For Quick Alerts
ALLOW NOTIFICATIONS  
For Daily Alerts

ಬೆಳಗ್ಗೆ ನೆನೆಸಿಟ್ಟ ಒಣದ್ರಾಕ್ಷಿಯನ್ನು ಸೇವಿಸಿದರೆ-ಬರೋಬ್ಬರಿ 10 ಆರೋಗ್ಯ ಪ್ರಯೋಜನಗಳಿವೆ

By Hemanth
|

ಹಲವಾರು ರೀತಿಯ ಸಿಹಿ ತಿಂಡಿಗಳು ಮತ್ತು ಕೇಕ್ ಇತ್ಯಾದಿಗಳಲ್ಲಿ ಬಳಸಲ್ಪಡುವಂತಹ ಒಣದ್ರಾಕ್ಷಿಯು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಕ್ಕಳಿಂದ ಹಿಡಿದ ವಯಸ್ಸಾದವರ ತನಕ ಒಣದ್ರಾಕ್ಷಿಯು ಪ್ರತಿಯೊಬ್ಬರಿಗೂ ಇಷ್ಟವಾಗುವುದು. ಒಣದ್ರಾಕ್ಷಿಯನ್ನು ಕಿಸ್ಮಿಸ್ ಎನ್ನುವ ಹೆಸರಿನಿಂದಲೂ ಕರೆಯುವರು. ಇದು ಸಾಮಾನ್ಯವಾಗಿ ಒಣಹಣ್ಣುಗಳಿಗೆ ಸೇರಿರುವುದು ಮತ್ತು ದ್ರಾಕ್ಷಿಯನ್ನು ಒಣಗಿಸಿ ಇದನ್ನು ತಯಾರಿಸಲಾಗುತ್ತದೆ. ಬಂಗಾರ, ಹಸಿರು ಮತ್ತು ಕಪ್ಪು ಬಣ್ಣದಲ್ಲಿ ಇದು ಲಭ್ಯವಿರುವುದು. ನೈಸರ್ಗಿಕದತ್ತವಾಗಿರುವ ಸಕ್ಕರೆಯಂಶವು ಇದರಲ್ಲಿ ಇರುವ ಕಾರಣದಿಂದಾಗಿ ಇದು ದೇಹಕ್ಕೆ ಶಕ್ತಿ ನೀಡುವುದು. ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳಾದ ಕಬ್ಬಿಣ, ಪೊಟಾಶಿಯಂ ಮತ್ತು ಕ್ಯಾಲ್ಸಿಯಂ ಇದ್ದು, ದೈಹಿಕ ಹಾಗೂ ಮಾನಸಿಕ ಶಕ್ತಿ ನೀಡುವುದು.

ಒಣದ್ರಾಕ್ಷಿಯೆಂದಾಕ್ಷಣ ಅದನ್ನು ಬಾಯಿಗೆ ಹಾಕಿಕೊಂಡು ಜಗಿಯುವವರೇ ಹೆಚ್ಚು. ಯಾಕೆಂದರೆ ಇದು ಅಷ್ಟು ರುಚಿಯಾಗಿರುವುದು. ಆದರೆ ನಾಲ್ಕೈದು ಒಣದ್ರಾಕ್ಷಿಯನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಸೇವನೆ ಮಾಡಿದರೆ ಅದರಿಂದ ದೇಹಕ್ಕೆ ಮತ್ತಷ್ಟು ಲಾಭಗಳು ಸಿಗುವುದು. ಆರೋಗ್ಯ ತಜ್ಞರ ಪ್ರಕಾರ ಒಣದ್ರಾಕ್ಷಿಯನ್ನು ನೀರಿನಿಲ್ಲಿ ನೆನೆಸಿಟ್ಟು ತಿನ್ನುವುದರಿಂದ ಸಿಗುವ ಲಾಭಗಳ ಬಗ್ಗೆ ಹೇಳಿದ್ದಾರೆ.

ಒಣದ್ರಾಕ್ಷಿ ನೆನೆಸಿದ ನೀರು- ದೇಹದ ಲಿವರ್‌‌ನ ಆಯಸ್ಸು ನೂರು!

