ ಉಂಟಾಗುತ್ತದೆ. ಆಯುರ್ವೇದದ ಪ್ರಕಾರ, ಇಡೀ ಬೇಳೆ, ಉದ್ದು,ಕಡಲೆಕಾಯಿ, ತೊಗರಿಬೇಳೆ, ಮತ್ತು ಬಟಾಣಿಗಳಂತಹ ದ್ವಿದಳ ಧಾನ್ಯಗಳನ್ನು ರಾತ್ರಿಯಲ್ಲಿ ಸೇವಿಸಬಾರದು. ಇದನ್ನು ಮಾಡುವುದರಿಂದ, ವ್ಯಕ್ತಿಯ ಜೀರ್ಣಕ್ರಿಯೆಯು ಪ್ರತಿಕೂಲ ಪರಿಣಾಮ ಎದುರಿಸುತ್ತದೆ.

ಬೇಳೆಕಾಳು ತಿನ್ನಲು ಸರಿಯಾದ ಸಮಯ ಯಾವುದು?:

ಬೇಳೆಕಾಳು ತಿನ್ನಲು ಸರಿಯಾದ ಸಮಯ ಯಾವುದು?:

ಆಯುರ್ವೇದದ ಪ್ರಕಾರ ಬೇಳೆ ಸೇವಿಸಲು ಉತ್ತಮ ಸಮಯ ಮಧ್ಯಾಹ್ನವೆಂದು ಪರಿಗಣಿಸಲಾಗುತ್ತದೆ. ಇದರ ಹೊರತಾಗಿಯೂ, ನಿಮ್ಮ ಭೋಜನಕ್ಕೆ ಬೇಳೆ ಸೇರಿಸಲು ಬಯಸಿದರೆ, ನೀವು ಸುಲಭವಾಗಿ ಜೀರ್ಣವಾಗುವ ಬೇಳೆಕಾಳದ ಹೆಸರು ಬೇಳೆಯನ್ನು ಸೇವಿಸಬಹುದು. ಇದಲ್ಲದೆ, ನೀವು ರಾತ್ರಿ ಊಟಕ್ಕೆ ಬೇಳೆಕಾಳನ್ನು ತಿನ್ನಲು ಬಯಸಿದರೆ, ಮಲಗುವ ಕನಿಷ್ಠ ಎರಡು-ಮೂರು ಗಂಟೆಗಳ ಮೊದಲು ನಿಮ್ಮ ಊಟವನ್ನು ಮಾಡಲು ಪ್ರಯತ್ನಿಸಿ. ಬೇಳೆಕಾಳು ಪ್ರೋಟೀನ್‌ನ ಉತ್ತಮ ಮೂಲವಾಗಿದೆ ಮತ್ತು ಜೀರ್ಣಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ ಎಂಬುದು ಇದಕ್ಕೆ ಕಾರಣವಾಗಿದೆ.

ಈ ಆಹಾರಗಳನ್ನು ರಾತ್ರಿ ತುಂಬಾ ಸೇವಿಸುವುದನ್ನು ತಪ್ಪಿಸಿ:

ಈ ಆಹಾರಗಳನ್ನು ರಾತ್ರಿ ತುಂಬಾ ಸೇವಿಸುವುದನ್ನು ತಪ್ಪಿಸಿ:

ಸಕ್ಕರೆ:

ನಿಮ್ಮ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುವ ಸಕ್ಕರೆಯ ಅತಿಯಾದ ಸೇವನೆಯು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ ರಾತ್ರಿಯಲ್ಲಿ ಸಕ್ಕರೆ ಸೇವಿಸಬೇಡಿ. ಇದನ್ನು ಮಾಡುವುದರಿಂದ, ನಿಮ್ಮ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುತ್ತದೆ ಮತ್ತು ವ್ಯಕ್ತಿಯು ನಿದ್ರೆಯ ಸಮಸ್ಯೆಗಳನ್ನು ಎದುರಿಸುತ್ತಾನೆ.

ಮೊಸರು:

ಮೊಸರು:

ರಾತ್ರಿ ಮೊಸರು ತಿನ್ನುವುದನ್ನು ತಪ್ಪಿಸಿ. ರಾತ್ರಿಯಲ್ಲಿ ಮೊಸರು ತಿನ್ನುವುದರಿಂದ ವ್ಯಕ್ತಿಗೆ ಶೀತ ಮತ್ತು ನೆಗಡಿ ಉಂಟಾಗುತ್ತದೆ. ಇದಲ್ಲದೆ ಮೊಸರಿಗೆ ಉಪ್ಪು ಸೇರಿಸಿ ಸೇವಿಸಬೇಡಿ.

English summary

Best Time To Eat Pulses For Weight Loss In Kannada

Here we told about Best time to eat pulses for weight loss in Kannada, read on
Story first published: Wednesday, March 3, 2021, 18:08 [IST]
X
Desktop Bottom Promotion