For Quick Alerts
ALLOW NOTIFICATIONS  
For Daily Alerts

ದೇಹದ ವಿಷಕಾರಿ ಅಂಶ ಹೊರಹಾಕಲು- ನೈಸರ್ಗಿಕವಾದ ಪವರ್ ಫುಲ್ ಜ್ಯೂಸ್

|

ದೇಹದಲ್ಲಿ ವಿಷಕಾರಿ ಅಂಶಗಳು ಹೆಚ್ಚಾದಾಗ ಅದರ ಪರಿಣಾಮವು ಚರ್ಮದ ಮೇಲೆ ಕಾಣಿಸಿಕೊಳ್ಳುವುದು. ಚರ್ಮದಲ್ಲಿ ಕೆಂಪುಕಲೆಗಳು, ಮೊಡವೆಗಳು ಮತ್ತು ದೀರ್ಘಕಾಲದ ಆಯಾಸ ಇತ್ಯಾದಿಗಳು ದೇಹದೊಳಗಿರುವ ವಿಷಕಾರಿಗಳಿಂದ ಬರುವುದು. ಈ ವಿಷಕಾರಿ ಅಂಶಗಳನ್ನು ಯಕೃತ್, ಕಿಡ್ನಿಗಳು ಮತ್ತು ಕರುಳಿನ ಮೂಲಕ ಹೊರಹಾಕಬಹುದು. ಇದಕ್ಕಾಗಿ ನೀವು ಕ್ಯಾರೆಟ್, ಪಾಲಕ್ ಮತ್ತು ಲಿಂಬೆಯ ಜ್ಯೂಸ್ ಕುಡಿಯಬೇಕು. ಈ ರುಚಿಕರ ಹಾಗೂ ಆರೋಗ್ಯಕರ ಪಾನೀಯವು ಯಕೃತ್, ಕಿಡ್ನಿ ಮತ್ತು ಕರುಳನ್ನು ಸ್ವಚ್ಛಗೊಳಿಸುವುದು.

ದೇಹದವನ್ನು ನಿರ್ವಿಷಗೊಳಿಸುವ ಅಗತ್ಯವೇನಿದೆ?
ದೇಹದಲ್ಲಿ ವಿಷಕಾರಿ ಅಂಶಗಳು ಜಮೆಯಾಗಲು ಹಲವಾರು ರೀತಿಯ ಕಾರಣಗಳು ಇವೆ. ಇದರಲ್ಲಿ ಪ್ರಮುಖವಾಗಿ ಆಲ್ಕೋಹಾಲ್ ಮತ್ತು ತಂಬಾಕು, ಒತ್ತಡ ಮತ್ತು ಆತಂಕ, ವಾತಾವರಣದಲ್ಲಿ ಕಲ್ಮಷ, ರಾಸಾಯನಿಕಗಳು, ಕೀಟನಾಶಕಗಳು ಇತ್ಯಾದಿ. ಕೆಲವೊಂದು ಭಾರಲೋಹಗಳಾದ ಅರ್ಸೆನಿಕ್, ಪಾದರಸ, ಲಿಡ್ ಇತ್ಯಾದಿಗಳು ಕೂಡ ದೇಹ ಸೇರಬಹುದು...