health benefits of Raisins Soaked in Water

ಒಣದ್ರಾಕ್ಷಿಯನ್ನು ಹಾಗೆ ತಿನ್ನುವುದಕ್ಕಿಂತ ನೀರಿನಲ್ಲಿ ನೆನೆಸಿ ಹಾಕಿಟ್ಟು ತಿಂದರೆ ಅದರಿಂದ ಆರೋಗ್ಯಕ್ಕೆ ಹೆಚ್ಚಿನ ಲಾಭವಿದೆ. ದ್ರಾಕ್ಷಿಯ ಸಿಪ್ಪೆಯಲ್ಲಿ ಇರುವಂತಹ ವಿಟಮಿನ್ ಗಳು ಹಾಗೂ ಖನಿಜಾಂಶಗಳು ನೀರಿನಲ್ಲಿ ಕರಗುವುದು. ಇದರಿಂದಾಗಿ ದೇಹಕ್ಕೆ ಹೆಚ್ಚಿನ ಪೋಷಕಾಂಶಗಳು ಲಭ್ಯವಾಗುವುದು. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಜನರಿಗೆ ಇದು ಹೆಚ್ಚು ಸಹಕಾರಿ. ನೀರಿನಲ್ಲಿ ನೆನೆಸಿಟ್ಟ ಕಾರಣ ಅದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಕೂಡ ಲಭ್ಯವಾಗುವುದು.

1.ರಕ್ತದೊತ್ತಡ ನಿಯಂತ್ರಿಸುವುದು

1.ರಕ್ತದೊತ್ತಡ ನಿಯಂತ್ರಿಸುವುದು

ಅತಿಯಾಗಿ ಉಪ್ಪು ಸೇವನೆ ಮಾಡಿದರೆ ಅದರಿಂದ ರಕ್ತದೊತ್ತಡವು ಹೆಚ್ಚಾಗುವುದು. ಅದಾಗ್ಯೂ ಒಣದ್ರಾಕ್ಷಿಯಲ್ಲಿ ಇರುವಂತಹ ಪೊಟಾಶಿಯಂ ನಮ್ಮ ದೇಹದಲ್ಲಿ ಉಪ್ಪಿನ ಅಂಶವನ್ನು ಸಮತೋಲನದಲ್ಲಿಡುವುದು ಮತ್ತು ರಕ್ತದೊತ್ತಡ ನಿಯಂತ್ರಿಸುವುದು.

2.ಜೀರ್ಣಕ್ರಿಯೆಗೆ ಸಹಕಾರಿ

2.ಜೀರ್ಣಕ್ರಿಯೆಗೆ ಸಹಕಾರಿ

ಇದರಲ್ಲಿ ನಾರಿನಾಂಶವು ಅಧಿಕವಾಗಿದೆ ಮತ್ತು ಇದನ್ನು ನೀರಿನಲ್ಲಿ ನೆನೆಸಿಟ್ಟು ತಿಂದಾಗ ನೈಸರ್ಗಿಕ ವಿರೇಚಕವಾಗಿ ಕೆಲಸ ಮಾಡುವುದು. ಇದರಿಂದ ನೆನೆಸಿಟ್ಟ ದ್ರಾಕ್ಷಿ ತಿಂದರೆ ಮಲಬದ್ಧತೆ ಕಡಿಮೆಯಾಗುವುದು ಮತ್ತು ಜೀರ್ಣಕ್ರಿಯೆಯು ಸರಿಯಾಗಿ ಆಗುವುದು.

3.ತೂಕ ಇಳಿಸಲು

3.ತೂಕ ಇಳಿಸಲು

ಒಣದ್ರಾಕ್ಷಿಯಲ್ಲಿ ಸಂಪೂರ್ಣ ಪ್ರಮಾಣದ ನೈಸರ್ಗಿಕ ಸಕ್ಕರೆಯಿದೆ ಮತ್ತು ಇದು ಸಿಹಿ ತಿನ್ನುವ ಬಯಕೆ ಕಡಿಮೆ ಮಾಡುವುದು ಮತ್ತು ಅತಿಯಾಗಿ ಕ್ಯಾಲರಿ ಸೇವಿಸದಂತೆ ತಡೆಯುವುದು. ಇದನ್ನು ಮಿತವಾಗಿ ಸೇವಿಸಿ, ಅತಿಯಾಗಿ ಒಳ್ಳೆಯದಲ್ಲ. ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿ ಇಟ್ಟುಕೊಂಡು ಬಯಕೆ ಕಡಿಮೆ ಮಾಡುವುದು. ಇದರಿಂದ ತೂಕ ಕಳೆದುಕೊಳ್ಳಲು ಸಹಕಾರಿ.