ಕ್ಯಾರೆಟ್

ಕ್ಯಾರೆಟ್

ನೈಸರ್ಗಿಕವಾಗಿ ಸಿಹಿಯಾಗಿರುವ, ಜಗಿಯುವಾಗ ಕುರುಕು ಶಬ್ದ ಬರುವ ಹಾಗೂ ನೋಡಲೂ ಕೇಸರಿ ಬಣ್ಣ ಹೊಂದಿರುವ ಕ್ಯಾರೆಟ್ಟುಗಳು ಯಾರಿಗೆ ಇಷ್ಟವಿಲ್ಲ? ರಸಭರಿತ ಹಾಗೂ ತಾಜಾ ಕ್ಯಾರೆಟ್ಟುಗಳನ್ನು ಹಸಿಯಾಗಿಯೂ ಬೇಯಿಸಿ ತಯಾರಿಸಿದ ಖಾದ್ಯಗಳನ್ನೂ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಇವುಗಳ ಸಿಹಿ ಹಾಗೂ ಪೌಷ್ಟಿಕಾಂಶಗಳಿಂದಾಗಿ ಇದನ್ನೊಂದು ಅಪ್ಪಟ ಆರೋಗ್ಯಕರ ಆಹಾರವೆಂದು ಕರೆಯಬಹುದು. ಸಾಮಾನ್ಯ ಮರಳುಮಿಶ್ರಿತ ಮಣ್ಣಿನಲ್ಲಿ ಹೆಚ್ಚಿನ ಆರೈಕೆ ಬೇಡದೇ ಬೆಳೆಯುವ ಕ್ಯಾರೆಟ್ಟುಗಳನ್ನು ವಿಶ್ವದಾದ್ಯಂತ ಎಲ್ಲೆಡೆ ಬೆಳೆಯಲಾಗುತ್ತದೆ. ಕನ್ನಡದಲ್ಲಿ ಗಜ್ಜರಿ ಎಂದು ಕರೆಯಲಾಗುವ ಈ ಸುಂದರ ಕ್ಯಾರೆಟ್ ರುಚಿಕರ ಮಾತ್ರವಲ್ಲ, ಬೀಟಾ ಕ್ಯಾರೋಟೀನ್, ವಿಟಮಿನ್ ಎ, ವಿವಿಧ ಖನಿಜಗಳು ಹಾಗೂ ಆಂಟಿ ಆಕ್ಸಿಡೆಂಟುಗಳು ಇದನ್ನೊಂದು ಆರೋಗ್ಯಕರ ಅಹಾರವನ್ನಾಗಿಸಿವೆ. ಇನ್ನು ಕ್ಯಾರೆಟ್ ನಲ್ಲಿ ಬೆಟಾ ಕ್ಯಾರೋಟಿನ್, ಫಾಲಿಕ್ ಆಮ್ಲ, ಫೋಸ್ಪರಸ್ ಮತ್ತು ಕ್ಯಾಲ್ಸಿಯಂ ಅಧಿಕವಾಗಿದ್ದು, ಆಹಾರವನ್ನು ಪುನರುಜ್ಜೀವನಗೊಳಿಸುವುದು. ಇದರಲ್ಲಿ ವಿಟಮಿನ್ ಎ ಇರುವ ಕಾರಣದಿಂದ ಇದು ದೇಹವನ್ನು ನಿರ್ವಿಷಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ವಿಷವನ್ನು ಹೊರಹಾಕಲು ಇದು ಯಕೃತ್ ಗೆ ನೆರವಾಗುವುದು. ದೇಹದಲ್ಲಿ ಪಿಎಚ್ ಮಟ್ಟವನ್ನು ಕಾಪಾಡಿಕೊಂಡು ದೇಹದ ಕ್ಷಾರೀಕರಿಸುವುದು. ದೃಷ್ಟಿಯನ್ನು ಸುಧಾರಿಸಿ, ಚರ್ಮ ಮತ್ತು ಕೂದಲಿನ ಸ್ಥಿತಿಯನ್ನು ಉತ್ತಮವಾಗಿಡುವುದು.

ಪಾಲಕ್

ಪಾಲಕ್

ನಮ್ಮಲ್ಲಿ ಹಲವರಿಗೆ ಸೊಪ್ಪು ಎಂದರೆ ಬೇಡ ಎನ್ನಬೇಕಾದ ಪದಾರ್ಥವಾಗಿದೆ. ಅದರಲ್ಲೂ ಗಾಢ ಹಸಿರು ಬಣ್ಣದ ಬಸಲೆ, ಹರಿವೆ, ಪಾಲಕ್, ಮೆಂತೆ ಮೊದಲಾದ ಸೊಪ್ಪುಗಳನ್ನು ನೋಡಿದಾಕ್ಷಣ ಮೂಗು ಮುರಿಯುತ್ತಾರೆ. ಆದರೆ ಈ ಸೊಪ್ಪುಗಳಲ್ಲಿ ಅತಿ ಹೆಚ್ಚಿನ ಪ್ರಮಾಣದ ವಿಟಮಿನ್ನು, ಖನಿಜಗಳು ಮತ್ತು ಮುಖ್ಯವಾಗಿ ಕಬ್ಬಿಣದ ಅಂಶವಿದೆ. ದಪ್ಪನೆಯ ಪಾಲಕ್ ಸೊಪ್ಪಿನಲ್ಲಿ ಕಬ್ಬಿಣದ ಅಂಶ ಹೆಚ್ಚೇ ಇದೆ. ಇದರೊಂದಿಗೆ ಫೈಟೋ ನ್ಯೂಟ್ರಿಯೆಂಟ್ ಎಂಬ ಪೋಷಕಾಂಶಗಳ ಜೊತೆಗೆ ಕ್ಯಾಲೋರಿಗಳೂ ಕಡಿಮೆ ಇರುವ ಕಾರಣ ಇದನ್ನೊಂದು ಸುಪರ್ ಆಹಾರ ಎಂದೂ ಕರೆಯಬಹುದು. ನಿಯಮಿತವಾಗಿ ಪಾಲಕ್ ಸೊಪ್ಪನ್ನು ಸೇವಿಸುತ್ತಾ ಇರುವ ಮೂಲಕ ಆರೋಗ್ಯಕ್ಕೆ ಹಲವಾರು ಲಾಭಗಳಿವೆ. ಈ ಹಸಿರೆಲೆ ತರಕಾರಿಯಲ್ಲಿ ಇರುವಂತಹ ವರ್ಣದ್ರವ್ಯಗಳಿಂದಾಗಿ ಇದು ದೇಹವನ್ನು ನಿರ್ವಿಷಗೊಳಿಸುವ ಅದ್ಭುತ ತರಕಾರಿಯಾಗಿದೆ. ಪಾಲಕ್ ಸೊಪ್ಪು ಮೂತ್ರವರ್ಧಕ, ವಿರೇಚಕ ಮತ್ತು ಕ್ಷಾರೀಕರಿಸುವುದು ಎಂದು ಪರಿಗಣಿಸಲಾಗಿದೆ. ಇದರಲ್ಲಿ ಕಬ್ಬಿನಾಂಶ ಮತ್ತು ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ. ಇದು ರಕ್ತಹೀನೆ ಮತ್ತು ಅಕಾಲಿಕ ವಯಸ್ಸಾಗುವ ಲಕ್ಷಣಗಳನ್ನು ತಡೆಯುವುದು. ಬಸಲೆಯಲ್ಲಿರುವಂತಹ ಕಬ್ಬಿನಾಂಶ, ಫಾಲಟೆ, ವಿಟಮಿನ್ ಬಿ6 ಮತ್ತು ವಿಟಮಿನ್ ಕೆ ಅಂಶಗಳಿಂದ ಇದು ರಕ್ತವನ್ನು ಶುದ್ಧೀಕರಿಸುವುದು. ಈ ಎಲ್ಲಾ ಅಂಶಗಳು ರಕ್ತವನ್ನು ಶುದ್ಧೀಕರಿಸುವ ಪ್ರಮುಖ ಅಂಶಗಳು.