4.ಪ್ರತಿರೋಧಕ ಶಕ್ತಿ ಹೆಚ್ಚಿಸಲು

4.ಪ್ರತಿರೋಧಕ ಶಕ್ತಿ ಹೆಚ್ಚಿಸಲು

ವಿಟಮಿನ್ ಸಿ ಮತ್ತು ಬಿ ಯಿಂದ ಸಮೃದ್ಧವಾಗಿರುವಂತಹ ಒಣದ್ರಾಕ್ಷಿಯು ದೇಹದಲ್ಲಿ ಪ್ರತಿರೋಧಕ ಶಕ್ತಿಯ ಹೆಚ್ಚಳ ಮಾಡುವುದು. ಇದರಿಂದ ದೇಹಕ್ಕೆ ಸೋಂಕು ಬಾಧಿಸದು.

5.ಮೂಳೆಗಳನ್ನು ಬಲಪಡಿಸಲು

5.ಮೂಳೆಗಳನ್ನು ಬಲಪಡಿಸಲು

ಮೂಳೆಗಳು ಬೆಳೆಯಲು ಬೇಕಾಗುವಂತಹ ಬೊರೊನ್ ಎನ್ನುವ ಅಂಶವು ಒಣದ್ರಾಕ್ಷಿಯಲ್ಲಿ ಉನ್ನತ ಮಟ್ಟದಲ್ಲಿ ಇದೆ. ಕ್ಯಾಲ್ಸಿಯಂನಿಂದ ಸಮೃದ್ಧವಾಗಿರುವಂತಹ ಒಣದ್ರಾಕ್ಷಿಯು ಮೂಳೆಗಳು ಬಲಗೊಳ್ಳಲು ನೆರವಾಗುವುದು. ನೀರಿನಲ್ಲಿ ಹಾಕಿಟ್ಟ ಒಣದ್ರಾಕ್ಷಿ ಸೇವನೆ ಮಾಡಿದರೆ ಈ ಎಲ್ಲಾ ಪೋಷಕಾಂಶಗಳು ಸಿಗುವುದು ಮತ್ತು ಮೂಳೆಗಳ ಸಾಂದ್ರತೆ ಹೆಚ್ಚಿಸುವುದು.

6.ಉಸಿರಿನ ದುರ್ವಾಸನೆ ತಡೆಯುವುದು

6.ಉಸಿರಿನ ದುರ್ವಾಸನೆ ತಡೆಯುವುದು

ಒಣದ್ರಾಕ್ಷಿಯಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಬಾಯಿಯ ಸ್ವಚ್ಛತೆ ಕಾಪಾಡುವುದು ಮತ್ತು ಬಾಯಿಯ ದುರ್ವಾಸನೆ ತಡೆಯುವುದು.

7.ರಕ್ತಹೀನತೆ ನಿವಾರಣೆ

7.ರಕ್ತಹೀನತೆ ನಿವಾರಣೆ

ದೇಹದಲ್ಲಿ ಕೆಂಪು ರಕ್ತದ ಕಣಗಳು ನಿರ್ಮಾಣವಾಗಲು ಕಬ್ಬಿನಾಂಶವು ಪ್ರಮುಖವಾಗಿ ಬೇಕು. ಒಣದ್ರಾಕ್ಷಿಯಲ್ಲಿ ಕಬ್ಬಿನಾಂಶವು ಅಧಿಕವಾಗಿದೆ ಮತ್ತು ಇದು ದೇಹದಲ್ಲಿ ರಕ್ತಸಂಚಾರವನ್ನು ಹೆಚ್ಚಿಸುವುದು ಮತ್ತು ರಕ್ತಹೀನತೆ ತಡೆಯುವುದು. ಇದೆಲ್ಲಾ ಆರೋಗ್ಯ ಲಾಭಗಳ ಹೊರತಾಗಿ ಒಣದ್ರಾಕ್ಷಿಯು ಒಣಹಣ್ಣುಗಳ ಜತೆಗೆ ಒಳ್ಳೆಯ ತಿಂಡಿ. ಡಾ. ಸೂಡ್ ಅವರ ಪ್ರಕಾರ ನೀವು ಪ್ರತಿನಿತ್ಯ 30 ಗ್ರಾಂ ನಷ್ಟು ಅಥವಾ ಸ್ವಲ್ಪ ಒಣಹಣ್ಣುಗಳನ್ನು ತಿಂದರೆ ಅದರಿಂದ ಆರೋಗ್ಯಕರ ಮತ್ತು ಹೃದಯ ಕಾಯಿಲೆಯಿಂದ ಮುಕ್ತವಾಗಿ ಇರಬಹುದು.

8.ದೇಹದ ಲಿವರ್‌ನ ಆರೋಗ್ಯಕ್ಕೆ ಒಹಳ ಒಳ್ಳೆಯದು....

8.ದೇಹದ ಲಿವರ್‌ನ ಆರೋಗ್ಯಕ್ಕೆ ಒಹಳ ಒಳ್ಳೆಯದು....

ಯಕೃತ್‌ನ (ಲಿವರ್‌) ಆರೋಗ್ಯಕ್ಕೆ ನೆನೆಸಿಟ್ಟ ಒಣದ್ರಾಕ್ಷಿ ಹಾಗೂ ಇದರ ನೀರನ್ನು ನಿಯಮಿತವಾಗಿ ಸೇವಿಸುವುದರಿಂದ ಉತ್ತಮಗೊಳ್ಳುತ್ತದೆ. ಇದೇ ಕಾರಣಕ್ಕೆ ಈ ನೀರನ್ನು ಕೆಲವಾರು ಟಾನಿಕ್ ಮತ್ತು ಔಷಧಿಗಳಲ್ಲಿ ಬಳಸಲಾಗುತ್ತಿದೆ.

9.ಉಸಿರಿನ ದುರ್ವಾಸನೆಯನ್ನು ನಿವಾರಿಸುತ್ತದೆ

9.ಉಸಿರಿನ ದುರ್ವಾಸನೆಯನ್ನು ನಿವಾರಿಸುತ್ತದೆ

ಒಣದ್ರಾಕ್ಷಿಯಲ್ಲಿ ಬ್ಯಾಕ್ಟೀರಿಯಾ ನಿವಾರಕ ಗುಣಗಳಿದ್ದು ವಿಶೇಷವಾಗಿ ಬಾಯಿ, ಒಸಡು ಹಲ್ಲುಗಳಲ್ಲಿ ಆಶ್ರಯ ಪಡೆದಿದ್ದ ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ನೆರವಾಗುತ್ತದೆ. ತನ್ಮೂಲಕ ಇದರಿಂದ ಎದುರಾಗುವ ಉಸಿರಿನ ದುರ್ವಾಸನೆಯನ್ನು ನಿವಾರಿಸುತ್ತದೆ.

10.ಮೂತ್ರಪಿಂಡಗಳನ್ನು ಸ್ವಚ್ಛಗೊಳಿಸುತ್ತದೆ

10.ಮೂತ್ರಪಿಂಡಗಳನ್ನು ಸ್ವಚ್ಛಗೊಳಿಸುತ್ತದೆ

ಮೂತ್ರಪಿಂಡಗಳಲ್ಲಿ ಸಂಗ್ರಹವಾಗಿದ್ದ ಕಲ್ಮಶಗಳನ್ನು ನಿವಾರಿಸಲು ಒಣದ್ರಾಕ್ಷಿ ನೆನೆಸಿದ ನೀರು ಉತ್ತಮವಾಗಿದ್ದು ಇದರಿಂದ ಮೂತ್ರಪಿಂಡಗಳ ಒಳಗೆ ಕಲ್ಲು ಉಂಟಾಗುವುದು,ಸೋಂಕು ಉಂಟಾಗುವುದು ಮೊದಲಾದ ತೊಂದರೆಗಳಿಂದ ರಕ್ಷಣೆ ಪಡೆಯಬಹುದು.

ಸೂಚನೆ:

*ಯಾವುದಕ್ಕೂ ಈ ಮನೆಮದ್ದನ್ನು ಪ್ರಯತ್ನಿಸುವ ಮೊದಲು ನಿಮ್ಮ ಫ್ಯಾಮಿಲಿ ವೈದ್ಯರ ಸಲಹೆ ಪಡೆದುಕೊಳ್ಳಿ *ಸಾಧ್ಯವಾದಷ್ಟು ನೈಸರ್ಗಿಕ ವಿಧಾನದಲ್ಲಿ ಬೆಳೆದ, ರಾಸಾಯನಿಕಗಳು ಇಲ್ಲದ ದ್ರಾಕ್ಷಿಯನ್ನೇ ಕೊಳ್ಳಿ. ಒಂದು ವೇಳೆ ಸಾವಯವ ವಿಧಾನದಲ್ಲಿ ಬೆಳೆದಿದ್ದರೆ ಇನ್ನೂ ಉತ್ತಮ.

English summary

Why It Is Healthier to Eat Raisins Soaked in Water

Looks can be deceptive. Raisins or kishmish may appear to be shriveled and haggard, but do you that they are a storehouse of nutrients? Kishmish belongs to the family of dry fruits and most commonly, it is used as a topping over Indian desserts like kheer or phirni or is even stuffed into barfis. They are derived from dried grapes and you may find them with a golden, green and blackish hue. They are full of natural sugars and that makes them great energy boosters. They are also rich in nutrients like iron, potassium and calcium and therefore, one can definitely bank on raisins to gain physical and mental strength.
X
Desktop Bottom Promotion