ಲಿಂಬೆ

ಲಿಂಬೆ

ನೈಸರ್ಗಿಕವಾಗಿ ದೊರೆಯುವ ತರಕಾರಿ ಹಣ್ಣುಗಳು ಒಂದಿಲ್ಲೊಂದು ವಿಸ್ಮಯಕಾರಿ ಅಂಶಗಳಿಂದ ಸಮ್ಮಿಳಿತವಾಗಿದೆ. ಬರೀ ಸಿಹಿಯಾದ ಹಣ್ಣು ಮತ್ತು ತರಕಾರಿಯಿಂದ ಮಾತ್ರ ಆರೋಗ್ಯವಲ್ಲ. ಹುಳಿ, ಒಗರು, ಕಹಿ ಇರುವ ತರಕಾರಿ ಹಣ್ಣುಗಳೂ ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇಂತಹ ತರಕಾರಿ ಹಣ್ಣುಗಳ ದಿನನಿತ್ಯದ ಸೇವನೆಯಿಂದ ನಮಗೆ ಲಾಭವೇ ಹೆಚ್ಚು ಹೊರತು ನಷ್ಟವಲ್ಲ. ಇಂದು ನಾವು ಹೇಳಹೊರಟಿರುವ ಅಂತಹ ತರಕಾರಿ ಹಣ್ಣು ಲಿಂಬೆ ಹಣ್ಣಾಗಿದೆ. ಲಿಂಬೆಯಲ್ಲಿರುವಂತಹ ವಿಟಮಿನ್ ಸಿ ಮತ್ತು ನಾರಿನಾಂಶದಿಂದಾಗಿ ಇದನ್ನು ಒಂದು ಒಳ್ಳೆಯ ಶುದ್ಧೀಕರಿಸುವುದು ಎಂದು ಪರಿಗಣಿಸಲಾಗಿದೆ. ಕಿಡ್ನಿ, ಯಕೃತ್ ಮತ್ತು ಕರುಳನ್ನು ಇದು ನಿರ್ವಿಷಗೊಳಿಸುವುದು. ಇಷ್ಟು ಮಾತ್ರವಲ್ಲದೆ ಲಿಂಬೆಯು ಪ್ರತಿರೋಧಕ ವ್ಯವಸ್ಥೆಯನ್ನು ಬಲಗೊಳಿಸುವುದು, ಜೀರ್ಣಕ್ರಿಯೆ ಸುಧಾರಿಸುವುದು ಮತ್ತು ಗಂಟು ಹಾಗೂ ಸ್ನಾಯು ನೋವು ಕಡಿಮೆ ಮಾಡುವುದು.

ಕ್ಯಾರೆಟ್, ಪಾಲಕ್ ಮತ್ತು ಲಿಂಬೆರಸವು ಆರೋಗ್ಯಕಾರಿ ಯಾಕೆ?

ಕ್ಯಾರೆಟ್, ಪಾಲಕ್ ಮತ್ತು ಲಿಂಬೆರಸವು ಆರೋಗ್ಯಕಾರಿ ಯಾಕೆ?

ಇವುಗಳಲ್ಲಿ ಇರುವಂತಹ ನಿರ್ವಿಷಗೊಳಿಸುವಂತಹ ಸಾಮರ್ಥ್ಯದಿಂದಾಗಿ ಇದು ದೇಹದ ಅಂಗಾಂಗಳಾಗಿರುವ ಕಿಡ್ನಿಗಳು, ಯಕೃತ್ ಮತ್ತು ಕರುಳನ್ನು ಶುದ್ಧೀಕರಿಸಿ, ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಮಾಡುವುದು. ಈ ಜ್ಯೂಸ್ ಎಲ್ಲಾ ರೀತಿಯ ಪೋಷಕಾಂಶಗಳ ಕೊರತೆ ನೀಗಿಸುವುದು. ಇದರಲ್ಲಿರುವ ವಿಟಮಿನ್ ಗಳು ಮತ್ತು ಖನಿಜಾಂಶಗಳನ್ನು ದೇಹವು ಸುಲಭವಾಗಿ ಹೀರಿಕೊಳ್ಳುವುದು.

ಕ್ಯಾರೆಟ್, ಪಾಲಕ್ ಮತ್ತು ಲಿಂಬೆ ಜ್ಯೂಸ್ ತಯಾರಿಸುವುದು ಹೇಗೆ?

ಕ್ಯಾರೆಟ್, ಪಾಲಕ್ ಮತ್ತು ಲಿಂಬೆ ಜ್ಯೂಸ್ ತಯಾರಿಸುವುದು ಹೇಗೆ?

ಈ ಜ್ಯೂಸ್ ಅನ್ನು ತಯಾರಿಸುವುದು ತುಂಬಾ ಸುಲಭ

ಬೇಕಾಗುವ ಸಾಮಗ್ರಿಗಳು

*2 ಕ್ಯಾರೆಟ್

*50 ಗ್ರಾಂ ಬಸಲೆ(ಎರಡು ಅಂಗೈಯಷ್ಟು)

*1 ಲಿಂಬೆಯ ರಸ

*1 ಚಮಚ ಜೇನುತುಪ್ಪ

*1 ಲೋಟ ನೀರು

ವಿಧಾನ

ವಿಧಾನ

ಲಿಂಬೆ ತೆಗೆದುಕೊಂಡು ಅದರ ಜ್ಯೂಸ್ ತೆಗೆಯಿರಿ. ಒಂದು ಮಿಕ್ಸಿಗೆ ಬೇರೆ ಸಾಮಗ್ರಿಗಳನ್ನು ಹಾಕಿ ಮತ್ತು ಬಳಿಕ ಲಿಂಬೆರಸ ಹಾಕಿ. ಇದನ್ನು ನಯವಾಗಿ ರುಬ್ಬಿಕೊಳ್ಳಿ. ಸ್ಮೂಥಿ ಬೇಕಿದ್ದರೆ ನೀವು ಎರಡು ಚಮಚ ಮೊಸರು ಹಾಕಬಹುದು.

ಕ್ಯಾರೆಟ್, ಪಾಲಕ್ ಮತ್ತು ಲಿಂಬೆ ಜ್ಯೂಸ್ ಯಾವಾಗ ಕುಡಿಯಬೇಕು?

*ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಬೇಕು. ಉಪಾಹಾರಕ್ಕೆ ಅರ್ಧಗಂಟೆಗೆ ಮೊದಲು ಇದನ್ನು ಸೇವಿಸಿದರೆ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುವುದು.

*ಖಾಲಿ ಹೊಟ್ಟೆಯಲ್ಲಿ ಇದರ ಸೇವನೆ ಮಾಡಿದರೆ ಆಗ ದೇಹವು ಎಲ್ಲಾ ರೀತಿಯ ಪೋಷಕಾಂಶಗಳನ್ನು ಸರಿಯಾಗಿ ಹೀರಿಕೊಳ್ಳುವುದು ಮತ್ತು ಪರಿಣಾಮವು ಉತ್ತಮವಾಗಿರುವುದು.

*ಫಲಿತಾಂಶ ಸಿಗಲು ಒಂದು ವಾರ ಕಾಲ ಇದನ್ನು ಕುಡಿಯಿರಿ. ಇದು ನಿಮ್ಮ ದೈಹಿಕ ನೋಟ ಸುಧಾರಣೆ ಮಾಡುವುದು ಮಾತ್ರವಲ್ಲದೆ ಸಂಪೂರ್ಣ ದೇಹಕ್ಕೆ ಆರೋಗ್ಯ ನೀಡುವುದು.

English summary

Why It Is Important To Remove Toxins From The Body?

Toxins inside the body cause skin rashes, acne and chronic fatigue. These toxins can be eliminated through the liver, kidneys and intestines by drinking fluids and one of them is the carrot, spinach and lemon juice. This delicious and healthy drink aids in cleansing the liver, kidneys and intestines.
X
Desktop Bottom Promotion